ಭಾರತೀಯ ನರ್ಸ್‌ ನಿಮಿಷಾ ಪ್ರಿಯಾ ಜೀವ ಉಳಿಸಲು ಇದೇ ಕೊನೆಯ ದಾರಿ! ಏನಿದು ಬ್ಲಡ್ ಮನಿ?

author-image
Gopal Kulkarni
Updated On
ಷರಿಯಾ ಕಾನೂನಿನಲ್ಲಿ ಬ್ಲಡ್ ಮನಿ ಹೇಗೆ ಕೆಲಸ ಮಾಡ್ತದೆ..? ಈ ಹಿಂದೆ ಕೇರಳದ ವ್ಯಕ್ತಿಯೊಬ್ಬ ಶಿಕ್ಷೆಯಿಂದ ಪಾರಾಗಿದ್ದ..!
Advertisment
  • ಯೆಮೆನ್​ನಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ನಿಮಿಷಾ ಕಾಪಾಡಲು ಕೊನೆ ದಾರಿ
  • ದಿಯ್ಯಾ ನೀಡುವ ಮೂಲಕ ನಿಮಿಷಾಳನ್ನು ಕಾಪಾಡಲು ಸಜ್ಜಾದ ತಾಯಿ ಪ್ರೇಮಾ ಕುಮಾರಿ
  • ಏನಿದು ದಿಯ್ಯಾ? ಷರಿಯಾ ಕಾನೂನಿನ ಪ್ರಕಾರ ಬ್ಲಡ್ ಮನಿ ಎಂದರೇನು ಅಂತಾ ಗೊತ್ತಾ?

ಭಾರತೀಯ ಮೂಲದ ಯಮೆನ್​ ನಿವಾಸಿ ನಿಮಿಷಾ ಪ್ರಿಯಾ ಸದ್ಯ ಮರಣದಂಡನೆ ಶಿಕ್ಷೆಯಲ್ಲಿದ್ದಾರೆ. ಯಮೆನ್​ ನಿವಾಸಿಯನ್ನು ಹತ್ಯೆ ಮಾಡಿದ ಅಪರಾಧದಲ್ಲಿ ಅವರಿಗೆ ಗಲ್ಲು ಶಿಕ್ಷೆಯುಂಟಾಗಿದೆ. 2018ರಲ್ಲಿ ನಿಮಿಷಾ ಪ್ರಿಯಾ ತನ್ನ ಬ್ಯುಸಿನೆಸ್ ಪಾಲುದಾರರನನ್ನು ಹತ್ಯೆ ಮಾಡಿದ್ದರು. ಇತ್ತೀಚೆಗೆ ಅವರ ಗಲ್ಲು ಶಿಕ್ಷೆಯ ಕ್ಷಮಾಪಣಾ ಅರ್ಜಿಯನ್ನು ಯಮೆನ್ ರಾಷ್ಟ್ರಪತಿ ರಶದ್ ಅಲ್ ಅಮಿನಿ ತಿರಸ್ಕರಿಸಿದ ಮೇಲೆ ನಿಮಿಷಾ ಪ್ರಿಯಾಗೆ ಗಲ್ಲು ಶಿಕ್ಷೆ ಖಾಯಂ ಆಯಿತು.

ಅತ್ತ ಭಾರತೀಯ ಮೂಲದ ನಿಮಿಷಾರಿಗೆ ಗಲ್ಲು ಶಿಕ್ಷೆ ಖಾಯಂ ಆದ ಬೆನ್ನಲ್ಲಿಯೇ ಭಾರತ ಸರ್ಕಾರಕ್ಕೆ ಅವರನ್ನು ಕಾಪಾಡಿ ದೇಶಕ್ಕೆ ವಾಪಸ್ ಕರೆಸಿಕೊಳ್ಳುವ ಬೇಡಿಕೆಗಗಳು ಹುಟ್ಟಿದವು. ಅದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ನಾವು ಅದೇ ಪ್ರಯತ್ನದಲ್ಲಿ ಇದ್ದೇವೆ ಎಂದು ಹೇಳಿತು. ಅದರ ಜೊತೆಗೆ ನಿಮಿಷಾ ಪ್ರಿಯಾರನ್ನು ಗಲ್ಲು ಶಿಕ್ಷೆಯಿಂದ ಕಾಪಾಡಲು ಇರುವ ದಾರಿಗಳನ್ನು ಸದ್ಯಭಾರತ ಸರ್ಕಾರ ಹುಡುಕುತ್ತಿದ್ದು ಕೊನೆಗೆ ಇರೋದು ಒಂದೇ ದಾರಿ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ವಿಶ್ವದಲ್ಲೇ ಅತಿ ಹೆಚ್ಚು ಸ್ನಾನ ಮಾಡುವವರ ದೇಶ ಯಾವುದು? ದಿನಕ್ಕೆ ಎಷ್ಟು ಬಾರಿ ಗೊತ್ತಾ?

ಸದ್ಯ ಎಲ್ಲಾ ಕಾನೂನು ಪ್ರಕ್ರಿಯೆಗಳ ಬಾಗಿಲುಗಳು ಬಂದ್ ಆಗಿದ್ದರು ಕೂಡ ಒಂದು ಬಾಗಿಲು ತೆರೆದುಕೊಂಡಿದೆ ಅದು ಷರಿಯಾ ಕಾನೂನಿನ ರಕ್ತದ ಹಣ ಅಂದ್ರೆ ಬ್ಲಡ್ ಮನಿ, ಇದನ್ನು ಷರಿಯಾ ಕಾನೂನಿನಲ್ಲಿ ದಿಯ್ಯಾ ಎಂದು ಕರೆಯುತ್ತಾರೆ.ಯೆಮೆನ್​ನಲ್ಲಿ ಜಾರಿಯಲ್ಲಿರುವುದು ಷರಿಯಾ ಕಾನೂನು ಅದರ ಅನ್ವಯವೇ ಅಲ್ಲಿ ಶಿಕ್ಷೆ ಹಾಗೂ ಕ್ಷಮಾಪಣೆ ಎರಡು ನಡೆಯುತ್ತವೆ. ಸದ್ಯ ನಿಮಿಷಾ ಪ್ರಿಯಾರನ್ನು ಉಳಿಸುವ ಕೊನೆಯ ದಾರಿ ಅಂದ್ರೆ ಅದು ಬ್ಲಡ್ ಮನಿ

ಏನಿದು ಬ್ಲಡ್ ಮನಿ ? 

ಏನಿದು ಬ್ಲಡ್ ಮನಿ ಅಂತ ನೋಡುವುದಾದ್ರೆ,ಇದೊಂದು ಪರಿಹಾರದ ಮೊತ್ತ. ಹತ್ಯೆಯಾಗಿರುವ ವ್ಯಕ್ತಿಯ ಕುಟುಂಬಕ್ಕೆ ಅಪರಾಧಿ ನೀಡುವ ಪರಿಹಾರ ಮೊತ್ತವನ್ನು ದಿಯ್ಯಾ ಅಥವಾ ಬ್ಲಡ್ ಮನಿ ಎಂದು ಕರೆಯುತ್ತಾರೆ. ಒಂದು ವೇಳೆ ಅಪರಾಧಿ ತಾನು ಕೊಲೆ ಮಾಡಿದ ವ್ಯಕ್ತಿಯ ಕುಟುಂಬಕ್ಕೆ ಕ್ಷಮಾಪಣೆಗಾಗಿ ಹಣಕಾಸಿನ ಪರಿಹಾರ ನೀಡಿದಲ್ಲಿ ಅವರು ಕ್ಷಮೆಗೆ ಅರ್ಹರಾಗುತ್ತಾರೆ. ಆದರೆ ಅದು ಪೂರ್ತಿ ಸಂತ್ರಸ್ತರ ಕುಟುಂಬದ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ಕ್ಷಮಾಪಣೆಗೆ ಕೊಲೆಯಾದ ವ್ಯಕ್ತಿಯ ಕುಟುಂಬವು ಸಜ್ಜಾಗಿದ್ದು. ಪರಿಹಾರದ ಮೊತ್ತವನ್ನು ಪಡೆಯಲು ನಿರ್ಧಾರ ಮಾಡಿದಲ್ಲಿ ನಿಮಿಷಾ ಪ್ರಿಯಾ ಅವರನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ಒಂದು ದಾರಿ ಉಳಿದುಕೊಂಡಿದೆ.

ಇದನ್ನೂ ಓದಿ:217 ಹ್ಯಾಂಡ್‌ ಬ್ಯಾಗ್ಸ್, 75 ವಾಚ್​.. ಈ ಮಹಿಳಾ ಪ್ರಧಾನಿ ಸಂಪತ್ತು ಎಷ್ಟು? ಐಷಾರಾಮಿ ಬದುಕು ಹೇಗಿದೆ?

publive-image

ಸದ್ಯ ಈ ದಿಯ್ಯಾ ನೀಡಲು ನಿಮಿಷಾ ಪ್ರಿಯಾ ಕುಟುಂಬ ಸಜ್ಜಾಗಿದೆ. ಕೊಲೆಯಾದ ತಲಾಲ್ ಅಬ್ದೊ ಮೆಹ್ದಿ ಜೊತೆ ಪರಿಹಾರ ಹಣದ ಒಪ್ಪಂದನ್ನು ನೀಡಿ ನಿಮಿಷಾರನ್ನು ಕ್ಷಮಿಸುವಂತೆ ಕೋರಲು ಸಿದ್ಧರಿದ್ದಾರೆ ಆದ್ರೆ ಭಾರತ ಸರ್ಕಾರ ಮೆಹ್ದಿ ಕುಟುಂಬದೊಂದಿಗೆ ಮಾತನಾಡಲು ಹಾಗೂ ಒಪ್ಪಂದ ಕುದುರಿಸುವಂತೆ ಸಹಾಯ ಮಾಡಲು ಮುಂದೆ ಬರಬೇಕು ಇಂತಹದೊಂದು ಅವಕಾಶಕ್ಕೆ ಏರ್ಪಾಡು ಮಾಡಿಕೊಡಬೇಕು. ಸ್ಥಳೀಯ ಬುಡಕಟ್ಟು ಜನಾಂಗದ ನಾಯಕರನ್ನು ಮತ್ತು ಕುಟುಂಬವನ್ನು ಮಾತುಕತೆಗೆ ಕರೆತರುವ ನಿಟ್ಟಿನಲ್ಲಿ ಭಾರತ ಸರ್ಕಾರ ಸಹಾಯ ಮಾಡಬೇಕು ಕುಟುಂಬ ಕೇಳಿಕೊಳ್ಳುತ್ತಿದೆ.

ಇನ್ನು ಸೇವ್ ನಿಮಿಷಾ ಇಂಟರ್​ನ್ಯಾಷನಲ್ ಆ್ಯಕ್ಷನ್ ಕೌನ್ಸಿಲ್ ಈ ವಿಚಾರವಾಗಿ ಹಣಕಾಸಿನ ವ್ಯವಸ್ಥೆಯನ್ನು ಮಾಡಲಿದೆ. ಈ ಒಂದು ಕೌನ್ಸಿಲ್ 2020ರಲ್ಲಿ ನಿಮಿಷಾ ಪ್ರಕರಣದಂತವರಿಗೆ ಸಹಾಯ ಮಾಡಲೆಂದೇ ಸ್ಥಾಪಿಸಲಾಗಿದ್ದು. ಇಲ್ಲಿ ಪರಿಹಾರ ನಿಧಿಯನ್ನು ಸಂಗ್ರಹ ಮಾಡಲಾಗುತ್ತದೆ ಎಂದು ನಿಮಿಷಾ ಪ್ರಿಯಾವರ ತಾಯಿಯ ಬೇಡಿಕೆ ಅರ್ಜಿಯನ್ನು ದೆಹಲಿ ಹೈಕೋರ್ಟ್​ನಲ್ಲಿ ಸಲ್ಲಿಸಿರುವ ಸುಪ್ರೀಂಕೋರ್ಟ್​ನ ವಕೀಲ ಸುಭಾಷ್ ಚಂದ್ರನ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment