/newsfirstlive-kannada/media/post_attachments/wp-content/uploads/2025/07/neha.jpg)
ನೂರಾರು ಕನಸು ಕಟ್ಕೊಂಡಿದಾಕೆ ಹುಟ್ಟಿದ ಊರು ಬಿಟ್ಟು ದೂರದ ಓಡಿಶಾದಲ್ಲಿ ಕೆಲಸ ಮಾಡುತ್ತಿದ್ದಳು. ಅಪ್ಪ ಅಮ್ಮನ ಮೇಲೆ ಪ್ರಾಣವನ್ನೆ ಇಟ್ಟುಕೊಂಡಿದ್ದ ಬೆಂಗಳೂರಿನ ಹುಡುಗಿ ನಿಗೂಢವಾಗಿ ಜೀವಬಿಟ್ಟಿದ್ದಾಳೆ. ಇರೋ ಒಬ್ಬ ಮಗಳನ್ನ ಕಳ್ಕೊಂಡ ಹೆತ್ತವರ ಸಂಕಟವಂತೂ ಹೇಳತೀರದಾಗಿದೆ. ಅಷ್ಟಕ್ಕೂ ಗುಡ್​ ಮಾರ್ನಿಂಗ್ ಅಮ್ಮ ಎಂದವಳಿಗೆ ಆಗಿದ್ದೇನು? ಆ ಒಂದು ಕನಸೇ ಆಕೆಯನ್ನ ಬಲಿ ಪಡೀತಾ? ಇದು ಕೊಲೆಯಾ ಸೂಸೈಡಾ? ಬೆಂಗಳೂರಿನ ನೇಹಾ ರಾವ್​ಗೆ ಆಗಿದ್ದೇನು?
/newsfirstlive-kannada/media/post_attachments/wp-content/uploads/2025/07/NEHA-RAO-4.jpg)
ಬೆಂಗಳೂರಿನ ಹುಡುಗಿ ನೇಹಾ (23). ಬದುಕಿನ ಅರ್ಧದಷ್ಟು ಆಯುಸ್ಸನ್ನ ಸಹ ನೇಹಾ ಕಳೆದಿಲ್ಲ. ಆದ್ರೆ, ಇಷ್ಟು ಸಣ್ಣ ವಯಸ್ಸಿನಲ್ಲಿ ನೇಹಾ ರಾವ್​ ಜೀವನ ಕೊನೆಯಾಗಿದೆ. ಅಪ್ಪ ಅಮ್ಮನಿಗೆ ಒಬ್ಬಳೇ ಒಬ್ಬಳು ಮಗಳು ನೇಹಾ.. ಇರೋ ಒಬ್ಬ ಮಗಳ ಮೇಲೆ ಪ್ರಾಣವನ್ನೆ ಇಟ್ಕೊಂಡಿದ್ರು. ಆದ್ರೀಗ ಈ ನೇಹಾ ಬದುಕು ದಾರುಣವಾಗಿ ಅಂತ್ಯ ಕಂಡಿದೆ. ದಿಕ್ಕು ದೆಸೆಯಿಲ್ಲದ ದೂರದ ಓಡಿಶಾದಲ್ಲಿ ನೇಹಾ ನಿಗೂಢವಾಗಿ ಜೀವಬಿಟ್ಟಿದ್ದಾಳೆ.
/newsfirstlive-kannada/media/post_attachments/wp-content/uploads/2025/07/neha1.jpg)
ಗುಡ್​ ಮಾರ್ನಿಂಗ್​​ ಅಮ್ಮ ಅಂದಿದ್ದವಳು ಸಂಜೆ ಇಲ್ಲ!
ನೇಹಾ ರಾವ್ ಏಕಾಏಕಿ ಸಾವನ್ನಪ್ಪಿರೋದು ಮನೆಯವರಿಗೂ ದಿಗಿಲು ಹುಟ್ಟಿಸಿದೆ. ಮಗಳೂ ಚೆನ್ನಾಗಿಯೇ ಇದ್ಳು. ಚೆನ್ನಾಗಿಯೇ ಮಾತನಾಡ್ತಿದ್ಳು.. ಹೀಗಿರುವಾಗ ಸಡನ್​ ಆಗಿ ಏನಾಯ್ತು ಅಂತ ಶಾಕ್ ಆಗಿದ್ದಾರೆ. ದುರಂತ ಏನಂದ್ರೆ ಮಂಗಳವಾರ ಬೆಳಗ್ಗೆ ಕೂಡ ನೇಹಾ ತಾಯಿ ಜೊತೆ ಮಾತಾಡಿದ್ಳು. ನೇಹಾ ತಾಯಿ ಎಂಟು ಗಂಟೆಗೆ ಗುಡ್​ ಮಾರ್ನಿಂಗ್​ ಅಂತ ಮೆಸೇಜ್​ ಮಾಡಿದ್ರು.. ಆಮೇಲೆ ನೇಹಾ ಕೂಡ ಗುಡ್​ ಮಾರ್ನಿಂಗ್ ಅಮ್ಮ ಅಂತ ರಿಪ್ಲೈ ಮಾಡಿದ್ಳು.. ಇದಾದ ಮೇಲೆ ನೇಹಾ ಫೋನ್ ಸ್ವೀಚ್​ ಆಫ್​ ಆಗಿದೆ. ನೋಡಿದ್ರೆ ಸಂಜೆ ಹೊತ್ತಿಗೆ ಮಗಳ ಸಾವಿನ ಸುದ್ದಿಯೇ ಬಂದಿದೆ.. ಹೀಗಾಗಿ ನಿಗೂಢ ಸಾವಿನ ಸುತ್ತ ಅನುಮಾನಗಳ ಹುತ್ತವೇ ಬೆಳೆದಿದೆ. ಗುಡ್​ ಮಾರ್ನಿಂಗ್​ ಅಮ್ಮ ಅಂತ ರಿಪ್ಲೈ ಬಂದ್ಮೇಲೆ 9 ಗಂಟೆಗೆ ಸುಮಾರಿಗೆ ನೇಹಾ ತಾಯಿ ಮತ್ತೆ ಎರಡು ಟೆಕ್ಸ್ಟ್​ ಕಳಿಸಿದ್ದಾರೆ. ಆದ್ರೆ ವಾಪಸ್​ ಏನೂ ರಿಪ್ಲೈ ಬಂದಿಲ್ಲ. ಕೊನೆಗೆ ಫೋನ್ ಮಾಡಿ ನೋಡಿದ್ದಾರೆ. ಫೋನ್ ಸ್ವೀಚ್​ ಆಫ್​ ಬಂದಿದೆ. ಕೆಲಸಕ್ಕೆ ಹೋಗಿರ್ತಾಳೆ ಅಂತ ನೇಹಾ ತಂದೆ ತಾಯಿ ಹೆಚ್ಚೆನೂ ತಲೆ ಕೆಡಿಸ್ಕೊಂಡಿಲ್ಲ. ನೋಡಿದ್ರೆ ಸಂಜೆಗೆ ಮಗಳು ಸತ್ತಿದ್ದಾಳೆ ಅನ್ನೋ ಸುದ್ದಿ ಬಂದ್ರೆ ಹೆತ್ತ ಜೀವಗಳಿಗೆ ಹೇಗಾಗಬೇಡ ಹೇಳಿ. ಆಕಾಶವೇ ಕಳಚಿ ಬಿದ್ದಂತಾಗಿದೆ.
ನೇಹಾ ತಂದೆ ಬೆಂಗಳೂರಿನ ಕಮಲಾ ನಗರದಲ್ಲಿ ವಾಸವಿದ್ದಾರೆ. ತಂದೆ ತಾಯಿಗೆ ನೇಹಾ ಒಬ್ಬಳೇ ಮಗಳು. ಇರೋ ಒಬ್ಬ ಮಗಳನ್ನ ಗೊತ್ತು ಗುರು ಇಲ್ಲದೇ ಊರಿಗೆ ಕಳಿಸೋದು ಅಂದ್ರೆ ಎಂತವರಿಗೂ ಅದು ನರಕವೇ ಸರಿ. ಆದ್ರೆ ಏನ್ ಮಾಡೋದು ನೇಹಾಳಿಗೆ ಏನಾದ್ರೂ ಮಾಡ್ಬೇಕು ಅನ್ನೋ ಹಠ ಇತ್ತು. ಹೀಗಾಗಿ ಒಲ್ಲದ ಮನಸ್ಸಿನಿಂದಲೇ ಮಗಳನ್ನ ಜಿಂದಾಲ್​ಗೆ ಕಳಿಸಿದ್ರು. ಇದಷ್ಟೇ ಅಲ್ಲ.. ನೇಹಾಳ ಕೆಲಸದ ಕತೆ ಕೇಳ್ಬಿಟ್ರೆ ನೀವು ನಿಜಕ್ಕೂ ಮಮ್ಮಲ ಮರಗಿಯೇ ಬಿಡ್ತಿರಾ. ಹಾ ಬೆಂಗಳೂರಿನಲ್ಲೇ ಕೆಲಸ ಮಾಡ್ಬೇಕು ಅನ್ನೋ ಆಸೆ ಇಟ್ಕೊಂಡಿದ್ಳು. ಆದ್ರೆ ಬೆಂಗಳೂರಿನಲ್ಲಿ ಅವಳಂದುಕೊಂಡಂತ ಕೆಲಸ ಸಿಕ್ಕಿರಲ್ಲಿಲ್ಲ. ಹೀಗಾಗಿ ಕನಸಿನ ಮೂಟೆ ಹೊತ್ತು ಅನಿವಾರ್ಯ ಕಾರಣಗಳಿಂದ ಓಡಿಶಾಗೆ ಹೋಗಿ ಕೆಲಸ ಮಾಡ್ತಿದ್ಳು. ಜಿಂದಾಲ್​ ಸ್ಟೀಲ್​ ಆ್ಯಂಡ್​ ಪವರ್ ಕಂಪನಿಯಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡ್ತಿದ್ಳು. ಓದಿನಲ್ಲೇ ಆಗ್ಲೀ ಕೆಲಸದಲ್ಲೇ ಆಗ್ಲಿ ನೇಹಾ ಜಾಣೆ ಹುಡುಗಿ. ಆದ್ರೆ ಅದೊಂದು ಕನಸು ಮಾತ್ರ ನೇಹಾಳನ್ನ ಕಾಡ್ತಾನೆ ಇತ್ತು. ಈಗ ಆ ಕನಸೇ ಏನಾದ್ರೂ ಆಕೆ ಜೀವ ಬಲಿ ಪಡೀತಾ ಅನ್ನೋ ಅನುಮಾನವೂ ಇದೆ.
/newsfirstlive-kannada/media/post_attachments/wp-content/uploads/2025/07/NEHA-RAO-2.jpg)
2024ರ ಆಗಸ್ಟ್ ನಲ್ಲಿ ಕೆಲಸಕ್ಕೆ ರೀ ಜಾಯಿನ್ ಆಗಿದ್ದ ನೇಹಾ!
ಅಪ್ಪ ಅಮ್ಮನಿಗೆ ನೇಹಾ ರಾವ್ ಒಬ್ಬಳೇ ಮಗಳಾಗಿದ್ದಾ ನೇಹಾ 2022-23 ರಲ್ಲಿ ಕೆಲಸ ಶುರು ಮಾಡಿದ್ಳು. ಆದ್ರೆ ನೇಹಾಗೆ ಅಪ್ಪ ಅಮ್ಮನ ಜೊತೆ ಬೆಂಗಳೂರಿನಲ್ಲಿರೋದಕ್ಕೆ ಆಸೆ ಇತ್ತಂತೆ. ಹೀಗಾಗಿ ಮೂರು ವರ್ಷದ ಅಗ್ರಿಮೆಂಟ್ ಇದ್ರೂ ಒಂದೂವರೆ ವರ್ಷಕ್ಕೆ ಕೆಲಸ ಬಿಟ್ಟು ವಾಪಸ್ ಬೆಂಗಳೂರಿಗೆ ಬಂದಿದ್ಳು. ಬೆಂಗಳೂರಲ್ಲಿ ಎಂಟು ತಿಂಗಳು ಕಾಲ ಕೆಲಸಕ್ಕಾಗಿ ಅಲೆದಾಡಿ ಹುಡುಕಾಡಿ ಕೊನೆಗೆ ಎಲ್ಲೂ ಕೆಲಸ ಸಿಗದೇ ನಿರಾಸೆಗೊಂಡಿದ್ಳು. ಒಳ್ಳೆ ಕೆಲಸಗಾರ್ತಿ ಅನ್ನೋ ಕಾರಣಕ್ಕೆ ಜಿಂದಾಲ್ ಕಂಪನಿ ಮತ್ತೆ ಕೆಲಸದ ಆಫರ್​ ಕೊಟ್ಟಿತ್ತು. ಹೀಗಾಗಿ 2024ರ ಆಗಸ್ಟ್​ನಲ್ಲಿ ನೇಹಾ ಓಡಿಶಾದ ಜಿಂದಾಲ್​ ಕಂಪನಿಗೆ ರಿ ಜಾಯಿನ್ ಆಗಿದ್ಳು. ಮಗಳು ಕೆಲಸಕ್ಕೆ ಹೋದಾಗ ನೇಹಾ ತಂದೆಯೇ ಖುದ್ದು ಡ್ರಾಪ್ ಮಾಡಿ ಬಂದಿದ್ರು. ಆದ್ರೀಗ ಮಗಳಿಗೆ ಹೀಗೆ ಆಗಿರೋದು ಕಂಡು ಹೆತ್ತವರಿಗೆ ದಿಕ್ಕೆ ತೋಚದಂತಾಗಿದೆ.
ನೇಹಾ ರಾವ್​ಗೆ​ ಶ್ವಾನ ಅಂದ್ರೆ ಸಿಕ್ಕಾಪಟ್ಟೆ ಪ್ರೀತಿ, ಅದಕ್ಕೆ ಈ ಫೋಟೋಗಳೇ ಸಾಕ್ಷಿ.. ಇದೇ ಕಾರಣಕ್ಕೆ ನೇಹಾ ಪ್ರತಿದಿನ ವಿಡಿಯೋ ಕಾಲ್ ಮಾಡಿ ಮುದ್ದು ಶ್ವಾನದ ಬಗ್ಗೆ ತಿಳ್ಕೋತಿದ್ಳು. ದಿನಕ್ಕೆ ಒಂದೆರಡು ಸಾರಿಯಾದ್ರೂ ವಿಡಿಯೋ ಕಾಲ್ ಮಾಡಿ ಅಪ್ಪ ಅಮ್ಮನ ಜೊತೆ ಮಾತಾಡ್ತಿದ್ಳು. ಇದಷ್ಟೆ ಅಲ್ಲ ನೇಹಾ ಒಳ್ಳೆ ಕ್ರಿಕೆಟ್​ ಆಟಗಾರ್ತಿ ಕೂಡ. ಕ್ರಿಕೆಟ್ ಮೇಲೆ ಪ್ರಾಣವನ್ನೆ ಇಟ್ಕೊಂಡಿದಂತ ಹುಡುಗಿ. ಇಷ್ಟಲ್ಲ ಟ್ಯಾಲೆಂಟ್ ಇರೋ ಹುಡುಗಿಗೆ ಏನಾಯ್ತು? ಯಾಕೆ ಆಕೆ ಜೀವ ಹೋಯ್ತು ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಸದ್ಯ ಡೆತ್​ ನೋಟ್​ ಒಂದು ಸಿಕ್ಕಿದ್ದು, ಡೆತ್​ ನೋಟ್​ನಲ್ಲಿ ಹಲವು ವಿಚಾರಗಳನ್ನ ಉಲ್ಲೇಖಿಸಿರುವ ಬಗ್ಗೆ ಮಾಹಿತಿ ಇದೆ. ಓಡಿಶಾದಲ್ಲಿ ದೂರು ದಾಖಲಾಗಿದ್ದು, ಮಹಜರು ಕೆಲಸ ಎಲ್ಲ ಮುಗಿದಿದೆ. ಪೊಲಿಸರು ನಿಗೂಢ ಸಾವಿನ ತನಿಖೆ ನಡೆಸ್ತಿದ್ದು, ಅಸಲಿ ಕಾರಣ ಏನೂ ಅನ್ನೋದನ್ನ ಪತ್ತೆ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us