Advertisment

ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ದಯವಿಟ್ಟು ಬಿಟ್ಟುಬಿಡಿ -ನಾಗಮಂಗಲದಲ್ಲಿ ತಾಯಂದಿರು ಗೋಳಾಟ

author-image
Ganesh
Updated On
ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ದಯವಿಟ್ಟು ಬಿಟ್ಟುಬಿಡಿ -ನಾಗಮಂಗಲದಲ್ಲಿ ತಾಯಂದಿರು ಗೋಳಾಟ
Advertisment
  • ಪ್ರಕರಣದಲ್ಲಿ ಒಟ್ಟು 46 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ
  • ಪೊಲೀಸರ ಕ್ರಮ ಖಂಡಿಸಿ ಕೆಲವು ಮಹಿಳೆಯರಿಂದ ಪ್ರತಿಭಟನೆ
  • ಎಲ್ಲರಿಗೂ ನ್ಯಾಯ ಸಿಗುತ್ತೆ ಎಂದು ಭರವಸೆ ನೀಡಿದ ಸಚಿವರು

ಮಂಡ್ಯದ ನಾಗಮಂಗಲ ಪ್ರಕರಣ ಸಂಬಂಧ ಗಣೇಶ ಮೆರವಣಿಗೆ ನಡೆಸಿದ ಬದರಿಕೊಪ್ಪಲು ಬಡಾವಣೆ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

Advertisment

ತಮ್ಮ ಮಕ್ಕಳಿಗಾಗಿ ಪೊಲೀಸ್ ಠಾಣೆ ಮುಂದೆ ತಾಯಂದಿರು ಜಮಾಯಿಸಿದ್ದಾರೆ. ಠಾಣೆ ಸಮೀಪ ಬಂದು ಪೊಲೀಸರ ಮುಂದೆ ಕಣ್ಣೀರು ಇಟ್ಟಿದ್ದಾರೆ. ನಮ್ಮ ಮಕ್ಕಳು ತಪ್ಪು ಮಾಡಿಲ್ಲ. ಕಲ್ಲು ಹೊಡೆದವರು, ಬೆಂಕಿ ಹಚ್ಚಿದವರ ಬಿಟ್ಟು ನಮ್ಮ ಮಕ್ಕಳ ಮೇಲೆ ದೌರ್ಜನ್ಯ ಎಸೆಗುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಅಂಗಡಿಗೆ ಬೆಂಕಿ ಇಟ್ರು, 1.5 ಕೋಟಿ ಹೋಯ್ತು.. ಜೀವ ಉಳಿಸಿಕೊಂಡಿದ್ದೇ ದೊಡ್ಡದು -ನಾಗಮಂಗಲ ಬಟ್ಟೆ ವ್ಯಾಪಾರಿ ಕಣ್ಣೀರು

publive-image

ಮತ್ತೊಂದು ಕಡೆ ಕೆಲವು ಮಹಿಳೆಯರು ನಮ್ಮ ಮನೆಗೆ ನುಗ್ಗಿ, ಬಾಗಿಲು ಕಿಟಕಿಗಳನ್ನು ಒಡೆದು ಹಾಕಿದ್ದಾರೆ. ಅವರಿಗೆ ಮನೆ ಮೇಲೆ ದಾಳಿ ಮಾಡುವ ಅಧಿಕಾರ ಕೊಟ್ಟಿದ್ದು ಯಾರು? ನಮಗೆ ರಕ್ಷಣೆ ಬೇಕು ಎಂದು ಪೊಲೀಸರ ಎದುರು ಆಗ್ರಹಿಸಿದ್ದಾರೆ.

Advertisment

publive-image

ಇನ್ನು ನಾಗಮಂಗಲ ಠಾಣೆ ಎದುರು‌ ಜನರು ನಡೆಸ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಆಗಮಿಸಿದ್ದು, ಪೊಲೀಸರು ಅನ್ಯಾಯ ಮಾಡಿದ್ದಾರೆ, ನಮಗೆ ನ್ಯಾಯಕೊಡಿಸಿ ಎಂದು ಸಚಿವರನ್ನು ಒತ್ತಾಯಿಸಿದ್ದಾರೆ. ಎಲ್ಲರೂ ತಾಳ್ಮೆಯಿಂದ ಇರಿ, ಎಲ್ಲರಿಗೂ ನ್ಯಾಯ ಸಿಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ನಾಗಮಂಗಲ ಕೇಸ್​; ನಮ್ಮವ್ರು ತಪ್ಪು ಮಾಡಿಲ್ಲ ಎಂದು ಹೈಡ್ರಾಮಾ ಮಾಡಿದ ಕುಟುಂಬಸ್ಥರಿಗೆ ಇನ್​​ಸ್ಪೆಕ್ಟರ್​ ಪಾಠ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment