ಭಾರತದ ಮೋಸ್ಟ್ ವಾಟೆಂಡ್​ ಉಗ್ರ ಖತಂ? ಹಫೀಜ್ ಸಯೀದ್​ಗೆ ಜನ್ನತ್ ದಾರಿ ತೋರಿಸಿದ್ರಾ ಅಪರಿಚಿತ ಬಂದೂಕುದಾರಿಗಳು?

author-image
Gopal Kulkarni
Updated On
ಭಾರತದ ಮೋಸ್ಟ್ ವಾಟೆಂಡ್​ ಉಗ್ರ ಖತಂ? ಹಫೀಜ್ ಸಯೀದ್​ಗೆ ಜನ್ನತ್ ದಾರಿ ತೋರಿಸಿದ್ರಾ ಅಪರಿಚಿತ ಬಂದೂಕುದಾರಿಗಳು?
Advertisment
  • ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಹಫೀಜ್ ಸಯೀದ್​ ಖತಂ?
  • ಅಪರಿಚಿತರ ಗುಂಡಿನ ದಾಳಿಗೆ ಹತನಾದನ ಹಫೀಸ್​ ಎಂಬ ನರರಾಕ್ಷಸ
  • ಹಫೀಸ್ ಸಯೀದ್ ಹತ್ಯೆಯ ಬಗ್ಗೆ ತುಟಿ ಬಿಚ್ಚದ ಪಾಕಿಸ್ತಾನ ಸರ್ಕಾರ

ಪಾಕಿಸ್ತಾನದಲ್ಲಿ ನಿನ್ನೆ ಮೇಜರ್​​ ಆಗಿ ಎರಡು ಘಟನೆ ನಡೆದಿದೆ.. ಒಂದು ಪಾಕಿಸ್ತಾನದ 90 ಸೈನಿಕರನ್ನ ಬಲೂಚ್​​ ಆರ್ಮಿ ಹೊಡೆದು ಮುಗಿಸಿದೆ.. ಎರಡು ಕಣಿವೆಯಲ್ಲಿ ಉಗ್ರ ಚಟುವಟಿಕೆ ನಡೆಸ್ತಿದ್ದ ಲಷ್ಕರ್ ಕಮಾಂಡರ್ ಅಬು ಕತಲ್‌ನನ್ನು ಅಪರಿಚಿತ ಹೊಡೆದು ಮುಗಿಸಿದ್ದಾರೆ.. ಆದ್ರೆ, ಕತಲ್​​​ ಖತಂ ಆಗಿದ್ದು ನಿಜ.. ಆದ್ರೆ, ಅಲ್ಲಿ ಮೋಸ್ಟ್ ವಾಂಟೆಡ್ ಹಫೀಜ್ ಸಯೀದ್ ಕೂಡ ಇದ್ದ ಅನ್ನೋ ಸುದ್ದಿ ಸದ್ದು ಮಾಡ್ತಿದೆ..

ಭಾರತದ ನಂಬರ್ ಒನ್ ಶತ್ರುವಿನ ಸಂಹಾರವಾಯ್ತಾ? ಇಡೀ ಪಾಕ್​ ನೆಲದಲ್ಲಿ ನರಕಾಸುರರ ಸೃಷ್ಟಿಸಿದ ಈ ರಕ್ತಪಿಪಾಸು ಪಾಕ್​ ನೆಲದಲ್ಲಿಯೇ ಅಪರಿಚತರ ಗುಂಡಿಗೆ ಬಲಿಯಾದನಾ ? ಲಷ್ಕರ್-ಎ-ತೊಯ್ಬಾ ನರರಾಕ್ಷಸನ ಕಥೆಯನ್ನು ಮುಗಿಸಿದ್ರಾ ಅಪರಿಚಿತ ಬಂದೂಕುದಾರಿಗಳು? ಗೊತ್ತಿಲ್ಲ, ಆದ್ರೆ, ನಿನ್ನೆ ಇಡೀ ದಿನ ಸೋಷಿಯಲ್​ ಮೀಡಿಯಾದಲ್ಲಿ ಈ ಹಫೀಜ್​ ಸಯೀದ್​​ನದ್ದೆ ಸುದ್ದಿ. ಕೇವಲ ಭಾರತ ಅಷ್ಟೇ, ತನ್ನದೇ ಕಬರ್​ಸ್ತಾನವಾದ ಪಾಕಿಸ್ತಾನದಲ್ಲೂ ಹಫೀಜ್ ಸಯೀದ್ ಟ್ರೆಂಡಿಂಗ್‌ನಲ್ಲಿದ್ದ. ಅವ್ನು ಸತ್ತು ಹೋದ್ನಾ? ನಿಜವಾ ಅನ್ನೋ ಚರ್ಚೆ..

26/11 ಮುಂಬೈ ದಾಳಿಯ ಉಗ್ರ ರಾಕ್ಷಸನ ಖೇಲ್ ಖತಂ?
ಲಷ್ಕರ್-ಎ-ತೈಬಾ.. ಅದೆಷ್ಟು ಜನರ ನೆತ್ತರು ಹೀರಿದ ರಾಕ್ಷಸ ಸಂತಾನದ ಸಂಘಟನೆ. ಅದರ ಮುಖ್ಯಸ್ಥನೇ ಈ ಹಫೀಜ್ ಸಯೀದ್. ಈಗ ಹತ್ಯೆಯಾಗಿದ್ದಾನೆ ಎಂಬ ಮಾಹಿತಿ ಹರಿದಾಡ್ತಿದೆ. ಜಮಾತ್-ಉದ್-ದವಾ ಎಂಬ ಸಂಘಟನೆಯ ಮುಖವಾಡ ಹೊತ್ತಿದ್ದ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಝೇಲಂ ಪ್ರದೇಶದಲ್ಲಿ ಗುಂಡಿಕ್ಕಲಾಗಿದೆ ಅಂತ ಸುದ್ದಿ ಹರಿದಾಡಿದೆ.

publive-image

ಇದನ್ನೂ ಓದಿ:ಭಾರತದ ಈ ಜಾಗವನ್ನು ಗಂಗಾಮಾತೆಯ ಮಾವನ ಮನೆ ಎನ್ನುತ್ತಾರೆ! ಹಾಗೆ ಕರೆಯಲು ಕಾರಣವೇನು ಗೊತ್ತಾ?

ಎಂದಿನಂತೆ ಮುಸುಕುಧಾರಿಗಳು, ಪಾಕ್​​​ನಲ್ಲಿ ಅವನಿಗೆ ಜನ್ನತ್​ಗೆ ದಾರಿ ತೋರಿಸಿದ್ದಾರೆ. ಪಂಜಾಬ್‌ನ ಝೇಲಂಗೆ ಹೋಗ್ತಿದ್ದ ವಾಹನದ ಮೇಲೆ ಅಪರಿಚಿತ ಬಂದೂಕುಧಾರಿಗಳು ಮನಸೋಇಚ್ಛೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಫೀಜ್​​​ನ ಬಂಟ ಅಬು ಕಟಲ್ ಸಿಂಧಿ ಸ್ಥಳದಲ್ಲೇ ಹತ್ಯೆಯಾಗಿದ್ದಾನೆ. ವಾಹನ ಚಾಲಕ ಸಹ ಸತ್ತುಬಿದ್ದಿದ್ದಾನೆ. ಇಂಟ್ರಸ್ಟಿಂಗ್​ ಏನ್​ ಅಂದ್ರೆ ಕಾರಿನಲ್ಲಿ ಹಫೀಜ್ ಸಯೀದ್ ಕೂಡ ಇದ್ದ ಅನ್ನೋ ಸುದ್ದಿ ಇದೆ.. ಆತ ಗಂಭೀರವಾಗಿ ಗಾಯಗೊಂಡಿದ್ದು ರಾವಲ್ಪಿಂಡಿಗೆ ಕರೆದೊಯ್ಯಲಾಯ್ತು. ಆದ್ರೆ, ಮೃತಪಟ್ಟ ಅನ್ನೋ ವರದಿಯಾಗಿದೆ. ಆದ್ರೆ, ಸತ್ತವನು ಹಫೀಜ್​​ ಸಯೀದಾ? ಬೇರೆ ಯಾರಾದ್ರೂ ಇದ್ರಾ ಅನ್ನೋ ಬಗ್ಗೆ ಗೊಂದಲ ಇದೆ. ಆದ್ರೆ, ಸರ್ಕಾರ ಈ ಬಗ್ಗೆ ಸ್ಪಷ್ಟೀಕರಣ ನೀಡುವ ಗೋಜಿಗೆ ಹೋಗಿಲ್ಲ.

publive-image

ಇದನ್ನೂ ಓದಿ: ಆತನಿಗೆ 65 ವರ್ಷ; ಇಳಿವಯಸ್ಸಿನಲ್ಲೂ ಯುವತಿಯನ್ನು ಮದುವೆ ಆದ ಅಂಕಲ್​​

ಮಾಜಿ ಪ್ರಧಾನಿ ಇಮ್ರಾನ್ ಖಾನ್​, ಪಿಟಿಐ ನಾಯಕ ಸಮದ್ ಯಾಕೂಬ್​ನ ಹೇಳಿಕೆ ಮಾತ್ರ ಅನುಮಾನ ಹೆಚ್ಚಿಸ್ತಿದೆ. ನನ್ನ ಮಾಹಿತಿಯ ಪ್ರಕಾರ, ಹಫೀಜ್ ಸಯೀದ್ ಮತ್ತು ಅವನ ಸೋದರಳಿಯ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಹಫೀಜ್ ಸಯೀದ್ ಅವರ ಮಗ ತಲ್ಹಾ ಸಯೀದ್ ಪ್ರಕಾರ, ಚೆನ್ನಾಗಿದ್ದಾರೆ ಅಂತಿದ್ದಾರೆ.. ಆದ್ರೆ ಅವರ ಧ್ವನಿಯಲ್ಲಿ ಹಾಗೇ ಕಾಣಿಸ್ತಿಲ್ಲ ಅಂತ ಟ್ವೀಟ್​​ ಮಾಡಿದ್ದಾರೆ.

ಸದ್ಯಕ್ಕೆ ಈ ಸುದ್ದಿ ಮಾತ್ರ ಕಾಡ್ಗಿಚ್ಚಿನಂತೆ ಹರಡಿದೆ. ಹಫೀಜ್ ಸಯೀದ್ ಹತ್ಯೆಯಾಗಿದ್ದಾನಾ? ಇಲ್ವಾ ಅನ್ನೋದನ್ನ ಪಾಕಿಸ್ತಾನ ಸರ್ಕಾರ ತುಂಬಾ ರಹಸ್ಯವಾಗಿಟ್ಟಿದೆ. ಅಂದ್ಹಾಗೆ ಹಫೀಜ್ ಸಯೀದ್ ಸತ್ತ ಅನ್ನೋ ಸುದ್ದಿ ಹರಡ್ತಿರೋದು ಇದೇ ಮೊದಲೇನಲ್ಲ.. ಒಂದ್ವೇಳೆ, ಹಫೀಜ್​​ ಖೇಲ್​ ಖತಂ ಆಗಿದ್ರೆ, ಮುಂಬೈನಲ್ಲಿ ಪ್ರಾಣಬಿಟ್ಟ ನತದೃಷ್ಟ ಆತ್ಮಗಳಿಗೆ ಶಾಂತಿ ಸಿಕ್ಕಂತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment