ಬಾರ್ಡರ್ ಗವಾಸ್ಕರ್ ಟ್ರೋಫಿ.. ಭಾರತ ಸೋತು ಬಂದರೆ ಯಾರದೆಲ್ಲಾ ತಲೆದಂಡ ಬೀಳಲಿದೆ ?

author-image
Gopal Kulkarni
Updated On
ಆಸಿಸ್​ ಟೆಸ್ಟ್​​ನಲ್ಲಿ ಮುಗ್ಗರಿಸಿದರೆ ಟೆಸ್ಟ್​​ಗೆ ಹೊಸ ಕೋಚ್​; ಗಂಭೀರ್​ಗೆ ಬಿಸಿಸಿಐ ಹೇಳಿದ್ದೇನು?
Advertisment
  • ಕೋಚ್ ಗೌತಮ್ ಗಂಭೀರ್​​​​​​​ ಟೆಸ್ಟ್​​ನಿಂದ ಔಟ್..?
  • ಬ್ಯಾಟಿಂಗ್ ಕೋಚ್, ಬೌಲಿಂಗ್​ ಕೋಚ್​​​​​​​​​​ ಭವಿಷ್ಯ ಏನು..?
  • ಮುಂದಿನ WTC ಸೈಕಲ್​​ಗೆ ಹೊಸ ತಂಡ, ಹೊಸ ಸ್ಟಾಫ್..?

ಬ್ರಿಸ್ಬೇನ್ ಟೆಸ್ಟ್​ ಪಂದ್ಯ, ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ ಪಂದ್ಯವಾಗಿದೆ. ಯಾಕಂದ್ರೆ.. ಈ ಟೆಸ್ಟ್ ಪಂದ್ಯದ ಮೇಲೆನೇ, ಹಲವರ ಭವಿಷ್ಯ ನಿಂತಿದೆ. ಕೋಚ್ ಗೌತಮ್ ಗಂಭೀರ್​​​​​​​​​​​​​​​​​​​, ಸಪೋರ್ಟಿಂಗ್ ಸ್ಟಾಫ್ ಸೇರಿದಂತೆ, ಸೂಪರ್​ಸ್ಟಾರ್ ಆಟಗಾರರ ಫ್ಯೂಚರ್ ಡಿಸೈಡ್ ಮಾಡೋದೂ, ಇದೇ ಟೆಸ್ಟ್ ಪಂದ್ಯ.

ಅಡಿಲೇಡ್ ಟೆಸ್ಟ್​ ಪಂದ್ಯದ ಸೋಲು, ಬಿಗ್​ಬಾಸ್​​ಗಳಿಗೆ ಅಗರಿಸಿಕೊಳ್ಳೋಕೆ ಆಗ್ತಿಲ್ಲ. ತಂಡಕ್ಕೆ ಬೇಕಾದ ಕೋಚಿಂಗ್ ಸ್ಟಾಫ್ ಕೊಟ್ರೂ, ಟೆಸ್ಟ್ ಸರಣಿಗೆ ಪ್ರಿಪೇರ್ ಆಗಲು ಸೌಲಭ್ಯ ಒದಗಿಸಿದ್ರೂ, ಟೀಮ್ ಇಂಡಿಯಾ ಬಿಗ್​ಬಾಸ್​​ಗಳನ್ನ ತಲೆ ತಗ್ಗಿಸುವಂತೆ ಮಾಡಿದೆ. ರೋಹಿತ್ ಶರ್ಮಾ ಪಡೆಯ ಕಳಪೆ ಪ್ರದರ್ಶನದಿಂದ ಆಕ್ರೋಶಗೊಂಡಿರುವ ಬಿಗ್​ಬಾಸ್​​ಗಳು, ಸದ್ಯದಲ್ಲೇ ಮ್ಯಾನೇಜ್ಮೆಂಟ್​​ಗೆ ಶಾಕ್ ಕೊಡೋಕೆ ರೆಡಿಯಾಗಿದ್ದಾರೆ.

1 ಸರಣಿ, ಹಲವರ ತಲೆದಂಡ ಫಿಕ್ಸ್..?
ತವರಿನಲ್ಲಿ ಗೆದ್ದು ಎದೆ ಉಬ್ಬಿಸಿಕೊಂಡು ನಡೆಯೋದಲ್ಲ. ವಿದೇಶದಲ್ಲಿ ಗೆದ್ದು, ತಲೆ ಎತ್ತಿ ನಡೀಬೇಕು. ಆದ್ರೆ ಟೀಮ್ ಇಂಡಿಯಾ ವಿದೇಶದಲ್ಲಿ ತೀವ್ರ ಮುಖಭಂಗ ಅನುಭವಿಸಿ, ಬಿಸಿಸಿಐ ಬಾಸ್​ಗಳು ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನ ತಲೆ ತಗ್ಗಿಸುವಂತೆ ಮಾಡಿದೆ. ಒಂದು ವೇಳೆ ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋತಿದ್ದೇ ಆದಲ್ಲಿ, ಹಲವರ ತಲೆದಂಡ ಆಗೋದು ಬಹುತೇಕ ಖಚಿತ.

publive-image

ಕೋಚ್ ಗೌತಮ್ ಗಂಭೀರ್​​​​​​​ ಟೆಸ್ಟ್​​ನಿಂದ ಔಟ್..?
ಬಿಗ್​ಬಾಸ್​​ಗಳ ಏಟಿಗೆ ಮೊದಲು ಬಲಿಯಾಗೋದೇ, ಕೋಚ್​ ಗೌತಮ್ ಗಂಭೀರ್​. ಟಿ-ಟ್ವೆಂಟಿ ಫಾರ್ಮೆಟ್ ಬಿಟ್ರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ, ಕೋಚ್ ಗಂಭೀರ್ ರೆಕಾರ್ಡ್ಸ್​ ಅದ್ಭುತವಾಗಿ ಏನಿಲ್ಲ. ಗಂಭೀರ್ ಅಗ್ರೆಸಿವ್, ಅವರನ್ನ ಕೋಚ್ ಮಾಡಿದ್ರೆ ತಂಡಕ್ಕೆ ಅಗ್ರೆಸಿವ್​ನೆಸ್ ತರುತ್ತಾರೆ ಅಂತ ಬಿಗ್​ಬಾಸ್​​ಗಳ ಲೆಕ್ಕಾಚಾರವಾಗಿತ್ತು. ಆದ್ರೀಗ ಎಲ್ಲಾ ಉಲ್ಟಾ ಆಗಿದೆ. ಆಸಿಸ್ ಟೆಸ್ಟ್ ಸರಣಿಯ ನಂತರ ಗಂಭೀರ್, ವೈಟ್​ಬಾಲ್​​​​ ಕ್ರಿಕೆಟ್​​ಗೆ ಮಾತ್ರ ಕೋಚ್ ಆಗಿ ಉಳಿಯಲಿದ್ದಾರೆ. ಟೆಸ್ಟ್​ ಕ್ರಿಕೆಟ್​​ಗೆ ಬಿಗ್​ಬಾಸ್​ಗಳು, ಹೊಸ ಕೋಚ್ ನೇಮಿಸೋ ಸಾಧ್ಯತೆ ಇದೆ.

ಇದನ್ನೂ ಓದಿ:ಸ್ಪಿನ್ ಮಾಂತ್ರಿಕ ಆರ್​ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ; ದಿಢೀರ್ ಈ ನಿರ್ಧಾರಕ್ಕೆ ಬಂದಿದ್ದು ಏಕೆ?

ಬ್ಯಾಟಿಂಗ್ ಕೋಚ್, ಬೌಲಿಂಗ್​ ಕೋಚ್​​​​​​​​​​ ಕಥೆ ಏನು..?
ಗಂಭೀರ್ ಕೋಚ್ ಆಗಿದ್ದೇ ತಡ. ನನಗೆ ಅವರು ಬೇಕು, ಇವರು ಬೇಕು ಅಂತ ಬಿಗ್​ಬಾಗ್​ಬಾಸ್​ಗಳ ಮುಂದೆ ದೊಡ್ಡ ಬೇಡಿಕೆಯ ಪಟ್ಟಿಯನ್ನೇ ಇಟ್ಟಿದ್ದರು. ಗಂಭೀರ್​​ ಹೇಳ್ತಿದ್ದಾರೆ, ಏನೋ ಸಾಧನೆ ಮಾಡಿಬಿಡ್ತಾರೆ ಅಂತ, ಬಿಗ್​ಬಾಸ್​​ಗಳು ಗಂಭೀರ್ ಹೇಳಿದಕ್ಕೆಲ್ಲಾ ತಲೆ ಅಲ್ಲಾಡಿಸಿದ್ರು. ಆದ್ರೀಗ ಗಂಭೀರ್ ಮಾತು ಕೇಳಿ ನಾವು ಕೆಟ್ಟೆವು ಅಂತ, ಬಿಗ್​ಬಾಸ್​ಗಳು ಬಿಸಿಸಿಐ ಆಫೀಸ್​ನಲ್ಲಿ ಗುಸುಗುಡುತ್ತಿದ್ದಾರಂತೆ. ಗೊತ್ತಿಲ್ಲ. ಮುಂದೆ ಬ್ಯಾಟಿಂಗ್ ಕೋಚ್​ ಅಭಿಷೇಕ್ ನಾಯರ್, ರಿಯಾನ್ ಟೆನ್​ಡೆಸ್ಕಾಟೆ ಮತ್ತು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಟೆಸ್ಟ್ ತಂಡದಲ್ಲಿ ಇರ್ತಾರೋ ಇಲ್ವೋ ಅಂತ.

ಮುಂದಿನ WTC ಸೈಕಲ್​​ಗೆ ಹೊಸ ತಂಡ, ಹೊಸ ಕೋಚಿಂಗ್ ಸ್ಟಾಫ್?
2025 ಜೂನ್ ಬಳಿಕ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್ ಹೊಸ ಸೈಕಲ್ ಶುರುವಾಗುತ್ತದೆ. ಹೊಸ ವರ್ಷಕ್ಕೆ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ ಕೂಡ ಮಾಡಲಾಗುತ್ತದೆ. ಹಿರಿಯರಿಗೆ ಕೊಕ್ ಕೊಟ್ಟು, ಯುವ ತಂಡವನ್ನಕಟ್ಟಲು ಬಿಸಿಸಿಐ ಮುಂದಾಗಲಿದೆ. ಹಾಗೇ ಹೊಸ ಕೋಚಿಂಗ್ ಸ್ಟಾಫ್ ಕೂಡ ಆಯ್ಕೆ ಮಾಡೋ ಸಾಧ್ಯತೆ ಹೆಚ್ಚಿದೆ. ಸದ್ಯ ಎಲ್ಲವೂ ಅಂತೆ ಕಂತೆ ಮಾತುಗಳು ಕೇಳಿಬರುತ್ತಿವೆ. ಆದ್ರೆ ಬಿಗ್​ಬಾಸ್​​ಗಳು, ತೆರೆ ಹಿಂದೆ ಪ್ಲಾನ್ ಮಾಡ್ತಿದ್ದಾರೆ. ಇದ್ರಲ್ಲಿ ಯಾವುದೇ ಅನುಮಾನ ಇಲ್ಲ..!

ತಂಡದ ಆಯ್ಕೆಯಲ್ಲಿ ಕೋಚ್​ಗೆ ಕೊಕ್..! ಸೆಲೆಕ್ಟರ್ಸ್​ಗೆ ಫುಲ್ ಪವರ್​​..!
ಮಾಜಿ ಕೋಚ್ ರವಿ ಶಾಸ್ತ್ರಿ, ಟೀಮ್ ಸೆಲೆಕ್ಷನ್​ನಲ್ಲಿ ಭಾಗಿಯಾಗುತ್ತಿರಲಿಲ್ಲ. ಸೆಲೆಕ್ಟರ್ಸ್ ಮತ್ತು ಕ್ಯಾಪ್ಟನ್ ಮಾತ್ರ, ತಂಡದ ಆಯ್ಕೆಯಲ್ಲಿ ಪಾಲ್ಗೊಳ್ಳುತ್ತಿದ್ದರು, ಆದ್ರೆ ಗಂಭೀರ್ ತಂಡಕ್ಕೆ ಎಂಟ್ರಿ ಕೊಟ್ಟ ಮೇಲೆ, ಟೀಮ್ ಸೆಲೆಕ್ಷನ್​ನಲ್ಲಿ ಮೂಗು ತೂರಿಸೋಕೆ ಶುರುಮಾಡಿದ್ರು. ಬಿಗ್​ಬಾಸ್​ಗಳು ಗಂಭೀರ್​ಗೆ ಅಷ್ಟು ಫ್ರೀಡಂ ಕೊಟ್ಟಿದ್ರು. ಆದ್ರೀಗ ಬಿಗ್​ಬಾಸ್​​ಗಳು ಎಚ್ಚೆತ್ತುಕೊಂಡಂತೆ ಇದೆ. ಇನ್ಮುಂದೆ ತಂಡದ ಆಯ್ಕೆಯಲ್ಲಿ ಕ್ಯಾಪ್ಟನ್, ಸೆಲೆಕ್ಟರ್ಸ್ ಬಿಟ್ರೆ ಯಾರೂ ಕೂರೋ ಹಾಗಿಲ್ಲ. ಸೆಲೆಕ್ಟರ್ಸ್ ಹೇಳಿದ್ದೇ ಫೈನಲ್ ಅಂತ ಆದೇಶ ಹೊರಡಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment