ಪರೀಕ್ಷೆಯಲ್ಲಿ ಜನಿವಾರ ವಿವಾದ.. CET ವಸ್ತ್ರ ಸಂಹಿತೆ ಏನ್ ಹೇಳುತ್ತೆ?

author-image
Ganesh
Updated On
ಎಷ್ಟೇ ಬೇಡಿಕೊಂಡರೂ ಪರೀಕ್ಷೆ ಬರೆಯಲು ಬಿಡಲಿಲ್ಲ -ಮಗನ ಭವಿಷ್ಯ ನೆನೆದು ತಾಯಿ ಕಂಗಾಲು
Advertisment
  • ಏಪ್ರಿಲ್ 15, 16, 17 ನಡೆದಿದ್ದ ಸಿಇಟಿ ಪರೀಕ್ಷೆ
  • ಶಿವಮೊಗ್ಗ, ಬೀದರ್​ನಲ್ಲಿ ಜನಿವಾರ ಪ್ರಕರಣ
  • ಶಿವಮೊಗ್ಗದಲ್ಲಿ ಜನಿವಾರ ಕತ್ತರಿಸಿದ ಆರೋಪ

ಬೆಂಗಳೂರು: ಪಿಯುಸಿ ಪರೀಕ್ಷೆ ಬೆನ್ನಲ್ಲೇ ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿದೆ. ಕೊನೆಯ ದಿನವಾದ ನಿನ್ನೆ, ಶಿವಮೊಗ್ಗ ಮತ್ತು ಬೀದರ್​ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆದುಹಾಕುವಂತೆ ಸೂಚಿಸಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ. ಹಾಗಿದ್ದರೆ CET ವಸ್ತ್ರ ಸಂಹಿತೆ ಏನ್ ಹೇಳುತ್ತೆ? ಯಾವ ಡ್ರೆಸ್ ಧರಿಸಲು ಪುರುಷರಿಗೆ ಮಹಿಳೆಯರಿಗೆ ಅವಕಾಶ ಇದೆ ಅನ್ನೋದ್ರ ವಿವರ ಇಲ್ಲಿದೆ.

ಇದನ್ನೂ ಓದಿ: ಜನಿವಾರ ತೆಗೆಯದಿದ್ದಕ್ಕೆ CET ಪರೀಕ್ಷೆಗೆ ಅವಕಾಶ ಸಿಗಲಿಲ್ಲ- ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ವಿವಾದ

ಪುರುಷರ ವಸ್ತ್ರ ಸಂಹಿತೆ

  • ಪರೀಕ್ಷೆ ದಿನ ಪೂರ್ಣ ತೋಳಿನ ಬಟ್ಟೆ ಧರಿಸುವ ಹಾಗಿಲ್ಲ
  • ಕಾಲರ್ ರಹಿತ ನಾರ್ಮಲ್ ಶರ್ಟ್/ ಟೀ ಶರ್ಟ್ ಗೆ ಆದ್ಯತೆ
  • ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬು ಕಡಿಮೆಯಿರುವ ಪ್ಯಾಂಟ್)
  • ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್ ಅವಕಾಶ ಇಲ್ಲ
  • ಪರೀಕ್ಷಾ ಹಾಲ್ ಒಳಗೆ ಶೂ ಧರಿಸುವ ಹಾಗಿಲ್ಲ
  • ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣ ಧರಿಸುವ ಹಾಗಿಲ್ಲ
  • ಕಿವಿಯೋಲೆ ಕಡಗ ಧರಿಸುವ ಹಾಗಿಲ್ಲ

ಮಹಿಳೆಯರ ವಸ್ತ್ರ ಸಂಹಿತೆ

  • ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ ಹೂ ಬಟನ್ ಹೊಂದಿರುವ ಬಟ್ಟೆ ಧರಿಸುವುದು ನಿಷೇಧ
  • ಪರೀಕ್ಷೆ ದಿನ ಪೂರ್ಣ ತೋಳಿನ ಬಟ್ಟೆಯನ್ನು ಜೀನ್ಸ್ ಧರಿಸಬಾರದು
  • ಬದಲಾಗಿ ಅರ್ಧ ತೋಳಿನ ಬಟ್ಟೆ ಮುಜುಗರ ಆಗದಿರುವಂತಹ ಬಟ್ಟೆ ಧರಿಸಬೇಕು ದಪ್ಪ ಹೀಲ್ಸ್ ಬಳಸುವುದು ನಿಷೇಧ
  • ದಪ್ಪವಾದ ಶೂ ದಪ್ಪವಾದ ಚಪ್ಪಲಿ
  • ಅತಿ ತೆಳುವಾದ ಶೂ ಅತಿ ತೆಳುವಾದ ಚಪ್ಪಲಿ ನಿಷೇಧ
  • ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣ ಧರಿಸುವುದು ನಿಷೇಧ
  • ಕಿವಿ ಓಲೆ ಉಂಗುರ ಧರಿಸುವ ಹಾಗಿಲ್ಲ
  • ಮಂಗಳ ಸೂತ್ರ ಮತ್ತು ಕಾಲುಂಗುರ ಧರಿಸಲು ಅವಕಾಶ

ಇದನ್ನೂ ಓದಿ: ಆರ್​ಸಿಬಿಗೆ ಯಾರೇ ಬರಲಿ, ಯಾರೇ ಹೋಗಲಿ.. ಕೊಹ್ಲಿಯ ಈ ದೊಡ್ಡ ಗುಣದ ಬಗ್ಗೆ ಗೊತ್ತಿರಲಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment