/newsfirstlive-kannada/media/post_attachments/wp-content/uploads/2025/04/muddu-sose-1.jpg)
ಮುದ್ದು ಸೊಸೆ ತೆರೆಗೆ ಬರೋಕೆ ಕೌಂಡೌನ್ ಶುರುವಾಗಿದೆ. ಜಸ್ಟ್ 5 ದಿನ ಅಷ್ಟೇ, ವೀಕ್ಷಕರ ಮನೆ ಗೃಹಪ್ರವೇಶ ಮಾಡಲಿದ್ದಾಳೆ ತ್ರಿವಿಕ್ರಮ್ ಜೊತೆ ಮುದ್ದು ಮುದ್ದು ರಾಕ್ಷಸಿ. ಮುದ್ದಿ ಸೊಸೆ ಈಗಾಗಲೇ ನಾಲ್ಕು ಪ್ರೊಮೋಗಳು ರಿಲೀಸ್ ಆಗಿವೆ.
ಇದನ್ನೂ ಓದಿ:ಇನ್ಸ್ಟಾದಲ್ಲಿ ಪತ್ನಿ ಮದುವೆ ವಿಡಿಯೋ ನೋಡಿ ಶಾಕ್ ಆದ ಪತಿ.. ಒಂದೇ ವಾರದ ಪ್ರೀತಿಗೆ ಕೈ ಕೊಟ್ಟ ಮಹಿಳೆ!
ಪ್ರತಿ ಪ್ರೋಮೋನು ಕನ್ನಡಕ್ಕೆ ಫ್ರೇಶ್ ಫೀಲ್ ಕೊಡುತ್ತೆ. ಮಂಡ್ಯ ಶೈಲಿಯಲ್ಲಿ ಮಸ್ತ್ ಆಗಿ ಕಾಣೋ ವಿಕ್ಕಿಗೆ ಫ್ಯಾನ್ಸ್ ಕಮ್ಮಿಯಿಲ್ಲ. ಬಿಗ್ಬಾಸ್ ನಂತರ ಆ ಸ್ಟಾರ್ಡಮ್ ನೋಡತಿದ್ದಾರೆ. ವಿಶೇಷ ಎಂದರೆ ಮಕ್ಕಳ ಸೈನ್ಯದ ಜೊತೆ ತರ್ಲೆ ತಮಾಷೆ ಜೋರಾಗಿತ್ತು.
ಭದ್ರೇಗೌಡನ ಲೈಫ್ನೇ ಅಲ್ಲೋಲ ಕಲ್ಲೋಲ ಮಾಡಿ ಬಿಡ್ತಾಳೆ ವಿದ್ಯಾ. ಮೈನರ್ ಆಗಿರೋ ನಾಯಕಿಗೆ 18 ತುಂಬೋವರೆಗೂ ಇವರ ಕೋಳಿ ಜಗಳ, ಭಯ ತುಂಬಿರೋ ಪ್ರೀತಿ ಕ್ಷಣಗಳು ವೀಕ್ಷಕರಿಗೆ ಕಚಗುಳಿ ಇಡಲಿವೆ. ಹೀಗಾಗಿ ಭದ್ರೇಗೌಡನ ಮುದ್ದು ರಾಕ್ಷಸಿ ವಿದ್ಯಾ. ಇನ್ನೂ, ಮೂರನೇ ಪ್ರೋಮೋ ಶೂಟಿಂಗ್ ಆಗಿದ್ದೇಲ್ಲ ಕಂಪ್ಲೀಟ್ ಚನ್ನಪಟ್ಟಣದಲ್ಲಿ. ಮೂಲ ಕತೆ ತಮಿಳು ಆಗಿರುವುದರಿಂದ ಪ್ರೋಮೋ ನಿರ್ದೇಶನ ಮಾಡ್ತಿರೋದು ಚೆನ್ನೈ ಟೀಮ್.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಸರಕಾರಿ ಶಾಲೆ ಒಂದರಲ್ಲಿ ಚಿತ್ರೀಕರಣ ಮಾಡಿದ್ದಾರೆ. ನಾಯಕಿ ಪ್ರತಿಮಾಳನ್ನು ಕೂರಿಸಿಕೊಂಡು ಬೈಕ್ನಲ್ಲಿ ಭದ್ರೇಗೌಡ ಸ್ಕೂಲ್ಗೆ ಬಿಡೋ ಸೀನ್ ಇದೆ. ಅದನ್ನ ನೀವೂ ಈಗಾಗಲೇ ಪ್ರೋಮೋದಲ್ಲಿ ನೋಡಿರುತ್ತಿರಾ. ಇದೇ ಸೀನ್ ಶೂಟ್ ಮಾಡೋವಾಗ ಲೋಕಲ್ ಮಕ್ಕಳು ನಟಿ ಪ್ರತಿಮಾ ಹಾಗೂ ನಟ ತ್ರಿವಿಕ್ರಮ್ ಜೊತೆಗೆ ತಮಾಷೆ ಮಾಡಿದ್ದಾರೆ.
ಅಲ್ಲದೇ ನಟಿ ಪ್ರತಿಮಾಳ ಕೆನ್ನೆಯನ್ನು ಹಿಡಿದು ಎಳೆದಾಡಿದ್ದಾರೆ. ಇಷ್ಟೇ ಅಲ್ಲದೇ ಶೂಟಿಂಗ್ ಬ್ರೇಕ್ ಇದ್ದಾಗ ಕ್ರಿಕೇಟ್ ಆಡೋದು, ಮಕ್ಕಳ ಜೊತೆ ಮಜಾ ಮಾಡಿರೋ ವಿಡಿಯೋದಲ್ಲಿ ಪ್ರತಿಮಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ತ್ರಿವಿಕ್ರಮ್-ಪ್ರತಿಮಾ ಜೋಡಿ ತೆರೆಮೇಲೆ ಮ್ಯಾಜಿಕ್ ಮಾಡುತ್ತಾ? ಈ ಇಬ್ಬರ ಕೆಮಿಸ್ಟ್ರಿ ಹೇಗೆ ವರ್ಕ್ ಆಗುತ್ತೆ ಅಂತ ನೋಡೋಕೆ ಏಪ್ರೀಲ್ 14ರ ವರೆಗೂ ಕಾಯಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ