/newsfirstlive-kannada/media/post_attachments/wp-content/uploads/2025/06/black-box.jpg)
ಗುಜುರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಟೇಕ್ಆಫ್ ಆಗಿ ಕೆಲವೇ ಕೆಲವು ನಿಮಿಷಗಳಲ್ಲಿ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ಗೆ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದಿದೆ. ಪರಿಣಾಮ ಕಟ್ಟಡ ಧ್ವಂಸವಾಗಿದೆ. ಇದ್ರಿಂದಾಗಿ ಹಾಸ್ಟೆಲ್ನ ಡೈನಿಂಗ್ ಹಾಲ್ನಲ್ಲಿ ಕುಳಿತು ಊಟ ಮಾಡ್ತಿದ್ದ ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಪವಾಡ ಸದೃಶರಾಗಿ ಬದುಕುಳಿದಿದ್ದಾರೆ.
ಇದನ್ನೂ ಓದಿ: ವಿಮಾನ ದುರಂತದಿಂದ ಮಹಿಳೆ ಗ್ರೇಟ್ ಎಸ್ಕೇಪ್.. ಈಕೆಯ ಜೀವ ಉಳಿಸಿದ್ದು ಟ್ರಾಫಿಕ್ ಜಾಮ್..!
ಸದ್ಯ ಈ ವಿಮಾನ ಅಪಘಾತಕ್ಕೆ ಕಾರಣಗಳೇನು ಎಂಬುದನ್ನು ಕಂಡುಹಿಡಿಯಲು ತಜ್ಞರು ಬ್ಲ್ಯಾಕ್ ಬಾಕ್ಸ್ ಶೋಧ ಹಾಗೂ ವಿಶ್ಲೇಷಣೆ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋ ಈಗಾಗಲೇ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ನಿಗದಿಪಡಿಸಿದ ಅಂತರರಾಷ್ಟ್ರೀಯ ಪ್ರೋಟೋಕಾಲ್ಗಳಿಗೆ ಅನುಗುಣವಾಗಿ ತನಿಖೆಯನ್ನು ಪ್ರಾರಂಭಿಸಿದೆ.
ಇನ್ನೂ, ಏರ್ ಇಂಡಿಯಾ ವಿಮಾನ ಪತನಕ್ಕೆ ಕಾರಣಗಳೇನು ಎಂಬುದನ್ನು ಕಲೆ ಹಾಕಲಾಗುತ್ತಿದೆ. ಅಪಘಾತಕ್ಕೆ ಮೊದಲು ವಿಮಾನದಲ್ಲಿ ಏನೆಲ್ಲಾ ಆಯ್ತು? ಬ್ಲ್ಯಾಕ್ ಬಾಕ್ಸ್ ಎಂದರೇನು? ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯನಿವ್ರಹಿಸುತ್ತದೆ? ಬ್ಲ್ಯಾಕ್ ಬಾಕ್ಸ್ ಅನ್ನು ವಿಮಾನದಲ್ಲಿ ಎಲ್ಲಿಡಲಾಗುತ್ತೆ ಎಂಬುವುದರ ಬಗ್ಗೆ ಇಂಚಿಂಚೂ ಮಾಹಿತಿ ಈ ಸ್ಟೋರಿಯಲ್ಲಿದೆ.
ಬ್ಲ್ಯಾಕ್ ಬಾಕ್ಸ್ ಎಂದರೇನು? ಇದರ ಮುಖ್ಯ ಉದ್ದೇಶ ಏನಾಗಿರುತ್ತೆ?
ಬ್ಲ್ಯಾಕ್ ಬಾಕ್ಸ್ ವಿಮಾನದಲ್ಲಿ ಬಳಸಲಾಗುವ ಒಂದು ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದನ್ನು ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂದೂ ಕರೆಯಲಾಗುತ್ತೆ. ಇದರಲ್ಲಿ ವಿಮಾನದ ಕಾರ್ಯಾಚರಣೆಯ ಮಾಹಿತಿ ಮತ್ತು ಕಾಕ್‌ಪಿಟ್ ಸಂಭಾಷಣೆಗಳನ್ನು ದಾಖಲಿಸುತ್ತದೆ. ಇದರ ಮುಖ್ಯ ಉದ್ದೇಶ ವಿಮಾನ ಅಪಘಾತದ ಸಂದರ್ಭದಲ್ಲಿ ಕಾರಣಗಳನ್ನು ತನಿಖೆ ಮಾಡಲು ಸಹಾಯ ಮಾಡುತ್ತೆ.
ಇದನ್ನೂ ಓದಿ:265 ಮಂದಿಯ ಜೀವ ತೆಗೆದ ಏರ್ ಇಂಡಿಯಾ ವಿಮಾನ.. ದುರಂತಕ್ಕೆ ಕಾರಣವಾಯ್ತಾ ಈ 8 ಸಂಗತಿಗಳು..?
ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಬ್ಲ್ಯಾಕ್ ಬಾಕ್ಸ್ ಮತ್ತು ಇತರ ರೆಕಾರ್ಡರ್ಗಳನ್ನು ಪ್ರಯೋಗಾಲಯಕ್ಕೆ ತಂದ ಬಳಿಕ, ತಜ್ಞರು ಅವುಗಳ ಸ್ಥಿತಿಯನ್ನು ಪರಿಶೀಲಿಸುತ್ತಾರೆ. ಡೇಟಾವನ್ನು ಸುಲಭವಾಗಿ ರಿಟ್ರೀವ್ ಮಾಡಬಹುದೇ ಎಂದು ಪರಿಶೀಲಿಸುತ್ತಾರೆ. ಅವುಗಳು ಸಮರ್ಪಕ ಸ್ಥಿತಿಯಲ್ಲಿದ್ದರೆ ಡೇಟಾವನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ, ಹಾನಿಗೊಳಗಾಗಿದ್ದರೆ ಡೇಟಾ ರಿಟ್ರೀವ್ ಮಾಡಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ತನಿಖೆಯ ಅತ್ಯಂತ ಸೂಕ್ಷ್ಮ ಅಂಶವೆಂದರೆ, ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಅನ್ನು ಪರಿಶೀಲಿಸುತ್ತದೆ.
ಅಷ್ಟೇ ಅಲ್ಲದೇ ವಿಮಾನದ ಎಂಜಿನ್ ವೇಗ, ಎತ್ತರ, ದಿಕ್ಕು, ಇಂಧನ ಮಟ್ಟ, ಮತ್ತು ಇತರ ತಾಂತ್ರಿಕ ಮಾಹಿತಿಯನ್ನು ದಾಖಲಿಸುತ್ತದೆ. ಈ ಡೇಟಾವನ್ನು ಸಂವೇದಕಗಳ ಮೂಲಕ ಸಂಗ್ರಹಿಸಿ, ಕ್ರ್ಯಾಶ್-ನಿರೋಧಕ ಮೆಮೊರಿಯಲ್ಲಿ ಸಂಗ್ರಹಿಸಲಾಗುತ್ತದೆ. ಇದು ಸಾಮಾನ್ಯವಾಗಿ 25 ಗಂಟೆಗಳವರೆಗಿನ ಡೇಟಾವನ್ನು ದಾಖಲಿಸುತ್ತದೆ. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಪೈಲಟ್‌ಗಳ ಸಂಭಾಷಣೆ, ರೇಡಿಯೋ ಸಂವಹನ, ಮತ್ತು ಕಾಕ್‌ಪಿಟ್‌ನಲ್ಲಿನ ಶಬ್ದಗಳನ್ನು (ಎಂಜಿನ್ ಶಬ್ದ, ಎಚ್ಚರಿಕೆ ಸಿಗ್ನಲ್‌ಗಳು) ರೆಕಾರ್ಡ್ ಮಾಡುತ್ತದೆ. ಇದು ಕೊನೆಯ 2 ಗಂಟೆಗಳ ಸಂಭಾಷಣೆಯನ್ನು ಸಂಗ್ರಹಿಸುತ್ತದೆ.
ಬ್ಲ್ಯಾಕ್ ಬಾಕ್ಸ್ ಹೇಗೆ ವಿನ್ಯಾಸ ಮಾಡಿರ್ತಾರೆ?
ಬ್ಲ್ಯಾಕ್ ಬಾಕ್ಸ್‌ಗಳು ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಈ ದುರ್ಘಟನೆ ನಡೆದಾಗ ಗುರುತಿಸಲು ಸುಲಭವಾಗಲಿ ಎಂದು ಕಿತ್ತಳೆ ಬಣ್ಣದಿಂದ ನಿರ್ಮಿಸಲಾಗಿತ್ತದೆ. ಇದ್ದನ್ನ ಟೈಟಾನಿಯಂನಿಂದ ತಯಾರಿಸಲಾಗಿರುತ್ತೆ. ಈ ಬಾಕ್ಸ್ಗೆ 1,100°C ತಾಪಮಾನ, 6,000 ಮೀಟರ್ ಆಳದ ಸಮುದ್ರದ ಒತ್ತಡ ತಡೆಯೋ ಶಕ್ತಿ ಹೊಂದಿದೆ. ನೀರಿನಲ್ಲಿ ಕಳೆದುಹೋದರೆ, ಅಲ್ಟ್ರಾಸಾನಿಕ್ ಬೀಕನ್ 30 ದಿನಗಳವರೆಗೆ ಸಿಗ್ನಲ್ ಕಳುಹಿಸುತ್ತದೆ. ಇದರಿಂದ ಹುಡುಕಾಟಕ್ಕೆ ಸಹಾಯವಾಗುತ್ತದೆ.
ಬ್ಲ್ಯಾಕ್ ಬಾಕ್ಸ್ ಅನ್ನು ಎಲ್ಲಿ ಇಡಲಾಗುತ್ತದೆ?
ಬ್ಲ್ಯಾಕ್ ಬಾಕ್ಸ್‌ಗಳನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಏಕೆಂದರೆ ಅಪಘಾತದ ಸಂದರ್ಭದಲ್ಲಿ ಈ ಭಾಗವು ಹೆಚ್ಚು ಸುರಕ್ಷಿತವಾಗಿ ಇರಬೇಕು ಅಂತ ವಿಮಾನದ ಹಿಂಭಾಗದಲ್ಲಿ ಇರಿಸಲಾಗಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ