/newsfirstlive-kannada/media/post_attachments/wp-content/uploads/2024/10/BLUE-ZONES.jpg)
ನಾವು ಅಮೃತ ಬಗ್ಗೆ ಪುರಾಣ ಕಥೆಗಳಲ್ಲಿ ಕೇಳಿದ್ದೇವೆ. ಅದನ್ನು ಕುಡಿದವರಿಗೆ ಮೃತ್ಯುವೇ ಇಲ್ಲ ಎಂಬ ಸತ್ಯವೂ ನಮಗೆ ಗೊತ್ತಿದೆ. ಅದಕ್ಕಾಗಿಯೇ ದಾನವ ದೇವತೆಗಳ ನಡುವೆ ಯುದ್ಧವೊಂದು ಸದಾ ಜಾರಿಯಲ್ಲಿಯೇ ಇತ್ತು. ಅವೆಲ್ಲಾ ಪುರಾಣ ಕಥೆಗಳು ಈಗ ಮನುಷ್ಯನ ಆಯುಷ್ಯ ಹೆಚ್ಚು ಕಡಿಮೆ ನೂರು ಎಂದು ಹೇಳಲಾಗುತ್ತದೆ. ಆದರೆ ಸದ್ಯ ಜಗತ್ತಿನಲ್ಲಿ ಆಹಾರ ಪದ್ಧತಿಯಿಂದ ಹಿಡಿದು ಎಲ್ಲವೂ ಕೂಡ ಬದಲಾಗಿದೆ. ನೂರಲ್ಲ 70 ವರ್ಷ ತಲುಪಿದವನೂ ದೀರ್ಘಾಯುಷಿ ಎಂದು ಹೇಳುವ ಕಾಲ ಬಂದಿದೆ. ಆದ್ರೆ ಜಗತ್ತಿನ ಕೆಲವು ಭಾಗಗಳನ್ನು ಬ್ಲ್ಯೂ ಝೋನ್ ಅಂದ್ರೆ ನೀಲು ವಲಯ ಎಂದು ಗುರುತಿಸಲಾಗಿದೆ. ಆ ಪ್ರದೇಶದಲ್ಲಿ ಅಥವಾ ಆ ದೇಶಗಳಲ್ಲಿ ಬದುಕಿದವರು ಕನಿಷ್ಠ ನೂರು ವರ್ಷ ಬಾಳುತ್ತಾರೆ ಎಂಬ ಮಾತು ಇದೆ.
ಇದನ್ನೂ ಓದಿ:Watch: ಪಾಂಡ್ಯ ಐಷಾರಾಮಿ ಲೈಫ್ಸ್ಟೈಲ್ಗೆ ಮತ್ತೊಂದು ಸಂಗಾತಿ; ಈ ಹೊಸ ರೇಂಜ್ ರೋವರ್ ಹೆಂಗಿದೆ?
ಜಗತ್ತಿನಲ್ಲಿ ಒಟ್ಟು 5 ನೀಲಿ ವಲಯಗಳನ್ನು ಗುರುತಿಸಲಾಗಿದೆ. ಅಲ್ಲಿಯ ನಿವಾಸಿಗಳ ಆಯುಷ್ಯ ಅಂದಾಜು ನೂರು ವರ್ಷವೆಂದೇ ಹೇಳಲಾಗುತ್ತದೆ. 2004ರಲ್ಲಿ ಗೈನ್ನಿ ಪೆಸ್ ಮತ್ತು ಮಿಚೆಲ್ ಪೌಲೈನ್ ಎಂಬ ಇಬ್ಬರು ಸಂಶೋಧಕರು ಇಟಲಿಯ ಸರ್ಡಾನಿಯಾದ ನ್ಯುರೊ ಪ್ರದೇಶವನ್ನು ಬ್ಲ್ಯೂ ಝೋನ್ ಎಂದು ಗುರುತಿಸಿದ್ದರು. ಈ ಪ್ರದೇಶದಲ್ಲಿ ವಾಸಿಸುವ ಜನರು ದೀರ್ಘಾಯುಷಿಗಳು ಎಂದು ಹೇಳಲಾಗಿತ್ತು. ಮುಂದೆ ಅಮೆರಿಕಾದ ಸಂಶೋಧಕರಾದ ಡಾನ್ ಬ್ಯುಟ್ನೇರ್ ಅನ್ನುವವರು ಮತ್ತೆ ನಾಲ್ಕು ಪ್ರದೇಶಗಳನ್ನು ಬ್ಲ್ಯೂ ಝೋನ್ ಎಂದು ಗುರುತಿಸಿದರು. ಆ ಪ್ರದೇಶದ ಜನರು ಕೂಡ ದೀರ್ಘಾಯುಷಿಗಳಾಗಿದ್ದಾರೆ ಎಂಬುದನ್ನು ಸಾಕ್ಷಿ ಸಮೇತ ರುಜುವಾತು ಪಡಿಸಿದರು. ಯಾವುದೇ ಔಷಧಿಗಳಿಲ್ಲದೆ, ಹೆಚ್ಚು ಕಾಯಿಲೆಗೆ ಬೀಳದೆ ಇಲ್ಲಿಯ ಜನರು ಕನಿಷ್ಠ ನೂರು ವರ್ಷ ಬಾಳುತ್ತಾರೆ ಎಂಬುದನ್ನು ಬ್ಯುಟ್ನೇರ್ ಸಂಶೋಧನೆಯು ತೆರೆದಿಟ್ಟಿತು.
ಇದನ್ನೂ ಓದಿ: ವಿರಾಟ್, ಅನುಷ್ಕಾ ಕುಡಿಯುವ ನೀರು ಫ್ರಾನ್ಸ್ನಿಂದ ಬರುತ್ತೆ! ಒಂದು ಲೀಟರ್ಗೆ ಎಷ್ಟು ಬೆಲೆ ಗೊತ್ತಾ?
ಗೈನ್ನಿ ಪೆಸ್, ಮಿಚೆಲ್ ಪೌಲೈನ್ ಮತ್ತು ಡಾನ್ ಬ್ಯುಟ್ನೇರ್ ಸಂಶೋಧನೆಯ ಪ್ರಕಾರ ಜಗತ್ತಿನಲ್ಲಿ ಒಟ್ಟು ಐದು ಬ್ಲ್ಯೂ ಝೋನ್ಗಳನ್ನು ಗುರುತಿಸಲಾಗಿತ್ತು. ಅವು ಗ್ರೀಸ್ನ ಇಕಾರಿಯಾ, ಇಟಲಿಯ ಸರ್ಡಿನಿಯಾ, ಜಪಾನ್ನ ಓಕಿನಾವಾ, ಯುಎಸ್ನ ಲಾಮಾ ಲಿಂಡಾ ಹಾಗೂ ಕಾಸ್ಟಾರಿಕಾದ ನಿಕೊಯಾ ಪ್ರದೇಶ .
2023ರಲ್ಲಿ ಬ್ಲ್ಯೂ ಝೋನ್ ಸೇರಿದ ಸಿಂಗಾಪೂರ್
2010 ಹಾಗೂ 2020ರ ನಡುವಿನ ಸಾಲಿನಲ್ಲಿ ಸಿಂಗಾಪೂರ್ನಲ್ಲಿ ಅತಿಹೆಚ್ಚು ಜನರು ನೂರು ವರ್ಷ ಬದುಕಿದ್ದರು. ಇದರ ಆಧಾರದ ಮೇಲೆ ಸಿಂಗಾಪೂರ್ನ್ನು ಆರನೇ ಬ್ಲ್ಯೂಝೋನ್ ಎಂದು ಗುರುತಿಸಲಾಯ್ತು. ಆದರೆ ಇದನ್ನು ಕೆಲವರು ಬ್ಲ್ಯೂಝೋನ್ ಎಂದು ಒಪ್ಪುವುದಿಲ್ಲ ಕಾರಣ, ಅಲ್ಲಿನ ಸರ್ಕಾರ ಜನರ ದೀರ್ಘಾಯುಷ್ಯಕ್ಕಾಗಿ ಅನೇಕ ರೀತಿಯಲ್ಲಿ ಖರ್ಚು ಮಾಡುತ್ತಿದೆ. ಹೀಗಾಗಿ ಅವರು ಸಹಜವಾಗಿ ನೂರು ವರ್ಷ ಬದುಕುತ್ತಿಲ್ಲ ಎಂಬ ವಾದವೂ ಕೂಡ ಕೇಳಿ ಬಂದಿದೆ.
ಬ್ಲ್ಯೂ ಝೋನ್ನಲ್ಲಿ ಮಾತ್ರ ದೀರ್ಘಾಯುಷಿಗಳು ಇರುವುದು ಯಾಕೆ ?
ನೀಲಿ ವಲಯಗಳಲ್ಲಿ ಮಾತ್ರ ಜನರು ಹೆಚ್ಚುಕಾಲ ಬಾಳುವುದಕ್ಕೆ ಪ್ರಮುಖ ಕಾರಣ ಅವರಲ್ಲಿರುವ ಅನುವಂಶೀಯತೆಯ ಗುಣ ಹಾಗೂ ಅವರ ಜೀವನ ಶೈಲಿ ಎಂದು ಹೇಳಲಾಗುತ್ತದೆ. ಈ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಸುಮಾರು ಶೇಕಡಾ 20 ರಿಂದ 30 ರಷ್ಟು ಜನರು ನೂರು ವರ್ಷ ಬದುಕುತ್ತಾರೆ ಎಂದು ಹೇಳಲಾಗುತ್ತದೆ. ಅವರ ಆಹಾರ ಶೈಲಿಯೂ ಕೂಡ ಅವರನ್ನು ದೀರ್ಘಾಯುಷಿಗಳನ್ನಾಗಿ ಮಾಡುವುದರಲ್ಲಿ ಸಹಾಯವಾಗಿದೆ. ಹೆಚ್ಚು ಸಸ್ಯಾಹಾರದ ಮೇಲೆ ಅವಲಂಬಿತವಾದ ಆಹಾರ ಪದ್ಧತಿ ಅತ್ಯಂತ ಕಡಿಮೆ ಮಾಂಸ ಹಾಗೂ ಮೀನಿನ ಆಹಾರಗಳ ಸೇವನೆ. ಅಲ್ಲಿಯ ವಾತಾವರಣ ಹಾಗೂ ಜೀವನ ಪದ್ಧತಿಯಿಂದ ಅವರು ದೀರ್ಘಾಯುಷಿಗಳಾಗಿದ್ದಾರೆ ಎಂದು ಸಂಶೋಧನೆಗಳು ಹೇಳಿವೆ. ಅದು ಅಲ್ಲದೇ ಅವರು ವಾರಕ್ಕೊಮ್ಮೆ ಹಣ್ಣು, ಕಾಳು, ಮತ್ತು ತರಕಾರಿಗಳನ್ನು ಹೆಚ್ಚು ಸೇವನೆ ಮಾಡುವ ಒಂದು ಆಹಾರ ಪದ್ಧತಿಯನ್ನು ಬೆಳಸಿಕೊಂಡಿದ್ದಾರೆ. ಈ ಎಲ್ಲಾ ಪ್ರಮುಖ ಅಂಶಗಳು ಅವರನ್ನು ದೀರ್ಘಾಯುಷಿಗಳಾಗಿ ಮಾಡುವಲ್ಲಿ ಸಹಾಕಾರಿ ಎನ್ನುತ್ತಾರೆ ಸಂಶೋಧಕರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ