newsfirstkannada.com

Arvind Kejriwal ಬಂಧನಕ್ಕೂ ಮೊದಲು ಅವರ ನಿವಾಸದಲ್ಲಿ ಏನೆಲ್ಲಾ ಆಯ್ತು..? 6 ಬಿಗ್ ಅಪ್​ಡೇಟ್ಸ್​

Share :

Published March 22, 2024 at 7:36am

    ದೆಹಲಿ ಮದ್ಯ ನೀತಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಅರೆಸ್ಟ್

    ಅಧಿಕಾರದಲ್ಲಿರುವಾಗಲೇ ಬಂಧನಕ್ಕೊಳಗಾದ ಮೊದಲ ಪ್ರಕರಣ ಇದು

    ಕೇಜ್ರಿವಾಲ್ ನಿವಾಸದಲ್ಲಿ ಅಧಿಕಾರಿಗಳು ಏನೆಲ್ಲ ಮಾಡಿದರು..?

ದೆಹಲಿ ಮದ್ಯ ನೀತಿಗೆ (Liquor Policy ) ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಮುಖ್ಯಮಂತ್ರಿಯೊಬ್ಬರು ಅಧಿಕಾರದಲ್ಲಿರುವಾಗಲೇ ಬಂಧನಕ್ಕೊಳಗಾದ ಮೊದಲ ಪ್ರಕರಣ ಇದಾಗಿದೆ.

ಕೇಜ್ರಿವಾಲ್ ಅವರನ್ನು ಬಂಧಿಸುವ ಮೊದಲು ಕೇಂದ್ರ ತನಿಖಾ ಸಂಸ್ಥೆ, ಅವರ ನಿವಾಸದ ಮೇಲೆ ದಾಳಿ ಮಾಡಿ ಶೋಧಕಾರ್ಯ ನಡೆಸಿತ್ತು. ಬಂಧನಕ್ಕೂ ಮೊದಲು ED ಏನೆಲ್ಲ ಮಾಡಿತು ಅನ್ನೋದ್ರ ವಿವರ ಇಲ್ಲಿದೆ.

ಕೇಜ್ರಿವಾಲ್ ನಿವಾಸದಲ್ಲಿ ಏನೆಲ್ಲಾ ಆಯ್ತು..? 

  • 10 ಸದಸ್ಯರುಳ್ಳ ED ಅಧಿಕಾರಿಗಳ ತಂಡ ನಿನ್ನೆ ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ (Civil Lines) ಕೇಜ್ರಿವಾಲ್ ನಿವಾಸಕ್ಕೆ ದಿಢೀರ್ ಭೇಟಿ ನೀಡಿತ್ತು. ಸತತ ಎರಡು ಗಂಟೆಗಳ ಕಾಲ ಶೋಧಕಾರ್ಯ ನಡೆಸಿ, ನಂತರ ಮುಖ್ಯಮಂತ್ರಿ ಕೇಜ್ರಿವಾಲ್​​ರನ್ನು ಬಂಧಿಸಿದೆ.
  • ಕೇಜ್ರಿವಾಲ್ ಬಂಧನಕ್ಕೂ ಮೊದಲು ಅವರ ನಿವಾಸಕ್ಕೆ ದೆಹಲಿ ಪೊಲೀಸ್, ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡಿತ್ತು. ಈಗಲೂ ಕೂಡ ಕೇಜ್ರಿವಾಲ್ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ.
  • ವಿಚಾರ ಗೊತ್ತಾಗ್ತಿದ್ದಂತೆ ಮುಖ್ಯಮಂತ್ರಿ ನಿವಾಸದ ಎದುರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಮುಖಂಡರು ಬೆಂಬಲಿಗರು ಜಮಾಯಿಸಿದ್ದರು. ED ಕ್ರಮವನ್ನು ಖಂಡಿಸಿ, ಕೇಜ್ರಿವಾಲ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು.
  • ಸಿಎಂ ನಿವಾಸದಲ್ಲಿ ನಡೆದ ವಿಚಾರಣೆಯಲ್ಲಿ ಅಧಿಕಾರಿಗಳು ಕೇಜ್ರಿವಾಲ್​ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಅಧಿಕಾರಿಗಳ ತಂಡ ಒಟ್ಟು 9 ಸಮನ್ಸ್ ನೀಡಿತ್ತು. ಆದರೆ ಕೇಜ್ರಿವಾಲ್ ವಿಚಾರಣೆಗೆ ಹಾಜರು ಆಗಿರಲಿಲ್ಲ. ನಿನ್ನೆ ಕೂಡ ಹೊಸ ಸಮನ್ಸ್ ನೀಡಲಾಗಿತ್ತು.
  • ED ಅಧಿಕಾರಿಗಳು ಕೇಜ್ರಿವಾಲ್ ನಿವಾಸದಲ್ಲಿದ್ದಾಗ ದೆಹಲಿ ಸರ್ಕಾರದ ಸಚಿವ ಸೌರಭ್ ಭಾರದ್ವಾಜ್ ದೌಡಾಯಿಸಿದ್ದರು. ಆದರೆ ಅಧಿಕಾರಿಗಳು ನಿವಾಸದ ಒಳಗೆ ಬರಲು ಅನುಮತಿ ನೀಡಲಿಲ್ಲ. ಹೊರಗೆ ಅವರನ್ನು ನಿಲ್ಲಿಸಿದ್ದರು. ನಂತರ ಅವರು ಸೋಶಿಯಲ್ ಮೀಡಿಯಾದಲ್ಲಿ ಅಧಿಕಾರಿಗಳ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
  • ಮುಖ್ಯಮಂತ್ರಿಗಳ ನಿವಾಸದಲ್ಲಿ ಯಾರಿಗೂ ಪ್ರವೇಶ ಇಲ್ಲ. ಫೋನ್ ಬಳಕೆಗೂ ಅವಕಾಶ ಕೊಡ್ತಿಲ್ಲ. ದೊಡ್ಡ ಪೊಲೀಸ್ ಪಡೆ ಬಂದಿದೆ ಎಂದು ಭಾರದ್ವಾಜ್ ಆರೋಪಿಸಿ ವಿಡಿಯೋಗಳನ್ನು ಹಂಚಿಕೊಂಡದ್ದಾರೆ.
  • ED ಇನ್ಮುಂದೆ ಸ್ವತಂತ್ರ ಸಂಸ್ಥೆ ಅಲ್ಲ. ಅದೊಂದು ರಾಜಕೀಯ ಅಸ್ತ್ರ. ಮೋದಿಗೆ ಗೊತ್ತು, ದೇಶದಲ್ಲಿ ಪರ್ಯಾಯ ನಾಯಕರಿದ್ದರೆ ಅದು ಕೇಜ್ರಿವಾಲ್ ಮಾತ್ರ ಎಂದು. ದೆಹಲಿಯ ಜನರು ಕೇಜ್ರಿವಾಲ್ ಅವರನ್ನು ತಮ್ಮ ಕುಟುಂಬದ ಸದಸ್ಯ ಎಂದು ಪರಿಗಣಿಸುತ್ತಾರೆ. ಅದಕ್ಕಾಗಿಯೇ ಮೋದಿ ಹೆದರುತ್ತಾರೆ ಎಂದು ಸಚಿವೆ ಅತಿಶಿ ಕಿಡಿಕಾರಿದ್ದಾರೆ.

ಇದನ್ನೂ ಓದಿಅರವಿಂದ್ ಕೇಜ್ರಿವಾಲ್ ಬಂಧಿಸಿದ್ದು ಯಾಕೆ..? ಏನಿದು 100 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಕೇಸ್?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Arvind Kejriwal ಬಂಧನಕ್ಕೂ ಮೊದಲು ಅವರ ನಿವಾಸದಲ್ಲಿ ಏನೆಲ್ಲಾ ಆಯ್ತು..? 6 ಬಿಗ್ ಅಪ್​ಡೇಟ್ಸ್​

https://newsfirstlive.com/wp-content/uploads/2024/03/KEJRIWAL-1.jpg

Load More