Advertisment

ಮೊಘಲ ಸಾಮ್ರಾಜ್ಯದ ಕೊನೆಯ ದೊರೆಯ ಅತ್ಯಮೂಲ್ಯ ಕಿರೀಟ ಎಲ್ಲಿ ಹೋಯ್ತು? ಈಗ ಅದು ಇರೋದು ಎಲ್ಲಿ ಗೊತ್ತಾ?

author-image
Gopal Kulkarni
Updated On
ಮೊಘಲ ಸಾಮ್ರಾಜ್ಯದ ಕೊನೆಯ ದೊರೆಯ ಅತ್ಯಮೂಲ್ಯ ಕಿರೀಟ ಎಲ್ಲಿ ಹೋಯ್ತು? ಈಗ ಅದು ಇರೋದು ಎಲ್ಲಿ ಗೊತ್ತಾ?
Advertisment
  • ಮೊಘಲರ ಕೊನೆಯ ದೊರೆ ಜಾಫರ್​ನ ಅಮೂಲ್ಯವಾದ ಕಿರೀಟ ಏನಾಯ್ತು?
  • ಬಾಹದ್ದೂರ್ ಶಾಹ್ ಜಾಫರ್​​ನ ಕಿರೀಟ ಮತ್ತು ಎರಡು ಸಿಂಹಾಸನಗಳು ಏನಾದ್ವು?
  • ದೆಹಲಿಯ ಆ ಮಹಾ ಹರಾಜಿನಲ್ಲಿ ಈ ಎರಡು ವಸ್ತುಗಳನ್ನು ಕೊಂಡವರು ಯಾರು?

ಮೊಘಲ ಸಾಮ್ರಾಜ್ಯದ ಕೊನೆಯ ದೊರೆ ಬಾಹದ್ದೂರ್ ಶಾಹ್​ ಜಾಫರ್ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಆದ್ರೆ ತುಂಬಾ ಕಡಿಮೆ ಜನರಿಗೆ ಆತ ಧರಿಸುತ್ತಿದ್ದ ಅತ್ಯಮೂಲ್ಯವಾದ ಚಿನ್ನದ ಕಿರೀಟದ ಬಗ್ಗೆ ಗೊತ್ತು. ಇನ್ನೂ ಕೆಲವರಿಗೆ ಆ ಕಿರೀಟ ಈಗ ಎಲ್ಲಿದೆ ಎಂಬುದು ಗೊತ್ತೇ ಇಲ್ಲ. ಈ ಒಂದು ಕಿರೀಟವನ್ನು ಭಾರತದ ಅತ್ಯಂತ ಮಹತ್ವಪೂರ್ಣ ಇತಿಹಾಸದ ಗುರುತು ಎಂದು ಹೇಳಲಾಗುತ್ತದೆ. ಆ ಒಂದು ಐತಿಹಾಸಿಕ ಗುರುತಾಗಿ ಉಳಿದುಕೊಂಡಿದ್ದ ಕಿರೀಟ ಈ ಎಲ್ಲಿದೆ ಎಂಬುದನ್ನು ನೋಡೋಣ ಬನ್ನಿ.

Advertisment

publive-image

ಬ್ರಿಟಿಷರು ಭಾರತದಿಂದ ಏನೆಲ್ಲಾ ಕದ್ದುಕೊಂಡು ಒಯ್ದರು ಅಂತ ಗೊತ್ತೆ ಇದೆ. ವಿಶ್ವದಲ್ಲಿಯೇ ಅತ್ಯಂತ ದುಬಾರಿ ವಜ್ರಗಳಲ್ಲೊಂದಾದ ಕೊಹಿನೂರು ವಜ್ರ, ಟಿಪ್ಪು ಸುಲ್ತಾನ ಉಂಗುರ, ಶಾಜಹಾನ್​ನ ವೈನ್ ಕಪ್, ಅಮರಾವತಿಯ ಮಾರ್ಬಲ್ಸ್, ಸುಲ್ತಾನ್​ಗಂಜ್​ ಬುದ್ಧ ಹೀಗೆ ಭಾರತದ ಶ್ರೀಮಂತಿಕೆಯ ಗುರುತಾಗಿದ್ದ ಎಲ್ಲವನ್ನೂ ತಮ್ಮ ಹಡಗಿನಲ್ಲಿಳಿಸಿಕೊಂಡು ಕೊಳ್ಳೆ ಹೊಡೆದುಕೊಂಡು ಹೋದರು ಅದೇ ರೀತಿ ಬಾಹದ್ದೂರ್ ಶಾ ಜಾಫರ್​​ನ ಕಿರೀಟವನ್ನು ಕೂಡ ಇದೇ ಕಳ್ಳ ಬ್ರಿಟೀಷರು ಎಗರಿಸಿಕೊಂಡು ಹೋಗಿದ್ದು. ಇಂದಿಗೂ ಕೂಡ ಅದು ಲಂಡನ್​ನ ಮ್ಯೂಸಿಯಂನಲ್ಲಿದೆ.

publive-image

1857ರಲ್ಲಿ ಬ್ರಿಟಿಷರು ಭಾರತದಲ್ಲಿ ಮೊಘಲರ ಸಾಮ್ರಾಜ್ಯಕ್ಕೆ ಅಂತಿಮ ಕೊಳ್ಳಿಯಿಟ್ಟರು. ಅದಾದ ಬಳಿಕ ಮೊಘಲ ಸಾಮ್ರಾಜ್ಯದ ಸಣ್ಣದೊಂದು ಕುರುಹು ಕೂಡ ಭಾರತದಲ್ಲಿ ಉಳಿಯಲಿಲ್ಲ. ಯಾವಾಗ ಮೊಘಲರ ಸಾಮ್ರಾಜ್ಯ ಅಂತ್ಯವಾಯ್ತೋ, ಆಗ ಸರಳವಾಗಿ ಬಾಹದ್ದೂರ್ ಶಾ ಜಾಫರ್​ನ ಕಿರೀಟವು ಕೂಡ ಬ್ರಿಟೀಷರ ಕೈಗೆ ಹೋಯ್ತು. ಅಂದಿನ ಮೇಜರ್ ರಾಬರ್ಟ್ ಟೈಲರ್​ ಈ ಕಿರೀಟವನ್ನು ತೆಗೆದುಕೊಂಡು ಹೋಗಿ ರಾಣಿ ವಿಕ್ಟೋರಿಯಾಳ ಪದತಳಕ್ಕೆ ಕಾಣಿಕೆಯಾಗಿಟ್ಟ. ಅಂದಿನಿಂದ ಇಂದಿನವರೆಗೂ ಅದು ಲಂಡನ್​ನ ಮ್ಯೂಸಿಯಂನಲ್ಲಿಯೇ ಇದೆ.

ಇದನ್ನೂ ಓದಿ:ದುಬೈ ರಾಜಕುಮಾರನ ಮಗಳಿಗೆ ಹಿಂದ್ ಎಂದು ನಾಮಕರಣ.. ಈ ಹೆಸರಿನ ಮಹತ್ವವೇನು ಗೊತ್ತಾ?

Advertisment

1857ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಶುರುವಾಯ್ತು. ಭಾರತೀಯ ಸಿಪಾಯಿಗಳು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ತಿರುಗಿ ಬಿದ್ದರು. ಆಗ ಬಾಹದ್ದೂರ್ ಶಾ ಜಾಫರ್​ನನ್ನು ಭಾರತೀಯ ಪಡೆಯ ಮುಖ್ಯಸ್ಥನನ್ನಾಗಿ ನೇಮಿಸಲಾಯ್ತು. ಆದ್ರೆ ಈ ಸಂಗ್ರಾಮದಲ್ಲಿ ಬ್ರಿಟೀಷರ ಮೇಲುಗೈಯಾಯ್ತು. ಈ ವೇಳೆ ಬಾಹದ್ದೂರ್ ಶಾಹ್ ಜಾಫರ್​ನನ್ನು ಅವರು ಅಂದಿನ ಬರ್ಮಾ ಅಂದ್ರೆ ಇಂದಿನ ಮಯನ್ಮಾರ್​ನಲ್ಲಿ ಬಂಧಿಸಿಟ್ಟಿದ್ದರು. ಮುಂದೆ 1862ರಲ್ಲಿ ಜಾಫರ್​ ಕೊನೆಯುಸಿರೆಳೆದ.

ಇದನ್ನೂ ಓದಿ: ಇದು ವಿಶ್ವದ ಅತಿಹೆಚ್ಚು ಮಾರಾಟವಾಗುವ ಎರಡನೇ ಪರ್ಫ್ಯೂಮ್​.. ಇದರ ಹಿಂದಿದೆ ಮೊಘಲರ ನಂಟು

ಮುಂದೆ ದೆಹಲಿಯಲ್ಲಿ ಜಾಫರ್​ಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಹರಾಜು ಹಾಕಲಾಯ್ತು. ಇದರಲ್ಲಿ ರಾಬರ್ಟ್ ಕ್ರಿಸ್ಟೋಫರ್​ ಟೇಲರ್ ಜಾಫರ್​ನ ಕಿರೀಟ ಹಾಗೂ ಎರಡು ಸಿಂಹಾಸನಗಳನ್ನು ಪಡೆದುಕೊಂಡ. ಅವೆರಡನ್ನು ತೆಗೆದುಕೊಂಡು ಹೋಗಿ ಇಂಗ್ಲೆಂಡ್​ನಲ್ಲಿ ಇಟ್ಟ ಕೊನೆಗೆ ಅದನ್ನು ರಾಣಿ ವಿಕ್ಟೋರಿಯಾಗೆ ಕೊಡುಗೆಯಾಗಿ ನೀಡಿದ.

Advertisment

publive-image

ಈ ಕಿರೀಟ ಸಂಪೂರ್ಣ ಚಿನ್ನದಿಂದ ಕೂಡಿದ್ದು ಅಲ್ಲಲ್ಲಿ ವಜ್ರ, ಮುತ್ತು ಮತ್ತು ಅಪರೂಪದ ಹವಳಗಳಿಂದ ಸಿಂಗರಿಸಲಾಗಿತ್ತು. ಪ್ರಮುಖವಾಗಿ ಅದನ್ನು ಮೊಘಲರ ಐಷಾರಾಮಿ ಕಿರೀಟದ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿತ್ತು.ಇದನ್ನು ಉಡುಗೊರೆಯಾಗಿ ಪಡೆದುಕೊಂಡ ರಾಣಿ ವಿಕ್ಟೋರಿಯಾ ಬ್ರಿಟಿಷರ ರಾಯಲ್ ಕಲೆಕ್ಷನ್​ನಲ್ಲಿ ಅದನ್ನು ಇಟ್ಟಿದ್ದರು. ಸದ್ಯ ಬಹಾದ್ದೂರ್​ ಶಾಹ್​ ಜಾಫರ್​ನ ಕಿರೀಟ ಲಂಡನ್​ನ ಮ್ಯೂಸಿಯಂನಲ್ಲಿ ಭಾರತದ ಗತವೈಭವದ ಮೂಕ ಸಾಕ್ಷಿಯಾಗಿ ನಿಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment