Advertisment

ಜೀವಬಿಟ್ಟ ನರಭಕ್ಷಕನ ಹೊಟ್ಟೆಯಲ್ಲಿ ಬೆಲೆ ಬಾಳುವ ವಸ್ತುಗಳು.. ಅರಣ್ಯ ಸಿಬ್ಬಂದಿ ಶಾಕ್..!

author-image
Ganesh
Updated On
ಜೀವಬಿಟ್ಟ ನರಭಕ್ಷಕನ ಹೊಟ್ಟೆಯಲ್ಲಿ ಬೆಲೆ ಬಾಳುವ ವಸ್ತುಗಳು.. ಅರಣ್ಯ ಸಿಬ್ಬಂದಿ ಶಾಕ್..!
Advertisment
  • ಕೇರಳದಲ್ಲಿ ಮಹಿಳೆಯನ್ನ ತಿಂದು ತೇಗಿದ್ದ ‘ನರಭಕ್ಷಕ’
  • ಜನರ ನಿದ್ದೆಗೆಡಿಸಿದ್ದ ಹುಲಿ ಅನುಮಾನಸ್ಪದ ಸಾವು
  • ಹುಲಿ ಹೊಟ್ಟೆಯಲ್ಲಿ ಕಿವಿಯೋಲೆ, ಕೂದಲು ಪತ್ತೆ

ಆಹಾರ ಅರಸಿ ಕಾಡಿನಿಂದ ನಾಡಿಗೆ ಬರೋ ಪ್ರಾಣಿಗಳು ಕೆಲವೊಮ್ಮೆ ಅಚ್ಚರಿ ಮೂಡಿಸಿದ್ರೆ ಇನ್ನೂ ಕೆಲವೊಮ್ಮೆ ಆತಂಕ ಮೂಡಿಸುತ್ವೆ. ಸದ್ಯ ಕೇರಳದಲ್ಲೂ ಜನರ ನಿದ್ದೆಗೆಡಿಸಿ, ‘ನರಭಕ್ಷಕ’ ಅನ್ನೋ ಬಿರುದು ಪಡೆದಿದ್ದ ಹುಲಿ ಜೀವಬಿಟ್ಟಿದೆ. ಆದರೆ ಮರಣೋತ್ತರ ಪರೀಕ್ಷೆ ವೇಳೆ ಹುಲಿಯ ಹೊಟ್ಟೆಯಲ್ಲಿ ಸಿಕ್ಕ ವಸ್ತುಗಳು ಅರಣ್ಯ ಸಿಬ್ಬಂದಿಗೆ ಶಾಕ್ ನೀಡಿವೆ.

Advertisment

ಕೇರಳದಲ್ಲಿ ಮಹಿಳೆಯನ್ನ ತಿಂದು ತೇಗಿದ್ದ ‘ನರಭಕ್ಷಕ’

ಕೇರಳದ ವಯನಾಡ್​ನ ಪಂಚಾರಕೊಲ್ಲಿಯಲ್ಲಿ ನರಭಕ್ಷಕನ ಹೆಜ್ಜೆ ಗುರುತು, ಹಾವಳಿ ಬೆಚ್ಚಿ ಬೀಳುವಂತೆ ಮಾಡಿತ್ತು. ಪಂಚರಕೋಲಿ ಅರಣ್ಯಕ್ಕೆ ಕಾಫಿ ಬೀಜ ಸಂಗ್ರಹಕ್ಕೆ ತೆರಳಿದ್ದ ರಾಧ ಎಂಬ ಮಹಿಳೆಯನ್ನ ನರಭಕ್ಷಕ ಹುಲಿ ತಿಂದು ತೇಗಿತ್ತು. ಮಹಿಳೆಯನ್ನ ಕೊಂದಿದ್ದ ಹುಲಿಯನ್ನ ಕಂಡಲ್ಲಿ ಮುಗಿಸಲು ಒತ್ತಾಯ ಮಾಡಿದ್ರು, ಆದ್ರೇ ಅದೇ ನರಭಕ್ಷಕ ಹುಲಿ ಈಗ ಶವವಾಗಿ ಪತ್ತೆಯಾಗಿದೆ.

ಇದನ್ನೂ ಓದಿ: Maha Kumbh Mela ಕಾಲ್ತುಳಿತ ಸಂಭವಿಸಲು ಪ್ರಮುಖ 2 ಕಾರಣಗಳು ಇಲ್ಲಿವೆ..!

ಈ ಹುಲಿ ಪ್ರಕರಣದ ಮೇಲೆ ಹುಲಿ ಪ್ರೇಮಿಗಳು ಅನುಮಾನ ವ್ಯಕ್ತಪಡಿಸಿದ್ದರು. ಗುಂಡಿಟ್ಟು ಕೊಲ್ಲಲಾಗಿದೆ ಎಂದು ಆರೋಪ ಮಾಡಿದ್ದರು. ಆದ್ರೆ ನರಭಕ್ಷಕ ಹುಲಿ.. ಮತ್ತೊಂದು ಹುಲಿಯ ಜೊತೆಗಿನ ಕಾದಾಟದಲ್ಲಿ ಬಲಿಯಾಗಿದೆ. ಅದರ ಕತ್ತಿನ ಭಾಗದಲ್ಲಿ ಮತ್ತೊಂದು ಹುಲಿ ಕಚ್ಚಿದ್ದು, ಆಳವಾದ ಗುರುತು ಇದೆ ಎಂದು ಕೇರಳ ಅರಣ್ಯ ಇಲಾಖೆ ವರದಿ ನೀಡಿದೆ. ಆದ್ರೆ ಹುಲಿಯ ಮರಣೋತ್ತರ ವೇಳೆ ಹುಲಿ ಹೊಟ್ಟೆಯಲ್ಲಿ ಸಿಕ್ಕ ವಸ್ತುಗಳು ಜನ್ರರನ್ನ ದಂಗಾಗುವಂತೆ ಮಾಡಿದೆ.

Advertisment

ಹುಲಿ ಹೊಟ್ಟೆಯಲ್ಲಿ ಕಿವಿಯೋಲೆ, ಕೂದಲು ಪತ್ತೆ

ಕಳೆದ ಕೆಲ ದಿನಗಳಿಂದ ಪಂಚಾರಕೋಲಿ ಜನರ ನಿದ್ದೆಗೆಡಿಸಿದ್ದ ನರಭಕ್ಷಕ ಹುಲಿ ಮೃತದೇಹ ಪತ್ತೆಯಾಗಿದೆ.. ಸುಮಾರು ನಾಲ್ಕರಿಂದ ಐದು ವರ್ಷದ ಹೆಣ್ಣು ಹುಲಿ ಎಂದು ಹೇಳಲಾಗ್ತಿದ್ದು, ಮರಣೋತ್ತರ ಪರೀಕ್ಷೆ ವೇಳೆ ವೇಳೆ ಹುಲಿ ಹೊಟ್ಟೆಯಲ್ಲಿ ಮೃತ ಮಹಿಳೆಯ ಕಿವಿಯೋಲೆ ಹಾಗೂ ಕೂದಲು ಪತ್ತೆಯಾಗಿದೆ.

ಇದನ್ನೂ ಓದಿ: IND vs ENG: ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದು ಹಾರ್ದಿಕ್ ಪಾಂಡ್ಯ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment