Advertisment

ಜಿಮ್​ ಮಾಡಿ ಅರ್ಧಕ್ಕೆ ಬಿಟ್ರೆ ಏನಾಗುತ್ತೆ ಬಾಸ್‌.. ಫಿಟ್ನೆಸ್‌ ಪ್ರಿಯರೇ ಎಚ್ಚರ; ಈ ಸ್ಟೋರಿ ತಪ್ಪದೇ ಓದಿ!

author-image
Veena Gangani
Updated On
ಜಿಮ್​ ಮಾಡಿ ಅರ್ಧಕ್ಕೆ ಬಿಟ್ರೆ ಏನಾಗುತ್ತೆ ಬಾಸ್‌.. ಫಿಟ್ನೆಸ್‌ ಪ್ರಿಯರೇ ಎಚ್ಚರ; ಈ ಸ್ಟೋರಿ ತಪ್ಪದೇ ಓದಿ!
Advertisment
  • ನಿಮ್ಮ ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಏನು ಮಾಡಿದರೆ ಉತ್ತಮ
  • ಸಾಕಷ್ಟು ಜನರು ಫಿಟ್ ಆಗಿರಲು ಜಿಮ್​​ ಅನ್ನೇ ಏಕೆ ಸೆಲೆಕ್ಟ್ ಮಾಡ್ತಾರೆ?
  • ಜಿಮ್‌ಗೆ ಹೋಗಲು ಇಷ್ಟವಿಲ್ಲದಿದ್ದರೆ ಮನೆಯಲ್ಲಿ ಫಿಟ್ ಆಗಿರುವುದು ಹೇಗೆ?

ದೈಹಿಕ ಆರೋಗ್ಯದ ವಿಷಯಕ್ಕೆ ಬಂದಾಗ ಸಾಕಷ್ಟು ಜನರು ಜಿಮ್‌ನಲ್ಲಿ ವರ್ಕೌಟ್ ಮಾಡಲು ಬಯಸುತ್ತಾರೆ. ಏಕೆಂದರೆ, ಜಿಮ್‌ನಲ್ಲಿ ಅಂತಹ ವಾತಾವರಣ ಇರುತ್ತದೆ. ಅಲ್ಲದೆ, ನಿಮಗೆ ಬೇಕಾದ ಎಲ್ಲಾ ವಸ್ತುಗಳು ಲಭ್ಯವಿರುತ್ತದೆ. ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಜಿಮ್ ಪ್ರಮುಖ ಪಾತ್ರವನ್ನು ವಹಿಸುತ್ತದೆ.

Advertisment

publive-image

ಕೆಲವರು ತಾನು ಫಿಟ್​ ಆಗಿ ಇರಲು ಜಿಮ್​ ಸೇರುತ್ತಾರೆ, ಆದರೆ ಇನ್ನೂ ಕೆಲವರು ತಾನು ಸಣ್ಣ ಇದ್ದೇನೆ ಜಿಮ್​ಗೆ ಸೇರಿದ್ರೆ ದಪ್ಪ ಆಗಬಹುದು ಅಂತ ಸೇರುತ್ತಾರೆ. ಅಂತವರು ಸ್ವಲ್ಪ ದಿನದ ಮಟ್ಟಿಗೆ ಜಿಮ್​ ಮಾಡಿ ಬಿಟ್ಟು ಬಿಡ್ತಾರೆ. ಆದರೆ ಹೀಗೆ ಜಿಮ್​ ಮಾಡಿ ಅರ್ಧಕ್ಕೆ ಬಿಟ್ಟರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎಂದು ಸಾಕಷ್ಟು ಜನರು ತಿಳಿದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ:ಬರೀ 7 ಗಂಟೆ ನಡೆದರೆ ಸಾಕು.. ದಿನಕ್ಕೆ 28 ಸಾವಿರ ರೂಪಾಯಿ ಸ್ಯಾಲರಿ ನೀಡುತ್ತೆ ಟೆಸ್ಲಾ! ಈ ಅವಕಾಶ ಮಿಸ್​ ಮಾಡ್ಬೇಡಿ

ಹೌದು, ಜಿಮ್ ಅನ್ನು ಆಯ್ಕೆ ಮಾಡುವ ಮೊದಲು ನೀವು ಕೆಲವು ವಿಷಯಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಏಕೆಂದರೆ, ಜಿಮ್ ಎಂದರೆ ಕೇವಲ ವಾತಾವರಣ ಮತ್ತು ಯಂತ್ರಗಳಿಗೆ ಸಂಬಂಧಿಸಿದ್ದಲ್ಲ. ವ್ಯಾಯಾಮ ಶಾಲೆಯನ್ನು ಆಯ್ಕೆ ಮಾಡುವಾಗ ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ.

Advertisment

publive-image

ಜಿಮ್​ ಆಯ್ಕೆ ಮಾಡುವ ಮೊದಲು, ಜಿಮ್​ಗೆ ಏಕೆ ಹೋಗಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕೆಲವರು ಸ್ನಾಯುಗಳ ಬೆಳವಣಿಗೆಗಾಗಿ ಜಿಮ್‌ಗೆ ಹೋಗುತ್ತಾರೆ ಮತ್ತು ಕೆಲವರು ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗುತ್ತಾರೆ. ಕೆಲವರು ವೃತ್ತಿಪರ ಬಾಡಿ ಬಿಲ್ಡಿಂಗ್‌ಗಾಗಿ ಜಿಮ್‌ಗೆ ಹೋಗುತ್ತಾರೆ. ಆದ್ರೆ, ಈ ಮೂರು ಗುರಿಗಳನ್ನು ತಲುಪುವ ಮಾರ್ಗ ವಿಭಿನ್ನವಾಗಿರುತ್ತದೆ, ವಿಭಿನ್ನ ಯಂತ್ರಗಳು ಬೇಕಾಗುತ್ತವೆ. ನೀವು ಆಯ್ಕೆ ಮಾಡುವ ಜಿಮ್ ನಿಮ್ಮ ಅಗತ್ಯಗಳಿಗೆ ಸೂಕ್ತವಾಗಿದೆಯೇ ಎಂದು ಮೊದಲು ಪರಿಶೀಲಿಸಬೇಕು.

ನಿಮ್ಮ ದೇಹವನ್ನು ಸರಿಯಾಗಿ ಹೈಡ್ರೀಕರಿಸಿದಂತೆ ಮತ್ತು ಜಿಮ್ ಅವಧಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯವಾಗುತ್ತದೆ. ವ್ಯಾಯಾಮದ ಸಮಯದಲ್ಲಿ ನೀವು ಸಾಕಷ್ಟು ಬೆವರಿದರೆ ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಅಥವಾ ಅದಕ್ಕಿಂತ ಹೆಚ್ಚು ಕುಡಿಯುವ ಗುರಿಯನ್ನು ಇಟ್ಟುಕೊಳ್ಳಬೇಕು. ಸಾಕಷ್ಟು ನೀರು ಕುಡಿಯುವುದರಿಂದ ಸ್ನಾಯು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

publive-image

ಇನ್ನು ದೇಹದಲ್ಲಿ ಸ್ನಾಯು ಅಂಗಾಂಶವನ್ನು ನಿರ್ಮಿಸಲು ಮತ್ತು ಸರಿಪಡಿಸಲು ಪ್ರೋಟೀನ್ ಅತ್ಯಗತ್ಯವಾಗಿದೆ. ಅಧ್ಯಯನದ ಪ್ರಕಾರ, ವ್ಯಾಯಾಮದ ನಂತರ ಕನಿಷ್ಠ 1.6 ಗ್ರಾಂ/ ಕೆಜಿ ಪ್ರೋಟೀನ್ ಆಹಾರವನ್ನು ಸೇವಿಸಬೇಕು. ಪ್ರೋಟೀನ್ ಮೂಲವಾಗಿರುವ ಬೇಯಿಸಿದ ಮೊಟ್ಟೆ, ಮೀನು ಅಥವಾ ಮಾಂಸವನ್ನು ಬೇಕಾದರೂ ಸೇವಿಸಬಹುದು. ಆದರೆ ಇಷ್ಟೇಲ್ಲಾ ಮಾಡಿ ದಿಢೀರ್​ ಅಂತ ಜಿಮ್​ ಅನ್ನು ಬಿಟ್ಟರೆ ಏನಾಗುತ್ತೆ?

Advertisment

ಇದನ್ನೂ ಓದಿ: ಮದುವೆಗೂ ಮೊದಲು ಲವ್ ಬರ್ಡ್ಸ್​ ಯಾಕೆ ಟ್ರಿಪ್ ಹೋಗಬೇಕು.. ನೀವು ತಿಳಿದುಕೊಳ್ಳಲೇಬೇಕಾದ ವಿಚಾರ ಇದು!

ನೀವು ಅಷ್ಟು ದಿನ ಮಾಡಿದ ವರ್ಕೌಟ್ ಏಕಾಏಕಿ ಇಳಿಯುತ್ತದೆ. ಜಿಮ್​ ಅನ್ನು ಅರ್ಧಕ್ಕೆ ನಿಲ್ಲಿಸುವುದರಿಂದ ನಿಮ್ಮಲ್ಲಿರು ಪ್ರೇರಣೆ ಕಡಿಮೆಯಾಗಬಹುದು. ಮತ್ತೆ ಅದನ್ನು ಪ್ರಾರಂಭಿಸಲು ಕಷ್ಟವಾಗುತ್ತದೆ. ನಿಧಾನಗತಿಯಲ್ಲಿ ದೇಹದಲ್ಲಿರೋ ಶಕ್ತಿ ಕುಂಠಿತವಾಗುತ್ತದೆ. ಜೊತೆಗೆ ನಿಮ್ಮ ಫಿಟ್‌ನೆಸ್ ಗುರಿಗಳನ್ನು ತಲುಪಲು ಸಾಧ್ಯವಾಗುವುದಿಲ್ಲ. ಜಿಮ್​ ಬಿಟ್ಟರೆ ಸತತವಾಗಿ ಯಾವ ಕೆಲಸದ ಮೇಲೆ ಆಸಕ್ತಿ ಇರುವುದಿಲ್ಲ. ದಿನ ಕಳೆದಂತೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ.

publive-image

ಇದಲ್ಲದೇ ತೂಕ ಹೆಚ್ಚಾಗುತ್ತದೆ. ಅಲ್ಲದೇ ವಿಪರಿತವಾಗಿ ದಪ್ಪ ಆಗಬಹುದು. ಆದ್ದರಿಂದ ವ್ಯಾಯಾಮವನ್ನು ನಿಲ್ಲಿಸುವುದರಿಂದ ಮೂಳೆ ಸಾಂದ್ರತೆಯು ಕಡಿಮೆಯಾಗಬಹುದು. ಜೊತೆಗೆ ನಿಯಮಿತ ವ್ಯಾಯಾಮವು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಅರ್ಧದಾರಿಯಲ್ಲೇ ಜಿಮ್​ ನಿಲ್ಲಿಸುವುದರಿಂದ ನಿದ್ರೆಯಲ್ಲಿ ಅಡ್ಡಿ ಜೊತೆಗೆ ಆಯಾಸಕ್ಕೆ ಕಾರಣವಾಗಬಹುದು. ಬಹಳ ಮುಖ್ಯವಾಗಿ ಇಲ್ಲಿಯವರೆಗೆ ನಿಮ್ಮ ಫಿಟ್‌ನೆಸ್ ಪ್ರಯಾಣದಲ್ಲಿ ನೀವು ಮಾಡಿದ ಸಮಯ ಮತ್ತು ಶ್ರಮವನ್ನು ವ್ಯರ್ಥ ಮಾಡಿದಂತೆ ಆಗುತ್ತದೆ.

Advertisment

ಹೀಗಾಗಿ ನೀವು ಜಿಮ್​​ ಬಿಟ್ಟರೂ ಕೂಡ ಮನೆಯಲ್ಲಾದರೂ ಸಣ್ಣ ಪ್ರಮಾಣದಲ್ಲಿ ವ್ಯಾಯಾಮ ಮಾಡುತ್ತಾ ಇರಬೇಕು. ಇನ್ನು, ನಿಮಗೆ ಜಿಮ್‌ಗೆ ಹೋಗಲು ಇಷ್ಟವಿಲ್ಲದಿದ್ದರೆ ಮನೆಯಲ್ಲಿ ಅಥವಾ ಪಾರ್ಕ್‌ನಲ್ಲಿ 15 ನಿಮಿಷಗಳ ತ್ವರಿತವಾಗಿ ವರ್ಕೌಟ್​ ಮಾಡುತ್ತಾ ಇರಬೇಕು. ಇದರ ಜೊತೆಗೆ ಪ್ರೋಟೀನ್​ಯುಕ್ತ ಆಹಾರ ಸೇವಿಸಿದರೆ ಉತ್ತಮ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment