newsfirstkannada.com

Karnataka Budget 2024: ‘ಬೆಂಗಳೂರು ಬಿಸಿನೆಸ್​ ಕಾರಿಡಾರ್’ ಅಂದ್ರೆ ಏನು​? ನಗರಾಭಿವೃದ್ಧಿಗೆ ಸರ್ಕಾರದ ಯೋಜನೆಗಳೇನು?

Share :

Published February 16, 2024 at 11:04am

Update February 16, 2024 at 11:41am

    ನಗರಾಭಿವೃದ್ಧಿಗೆ ಒತ್ತು ನೀಡಿದ ಸಿದ್ದರಾಮಯ್ಯ ಸರ್ಕಾರ

    ಬಜೆಟ್​ನಲ್ಲಿ ಹೊಸ ಕಲ್ಪನೆಯನ್ನು ಜಾರಿಗೆ ತರುವ ಬಗ್ಗೆ ಉಲ್ಲೇಖ

    ಬೆಂಗಳೂರು ಬಿಸಿನೆಸ್​ ಕಾರಿಡಾರ್​ಗೆ 27,000 ಕೋಟಿ ಮೀಸಲು

ಇಂದು ಸಿಎಂ ಸಿದ್ದರಾಮಯ್ಯನವರು ಮಂಡಿಸುತ್ತಿರುವ 2024-25ನೇ ಬಜೆಟ್​ನಲ್ಲಿ ಬೆಂಗಳೂರು ನಗರಾಭಿವೃದ್ಧಿಯೂ ಒತ್ತು ನೀಡಲಾಗಿದೆ. ಅದರಲ್ಲಿ ಬೆಂಗಳೂರು ಬಿಸಿನೆಸ್​ ಕಾರಿಡಾರ್ ಎಂಬ ಹೊಸ ಕಲ್ಪನೆಯನ್ನು ಜಾರಿಗೆ ತರುವುದಾಗಿ ಹೇಳಿದೆ.

ಬೆಂಗಳೂರು ಬಿಸಿನೆಸ್​ ಕಾರಿಡಾರ್ ಅಂದ್ರೆ ಏನು?

ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸಲು ಪೆಫೆರಲ್​ ರಿಂಗ್​ ರೋಡ್​ ಅನ್ನು ಬೆಂಗಳೂರು ಬಿಸಿನೆಸ್​ ಕಾರಿಡಾರ್​​ ಎಂಬ ಹೊಸ ಪರಿಕಲ್ಪನೆಯೊಂದಿಗೆ ಅಭಿವೃದ್ಧಿಗೊಳಿಸಲು ಸರ್ಕಾರ ಮುಂದಾಗಿದೆ.

ಈ ಯೋಜನೆಯಡಿ 73 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಕಾರಿಡಾರ್ ನಿರ್ಮಾಣಕ್ಕೆ ಅಂದಾಜು 27,000 ಕೋಟಿ ವೆಚ್ಚವನ್ನು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಇದನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಇದೇ ವರ್ಷ ಈ ಯೋಜನೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.

ಬೆಂಗಳೂರು ನಗರಾಭಿವೃದ್ಧಿಗಾಗಿ ಈ ಬಾರಿಯ ಬಜೆಟ್​ನಲ್ಲಿ ಒತ್ತು ನೀಡಲಾಗಿದ್ದು, ಹೆಬ್ಬಾಳ ಜಂಕ್ಷನ್​ನಲ್ಲಿ ಪ್ರಾಯೋಗಿಕ ಸುರಂಗ ಮಾರ್ಗ ನಿರ್ಮಾಣ ಮಾಡುವುದಾಗಿ ತಿಳಿಸಿದೆ. ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಅಂತರಾಷ್ಟ್ರೀಯ ತಜ್ಞರ ಸಮಿತಿ ನಿರ್ಮಿಸಲು ಮುಂದಾಗಿದೆ.

2027ರ ಒಳಗೆ ವಿಮಾನ ನಿಲ್ದಾಣದವರೆಗೂ ಮೆಟ್ರೋ 

ಇದಲ್ಲದೆ, 250 ಮೀ. ಉದ್ದದ ಸ್ಕೈ ಡೆಕ್ ನಿರ್ಮಾಣಕ್ಕೆ ಆರ್ಕಿಟೆಕ್ಟ್ಸ್​ಗೆ ಆಹ್ವಾನ ನೀಡಲಾಗಿದೆ. ಸರ್ಕಾರಿ ಇಲಾಖೆಗಳ ವಿದ್ಯುತ್ ಶುಲ್ಕ ಕಡಿತಕ್ಕೆ ಸೋಲಾರ್ ಪಾರ್ಕ್ ನಿರ್ಮಿಸಲು ಸರ್ಕಾರ ಮುಂದಾಗಿದೆ. 2025ರ ಮಾರ್ಚ್​ ವೇಳೆಗೆ ಮೆಟ್ರೋ ರೈಲು 44 ಕಿ.ಮೀ. ವಿಸ್ತರಣೆ ಮಾಡುವುದಾಗಿ ತಿಳಿಸಿದೆ. 2026ರ ಜೂನ್ ವೇಳೆಗೆ ವಿಮಾನ ನಿಲ್ದಾಣದವರೆಗೂ ಮೆಟ್ರೋ ಮಾರ್ಗ ಸಾಗಲಿದೆ ಎಂದು ತಿಳಿಸಿದೆ.

ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜಪಾನ್ ತಂತ್ರಜ್ಞಾನ

ಇನ್ನು ಬಿಎಂಟಿಸಿಗೆ 1,334 ಹೊಸ ಎಲೆಕ್ಟ್ರಿಕ್ ಬಸ್​ಗಳ ಸೇರ್ಪಡೆ, ಬಿಎಂಟಿಸಿ ಪ್ರಯಾಣಿಕರಿಗೆ ವೆಹಿಕಲ್ ಟ್ರ್ಯಾಕಿಂಗ್ ಌಪ್ ಸೌಲಭ್ಯ, ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜಪಾನ್ ತಂತ್ರಜ್ಞಾನ, ಏರಿಯಾ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಬಳಕೆ ಮತ್ತು ಬೆಂಗಳೂರಿನಲ್ಲಿ ವ್ಯಾಪಾರ, ವಹಿವಾಟು ತಡರಾತ್ರಿ 1ರವರೆಗೆ ವಿಸ್ತರಣೆ ಮಾಡಲು ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ ಯೋಚಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Budget 2024: ‘ಬೆಂಗಳೂರು ಬಿಸಿನೆಸ್​ ಕಾರಿಡಾರ್’ ಅಂದ್ರೆ ಏನು​? ನಗರಾಭಿವೃದ್ಧಿಗೆ ಸರ್ಕಾರದ ಯೋಜನೆಗಳೇನು?

https://newsfirstlive.com/wp-content/uploads/2024/02/Vidhana-Souda.jpg

Load More