/newsfirstlive-kannada/media/post_attachments/wp-content/uploads/2024/10/Tejaswisurya.jpg)
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈಗ ಐರನ್​ಮ್ಯಾನ್. ಹೌದು. ಟ್ರಯಥ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ತೇಜಸ್ವಿ ಸೂರ್ಯರವರು ಐರನ್​ಮ್ಯಾನ್​​ ಚಾಲೆಂಜ್​​ ಸ್ವೀಕರಿಸಿ ಗೆಲುವು ಸಾಧಿಸಿದ್ದಾರೆ. ಇವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆಯೇ ಟ್ರಯಥ್ಲಾನ್​ ಅಂದರೆ ಏನು? ಏನೆಲ್ಲಾ ಸವಾಲು ಸ್ವೀಕರಿಸಬೇಕು? ಈ ಕುರಿತ ಮಾಹಿತಿ ಇಲ್ಲಿದೆ.
ಟ್ರಯಥ್ಲಾನ್​ ಎಂದರೇನು?
ಇದೊಂದು ಸವಾಲಿನ ಸ್ಪರ್ಧೆ. ಬಹು ಶಿಸ್ತಿನ ಸ್ಪರ್ಧೆ. ಒಂದೇ ಇವೆಂಟ್​ನಲ್ಲಿ ಸ್ಪರ್ಧಿಗಳು ಕೆಲವು ಸವಾಲನ್ನು ಸ್ವೀಕರಿಸಬೇಕಿದೆ. ಕೆಲವೇ ಕೆಲವು ಮಂದಿಗಳು ಮಾತ್ರ ಈ ಸವಾಲನ್ನು ಪೂರ್ತಿಗೊಳಿಸಲು ಸಾಧ್ಯವಾಗುತ್ತದೆ. ಏಕೆಂದರೆ ಇದು ಕಠಿಣವಾಗಿದೆ.
ಟ್ರಯಥ್ಲಾನ್​ನಲ್ಲಿ ಮೂರು ಸವಾಲುಗಳಿವೆ
ಮೊದಲೇ ಹೇಳಿದಂತೆ ಟ್ರಯಥ್ಲಾನ್​​​ ಸವಾಲಿನ ಸ್ಪರ್ಧೆಯಾಗಿದೆ. ಇದರಲ್ಲಿ ಈಜು, ಸೈಕ್ಲಿಂಗ್​ ಮತ್ತು ರನ್ನಿಂಗ್​ ಸೇರಿದೆ. ಅದರಲ್ಲೂ ನಿರ್ದಿಷ್ಟ ಸಮಯದಲ್ಲಿ ಈ ಮೂರು ಸವಾಲನ್ನು ಸ್ವೀಕರಿಸುವ ಮೂಲಕ ಪೂರ್ಣಗೊಳಿಸಬೇಕು.
ಇದನ್ನೂ ಓದಿ: Ironman70.3: ಸಂಸದ ತೇಜಸ್ವಿ ಸೂರ್ಯ ವಿಶೇಷ ಸಾಧನೆ; ಖುಷಿಪಟ್ಟು ಪ್ರಧಾನಿ ಮೋದಿ ಹೇಳಿದ್ದೇನು..?
ಸಮಯದ ಸವಾಲ್​
ಟ್ರಯಥ್ಲಾನ್​​​ ಸ್ವೀಕರಿಸದ ಸ್ಪರ್ಧಿ 750 ಮೀ ಈಜು, 20 ಕಿ.ಮೀ ಸೈಕ್ಲಿಂಗ್​ ಮತ್ತು 5 ಕಿ.ಮೀ ಓಟವನ್ನು ಪೂರ್ತಿ ಮಾಡಬೇಕು. ಹಾಗಿದ್ದಾಗ ಮಾತ್ರ ಟ್ರಯಥ್ಲಾನ್​ ಪೂರ್ತಿಗೊಳಿಸಲು ಸಾಧ್ಯ. ಇನ್ನು ಒಲಿಂಪಿಕ್ಸ್​​ನಲ್ಲಿ 1500 ಮೀ ಈಜು, 40 ಕಿ.ಮೀ ಸೈಕ್ಲಿಂಗ್​ ಮತ್ತು 10 ಕಿ.ಮೀ ಓಟ ಓಡಬೇಕು.
ಐರನ್​ ಮ್ಯಾನ್​ ಫಿನಿಶರ್​ ಎಂದರೇನು?
ಟ್ರಯಥ್ಲಾನ್​ನಲ್ಲಿ ಐರನ್​ಮ್ಯಾನ್​​ ಎಂಬ ಸವಾಲಿದೆ. ಇದರಲ್ಲಿ ಭಾಗವಹಿಸಿದವರು 2.4 ಮೈಲಿ ಈಜು, 112 ಮೈಲಿ ಸೈಕ್ಲಿಂಗ್​ ಮತ್ತು 26.2 ಮೈಲಿ ಓಟ ಓಡಬೇಕು.
ತೇಜಸ್ವಿ ಸೂರ್ಯರವರು ಗೋವಾದಲ್ಲಿ ನಡೆದ ಟ್ರಯಥ್ಲಾನ್​​ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಐರನ್​ ಮ್ಯಾನ್​ 70.3 ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. 1.9 ಈಜು, 90 ಕಿ.ಮೀ ಸೈಕ್ಲಿಂಗ್​, 21.1 ಓಟ ಓಡುವ ಮೂಲಕ ಐರನ್​ಮ್ಯಾನ್ ಎಂದು ಗುರುತಿಸಿಕೊಂಡಿದ್ದಾರೆ. ​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ