/newsfirstlive-kannada/media/post_attachments/wp-content/uploads/2025/01/AJWAIN-soaked-water.jpg)
ಚಳಿಗಾಲ ಬಂತು ಅಂದ್ರೆ ಅನೇಕ ರೀತಿಯ ಅಲರ್ಜಿಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ. ಹೀಗಾಗಿ ನಾವು ನಮ್ಮ ದೇಹವನ್ನು ಆದಷ್ಟು ಬೆಚ್ಚಗೆ ಇಟ್ಟುಕೊಳ್ಳುವುದು ತುಂಬಾ ಅವಶ್ಯಕ. ಒಂದು ಆಹಾರ ಕ್ರಮ ನಿಮ್ಮನ್ನು ಚಳಿಗಾಲದ ಅನೇಕ ಸಮಸ್ಯೆಗಳಿಂದ ಕಾಪಾಡುವುದರ ಜೊತೆಗೆ ಹಲವು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಇಡೀ ರಾತ್ರಿ ನೀರಿನಲ್ಲಿ ಅಜಿವಾನ ಅಂದ್ರೆ ಓಂಕಾಳು ನೆನೆಯಿಟ್ಟು ಬೆಳಗ್ಗೆ ಅದರ ನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ.
ಇದನ್ನೂ ಓದಿ:ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡೋದು ಒಳ್ಳೆಯದಾ? ಈ ಅನುಮಾನ ಕಾಡಿದೆಯಾ?
ಜೀರ್ಣಕ್ರಿಯೆಯನ್ನು ಹೆಚ್ಚು ಮಾಡುತ್ತದೆ.: ನೆನೆಯಿಟ್ಟ ಅಜಿವಾನದ ನೀರು ಕುಡಿಯುವುದರಿಂದ ಆಗುವ ಮೊದಲ ಪ್ರಯೋಜನವೇ ನಿಮ್ಮ ಜೀರ್ಣಕ್ರಿಯೆಯು ಉತ್ತಮವಾಗುದುದು. ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಹೊಟ್ಟೆ ಉಬ್ಬುವಿಕೆ ಹಾಗೂ ಗ್ಯಾಸ್​ನಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಕಫ ಮತ್ತು ಶೀತಕ್ಕೆ ಉತ್ತಮ ಮದ್ದು: ಚಳಿಗಾಲ ಅಂದ್ರೆ ಅಲ್ಲಿ ಕಫ ಮತ್ತು ಶೀತ ನಮ್ಮ ದೇಹವನ್ನು ಸರಳವಾಗಿ ಆಕ್ರಮಿಸುತ್ತವೆ. ಈ ರೀತಿಯ ನೆನೆಯಿಟ್ಟ ಓಂಕಾಳಿನ ನೀರನ್ನು ಕುಡಿಯುವುದರಿಂದ ಉರಿಯೂತ ನಿರೋಧಕ ಶಕ್ತಿ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಉಸಿರಾಟದ ತೊಂದರೆಯ ನಿವಾರಣೆಗೆ ಇದು ಅತ್ಯುತ್ತಮ ನೈಸರ್ಗಿಕ ಮದ್ದು. ಇದು ರಕ್ತಸಂಚಯವನ್ನು ಕ್ಲೀಯರ್ ಮಾಡುತ್ತದೆ. ಗಂಟಲು ನೋವು, ಗಂಟಲು ಸೋಂಕುಗಳನ್ನು ಸರಳವಾಗಿ ನಿವಾರಿಸುತ್ತದೆ.
ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ: ಈ ಒಂದು ಓಂಕಾಳು ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಯು ಉತ್ತಮೊಗಳ್ಳುತ್ತದೆ. ಅದು ಮಾತ್ರವಲ್ಲ ತೂಕ ನಿರ್ವಹಣೆಗೆ ಈ ನೀರು ತುಂಬಾ ಉಪಯೋಗಕಾರಿ. ನಿಮ್ಮ ನಿತ್ಯದ ದಿನವನ್ನು ಈ ನೆನೆಯಿಟ್ಟ ಅಜಿವಾನದ ನೀರು ಕುಡಿಯುವುದರಿಂದ ಶುರು ಮಾಡಿದರೆ ದೇಹದಲ್ಲಿರುವ ಕ್ಯಾಲರಿ ಕೂಡ ಬರ್ನ್​ ಆಗಿ ತೂಕವನ್ನು ಸಮತೋಲನವಾಗಿ ಕಾಪಾಡಿಕೊಳ್ಳಲು ತುಂಬಾ ಸಹಾಯಕವಾಗುತ್ತದೆ.
ಹೃದಯ ಆರೋಗ್ಯಕ್ಕೆ ಉಪಯುಕ್ತ: ಓಂಕಾಳಿನಲ್ಲಿ ಅತಿಹೆಚ್ಚು ಆ್ಯಂಟಿಆಕ್ಸಿಡೆಂಟ್ಸ್​ಗಳು ಇರುತ್ತವೆ. ಇದು ಹೃದಯ ಆರೋಗ್ಯ ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಜಿವಾನದ ನೀರು ಕುಡಿಯುವುದರಿಂದ ಇದು ಕೊಲೆಸ್ಟ್ರಾಲ್ ಲೇವಲ್​ನ್ನು ಕಡಿಮೆ ಮಾಡಿ ರಕ್ತನಾಳಗಳಲ್ಲಿ ಫ್ಲೇಕ್​ಗಳು ರಚನೆಯಾಗುವುದನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ:ಚಳಿಗಾಲವೆಂದು ಈ ಹಣ್ಣು ತಿನ್ನೋದು ಮರೆಯಬೇಡಿ.. ಥಂಡಿಯಲ್ಲೂ ಕಿತ್ತಳೆ ಒಳ್ಳೆಯದಾ?
ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ: ಚಳಿಗಾಲದಲ್ಲಿ ದೇಹಕ್ಕೆ ಅತಿಮುಖ್ಯವಾಗಿ ಬೇಕಾಗುವುದು ರೋಗ ನಿರೋಧಕ ಶಕ್ತಿ. ಓಂಕಾಳಿನಲ್ಲಿ ರೋಗನಿರೋಧಕ ಶಕ್ತಿಯ ಸಂಪತ್ತು ಸಾಕಷ್ಟು ಇರುತ್ತದೆ. ಇದರಲ್ಲಿರುವ ಜೀವಸತ್ವ ಹಾಗೂ ಜೀವಪೋಷಕಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿಮ್ಮ ನಿತ್ಯದ ದಿನವನ್ನು ಈ ಓಂಕಾಳು ನೆನೆಯಿಟ್ಟ ನೀರನ್ನು ಕುಡಿಯುವುದರೊಂದಿಗೆ ಆರಂಭ ಮಾಡಿದರೆ ಚಳಿಗಾಲವನ್ನು ಸಮರ್ಥವಾಗಿ ಎದುರಿಸಬಹುದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us