‘ಮೇಡೇ, ಮೇಡೇ, ಮೇಡೇ’ ಎಂದು ಕೂಗಿದ ಪೈಲಟ್​.. ಮಾರಣಾಂತಿಕ ‘ಎಮೆರ್ಜೆನ್ಸಿ ಕರೆ’ಯ ಅರ್ಥವೇನು..?

author-image
Ganesh
Updated On
‘ಮೇಡೇ, ಮೇಡೇ, ಮೇಡೇ’ ಎಂದು ಕೂಗಿದ ಪೈಲಟ್​.. ಮಾರಣಾಂತಿಕ ‘ಎಮೆರ್ಜೆನ್ಸಿ ಕರೆ’ಯ ಅರ್ಥವೇನು..?
Advertisment
  • ಗುಜರಾತ್​ನ ಅಹ್ಮದಾಬಾದ್​ನಲ್ಲಿ ವಿಮಾನ ಪತನ
  • ಭಾರತದಿಂದ ಲಂಡನ್​​ಗೆ ಹೊರಟಿದ್ದ ವಿಮಾನ
  • ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಇದ್ದರು

ಮೇಡೇ ಕರೆ ಬಂದ ನಂತರ ಗುರುವಾರ ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ವಿಮಾನ, ಕೇವಲ ಐದೇ ನಿಮಿಷಗಳ ಭಸ್ಮವಾಗಿಬಿಟ್ಟಿತ್ತು. ಅಷ್ಟಕ್ಕೂ ಮೇಡೇ ಕರೆ ಅಂದರೇ ಏನರ್ಥ? ಅದು ಹುಟ್ಟಿಕೊಂಡಿದ್ದೇಗೆ? ಯಾವ ಸಂದರ್ಭದಲ್ಲಿ ಈ ರೀತಿ ಕರೆ ಮಾಡಲಾಗುತ್ತೆ. ಕಂಪ್ಲೀಟ್ ಡಿಟೇಲ್ಸ್​​ ಇಲ್ಲಿದೆ..

ಒಟ್ಟು 242 ಜನರನ್ನ ಹೊತ್ತು, ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಬೋಯಿಂಗ್ 787 ಫ್ಲೈಟ್ AI171, ಮೇಘನಿನಗರ ಎಂಬಲ್ಲಿ ಮೆಡಿಕಲ್ ಹಾಸ್ಟೆಲ್ ಕಟ್ಟಡದ ಮೇಲೆ ಕುಸಿದು ಬಿದ್ದು, ಸ್ಫೋಟಗೊಂಡಿದೆ. ಈ ದುರಂತ ನಡೆಯೋದಕ್ಕೂ ಮುನ್ನ, ಆ ಫ್ಲೈಟ್​ನಲ್ಲಿದ್ದ ಪೈಲಟ್ "ಮೇಡೇ, ಮೇಡೇ, ಮೇಡೇ" ಎಂದು ಮೂರು ಬಾರಿ ಕೂಗಿದ್ದಾನೆ. ಅದು ಒಂದು ಮಾರಣಾಂತಿಕವಾದ ಎಮೆರ್ಜೆನ್ಸಿ ಘೋಷಣೆ ಆಗಿತ್ತು..

ಇದನ್ನೂ ಓದಿ: BREAKING: ಅಹಮದಾಬಾದ್ ಏರ್ ಪೋರ್ಟ್​ನಲ್ಲಿ ವಿಮಾನ ಪತನ

publive-image

‘ಮೇಡೇ ಕಾಲ್’ ಎಂದರೇನು..?

ಮೇಡೇ ಕರೆ ಅನ್ನೋದು.. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಒಂದು ಸಂಕಷ್ಟಕ್ಕೆ ಸಂಕೇತವಾಗಿರುವ ಕರೆಯಾಗಿದೆ. ಈ ಕರೆಯನ್ನ ಪ್ರಾಥಮಿಕವಾಗಿ ಏರ್​ಫೊರ್ಸ್​​ನಲ್ಲಿ ಮತ್ತು ಸಮುದ್ರಯಾನದ ಸಮಯದಲ್ಲಿ, ಜೀವಕ್ಕೆ ಅಪಾಯಕಾರಿ ಅನಿಸಿದಾಗ, ಎಮೆರ್ಜೆನ್ಸಿ ಪರಿಸ್ಥಿತಿಯಲ್ಲಿ ಈ ಕರೆಯನ್ನ ಬಳಸಲಾಗುತ್ತದೆ.. ಈ ಕರೆ ಫ್ರೆಂಚ್ ಪದವಾದ ‘ಮೈಡರ್’ ನಿಂದ ಬಂದಿದೆ, ಇದರರ್ಥ "Help me" ಅಂದರೇ ನನಗೆ ಸಹಾಯ ಮಾಡಿ" ಎಂಬ ಅರ್ಥ ಕೊಡ್ತಿದೆ.

ಇದನ್ನೂ ಓದಿ: ಅನುಭವಿ ಪೈಲೆಟ್​​ಗಳೇ ಇದ್ದರು.. Mayday ಕರೆ ಬಂದ ಕೆಲವೇ ಕ್ಷಣದಲ್ಲಿ ಎಲ್ಲವೂ ಸ್ಥಬ್ಧ..

ಮೇಡೇ ಕರೆ ಬಂದಾದ ಮೇಲೆ ಆಗೋದೇನು?

ಈ ಕರೆಯನ್ನ ಮೊದಲು 1920 ರ ಸಮಯದಲ್ಲಿ ಪರಿಚಯಿಸಲಾಗಿತ್ತು. ಅದೀಗ ಗ್ಲೋಬಲ್​ ಲೆವೆಲ್​ನಲ್ಲಿ ಪ್ರೋಟೋಕಾಲ್ ಆಗಿದೆ. ಈ ಕರೆ ಎಮರ್ಜನ್ಸಿ ಚಿಹ್ನೆಯಾಗಿದ್ದು.. ಅಪಾಯದಲ್ಲಿರುವ ಸ್ಥಳ, ಅಲ್ಲಿನ ಎಮರ್ಜೆನ್ಸಿಯ ಪರಿಸ್ಥಿತಿ, ವಿಮಾನದಲ್ಲಿರುವ ಜನರ ಸಂಖ್ಯೆ ಮತ್ತು ಆ ಅಪಾಯದ ತೀವ್ರತೆ ಏನು ಎಂಬುದನ್ನ, ರಕ್ಷಣಾ ತಂಡಗಳು ಆ ಪ್ರೀಕ್ವೆನ್ಸಿಯಲ್ಲಿರುವ ರೇಡಿಯೋ ಟ್ರಾಫಿಕ್ ನಿಲ್ಲಿಸಿ ವೇಗವಾಗಿ ಕಾರ್ಯನಿರ್ವಹಿಸಬಹುದು.

publive-image

ಬೋಯಿಂಗ್ 787 ಫ್ಲೈಟ್​ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಕೂಡಲೇ ಪೈಲಟ್​ "ಮೇಡೇ, ಮೇಡೇ, ಮೇಡೇ" ಅಂತ ಕೂಗಿ ಅಪಾಯದ ಮುನ್ಸೂಚನೆಯನ್ನ ಕೊಟ್ಟಿದ್ದ. ಆದರೆ ಆ ಕರೆಯ ನಂತರ ಫ್ಲೈಟ್​ನಿಂದ ಯಾವುದೇ ಸಿಗ್ನಲ್​ ಸಿಕ್ಕಿಲ್ಲ. ಏನಾಗ್ತಿದೆ ಎಂದು ತಿಳಿಯುವಷ್ಟರಲ್ಲಿ ನೆಲಕಪ್ಪಳಿಸಿ, ಘೋರ ದುರಂತ ನಡೆದುಬಿಟ್ಟಿದೆ. ಮಾಹಿತಿಗಳ ಪ್ರಕಾರ, ಈ ದುರಂತದಲ್ಲಿ 130ಕ್ಕೂ ಹೆಚ್ಚು ಪ್ರಯಾಣಿಕರು ಅಸುನೀಗಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ವರದಿ: ಪೆನ್ನಯ್ಯ ಕೋಗುಂಡಿ, ಸ್ಪೆಷಲ್ ಡೆಸ್ಕ್​ 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment