ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು ಹೇಗೆ..? ದುರಂತಕ್ಕೆ ಕಾರಣವಾಯ್ತಾ 2 ತಪ್ಪುಗಳು..?

author-image
Ganesh
Updated On
ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು ಹೇಗೆ..? ದುರಂತಕ್ಕೆ ಕಾರಣವಾಯ್ತಾ 2 ತಪ್ಪುಗಳು..?
Advertisment
  • ಕಪ್ ಗೆದ್ದ ಖುಷಿಯಲ್ಲಿ ಆರ್​ಸಿಬಿ ಸಂಭ್ರಮಾಚರಣೆ
  • ಚಿನ್ನಸ್ವಾಮಿ ಮೈದಾನದಲ್ಲಿ ದುರಂತವೇ ನಡೆಯಿತು
  • ದುರಂತ ಬೆನ್ನಲ್ಲೇ ಎದುರಾದ ಪ್ರಶ್ನೆ ಏನೇನು..?

ಬೆಂಗಳೂರು: ಚಿನ್ನಸ್ವಾಮಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಭಾರೀ ಅನಾಹುತ ಆಗಿದೆ. ದುರಂತದಲ್ಲಿ ಮೃತರ ಸಂಖ್ಯೆ ಏರಿಕೆ ಆಗುತ್ತಲೇ ಇದ್ದು, ಮತ್ತಷ್ಟು ನೋವಿನ ಆತಂಕ ಎದುರಾಗಿದೆ. ಈ ಮಧ್ಯೆ ದುರ್ಘಟನೆಗೆ ಕಾರಣ ಏನು ಅನ್ನೋದ್ರ ಬಗ್ಗೆ ಚರ್ಚೆ ಆಗ್ತಿದೆ..

ಆಗಿದ್ದೇನು..?

ಐಪಿಎಲ್​ ಫೈನಲ್​ನಲ್ಲಿ ಆರ್​ಸಿಬಿ ತಂಡವು ಪಂಜಾಬ್ ಕಿಂಗ್ಸ್​ ಅನ್ನು ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು. ಇದೇ ಖುಷಿಯಲ್ಲಿ ರಾಜ್ಯ ಸರ್ಕಾರ ವಿಧಾನಸೌಧದ ಮುಂಭಾಗದಲ್ಲಿ ಆರ್​ಸಿಬಿ ಟೀಂಗೆ ಹಾಗೂ ಟೀಂನ ಮ್ಯಾನೇಜ್ಮೆಂಟ್​ಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿತ್ತು. ಇತ್ತ ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ, ಫ್ಯಾನ್ಸ್​ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿಗೆ ಅಪಾರ ಅಭಿಮಾನಿಗಳು ಹರಿದು ಬಂದಿದ್ದಾರೆ. ಆಗ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ನಡೆದು ಅನಾಹುತ ಆಗಿದೆ. ಇನ್ನು, ಕಾಲ್ತುಳಿತ ಸಂದರ್ಭದಲ್ಲಿ ಆಟಗಾರರು ವಿಧಾನಸೌಧದ ಕಾರ್ಯಕ್ರಮದಲ್ಲಿದ್ದರು.

ಕಾರಣ ಇದೇನಾ..?

ಸಂಭ್ರಮಾಚರಣೆಗೆ ಸರಿಯಾದ ಪ್ಲಾನ್ ಮಾಡದೇ ಆಯೋಜಿಸಿದ್ದೇ ಕಾಲ್ತುಳಿತಕ್ಕೆ ಕಾರಣವಾಯ್ತಾ ಎಂಬ ಪ್ರಶ್ನೆ ಇದೆ. ಆರ್​ಸಿಬಿ ನಿನ್ನೆ ರಾತ್ರಿ ಕಪ್ ಗೆದ್ದಿದೆ. ಇಲ್ಲಿ ರಾತ್ರೋರಾತ್ರಿ ಈವೆಂಟ್ ಮಾಡಲು ನಿರ್ಧರಿಸಲಾಗಿದೆ..

ಎರಡನೇಯದಾಗಿ.. ಚಿನ್ನಸ್ವಾಮಿಯಲ್ಲಿ ನಡೆಯುವ ಕಾರ್ಯಕ್ರಮದ ಟಿಕೆಟ್ ವಿಚಾರದಲ್ಲಿ ಗೊಂದಲವಿತ್ತು. ಸ್ಟೇಡಿಯಂ ಒಳಗೆ ಎಂಟ್ರಿ ನೀಡಲು ಯಾವುದೇ ಪಾಸ್ ಬೇಕಾಗಿಲ್ಲ ಎಂದು ಮೊದಲು ಹೇಳಲಾಗಿತ್ತು. ಕೊನೆಯಲ್ಲಿ ಪಾಸ್ ಇಲ್ಲದವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ನಿಲ್ಲಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದ ಕಾಲ್ತುಳಿತ – ಕರ್ನಾಟಕ ಬಿಜೆಪಿ ವಾಗ್ದಾಳಿ..

ಇದರಿಂದ ಕೊನೆ ಮೂಮೆಂಟ್​ನಲ್ಲಿ ಅಭಿಮಾನಿಗಳು ಗೋಡೆ, ಕಾಂಪೌಂಡ್ ಹತ್ತಿದ್ದಾರೆ. ಇನ್ನು ಕೆಲವರು ಪಾಸ್ ಇಲ್ಲದೇ ಒಳಗೆ ನುಗ್ಗಿದ್ದಾರೆ. ಸ್ಟೇಡಿಯಂ ತುಂಬಿದ ಬಳಿಕ ಗೇಟ್ ಬಂದ್ ಮಾಡಲಾಗಿದೆ. ಪರಿಣಾಮ ನಿರೀಕ್ಷೆಗೂ ಮೀರಿದ ಜನ ಸ್ಟೇಡಿಯಂ ಹೊರಗೆ ನಿಂತರು. ಕೆಲವರು ಮೈದಾನದ ಒಳಗೆ ಹೋಗಲೇಬೇಕು ಅಂತಾ ಹಠದಿಂದ ನುಗ್ಗಿದ್ದಾರೆ. ಈ ವೇಳೆ ನೂಕುನುಗ್ಗಲು ಸಂಭವಿಸಿದೆ. ನೋಡು ನೋಡುತ್ತಿದ್ದಂತೆ ಕಾಲ್ತುಳಿತ ಉಂಟಾಗಿ ಅನಾಹುತ ಆಗಿದೆ. ಟಿಕೆಟ್ ಬಗ್ಗೆ ಕ್ಲಾರಿಟಿ ಕೊಟ್ಟಿದ್ದರೆ ಸ್ಟೇಡಿಯಂ ಮುಂದೆ ಕಾಲ್ತುಳಿತ ಆಗ್ತಿರಲಿಲ್ಲ ಎಂಬ ಮಾತು ಕೇಳಿಬಂದಿದೆ.

ಪ್ರಶ್ನೆ ಏನು..?

ಪೂರ್ವ ಸಿದ್ಧತೆ ಮಾಡಿ ಕೊಳ್ಳದೇ ಫ್ಯಾನ್ಸ್​ ಮೀಟ್ ಮಾಡಿದ್ದೇಕೆ? ತರಾತುರಿಯಲ್ಲಿ ಫ್ಯಾನ್ಸ್ ಮೀಟ್ ಮಾಡಿದ್ಯಾಕೆ? ಆರ್​ಸಿಬಿ ಗೆಲುವಿನ ಖುಷಿ ಓಕೆ. ಆರ್​ಸಿಬಿ ಕೋಟಿಗಟ್ಟಲೇ ಅಭಿಮಾನಿಗಳ ಬಳಗವನ್ನು ಹೊಂದಿದೆ. ಹೀಗಿದ್ದರೂ ಸರಿಯಾದ ತಯಾರಿ ಮಾಡಿಕೊಳ್ಳದೇ ಇದ್ದಿದ್ದೇಕೆ? ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: 8 ವರ್ಷದ ಮಗು, 14 ವರ್ಷದ ದಿವ್ಯಾಂಶಿ ದಾರುಣ ಅಂತ್ಯ; ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಹೇಗಾಯ್ತು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment