₹2000 ಪಿಂಕ್‌ ನೋಟ್‌ ಇನ್ನೂ ನಿಮ್ಮ ಬಳಿ ಇದ್ಯಾ?; ಬ್ಯಾಂಕ್‌ಗೆ ವಾಪಸ್ ಮಾಡದಿದ್ರೆ ಅಪರಾಧ ಆಗುತ್ತಾ?

author-image
admin
Updated On
₹2000 ಪಿಂಕ್‌ ನೋಟ್‌ ಇನ್ನೂ ನಿಮ್ಮ ಬಳಿ ಇದ್ಯಾ?; ಬ್ಯಾಂಕ್‌ಗೆ ವಾಪಸ್ ಮಾಡದಿದ್ರೆ ಅಪರಾಧ ಆಗುತ್ತಾ?
Advertisment
  • ಸೆಪ್ಟೆಂಬರ್ 30 ನೋಟುಗಳನ್ನು ವಾಪಸ್ ಮಾಡಲು ಕೊನೇ ದಿನ
  • ಅಕ್ಟೋಬರ್ 1ರಿಂದ 2000 ನೋಟುಗಳಿದ್ರೆ ಏನು ಮಾಡೋದು?
  • ಚಲಾವಣೆಯಿಂದ ಹಿಂಪಡೆದಿರುವ ರಿಸರ್ವ್​ ಬ್ಯಾಂಕ್​​ ಆಫ್​ ಇಂಡಿಯಾ

ನವದೆಹಲಿ: 2000 ರೂಪಾಯಿ ಮುಖಬೆಲೆಯ ಪಿಂಕ್ ನೋಟು ಇತಿಹಾಸದ ಪುಟಗಳನ್ನು ಸೇರುತ್ತಿದೆ. ನಿಮ್ಮ ಹತ್ರ ಇರೋ 2000 ನೋಟನ್ನ ವಾಪಸ್ ಮಾಡಲು ಇನ್ನು 7 ದಿನಗಳು ಮಾತ್ರ ಬಾಕಿ ಉಳಿದಿದೆ. ಇದೇ ಸೆಪ್ಟೆಂಬರ್ 30ರಂದು 2000 ನೋಟುಗಳನ್ನು ವಾಪಸ್ ಮಾಡಲು ಕೊನೆಯ ದಿನವಾಗಿದೆ. ಒಂದು ವೇಳೆ ಸೆಪ್ಟೆಂಬರ್ 30ರ ನಂತರವೂ 2000 ನೋಟುಗಳು ನಿಮ್ಮ ಬಳಿ ಇದ್ರೆ ಅದಕ್ಕೆ ಬೆಲೆಯೇ ಇಲ್ಲವಾಗುತ್ತದೆ. ಮುಂದಿನ ಅಕ್ಟೋಬರ್ 1ರಿಂದ 2000 ನೋಟುಗಳನ್ನು ಯಾವ ಬ್ಯಾಂಕ್‌ನಲ್ಲೂ ಸ್ವೀಕಾರ ಮಾಡುವುದಿಲ್ಲ.

ಇದನ್ನೂ ಓದಿ: ಶೇ. 76ರಷ್ಟು ₹2000 ನೋಟುಗಳು ಬ್ಯಾಂಕ್​​ಗೆ ವಾಪಸ್​​ ಎಂದ RBI; ಎಷ್ಟು ಲಕ್ಷ ಕೋಟಿ ಗೊತ್ತಾ?

2000 ರೂಪಾಯಿ ಪಿಂಕ್ ನೋಟ್‌ ಅನ್ನು ಕಳೆದ ಮೇ 19ರಂದು ರಿಸರ್ವ್​ ಬ್ಯಾಂಕ್​​ ಆಫ್​ ಇಂಡಿಯಾ ಚಲಾವಣೆಯಿಂದ ಹಿಂಪಡೆದಿತ್ತು. ಚಲಾವಣೆಯಲ್ಲಿರುವ 2 ಸಾವಿರ ರೂ. ನೋಟುಗಳನ್ನು ವಾಪಸ್ ಪಡೆಯುತ್ತೇವೆ ಎಂದು ಘೋಷಿಸಿತ್ತು. ಹಾಗೆಯೇ ಜನರಿಗೆ 2000 ರೂ. ನೋಟುಗಳನ್ನು ತಮ್ಮ ಬ್ಯಾಂಕ್​​ನಲ್ಲಿ ಠೇವಣಿ ಮಾಡಲು ಸೆಪ್ಟೆಂಬರ್ 30ನೇ ತಾರೀಖಿನವರೆಗೂ ಅವಕಾಶ ನೀಡಿತ್ತು.

ಅಕ್ಟೋಬರ್ 1ರಿಂದ ನಿಮ್ಮ ಬಳಿ ಇದ್ರೆ ಅಪರಾಧ

2000 ಮುಖಬೆಲೆಯ ನೋಟುಗಳನ್ನು ಸೆಪ್ಟೆಂಬರ್ 30ರ ಒಳಗಾಗಿ ಬ್ಯಾಂಕ್‌ಗಳಿಗೆ ವಾಪಸ್ ಮಾಡಬೇಕು. ಒಂದು ವೇಳೆ ವಾಪಸ್ ಮಾಡದಿದ್ರೆ ಅದು ಅಪರಾಧವಾಗುತ್ತದೆ. ದೇಶದಲ್ಲಿ ಮಾನ್ಯತೆ ಇಲ್ಲದೆ ಇರೋ ನೋಟುಗಳನ್ನು ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ನಿಮ್ಮ ಬಳಿ ಚಲಾವಣೆ ಇಲ್ಲದ ನೋಟುಗಳು ಇದ್ದರೆ ಅದನ್ನ ವಶಪಡಿಸಿಕೊಳ್ಳಬಹುದು. ಚಲಾವಣೆಯಿಲ್ಲದ ನೋಟುಗಳನ್ನು ಇಟ್ಟುಕೊಂಡರೆ ಕ್ರಿಮಿನಲ್ ಕೇಸ್‌ಗಳನ್ನು ಹಾಕುವ ಅವಕಾಶಗಳಿದೆ. 2016ರಲ್ಲಿ 500, 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಾಗಿತ್ತು. ಈ ನೋಟುಗಳನ್ನು ಇಟ್ಟುಕೊಂಡವರ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಅವಕಾಶಗಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment