ಕಿರುತೆರೆ ನಟಿ ನೇಹಾ ಗೌಡ, ಚಂದನ್​ ಗೌಡ ಮಗು ಹೇಗಿದೆ? ಈ ಬಗ್ಗೆ ಅನುಪಮಾ ಗೌಡ ಏನಂದ್ರು ಗೊತ್ತಾ?

author-image
Veena Gangani
Updated On
ಕಿರುತೆರೆ ನಟಿ ನೇಹಾ ಗೌಡ, ಚಂದನ್​ ಗೌಡ ಮಗು ಹೇಗಿದೆ? ಈ ಬಗ್ಗೆ ಅನುಪಮಾ ಗೌಡ ಏನಂದ್ರು ಗೊತ್ತಾ?
Advertisment
  • ದೀಪಾವಳಿ ಹಬ್ಬದ ಗಿಫ್ಟ್​ ಆಗಿ ಮಗಳ ರೂಪದಲ್ಲಿ ಮಹಾಲಕ್ಷ್ಮೀ ಆಗಮನ
  • ಲಕ್ಷ್ಮೀ ಬಾರಮ್ಮ ಸೀರಿಯಲ್​ ಹಚ್ಚ ಹಸಿರಾಗಿ ಉಳಿದುಕೊಂಡ ನಟಿ
  • ಆಗಾಗ ಮುದ್ದಾದ ಬೇಬಿ ಬಂಪ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನೇಹಾ

ವೀಕ್ಷಕರ ಮನೆಮಗಳು ಲಕ್ಷ್ಮೀ ಬಾರಮ್ಮ ಖ್ಯಾತಿಯ ಗೊಂಬೆ, ಬಿಗ್​ಬಾಸ್​ ಬೆಡಗಿ ನೇಹಾ ಗೌಡ ಮನೆಯಲ್ಲಿ ಸಂತಸ ಮನೆ ಮಾಡಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಕನ್ನಡಿಗರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರೋ ನೇಹಾ-ಚಂದನ್​ ದಂಪತಿ ಅಪ್ಪ-ಅಮ್ಮ ಆದ ಸಂಭ್ರಮದಲ್ಲಿದ್ದಾರೆ.

ಇದನ್ನೂ ಓದಿ:ಫ್ಯಾನ್ಸ್​ ಊಹಿಸಿದ್ದು ನಿಜವಾಗಿದೆ.. ಕನ್ನಡ ರಾಜ್ಯೋತ್ಸವ ದಿನವೇ ಗುಡ್​ನ್ಯೂಸ್​ ಕೊಟ್ಟ ಹರಿಪ್ರಿಯಾ ವಸಿಷ್ಠ ಜೋಡಿ

publive-image

ನೇಹಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ನಟಿ ತಾಯಿಯಾದ ಸಂತಸ ವ್ಯಕ್ತಪಡಿಸಿದ್ದಾರೆ. ನೇಹಾ ಚಂದನ್​ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ನೇಹಾ ಅವರು ವಿಭಿನ್ನ ರೀತಿಯ ಹೊಸ ಹೊಸ ಫೋಟೋಶೂಟ್​ ಮಾಡಿಸಿಕೊಂಡಿದ್ದರು.

publive-image

ತುಂಬು ಗರ್ಭಿಣಿಯಾಗಿದ್ದ ನಟಿ ಮುದ್ದಾದ ಬೇಬಿ ಬಂಪ್ ಲುಕ್ ವಿಶೇಷವಾಗಿತ್ತು. ಈ ಫೋಟೋ ನೋಡಿದ ಅಭಿಮಾನಿಗಳು ಆರೋಗ್ಯಯುತ ಹಾಗೂ ಸುರಕ್ಷಿತವಾಗಿ ಹೆರಿಗೆ ಆಗಲಿ ನೇಹಾ ಅವರೇ, ಸೂಪರ್​ ಕ್ಯೂಟ್​ ನೇಹಾ ಅಂತಾ ನೆಚ್ಚಿನ ನಟಿಗೆ ಕಾಮೆಂಟ್ಸ್​ ಮೂಲಕ ಹಾರೈಸುತ್ತಿದ್ದರು. ಚಿಕ್ಕ ವಯಸ್ಸಿನಿಂದಲೂ ಚಂದನ್​ ನೇಹಾ ಒಟ್ಟಿಗೆ ಕೂಡಿ ಆಡಿ ಬೆಳದವರು. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು.

publive-image

ಇವ್ರದ್ದೂ ಲಾಂಗೆಸ್ಟೂ ಬಂಧನ ಅಂತನೇ ಹೇಳ್ಬಾಹುದು. 32 ವರ್ಷಗಳ ಅವರ ಪ್ರೀತಿ 2018ರಲ್ಲಿ ಮದುವೆ ಬಂಧನದಲ್ಲಿ ಮತ್ತಷ್ಟು ಗಟ್ಟಿಯಾಯ್ತು. ನೇಹಾಗೋಸ್ಕರ ಫಾರಿನ್​ ಕೆಲಸ ಬಿಟ್ಟಿದ್ದರು ಚಂದು, ನೇಹಾ ಒತ್ತಾಯಕ್ಕೆ ರಾಜಾರಾಣಿ ಶೋಗೂ ಎಂಟ್ರಿಕೊಟ್ಟರು. ಅಲ್ಲಿಂದೂ ಚಂದನ್​ ಕೂಡ ಕಿರುತೆರೆಯ ಪರ್ಮನೆಂಟ್​ ಸದಸ್ಯರಾದರು. ಡ್ಯಾನ್ಸಿಂಗ್​ ಶೋನಲ್ಲೂ ಭಾಗವಹಿಸಿದ್ರು. ನಂತರ ಹೀರೋ ಆಗಿ ಅಂತರಪಟ ಧಾರಾವಾಹಿಯಲ್ಲಿ ಮಿಂಚಿದರು.

publive-image

ಈ ಮುದ್ದಾದ ಜೋಡಿಗೆ ದೀಪಾವಳಿ ಹಬ್ಬದ ಗಿಫ್ಟ್​ ಆಗಿ ಮಗಳ ರೂಪದಲ್ಲಿ ಮಹಾಲಕ್ಷ್ಮೀ ಮಡಿಲು ತುಂಬಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ. ಮಗಳಂತೂ ತುಂಬಾ ಮುದ್ದಾಗಿದ್ದಾಳೆ ಎಂದು ಸ್ನೇಹಿತೆ ಅನುಪಮಾ ಗೌಡ ಅವರು ತಮ್ಮ ಇನ್​ಸ್ಟಾ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ. ನಮ್ಮ ಕಡೆಯಿಂದಲೂ ಚಂದು-ನೇಹಾಗೆ ಶುಭಾಶಯಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment