/newsfirstlive-kannada/media/post_attachments/wp-content/uploads/2025/03/SLEEP-ON-FLOOR-1.jpg)
ನೆಲದ ಮೇಲೆ ಮಲಗಿಕೊಳ್ಳುವುದು ನಮ್ಮ ಹಳೆಯ ಹಾಗೂ ಸಾಂಪ್ರದಾಯಿಕ ಪದ್ಧತಿ. ಇದರಿಂದ ಬೆನ್ನೆಲುಬು ಜೋಡಣೆಗಳು ಸರಿಯಾಗುತ್ತವೆ ಒಟ್ಟಾರೆ ದೇಹದ ಆರೋಗ್ಯದಲ್ಲಿ ಒಳ್ಳೆಯ ಬದಲಾವಣೆ ಆಗುತ್ತದೆ ಎಂದು ಹೇಳಲಾಗುತ್ತದೆ.
ಇಂದಿನ ಆಧುನಿಕ ಕಾಲದಲ್ಲಿ ಅತ್ಯುತ್ತಮವಾದ ಬೆಡ್ ವ್ಯವಸ್ಥೆ, ಮೆತ್ತನೆಯ ತಲೆದಿಂಬು, ಬೆಚ್ಚಗಿನ ಹೊದಿಕೆ ಈ ಒಂದು ಮಲಗುವ ಪದ್ಧತಿಗೆ ವ್ಯಸನಿಯಾಗಿದ್ದಾನೆ ಮನುಷ್ಯ. ಕೆಲವು ಅಧ್ಯಯನಗಳು ಹೇಳುವ ನೆಲದ ಮೇಲೆ ಮಲಗುವುದರಿಂದ ದೇಹಕ್ಕೆ ಸಿಗುವ ವಿಶ್ರಾಂತಿ ಇಂತಹ ಐಷಾರಾಮಿ ಬೆಡ್ಗಳ ಮೇಲೆ ಮಲಗುವುದರಿಂದ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ನೆಲದ ಮೇಲೆ ಮಲುಗುವುದು ಅಂದ್ರೆ ನಾವು ನೈಸರ್ಗಿಕವಾಗಿ ಸರಿಯಾದ ಭಂಗಿಯಲ್ಲಿ ಮಲಗಿರುತ್ತೇವೆ. ಹೀಗಾಗಿ ಈ ಒಂದು ಪದ್ಧತಿಯನ್ನು ಜನರು ಈಗ ಹೆಚ್ಚು ಹೆಚ್ಚು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಮತ್ತು ಅಷ್ಟೇ ಜನಪ್ರಿಯಗೊಂಡಿದೆ ಕೂಡ.
ಆದ್ರೆ ನಿಜಕ್ಕೂ ಈ ರೀತಿಯಾಗಿ ಬೆಡ್ ತೊರೆದು ನೀವು ಒರಟಾದ ಬರೀ ನೆಲದ ಮೇಲೆ ಎರಡು ವಾರ ಮಲಗುವುದರಿಂದ ಏನಾಗಲಿದೆ ಅಂತ ಸಾರ್ವಜನಿಕ ಆರೋಗ್ಯ ಬೌದ್ಧಿಕ ತಜ್ಞ ಡಾ.ಜಗದೀಶ್ ಹಿರೇಂಠ ಅವರು ಹೇಳುವ ಪ್ರಕಾರ. ಹೀಗೆ ಗಟ್ಟಿಯಾದ ನೆಲದ ಮೇಳೆ ಮಲಗುವುದಿರಂದ ಇದು ಬೆನ್ನೆಲುಬಬು ಜೋಡೆಣೆಯ ಮೇಲೆ ಒತ್ತ ಹೆಚ್ಚಾಗಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳುತ್ತಾರೆ. ದೇಹದಲ್ಲಿರುವ ನೈಸರ್ಗಿಕ ವಕ್ರತೆಗಳು ಅದರಲ್ಲೂ ಪ್ರಮುಖವಾಗಿ ಸೊಂಟದ ಬೆನ್ನುಮೂಳೆಗೆ ಸರಿಯಾದ ಶಕ್ತಿ ದೊರೆಯುವುದಿಲ್ಲ ಎಂದು ಹೇಳುತ್ತಾರೆ.
ಇನ್ನೊಬ್ಬ ವೈದ್ಯರಾದ ಡಾ ಚಂದ್ರಿಲಾ ಚುಗ್ ಹೇಳುವ ಪ್ರಕಾರ ಬೆನ್ನು ನೋವಿನಿಂದ ಬಳಲುತ್ತಿರುವವರು ಎರಡು ವಾರ ನೆಲದ ಮೇಲೆ ಮಲುಗುವುದರಿಂದ ಬೆನ್ನು ನೋವು ಸಂಪೂರ್ಣವಾಗಿ ವಾಸಿಯಾಗುತ್ತದೆ. ಬೆನ್ನುನೋವು ನಿವಾರಣೆಗೆ ಇದು ತುಂಬಾ ಸಹಾಯಕ ಎಂದು ಹೇಳುತ್ತಾರೆ.
ಇನ್ನು ನೀವು ಬಹಳಷ್ಟು ದಿನ ಐಷಾರಾಮಿ ಬೆಡ್ ಮೇಲೆ ಮಲಗಿಕೊಂಡು ರೂಢಿ ಇದ್ದವರು ಏಕಾಏಕಿ ನೆಲದ ಮೇಲೆ ಮಲಗುವ ಪದ್ಧತಿಗೆ ಮೊರೆ ಹೋದಲ್ಲಿ ಅನೇಕ ಆರಂಭಿಕ ಸಮಸ್ಯೆಗಳಿಂದ ಬಳಲುತ್ತೀರಿ. ನಿಮ್ಮ ನಿದ್ರೆಯ ಗುಣಮಟ್ಟ ಅನೇಕ ರೀತಿಯ ಪರಿಣಾಮದಿಂದಾಗಿ ಕುಸಿತಗೊಳ್ಳುತ್ತದೆ. ಇದು ನೈಸರಗ್ಗಿಕ ನಿದ್ರಾ ಚಕ್ರವನ್ನು ಭಂಗ ಮಾಡುತ್ತದೆ. ಅದರಲ್ಲೂ ಹೀಗೆ ಮಾಡುವುದರಿಂದ ನೀವು ಗಾಢ ನಿದ್ರೆಯಿಂದ ವಂಚಿತರಾಗುತ್ತೀರಿ ಎಂದು ಹೇಳುತ್ತಾರೆ.
ಆದರೆ ನ್ಯಾಷನಲ್ ಸ್ಲೀಪ್ ಫೌಂಡೇಷನ್ ಹೇಳುವ ಪ್ರಕಾರ ಖಾಲಿ ನೆಲದ ಮೇಲೆ ಮಲಗುವುದಿಂದ ದೇಹದ ತೂಕದ ಮೇಲೆ ಒತ್ತಡ ಬೀಳುತ್ತದೆ. ಅಸೌಖ್ಯದ ಕಾರಣದಿಂದಾಗಿ ಕಡಿಮೆ ಅವಧಿ ನಿದ್ದೆ ನಿಮ್ಮದಾಗುತ್ತದೆ ಎಂದು ಹೇಳುತ್ತದೆ.
ಇದನ್ನೂ ಓದಿ: ಡಯಟ್ನಲ್ಲಿ ಕೊಹ್ಲಿ ಸಖತ್ ಕಟ್ಟುನಿಟ್ಟು; ಫುಲ್ ಫಿಟ್ ಆಗಿರೋ ವಿರಾಟ್ ಏನೇನ್ ತಿಂತಾರೆ?
ಖಾಲಿ ನೆಲದ ಮೇಲೆ ಮಲಗುವುದಿರಿಂದ ಅನುಕೂಲ ಅನಾನುಕೂಲ ಎರಡು ಇವೆ. 2016ರಲ್ಲಿ ಪ್ರಕಟಣೆಗೊಂಡ ಒಂದು ಅಧ್ಯಯನ ಹೇಳುವ ಪ್ರಕಾರ ನೆಲದ ಮೇಲೆ ಮಲಗುವುದರಿಂದ ನಮಲ್ಲಿರುವ ಡಿಸ್ಕ್ ಪ್ರಾಬ್ಲಂಗಳು ಸರಳವಾಗಿ ಪರಿಹಾರ ಕಾಣುತ್ತವೆ ಅದು ಅಲ್ಲದೇ ಬೆನ್ನುಮೂಲೆಗೆ ನೈಸರ್ಗಿಕವಾದ ಒಂದು ಭಂಗಿ ಸಿಗುತ್ತದೆ.
ಇದನ್ನೂ ಓದಿ:ರಾತ್ರಿ ಊಟ ಆಗುತ್ತಿದ್ದಂತೆ ಈ ತಪ್ಪು ಮಾಡ್ತಿದ್ರೆ ಇಂದೇ ಬಿಟ್ಟುಬಿಡಿ! ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ
ಹೀಗೆ ಒಂದೊಂದು ಅಧ್ಯಯನ ಒಂದೊಂದು ರೀತಿ ಈ ವಿಚಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಹಿಂದಿನಿಂದ ನಡೆದು ಬಂದ ಸಂಪ್ರದಾಯವನ್ನು ನೋಡಿದಾಗ ಅದು ಕೇವಲ ಬಡತನವೊಂದರಿಂದ ಮಾತ್ರ ನೆಲದ ಮೇಲೆ ಮಲಗುವ ರೂಢಿಯಾಗಿರಲಿಲ್ಲ. ಅದರಿಂದ ಅನೇಕ ಅನುಕೂಲಗಳು ಇದ್ದವು. ಹೀಗೆ ಖಾಲಿ ನೆಲದ ಮೇಲೆ ಮಲಗಿದವರು ಕೂಡ ನೆಮ್ಮದಿಯ ಹಾಗೂ ಗಾಢವಾಗಿ ಸುದೀರ್ಘ ನಿದ್ರೆಯನ್ನು ಮಾಡುತ್ತಿದ್ದರು. ಇದು ಒಂದು ರೂಢಿಯ ಮೇಲೆ ನಿಂತಿರುವಂತಹ ಅಭ್ಯಾಸವಷ್ಟೇ ಎಂದು ಕೆಲವರು ವಾದಿಸುತ್ತಾರೆ. ನಮ್ಮ ಜನ ಬರೀ ನೆಲದ ಮೇಲೆ ಮಾತ್ರವಲ್ಲ. ಜಮೀನಿನ ಬದುವಿನ ಮೇಲೆಯೋ ಚಕ್ಕಡಿ, ಬಂಡಿಯಲ್ಲಿಯೋ ಆರಾಮವಾಗಿ ನಿದ್ರಿಸಿ ದೇಹಕ್ಕೆ ಸರಳವಾದ ಹಾಗೂ ನೈಸರ್ಗಿಕ ವಿಶ್ರಾಂತಿಯನ್ನು ನೀಡುತ್ತಾರೆ. ಹೀಗಾಗಿ ಇದೊಂದು ನಡೆಸಿಕೊಂಡು ಬಂದಿರುವ ರೂಢಿ. ಅದು ನಿಮ್ಮದಾಗಬೇಕಾದರೆ ವ್ಯವಸ್ಥಿತವಾದ ನಿದ್ರಾ ವ್ಯವಸ್ಥೆಗಳನ್ನು ಬಿಟ್ಟು ಇಂತಹ ಜಾಗದಲ್ಲಿ ನಿದ್ರಿಸಬೇಕಾದರೆ ಅದಕ್ಕೆ ದೇಹ ಹೊಂದಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ