newsfirstkannada.com

ವಿಸ್ಮಯಕಾರಿ ಗಳಿಗೆಗೆ ಕ್ಷಣಗಣನೆ.. ರಾಮಲಲ್ಲಾ ಮೂರ್ತಿಗೆ ಮೋದಿಯವರಿಂದಲೇ ಮೊದಲ ಆರತಿ

Share :

Published January 21, 2024 at 8:55pm

Update January 21, 2024 at 8:43pm

  ರಾಮನ ಕಣ್ಣುಗಳನ್ನ ಚಿನ್ನದ ಸೂಜಿಯಿಂದ ತೆರೆಯುವುದು ಏಕೆ?

  ರಾಮ ಜನಿಸಿದ ಘಳಿಗೆ, ಪ್ರಾಣಪ್ರತಿಷ್ಠಾನ ಮುಹೂರ್ತಕ್ಕೆ ಲಿಂಕ್​

  ರಾಮಲಲ್ಲಾ ಮೂರ್ತಿಗೆ ಮೋದಿಯವರಿಂದಲೇ ಮೊದಲ ಆರತಿ

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಬಳಿಕ ಭಾರತದಲ್ಲಿ ರಾಮಯುಗ. ಏಳಿಗೆ, ಸುಖ, ಸಮೃದ್ಧಿಯ ಕಾಲ ಆರಂಭವಾಗುವ ಆಸೆ ಅಸಂಖ್ಯ ರಾಮಭಕ್ತರಲ್ಲಿ ಚಿಗುರೊಡೆದಿದೆ. ಅಯೋಧ್ಯೆಯಲ್ಲಿ ಮತ್ತೆ ಗತವೈಭವ ಮರುಕಳಿಸಲಿದ್ದು ರಾಮಭಕ್ತರು ಸಂಭ್ರಮದಲ್ಲಿ ಮುಳುಗಿದ್ದಾರೆ. ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭಗೊಂಡಿದ್ದು ಇಡೀ ದೇಶದ ಚಿತ್ತ ಅಯೋಧ್ಯೆಯತ್ತ ನೆಟ್ಟಿದೆ.
ಶಿಲೆಯನ್ನು ದೇವರನ್ನಾಗಿಸೋ ವಿಗ್ರಹಕ್ಕೆ ರಾಮಶಕ್ತಿ ತುಂಬುವ ಪ್ರಾಣಪ್ರತಿಷ್ಠಾಪನೆಗೆ ಸಂಬಂಧಪಟ್ಟ ಧಾರ್ಮಿಕ ವಿಧಿವಿಧಾನಗಳು ಇದಾಗಲೇ ಆರಂಭಗೊಂಡಿವೆ. ಆದ್ರೆ, ಇಡೀ ದೇಶ ಕುತೂಹಲದಿಂದ ನೋಡ್ತಿರೋದು ಜನವರಿ 22ರ ಪ್ರಾಣಪ್ರತಿಷ್ಠಾಪನೆಗಾಗಿ.

ರಾಮನೂರಿನ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಲಿರೋ ರಾಮಲಲ್ಲಾ ಮೂರ್ತಿಗೆ ದೈವೀಶಕ್ತಿ ಪ್ರಾಪ್ತಿಪೋ.. ರಾಮಶಕ್ತಿ ಆವಾಹನೆ ಮಾಡುವ ಪ್ರಾಣಪ್ರತಿಷ್ಠಾಪನೆ ಕಾರ್ಯ ಜನವರಿ 22ರ ಬೆಳಗ್ಗೆಯಿಂದಲೇ ಆರಂಭವಾಗುತ್ತೆ. ಅಸಲಿಗೆ ರಾಮಮಂದಿರ ಉದ್ಘಾಟನೆ ಮತ್ತು ಪ್ರಾಣಪ್ರತಿಷ್ಠಾಪನೆ ಕಾರ್ಯಗಳು ಜನವರಿ 16 ರಿಂದಲೇ ಶುರುವಾಗಿವೆ. ಜನವರಿ 16ರಂದು ಸರಯೂ ನದಿಯಿಂದ ನೀರು ತಂದು ವಿಷ್ಣು ಪೂಜೆ ಮಾಡಿ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ, ರಾಮಲಲ್ಲಾ ವಿಗ್ರಹಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳನ್ನು ನಡೆಸಲಾಗಿದೆ.

ಜನವರಿ 17ನೇ ತಾರೀಖು ರಾಮಮಂದಿರದಲ್ಲಿ  ಪ್ರತಿಷ್ಠಾಪನೆಗೊಳ್ಳಲಿರೋ ರಾಮಲಲ್ಲಾ ಮೂರ್ತಿಯೊಂದಿಗೆ ಶೋಭಾ ಯಾತ್ರೆ ನಡೆಸಲಾಗಿದೆ. ಜನವರಿ 18ರಂದು ಮಂಟಪ ಪ್ರವೇಶ ಪೂಜೆ, ವಾಸ್ತು ಪೂಜೆ, ವರುಣನ ಪೂಜೆ, ವಿಘ್ನಹರ್ತ ಗಣೇಶ ಪೂಜೆ ಹಾಗೂ ಮಾರ್ತಿಕ ಪೂಜೆ ನಡೆದಿವೆ. ಜನವರಿ 19ನೇ ತಾರೀಖು ರಾಮಮಂದಿರದಲ್ಲಿ ಹೋಮ, ಹವನ, ಯಜ್ಞ ಕುಂಡಗಳನ್ನು ಸ್ಥಾಪಿಸಲಾಗಿದೆ. ಹೀಗೆ ಪ್ರತಿನಿತ್ಯ ಒಂದೊಂದು ರೀತಿಯ ಆಚರಣೆಗಳನ್ನು ಮಾಡುತ್ತಾ ಬರಲಾಗ್ತಿದ್ದು. ಜನವರಿ 22ರ ಮಧ್ಯಾಹ್ನ 12 ಗಂಟೆ 29 ನಿಮಿಷದಿಂದ 31 ನಿಮಿಷದ ನಡುವೆ ಪ್ರಾಣಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ.

ವಿಶೇಷ ಅಂದ್ರೆ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ವೇಳೆ ಗರ್ಭಗುಡಿಯಲ್ಲಿ ಮೋದಿಯವರೂ ಇರಲಿದ್ದು, ಇದಾಗಲೇ 11 ದಿನಗಳ ಕಠಿಣ ವ್ರತ ನಡೆಸ್ತಿದ್ದಾರೆ. 11 ದಿನಗಳ ಅನುಷ್ಠಾನದಲ್ಲಿರುವ ಪ್ರಧಾನಿ ಜನವರಿ 22ರಂದು ಒಂದು ರೋಮಾಂಚಕ ಅನುಭವಕ್ಕೆ ಸಾಕ್ಷಿಯಾಗಲಿದ್ದಾರೆ. ಅದುವೇ ರಾಮಲಲ್ಲಾ ನೇತ್ರೋನ್ಮಿಲನ! ಜನವರಿ 22ರ ಮಧ್ಯಾಹ್ನ, 12 ಗಂಟೆ 29ನೇ ನಿಮಿಷ 8 ಸೆಕೆಂಡ್​​​ನಿಂದ 12 ಗಂಟೆ 33ನೇ ನಿಮಿಷ 20ನೇ ಸೆಕೆಂಡ್ ನಡುವಿನ ಸಮಯದಲ್ಲಿ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಆ ಸಮಯದಲ್ಲಿ ಗರ್ಭಗುಡಿಯಲ್ಲಿರೋ ಸೌಭಾಗ್ಯ ಕೇವಲ 5 ಮಂದಿಗೆ ಮಾತ್ರ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌ ಮತ್ತು ಮುಖ್ಯ ಅರ್ಚಕರಾದ ಸತ್ಯೇಂದ್ರ ದಾಸ್‌ ಅವರು ಮಾತ್ರ ಗರ್ಭಗುಡಿಯಲ್ಲಿರಲಿದ್ದಾರಂತೆ. ಪ್ರಮುಖವಾಗಿ ರಾಮಲಲ್ಲಾ ಮೂರ್ತಿಯ ಕಣ್ಣುಗಳನ್ನು ತರೆಯುವ ಮಹಾಸೌಭಾಗ್ಯ ಕೂಡ ಮೋದಿಯವರಿಗೆ ಸಿಗಲಿದೆಯಂತೆ. ಯಾವುದೇ ದೇಗುಲದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ಮೂರ್ತಿಯ ಕಣ್ಣುಗಳನ್ನು ತೆರೆಸಲಾಗುತ್ತೆ. ಅದಕ್ಕೆ ನೇತ್ರೋನ್ಮಿಲನ ಎಂದು ಕರೆಯಲಾಗುತ್ತೆ.

ಈ ನೇತ್ರೋನ್ಮಿಲನ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ ಎನ್ನಲಾಗಿದೆ. ಬೆಂಕಿಕಡ್ಡಿ ಗಾತ್ರದ ಚಿನ್ನದ ಸೂಜಿಯ ಸಹಾಯದಿಂದ ನರೇಂದ್ರ ಮೋದಿ ರಾಮಲಲ್ಲಾ ಮೂರ್ತಿ ಕಣ್ಣುಗಳನ್ನು ತೆರೆಯಲಿದ್ದಾರೆ ಎನ್ನಲಾಗಿದ್ದು. ಆ ಮಹಾಕಾರ್ಯಕ್ಕಾಗಿಯೇ ನರೇಂದ್ರ ಮೋದಿ 11 ದಿನಗಳ ವ್ರತನಿರತರಾಗಿದ್ದಾರೆ. ಇನ್ನು, ರಾಮಲಲ್ಲಾ ಮೂರ್ತಿಯ ನೇತ್ರೋನ್ಮಿಲನ ಕಾರ್ಯ ನೆರವೇರಿದ ಬಳಿಕ ದೇವರಿಗೆ ಕನ್ನಡಿ, ಹಸು, ಹಣ್ಣುಹಂಪಲಗಳನ್ನು ತೋರಿಸಲಾಗುತ್ತಂತೆ. ಈ ಪ್ರಾಣಪ್ರತಿಷ್ಠಾಪನೆ ಮತ್ತು ನೇತ್ರೋನ್ಮಿಲನಕ್ಕೂ ಮುನ್ನ ದೇಗುಲದೆಲ್ಲೆಡೆ ಹಲವಾರು ರೀತಿಯ ಹೋಮ, ಹವನ, ಜಪ ತಪಗಳು ಆರಂಭವಾಗಿರುತ್ವೆ. ನಾಲ್ಕು ವೇದಗಳನ್ನು ಪಠಿಸಲಾಗುತ್ತೆ.

ವಾರಣಸಿ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಬಂದಂತಹ 121 ಸಾಧು, ಸಂತರು, ವೇದಪಂಡಿತರು ವಾರಣಾಸಿಯ ಲಕ್ಷ್ಮಿಕಾಂತ್ ದೀಕ್ಷಿತ್ ಅವರ ನೇತೃತ್ವದಲ್ಲಿ ಹವನ ನಡೆಸ್ತಾರೆ. ರಾಮಮಂದಿರದೊಳಕ್ಕೆ ಹೊಸದಾಗಿ ಕೆತ್ತಲಾಗಿರೋ 51 ಇಂಚಿನ ರಾಮಲಲ್ಲಾ ಮೂರ್ತಿಯನ್ನು ತರಲಾಗುತ್ತೆ. ನಂತರ ರಾಮಲಲ್ಲಾ ಮೂರ್ತಿಗೆ ಕ್ಷೀರಸ್ನಾನ ಮಾಡಿಸಲಾಗುತ್ತೆ. ಹಾಲು ಮತ್ತು ಇತರೆ ಸುಗಂಧ ದ್ರವ್ಯಗಳನ್ನು ಬಳಸಿ ರಾಮಲಲ್ಲಾ ಮೂರ್ತಿಗೆ ಸ್ನಾನ ಮಾಡಿಸಲಾಗುತ್ತೆ. ಹೌದು.. ಮಂತ್ರಗಳನ್ನು ಪಠಿಸುತ್ತಾ ಗರ್ಭಗುಡಿ ಮತ್ತು ರಾಮಲಲ್ಲಾ ಮೂರ್ತಿಯನ್ನು ಶುಚಿಗೊಳಿಸಲಾಗುತ್ತೆ.

ನಂತರದ ದೇವಸ್ಥಾನದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಇರಿಸಲಾಗುತ್ತೆ. ದೇಗುಲದ ಮುಖ್ಯ ಅರ್ಚಕರ ಮಾರ್ಗದರ್ಶನದಲ್ಲಿ ಗರ್ಭಗುಡಿಯ ಪೂರ್ವ ದಿಕ್ಕಿಗೆ ಮುಖ ಮಾಡಿರುವಂತೆ ರಾಮಲಲ್ಲಾ ಮೂರ್ತಿಯನ್ನ ಸ್ಥಾಪಿಸಿ ಅರ್ಚಕರು ವೇದ-ಮಂತ್ರಗಳನ್ನ ಪಠಿಸಿ ಮೂರ್ತಿಯೊಳಗೆ ದೇವರನ್ನು ಆವಾಹನೆ ಮಾಡಿಸೋ ಕಾರ್ಯ ಶುರುಮಾಡ್ತಾರೆ. ಮೊದಲಿಗೆ.. ರಾಮಲಲ್ಲಾ ಮೂರ್ತಿಯ ಕಣ್ಣುಗಳನ್ನು ತೆರೆಯಲಾಗುತ್ತೆ. ಇದು ನರೇಂದ್ರ ಮೋದಿಯವರಿಂದಲೇ ನೆರವೇರುತ್ತೆ ಎನ್ನಲಾಗಿದೆ. ಆದ್ರೆ, ಅದರ ಬಗ್ಗೆ ಖಚಿತತೆ ಇಲ್ಲ..ಇದೇ ಕಾರಣಕ್ಕೆ ನರೇಂದ್ರ ಮೋದಿಯವರು 11 ದಿನಗಳ ವ್ರತಾಚರಣೆಯಲ್ಲಿ ತೊಡಗಿದ್ದಾರೆ. ಆವಾಹನೆ ಬಳಿ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತೆ. ಈ ವೇಳೆ ಹಲವಾರು ರೀತಿಯ ಪೂಜೆ, ಪುನಸ್ಕಾರಗಳನ್ನು ನಡೆಸಲಾಗುತ್ತೆ. ರಾಮಲಲ್ಲಾ ಮೂರ್ತಿಗೆ ನೈವೆೇಧ್ಯ ನೀಡಲಾಗುತ್ತೆ. ಅಲ್ಲಿಂದ ರಾಮಲಲ್ಲಾ ಮೂರ್ತಿಗೆ ಪೂಜೆ ಆರಂಭವಾಗುತ್ತೆ.

ರಾಮಲಲ್ಲಾ ಮೂರ್ತಿಗೆ ಮೋದಿಯವರಿಂದಲೇ ಮೊದಲ ಆರತಿ!

ರಾಮಲಲ್ಲಾ ಮೂರ್ತಿಯ ನೇತ್ರೋನ್ಮಿಲನದ ಬಳಿಕ, ನೈವೇದ್ಯ ಅರ್ಪಿಸೋ ಅರ್ಚಕರು ಪ್ರಾಣಪ್ರತಿಷ್ಠಾಪನೆ ಸಂಪೂರ್ಣಗೊಳಿಸ್ತಾರೆ. ಜನವರಿ 22ರ ಮಧ್ಯಾಹ್ನ 12 ಗಂಟೆ 33 ನಿಮಿಷದ ಹೊತ್ತಿಗೆ ರಾಮಮೂರ್ತಿಯಲ್ಲಿ ರಾಮಶಕ್ತಿ ಸೇರಿಕೊಂಡಿರುತ್ತೆ. ರಾಮನ ಶಕ್ತಿ ಇಡೀ ರಾಮಮಂದಿರದ ತುಂಬ ಆವರಿಸಿಕೊಳ್ಳುತ್ತೆ. ಅಲ್ಲಿಂದ ರಾಮಲಲ್ಲಾ ಮೂರ್ತಿಗೆ ಪೂಜೆ ಆರಂಭವಾಗುತ್ತೆ. ಮೋದಿ ಪಾಲಿನ ಮತ್ತೊಂದು ಸೌಭಾಗ್ಯ ಅಂದ್ರೆ.. ರಾಮಮಂದಿರದ ಗರ್ಭಗುಡಿಯ ರಾಮಲಲ್ಲಾ ಮೂರ್ತಿಗೆ ಮೊದಲ ಆರತಿ ಕೂಡ ನರೇಂದ್ರ ಮೋದಿಯವರಿಂದಲೇ ನಡೆಯುತ್ತಂತೆ!

ಪ್ರಾಣಪ್ರತಿಷ್ಠಾಪನೆ ನಡೆಯಲಿರೋ ಆ 84 ಸೆಕೆಂಡ್‌ಗಳ ಬಗ್ಗೆ ಮತ್ತೊಂದು ಅಚ್ಚರಿ ವಿಚಾರ ಏನ್ ಗೊತ್ತಾ? ಆ ಮುಹೂರ್ತದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ್ರೆ ದೇಶ ಸುಭೀಕ್ಷವಾಗುತ್ತಂತೆ. ದೇಶದಲ್ಲಿ ಶಾಂತಿ ನೆಲೆಸುತ್ತಂತೆ. ದೇಶಕ್ಕೆ, ದೇಶವಾಸಿಗಳ ಹಲವು ಸಮಸ್ಯೆಗಳು ನಿವಾರಣೆಯಾಗಲಿವೆಯಂತೆ. ನಮ್ಮ ಸುತ್ತಲೂ ಆವರಿಸಿಕೊಂಡಿರೋ ನಕಾರಾತ್ಮಕ ಶಕ್ತಿ ದೂರವಾಗಲಿದೆ ಎಂಬುದು ಧಾರ್ಮಿಕ ಪಂಡಿತರ ಅಭಿಪ್ರಾಯ! ಹೌದು, ರಾಮಮಂದಿರ ನಿರ್ಮಾಣದ.. ರಾಮಲಲ್ಲಾ ದರ್ಶನದ ಕನಸು ನನಸಾಗುತ್ತಿರೋದೇ ಕೋಟಿ ಕೋಟಿ ಭಾರತೀಯರ ಪಾಲಿಗೆ ದೊಡ್ಡ ಶಕ್ತಿ ಸಿಕ್ಕಂತಾಗಿದೆ. ರಾಮ ಹುಟ್ಟಿದ ಊರಲ್ಲೇ ರಾಮಮಂದಿರವಿಲ್ಲ ಎಂಬ ಕೊರಗು ಮರೆಯಾಗಲಿದೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಬಳಿಕ ಭಾರತದಲ್ಲಿ ರಾಮಯುಗ ಆರಂಭವಾಗುವ ಆಸೆ ಅಸಂಖ್ಯ ರಾಮಭಕ್ತರಲ್ಲಿ ಚಿಗುರೊಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಸ್ಮಯಕಾರಿ ಗಳಿಗೆಗೆ ಕ್ಷಣಗಣನೆ.. ರಾಮಲಲ್ಲಾ ಮೂರ್ತಿಗೆ ಮೋದಿಯವರಿಂದಲೇ ಮೊದಲ ಆರತಿ

https://newsfirstlive.com/wp-content/uploads/2024/01/rama-16.jpg

Load More