ನಿತ್ಯ 5 ಸುತ್ತು ಸೂರ್ಯ ನಮಸ್ಕಾರ ಮಾಡುವುದರಿಂದ ಆಗುವ ಪ್ರಯೋಜನಗಳೇನು? ಇದು ನೀವು ಓದಲೇಬೇಕಾದ ಸ್ಟೋರಿ

author-image
Gopal Kulkarni
Updated On
ನಿತ್ಯ 5 ಸುತ್ತು ಸೂರ್ಯ ನಮಸ್ಕಾರ ಮಾಡುವುದರಿಂದ ಆಗುವ ಪ್ರಯೋಜನಗಳೇನು? ಇದು ನೀವು ಓದಲೇಬೇಕಾದ ಸ್ಟೋರಿ
Advertisment
  • ನಿತ್ಯ ಐದು ಸುತ್ತು ಸೂರ್ಯ ನಮಸ್ಕಾರ ಆರೋಗ್ಯಕ್ಕೆ ಎಷ್ಟು ಸಹಕಾರಿ
  • ಇಡೀ ದೇಹದ ಆರೋಗ್ಯದ ಮೇಲೆ ಧನಾತ್ಮಕರ ಪರಿಣಾಮ ಬೀರುತ್ತದೆ
  • ಒಂದೊಂದು ಭಂಗಿಯೂ ದೇಹದ ಒಂದೊಂದು ಭಾಗವನ್ನು ಗಟ್ಟಿಗೊಳಿಸುತ್ತೆ

ಸೂರ್ಯ ನಮಸ್ಕಾರ, ಇಡೀ ದೇಹಕ್ಕೆ ಚೈತನ್ಯ ನೀಡುವ ಒಟ್ಟು 12 ಆಸನಗಳಿರುವ ವ್ಯಾಯಾಮವಿದು. ಒಂದೊಂದು ಆಸನವು ಒಂದೊಂದು ಅಂಗದ ಮೇಲೆ ಪರಿಣಾಮ ಬೀರುತ್ತವೆ. ನಿತ್ಯ ನೀವು ಐದು ಸುತ್ತು ಸೂರ್ಯನಮಸ್ಕಾರ ಮಾಡುವುದರಿಂದ ಹಲವು ಪ್ರಯೋಜನಗಳಿವೆ.ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಲಾಭಗಳು ಏಕಕಾಲಕ್ಕೆ ಈ ಸೂರ್ಯ ನಮಸ್ಕಾರದಿಂದ ನಮಗೆ ಸಿಗಲಿವೆ.

ನೀವು ಇತರ ಯೋಗಾಸನಗಳನ್ನು ಮಾಡಿದಾಗ ಅದು ದೇಹದ ಯಾವುದಾದರೂ ಒಂದು ಭಾಗದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅದರ ಆರೋಗ್ಯವನ್ನು ಸುಧಾರಣೆ ಮಾಡುತ್ತದೆ. ಆದ್ರೆ ಸೂರ್ಯ ನಮಸ್ಕಾರ ಇಡೀ ದೇಹಕ್ಕೇ ಒಂದು ರೀತಿಯಲ್ಲಿ ಆರೋಗ್ಯದ ಮಾತ್ರೆಯಿದ್ದಂತೆ. ಇಡೀ ದೇಹವನ್ನೇ ಆರೋಗ್ಯಯುವಾಗಿಡುವ ಶಕ್ತಿ ಸೂರ್ಯ ನಮಸ್ಕಾರಕ್ಕೆ ಇದೆ ಎಂದು 2022ರಲ್ಲಿ ಪ್ರಕಟಣೆಯಾದ ಒಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ:ಭಾರತದಲ್ಲಿ ಕಡಿಮೆಯಾಗುತ್ತಿದೆ ಸಂತಾನೋತ್ಪತ್ತಿ ಶಕ್ತಿಯ ಮಟ್ಟ! ಈ ಅಂಕಿ ಅಂಶ ನಿಜಕ್ಕೂ ಆತಂಕಕಾರಿಯಾ?

ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಕೀಲುಗಳು ಬಲಶಾಲಿ ಆಗುತ್ತವೆ. ಹಾಗೂ ಉಸಿರಾಟದ ಸಮಸ್ಯೆಗಳು ನೀಗುತ್ತವೆ. ಅದರಲ್ಲೂ ಇದು ಬೆನ್ನುಮೂಳೆಯ ಆರೋಗ್ಯವನ್ನು ಬಹಳಷ್ಟು ಶಕ್ತಿಯುತಗೊಳಿಸುತ್ತದೆ. ಅಧ್ಯಯನಗಳು ಹೇಳುವ ಪ್ರಕಾರ ಸೂರ್ಯ ನಮಸ್ಕಾರದಿಂದ ಒಂದು ಯೋಗಿಕ ಉಸಿರಾಟವು ನಮ್ಮದಾಗುತ್ತದೆ. ಇದು ಶ್ವಾಸಕೋಶದ ಆರೋಗ್ಯವನ್ನು ಬಹಳಷ್ಟು ಸುಧಾರಿಸುತ್ತದೆ. ಉಸಿರಾಟದ ತೊಂದರೆಗಳನ್ನು ನೀಗಿಸಿ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಅತ್ಯುತ್ತಮಗೊಳಿಸುತ್ತದೆ. ಇದನ್ನು ನಿತ್ಯ ಮಾಡುವುದರಿಂದ ನಾವು ದೀರ್ಘವಾದ ಉಚ್ಚಾಸ ನಿಶ್ವಾಸಗಳು ನಮ್ಮವಾಗುವುದರಿಂದ ಪ್ರಾಣಾಯಾಮದಂತಹ ಯೋಗನವನ್ನು ಮಾಡುವಾಗ ಅದಕ್ಕೆ ಪೂರಕ ಶಕ್ತಿಯಾಗಿ ಇದು ನಿಲ್ಲುತ್ತದೆ.

publive-image

ಇದನ್ನೂ ಓದಿ:ಬದುಕು ಬದಲಾಯಿಸಿದ ವೀಳ್ಯದೆಲೆ.. ಕಪ್ಪು ಮಣ್ಣಿನಲ್ಲಿ ಗದಗ ರೈತನ ಚಮತ್ಕಾರ..!

ಇದರ ಹಲವು ಭಂಗಿಗಳು ಹೃದಯದ ಬಡಿತದ ಪ್ರಮಾಣವನ್ನು ಸರಿಗೊಳ್ಳುವಂತೆ ಮಾಡುತ್ತದೆ. ಇದು ದೇಹದ ಎಲ್ಲ ಭಾಗಗಳಿಗೂ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡುವಂತೆ ಮಾಡುತ್ತದೆ. ಇದರಿಂದ ಆರೋಗ್ಯಕರ ಹೃದಯ ನಿಮ್ಮದಾಗುತ್ತದೆ. ಇದರ ನಿರಂತರ ಅಭ್ಯಾಸದಿಂದಾಗಿ, ಕಾಲು, ತೋಳು ಮತ್ತು ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಸೂರ್ಯ ನಮಸ್ಕಾರದ ಪ್ರತಿಯೊಂದು ಸುತ್ತು ಕೂಡ ನಮ್ಮ ದೇಹದಲ್ಲಿರುವ ಕ್ಯಾಲರೀಸ್​ಗಳನ್ನು ಬರ್ನ್ ಮಾಡುತ್ತವೆ. ಇದರಿಂದ ನಮ್ಮ ತೂಕದಲ್ಲಿ ಸಮತೋಲನ ಕಾಯ್ದುಕೊಳ್ಳಲು ತುಂಬಾ ಅನುಕೂಲವಾಗುತ್ತದೆ.

publive-image

ಸೂರ್ಯ ನಮಸ್ಕಾರ ಮಾಡುವಾಗ ದೀರ್ಘವಾಗಿ ಉಸಿರಾಟವನ್ನು ಮಾಡುವುದರಿಂದ ಅದರ ಲಯ ಹಾಗೂ ಪ್ರತಿಯೊಂದು ಭಂಗಿಯೂ ಕೂಡ ಪ್ಯಾರಾಸಿಂಪೆಥೆಟಿಕ್ ನರವ್ಯವಸ್ಥೆಯನ್ನು ಆ್ಯಕ್ಟಿವ್ ಮಾಡುತ್ತದೆ. ಇದರಿಂದ ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಾಗುತ್ತದೆ.

ಸೂರ್ಯ ನಮಸ್ಕಾರ ಮಾಡುವಾಗ ಇವನ್ನು ಪಾಲಿಸಿ

ಈ ಒಂದು ಸೂರ್ಯ ನಮಸ್ಕಾರವನ್ನು ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಮಾಡುವುದು ತುಂಬಾ ಉತ್ತಮ

ಸರಿಯಾದ ಭಂಗಿಯನ್ನು ನಿರ್ವಹಿಸಬೇಕು ಹಾಗೂ 12 ಭಂಗಿಯನ್ನು ನಿಧಾನವಾಗಿ ಸಮತೋಲನ ಕಾಯ್ದುಕೊಂಡು ಮಾಡಬೇಕು. ಸೂರ್ಯ ನಮಸ್ಕಾರ ಮಾಡುವಾಗ ಎದೆ ಹಾಗೂ ತಲೆಯಭಾಗ ಮೇಲ್ಗಡೆಗೆ ಇರುವ ವೇಳೆ ಉಸಿರನ್ನು ಎಳೆದುಕೊಳ್ಳಬೇಕು. ಕಳೆಗಡೆಗೆ ಬಂದಾಗ ಉಸಿರನ್ನು ಆಚೆ ಬಿಡಬೇಕು. ಇದೇ ಲಯದಲ್ಲಿ ನಿಮ್ಮ ಪ್ರತಿ ಸುತ್ತು ಸಾಗಬೇಕು.

ಆರಂಭದಲ್ಲಿ 3 ರಿಂದ 5 ಸುತ್ತು ಸೂರ್ಯ ನಮಸ್ಕಾರ ಮಾಡುವುದು ಒಳ್ಳೆಯದು ಬಳಿಕ ದಿನ ಕಳೆದಂತೆ ನೀವು ಹೆಚ್ಚು ಮಾಡಿಕೊಳ್ಳಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment