Advertisment

ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ.. ಸಂತ್ರಸ್ತ ಯುವಕನ ಆರೋಪ ಏನು..?

author-image
Ganesh
Updated On
ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ.. ಸಂತ್ರಸ್ತ ಯುವಕನ ಆರೋಪ ಏನು..?
Advertisment
  • ವಿಧಾನ ಪರಿಷತ್ ಸದಸ್ಯ ಆಗಿರುವ ಡಾ.ಸೂರಜ್‌ ರೇವಣ್ಣ
  • ಲೈಂಗಿಕ ದೌರ್ಜನ್ಯ ಆರೋಪ ಕೇಸ್​ನಲ್ಲಿ ಪ್ರಜ್ವಲ್ ಅರೆಸ್ಟ್
  • ಇದೀಗ ಡಾ.ಸೂರಜ್‌ ರೇವಣ್ಣ ವಿರುದ್ಧ ಗಂಭೀರ ಆರೋಪ

ಹೆಚ್‌.ಡಿ ರೇವಣ್ಣ ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಹಾಸನದ ಅರಕಲಗೂಡಿನ ತಮ್ಮದೇ ಜೆಡಿಎಸ್ ಪಕ್ಷದ ಕಾರ್ಯಕರ್ತನಿಗೆ ಸಲಿಂಗ ಲೈಂಗಿಕ ದೌರ್ಜನ್ಯ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತ ಬೆಂಗಳೂರಿಗೆ ತೆರಳಿ ಡಿಸಿ ಹಾಗೂ ಐಜಿಪಿಗೆ ದೂರು ನೀಡಿದ್ದಾರೆ.

Advertisment

ಸೂರಜ್ ವಿರುದ್ಧದ ಆರೋಪ ಏನು..?
ಜೂನ್ 16ರ ಸಂಜೆ ಚನ್ನರಾಯಪಟ್ಟಣ ತಾಲೂಕಿನ ಗನ್ನಿಕಡದ ತೋಟದ ಮನೆಯಲ್ಲಿ ದೌರ್ಜನ್ಯ ನಡೆಸಿರೊ ಬಗ್ಗೆ ಆರೋಪಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಪರ ಕೆಲಸ ಮಾಡುತ್ತಿದ್ದಾಗ ನನ್ನನ್ನು ಭೇಟಿಯಾಗಿ ನೀನು ಚೆನ್ನಾಗಿ ಕೆಲಸ ಮಾಡುತ್ತಿದ್ದಿಯಾ ಅಂತ ಹೊಗಳಿದ್ದರು. ಅಲ್ಲದೆ ನಿನ್ನ ನಂಬರ್ ಕೊಡು ಲೈಫ್ ಸೆಟ್ಲ್ ಮಾಡ್ತೀನಿ. ಫೋನ್ ಮಾಡಿದಾಗ ಭೇಟಿಯಾಗು ಅಂತ ನಂಬರ್ ತೆಗೆದುಕೊಂಡಿದ್ದರು. ಜೂನ್ 14 ರಂದು ಗುಡ್ ಇವನಿಂಗ್ ಕಣೋ ಅಂತ ಲವ್ ಸಿಂಬಲ್ ಜೊತೆ ವಾಟ್ಸಾಪ್ ಮಾಡಿದ್ದರು.

ಇದನ್ನೂ ಓದಿ:ಸೆಮಿ ಫೈನಲ್​ ಎಂಟ್ರಿಗೆ ಟೀಂ ಇಂಡಿಯಾಗೆ ಇವತ್ತು ಗೆಲ್ಲಲೇಬೇಕು.. ಈ ಆಟಗಾರನಿಗೆ ಕೊಕ್..

ನಾನು ವೆರಿ ಗುಡ್ ಇವನಿಂಗ್ ಅಣ್ಣ ಎಂದಿದ್ದೆ. ಬಳಿಕ ಅವರು ನನ್ನನ್ನು ಒಬ್ಬನನ್ನೇ ತೋಟದ ಮನೆಗೆ ಕರೆದಿದ್ದರು. ಭಾನುವಾರ ಸಂಜೆ ಹೋದಾಗ ಅವರು ನನ್ನ ಮೇಲೆ ಬಲವಂತವಾಗಿ ಅಸಹಜವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ಯುವಕ ದೂರಲ್ಲಿ ಉಲ್ಲೇಖಿಸಿದ್ದಾನೆ. ಮಾತ್ರವಲ್ಲದೆ ಇದನ್ನು ಯಾರಿಗಾದ್ರೂ ಹೇಳಿದ್ರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದಾನೆ. ಜೊತೆಗೆ 2 ಕೋಟಿ ದುಡ್ಡು ಕೊಡುವ ಆಮಿಷವೊಡ್ಡಿದ್ದಾರೆಂದು ಹೇಳಿದ್ದಾನೆ. ಒಪ್ಪದಿದ್ದಾಗ ಕೊಲೆ ಮಾಡಲು ಹುಡುಕಾಡುತ್ತಿರುವುದು ನನಗೆ ತಿಳಿದಿದ್ದರಿಂದ ಬೆಂಗಳೂರಿಗೆ ಬಂದು ದೂರು ಕೊಟ್ಟಿದ್ದೇನೆ ಅಂತ ತಿಳಿಸಿದ್ದಾನೆ. ಲೈಂಗಿಕ ದೌರ್ಜನ್ಯದ ವೈದ್ಯಕೀಯ ದಾಖಲಾತಿಯನ್ನೂ ಯುವಕ ಮಾಡಿಸಿದ್ದಾನೆ.

Advertisment

ಇದನ್ನೂ ಓದಿ:ಸ್ನೇಹಿತನ ಮೇಲೆ ಪ್ರೀತಿಯ ವ್ಯಾಮೋಹ.. ಗುಟ್ಟಾಗಿ ಗೆಳೆಯನ ಲಿಂಗವನ್ನೇ ಬದಲಾಯಿಸಿಬಿಟ್ಟ ಪ್ರಿಯಕರ..!

ಇದನ್ನೂ ಓದಿ: ಆರೋಪಿ ಪ್ರದೂಶ್​ ಜೊತೆ ಶೆಡ್​ಗೆ ಪದೇ ಪದೆ ಬರ್ತಿದ್ದ ಇನ್ನೊಬ್ಬ ವ್ಯಕ್ತಿ.. ವಿಐಪಿನಾ..? ಮತ್ತೊಬ್ಬ ನಟನಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment