ಮತ್ತೆ ಏಕಾಂಗಿಯಾದ ಆಲ್​​​ರೌಂಡರ್.. ಅಷ್ಟಕ್ಕೂ ಹಾರ್ದಿಕ್​ ಪಾಂಡ್ಯ- ಜಾಸ್ಮಿನ್​ ಮಧ್ಯೆ ಆಗಿದ್ದೇನು..?

author-image
Veena Gangani
Updated On
ಮತ್ತೆ ಏಕಾಂಗಿಯಾದ ಆಲ್​​​ರೌಂಡರ್.. ಅಷ್ಟಕ್ಕೂ ಹಾರ್ದಿಕ್​ ಪಾಂಡ್ಯ- ಜಾಸ್ಮಿನ್​ ಮಧ್ಯೆ ಆಗಿದ್ದೇನು..?
Advertisment
  • ನಿಜಕ್ಕೂ ಹಾರ್ದಿಕ್​ ಪಾಂಡ್ಯ, ಜಾಸ್ಮಿನ್​ ಮಧ್ಯೆ ಆಗಿದ್ದೇನು?
  • ಇನ್​ಸ್ಟಾದಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡ ಜೋಡಿ
  • ಗ್ರೀಸ್ ಪ್ರವಾಸದಿಂದ ಶುರುವಾಗಿತ್ತು ಈ ಇಬ್ಬರ ಲವ್​ ಸ್ಟೋರಿ!​

ಟೀಮ್​ ಇಂಡಿಯಾ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಜೀವನದಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ನತಾಶಾ ನಿರ್ಗಮನದ ಬಳಿಕ ಬಾಳಿಗೆ ಬೆಳಕಾಗಿ ಬಂದಿದ್ದ, ಜಾಸ್ಮಿನ್​ ವಾಲಿಯಾ ಅಷ್ಟೇ ವೇಗವಾಗಿ ಹೊರ ನಡೆದಿದ್ದಾರೆ. ಹಾರ್ದಿಕ್​ ಪಾಂಡ್ಯ ಈಗ ಮತ್ತೆ ಏಕಾಂಗಿಯಾಗಿದ್ದಾರೆ. ಟೀಮ್​​ ಇಂಡಿಯಾ ಆಲ್​​ರೌಂಡರ್​​, ಮುಂಬೈ ಇಂಡಿಯನ್ಸ್​​ ಕ್ಯಾಪ್ಟನ್​​ ಟೈಮ್​ ಸರಿ ಇಲ್ಲ ಅನ್ಸುತ್ತೆ. ಎಲ್ಲಾ ಸರಿಯಾಯ್ತು ಅನ್ನೋವಾಗಲೇ ಜೀವನದಲ್ಲಿ ಮತ್ತೊಂದು ಸಮಸ್ಯೆ ಉದ್ಭವವಾಗ್ತಿದೆ. ಅಷ್ಟರ ಮಟ್ಟಿಗೆ ಹಾರ್ದಿಕ್​ ಪಾಂಡ್ಯ ಗ್ರಹಚಾರ ಕೆಟ್ಟೊಗಿದೆ. ನತಾಶ ಜೊತೆಗಿನ ಡಿವೋರ್ಸ್​​ ಬಳಿಕ ಬ್ರಿಟಿಷ್​​ ಬ್ಯೂಟಿಯ ಜೊತೆಗೆ ಲವ್​​ನಲ್ಲಿ ಬಿದ್ದಿದ್ದ ಹಾರ್ದಿಕ್​ ಇದೀಗ ಮತ್ತೆ ಏಕಾಂಗಿಯಾಗಿದ್ದಾರೆ.

ಇದನ್ನೂ ಓದಿ: ಬಿಂದಾಸ್​ ಬ್ಯೂಟಿ ದಾಂಪತ್ಯದಲ್ಲಿ ಬಿರುಕು.. ಪತಿಯಿಂದ ದೂರವಾಗಿ ಹನ್ಸಿಕಾ ಪ್ರತ್ಯೇಕ ವಾಸ!

publive-image

ಹೌದು, ಕಳೆದ ಕೆಲ ತಿಂಗಳಿನಿಂದ ಬ್ರಿಟಿಷ್ ಸಿಂಗರ್​​ ಜಾಸ್ಮಿನ್​ ವಾಲಿಯಾ ಜೊತೆಗೆ ಹಾರ್ದಿಕ್​ ಪಾಂಡ್ಯ ಡೇಟಿಂಗ್​ ನಡೆಸ್ತಾ ಇದ್ದಿದ್ದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಸುಮಾರು ತಿಂಗಳಿನಿಂದ ಈ ಜೋಡಿ ಅಲ್ಲಲ್ಲಿ ಕಾಣಿಸಿಕೊಳ್ತಿತ್ತು. ಇಬ್ಬರೂ ಅಧಿಕೃತವಾಗಿ ಎಲ್ಲೂ ಹೇಳಿಕೊಳ್ಳದೆ ಇದ್ರೂ, ಇವರ ನಡೆಗಳೇ ಪ್ರೇಮ್​​ ಕಹಾನಿಯ ಕಥೆಯನ್ನ ಲೋಕಕ್ಕೆ ಬಿಚ್ಚಿಟ್ಟಿದ್ವು. ಇದೀಗ ಆ ಲವ್​ ಕಹಾನಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕ್ರಿಕೆಟ್​​ನಿಂದ ಬಿಡುವು ಸಿಕ್ರೆ ಸಾಕು ಮೊದಲೆಲ್ಲಾ ವಿದೇಶಕ್ಕೆ ಹಾರ್ತಿದ್ದ ಹಾರ್ದಿಕ್​, ಐಪಿಎಲ್​ ಬಳಿಕ ಮೈದಾನದಿಂದ ದೂರ ಉಳಿದಿದ್ರೂ ಮನೆಯಲ್ಲೇ ಬೀಡು ಬಿಟ್ಟಿದ್ದಾರೆ. ಕಳೆದೊಂದು ತಿಂಗಳಿನಿಂದ ಜಾಸ್ಮಿನ್​ ವಾಲಿಯಾ ಜೊತೆಗೂ ಹಾರ್ದಿಕ್​ ಎಲ್ಲೂ ಕಾಣಿಸಿಕೊಂಡಿಲ್ಲ. ಬಿಡುವಿನಲ್ಲಿದ್ರೂ ಹಾರ್ದಿಕ್​ ಏಕಾಂಗಿಯಾಗಿರೋದ್ಯಾಕೆ ಅಂತಾ ಚರ್ಚೆ ಕೆಲ ದಿನಗಳ ಹಿಂದಷ್ಟೇ ನಡೆದಿದ್ವು. ಅದಕ್ಕೀಗ ಬ್ರೇಕ್​ ಅಪ್​ ಅನ್ನೋ ಉತ್ತರ ಸಿಕ್ಕಿದೆ. ಹಾರ್ದಿಕ್​-ಜಾಸ್ಮಿನ್​ ಲವ್​ ಬ್ರೇಕ್​ಅಪ್​ ಆಗಿದೆ ಅನ್ನೋ ಸುದ್ದಿಯನ್ನ ಆಪ್ತ ಮೂಲಗಳು ಹೇಳ್ತಿವೆ. ಇದಕ್ಕೆ ಪುಷ್ಟಿ ಎಂಬಂತೆ ಇಬ್ಬರೂ ಇನ್ಸ್​​ಸ್ಟಾಗ್ರಾಂನಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ದಾರೆ.

publive-image

ಜಾಸ್ಮಿನ್​ ವಾಲಿಯಾ - ಹಾರ್ದಿಕ್​​ ಪಾಂಡ್ಯ ಡೇಟಿಂಗ್​ ಗಾಸಿಪ್​ ಮೊದಲು ಸದ್ದು ಮಾಡಿದ್ದು 2024ರ ಜುಲೈನಲ್ಲಿ. ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಹಾರ್ದಿಕ್​, ಗ್ರೀಸ್​ ಟ್ರಿಪ್​ಗೆ ತೆರಳಿದ್ರು. ಆ ಸಂದರ್ಭದಲ್ಲಿ ಜಾಸ್ಮಿನ್​ ವಾಲಿಯಾ ಕೂಡ ಗ್ರೀಸ್​ನಲ್ಲೇ ಇದ್ರು. ಜಾಸ್ಮಿನ್ ​ಹಾಗೂ ಹಾರ್ದಿಕ್​ ಶೇರ್ ಮಾಡಿದ್ದ ಟ್ರಿಪ್​​ನ ಫೋಟೋಗಳು, ವಿಡಿಯೋಗಳು ಡೇಟಿಂಗ್​ ಕಥೆ ಹೇಳ್ತಿದ್ವು. ಇಬ್ಬರೂ ಹಂಚಿಕೊಂಡಿದ್ದ ಫೋಟೋಗಳು, ವಿಡಿಯೋಗಳ background ಒಂದೇ ಆಗಿತ್ತು.

publive-image

ದುಬೈನಲ್ಲಿ ನಡೆದ ಚಾಂಪಿಯನ್ಸ್​​​ ಟ್ರೋಫಿ ಟೂರ್ನಿಯಲ್ಲೂ ಜಾಸ್ಮಿನ್​ ವಾಲಿಯಾ ಕಾಣಿಸಿಕೊಂಡಿದ್ರು. ಇಂಡೋ-ಪಾಕ್​ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಅಕ್ಷರ್ ಪಟೇಲ್ ಮಡದಿ ಜೊತೆ ಕುಳಿತಿದ್ದ ಜಾಸ್ಮಿನ್​​ ವಾಲಿಯಾ ಟೀಮ್ ಇಂಡಿಯಾಗೆ ಚಿಯರ್ ಮಾಡ್ತಿದ್ರು. ಇಷ್ಟೇ ಅಲ್ಲ.. ಇಂಡೋ-ಪಾಕ್​ ಪಂದ್ಯ ಅಂತ್ಯವಾದ ಬಳಿಕ ಬೀಚ್​​ನಲ್ಲಿ ಎಂಜಾಯ್ ಮಾಡಿದ್ರು. ಆಗಲೂ ಅಷ್ಟೇ.. ಹಾರ್ದಿಕ್​-ಜಾಸ್ಮಿನ್​ ಪ್ರತ್ಯೇಕವಾಗಿ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ರು. ಆದ್ರೆ, ಫೋಟೋ background ಮಾತ್ರ ಒಂದೇ ಆಗಿತ್ತು.

publive-image

2025ರ ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ಮೊದಲ ಹೋಮ್​ ಗೇಮ್​ ಆಡಿತ್ತು. ಈ ಪಂದ್ಯದ ವೇಳೆ ಸ್ಟ್ಯಾಂಡ್​​ನಲ್ಲಿ ಜಾಸ್ಮಿನ್​ ವಾಲಿಯಾ ಕಾಣಿಸಿಕೊಂಡ್ರು. ಜಾಸ್ಮಿನ್​ ವಾಲಿಯಾ ಸ್ಟ್ಯಾಂಡ್​ನಲ್ಲಿದ್ದು ತಂಡಕ್ಕೆ ಚಿಯರ್​ ಮಾಡಿ ಹೋಗಿದ್ರೆ ಮತ್ತೊಮ್ಮೆ ಗಾಸಿಪ್​ ಸುದ್ದಿಯಾಗ್ತಿತ್ತು ಅಷ್ಟೇ. ಆದ್ರೆ, ಪಂದ್ಯ ಮುಗಿಸಿ ಹೋಗುವಾಗ ಜಾಸ್ಮಿನ್​ ವಾಲಿಯಾ ಮುಂಬೈ ಇಂಡಿಯನ್ಸ್​ ಟೀಮ್​ ಬಸ್​ನಲ್ಲಿ ಪ್ರಯಾಣಿಸಿದ್ರು. ಈ ಪ್ರಯಾಣ ಇವರಿಬ್ಬರ ಡೇಟಿಂಗ್​ ಗಾಸಿಪ್​ಗೆ ಅಧಿಕೃತ ಮುದ್ರೆ ಒತ್ತಿತ್ತು. 2024ರ ಜುಲೈನಿಂದ 2025ರ ಜುಲೈ.. ಒಂದು ವರ್ಷದ ಅವಧಿಯಲ್ಲೇ ಇಬ್ಬರ ಲವ್, ಬ್ರೇಕ್​ಅಪ್​ನೊಂದಿಗೆ ಅಂತ್ಯವಾಗಿದೆ. ನತಾಶ ನಿರ್ಗಮನದ ಬಳಿಕ ಬಾಳಿಗೆ ಬೆಳಕಾಗಿ ಬಂದಿದ್ದ ಜಾಸ್ಮಿನ್​ ವಾಲಿಯಾ ಬಂದಷ್ಟೇ ವೇಗವಾಗಿ ಹೊರ ನಡೆದಿದ್ದಾರೆ. ಹಾರ್ದಿಕ್​ ಮತ್ತೆ ಏಕಾಂಗಿಯಾಗಿದ್ದಾರೆ. ವಿರಹ ವೇದನೆಯಿಂದ ಹಾರ್ದಿಕ್​ ಆದಷ್ಟು ಬೇಗ ಹೊರಬರಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment