/newsfirstlive-kannada/media/post_attachments/wp-content/uploads/2024/11/plant.jpg)
ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಊಟದ ಮಾಡಿದ ಬಳಿಕ ಎಲೆ, ಅಡಿಕೆ ತಿನ್ನುವುದು ಬಹಳ ಹಿಂದಿನ ಕಾಲದ ಒಂದು ಅಭ್ಯಾಸ. ಈ ವೀಳ್ಯದೆಲೆ ಔಷಧೀಯ ಮರಗಳಲ್ಲಿ ಒಂದಾಗಿದೆ. ವೀಳ್ಯದೆಲೆ ಹಾಗೂ ಅದರ ಬೇರನ್ನು ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ಬಳಸಲಾಗುತ್ತದೆ. ಸಣ್ಣ ಗಾಯಗಳಿಗೆ ಬ್ಯಾಂಡೇಜ್ ಬದಲಿಗೆ ಕೈಗೆಟುಕುವ ವೀಳ್ಯದೆಲೆಯು ತುಂಬಾ ಉಪಯುಕ್ತ ಕೂಡ ಆಗಿದೆ.
ಇದನ್ನೂ ಓದಿ:ಅಕ್ಕ ಅನು ಅಂದ್ರೆ ಮಕ್ಕಳಿಗೆ ಎಷ್ಟು ಇಷ್ಟ.. ನೋಡೋಕೆ ಎರಡು ಕಣ್ಣು ಸಾಲದು; ಮಿಸ್ ಮಾಡ್ದೆ ವಿಡಿಯೋ ನೋಡಿ!
ವೀಳ್ಯದೆಲೆ ಹಿಂದೂ ಸಂಪ್ರದಾಯಗಳ ಪ್ರಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇನ್ನು ಇದೇ ವೀಳ್ಯದೆಲೆಯನ್ನು ನೀವು ನಿಮ್ಮ ಮನೆಯಲ್ಲಿ ಬೆಳೆಸುತ್ತಿದ್ದೀರಾ? ಹಾಗಾದ್ರೆ ನೀವು ಈ ಸ್ಟೋರಿಯನ್ನು ಓದಲೇಬೇಕು. ಹೌದು, ಈ ವೀಳ್ಯದೆಲೆ ಇಲ್ಲದೆ ವ್ರತಗಳಾಗಲಿ, ಪೂಜೆಗಳಾಗಲಿ ಪೂರ್ಣವಾಗುವುದಿಲ್ಲ. ಹಾಗೆಯೇ ಸಾಕಷ್ಟು ಸಮಾರಂಭದಲ್ಲಿ ವೀಳ್ಯದೆಲೆ ಇಲ್ಲದೆ ತಾಂಬೂಲ ಕೂಡ ಕೊಡುವುದಿಲ್ಲ. ಹೀಗಾಗಿ ಆರೋಗ್ಯದ ದೃಷ್ಟಿಯಿಂದಲೂ ವೀಳ್ಯದೆಲೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಈ ವೀಳ್ಯದೆಲೆಯನ್ನು ತಿನ್ನುವುದರಿಂದ ಅನೇಕ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಅನೇಕ ಜನರು ಈಗ ಮನೆಯಲ್ಲಿಯೂ ವೀಳ್ಯದೆಲೆ ಬೆಳೆಸುತ್ತಿದ್ದಾರೆ. ಆದರೆ ಕೆಲವರು ಎಲ್ಲ ಗಿಡಗಳ ಹಾಗೇ ಇದನ್ನು ಬೆಳೆಸುವುದುಂಟು. ಆದರೆ ಇದು ಖಂಡಿತ ತಪ್ಪು. ವಾಸ್ತು ಪ್ರಕಾರ ಕೆಲವು ರೀತಿಯ ಗಿಡಗಳನ್ನು ಮನೆಯಲ್ಲಿ ಬೆಳೆಸಬಾರದು. ಹೀಗೆ ಬೆಳೆಸುವುದರಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ:ಸಪ್ತ ಸಾಗರದಾಚೆಯಲ್ಲೂ ಕನ್ನಡತಿ ಹವಾ.. ಅಮೆರಿಕಾದಲ್ಲಿ ಮೋಡಿ ಮಾಡಿದ ನಯನಾ ವಿಶ್ವ? ಯಾರಿವರು?
ವೀಳ್ಯದೆಲೆಯನ್ನು ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಯಾವುದೇ ಕಾರಣಕ್ಕೂ ಕತ್ತರಿಸಬಾರದು. ನಮ್ಮ ಉಗುರಿನಿಂದಲೂ ಅದನ್ನೂ ಕೀಳಬಾರದು. ಇಷ್ಟೇ ಅಲ್ಲದೇ ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಹಾಗೂ ಕೂದಲೂ ಕಟ್ ಮಾಡಿ ಕೂಡ ವೀಳ್ಯದೆಲೆ ಕಟ್ ಮಾಡಬಾರದು. ಇದರ ಜೊತೆಗೆ ಯಾವುದೇ ಮನೆಯಲ್ಲಿ ಮಗು ಜನಿಸಿದಾಗ ಅಥವಾ ಯಾವುದೇ ಓರ್ವ ಕುಟುಂಬದ ಸದಸ್ಯ ಮರಣ ಹೊಂದಿದಾಗ ವೀಳ್ಯದೆಲೆಯನ್ನು ಮುಟ್ಟಬಾರದು. ಇಷ್ಟಾದರೂ ಮಿಸ್ ಆಗಿ ಮುಟ್ಟಿದ್ದೇ ಆದ್ರೆ ಆ ಗಿಡ ಸರಿಯಾಗಿ ಬೆಳೆಯುವುದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ