/newsfirstlive-kannada/media/post_attachments/wp-content/uploads/2024/12/SYBER_CRIME.jpg)
ಬೆಂಗಳೂರು: ಈಗ ಎಲ್ಲಿ ನೋಡಿದರೂ, ಎಲ್ಲಿ ಕೇಳಿದರೂ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚು ಹೆಚ್ಚು ಸುದ್ದಿಯಾಗುತ್ತಿವೆ. ಆನ್ಲೈನ್ನಲ್ಲಿ ಒಂದು ಬಾರಿ ಹಣ ಕಳೆದುಕೊಂಡರೇ ಅದನ್ನು ಹೇಗೆ ಪಡೆಯುವುದು ಎಂಬುದೇ ಗೊತ್ತಗಲ್ಲ. ಹೀಗಾಗಿ ಸಾರ್ವಜನಿಕರು ಆದಷ್ಟು ಜಾಗೃತರಾಗಿರಬೇಕು. ಟ್ರಾಯ್ ಸಂಸ್ಥೆ ಈ ಬಗ್ಗೆ ಎಷ್ಟೇ ಎಚ್ಚರಿಕೆ ಕೈಗೊಂಡರೂ ಟ್ರಾಯ್ ಹೆಸರಲ್ಲೇ ಖದೀಮರು ವಂಚನೆ ಎಸಗಿದ್ದಾರೆ.
ಆನ್ಲೈನ್ ವಂಚನೆ ಎನ್ನುವುದು ಕಣ್ಣಿಗೆ ಕಾಣದಂತೆ ನಡೆಯುವ ದಂಧೆ ಆಗಿದೆ. ಕ್ಷಣದಲ್ಲಿ ಹಣವನ್ನು ಮಾಯ ಮಾಡಿ ಬಿಡುತ್ತಾರೆ. ಉದ್ಯೋಗ ಕೊಡುತ್ತೇವೆ, ಹಣ ಡಬಲ್ ಮಾಡಿಕೊಡುತ್ತೇವೆ. ಕಸ್ಟಮರ್ ಅಧಿಕಾರ ಹೆಸರಲ್ಲಿ, ನಿಮ್ಮ ಹೆಸರಲ್ಲಿ ಕೇಸ್ಗಳಿವೆ, ಆ್ಯಪ್ನಲ್ಲಿ ಹಣ ಹೂಡಿಕೆ ಮಾಡಿ ಹೀಗೆ.. ಹಲವಾರು ರೀತಿಯಲ್ಲಿ ಖದೀಮರು ಆನ್ಲೈನ್ ಮೂಲಕ ವಂಚನೆ ಮಾಡುತ್ತಾರೆ. ಈ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿವೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ದೇವಿ ದರ್ಶನಕ್ಕೆ ತೆರಳಿದ್ದ ಕರ್ನಾಟಕದ BJP ಶಾಸಕ.. ದೇವಾಲಯಕ್ಕೆ ನೋ ಎಂಟ್ರಿ ಎಂದ ಎಂಇಎಸ್
ನಿಮ್ಮ ಮೊಬೈಲ್ಗೆ ಯಾವುದಾದರೂ ಅಪರಿಚಿತ ನಂಬರಿಂದ ಕರೆ ಬಂದರೆ ಅದರ ಬಗ್ಗೆ ಹೆಚ್ಚಿನ ಗಮನಕೊಡಿ. ಯಾವುದೇ ನಿಮ್ಮ ಪರ್ಸನಲ್ ಮಾಹಿತಿ ಶೇರ್ ಮಾಡಿಕೊಳ್ಳಬೇಡಿ. ಹೇಗದರೂ ಮಾಡಿ ನಿಮ್ಮ ಹಣಕ್ಕೆ ಖದೀಮರು ಕನ್ನ ಹಾಕುವುದು ಗ್ಯಾರಂಟಿ. ಅವರು ಯಾವ್ಯಾವ ಹೆಸರಲ್ಲಿ ವಂಚನೆ ಮಾಡುತ್ತಾರೆ ಎಂದು ನೋಡುವುದಾದರೆ..
ಈ 10 ರೀತಿಯಲ್ಲಿ ಹಣ ವಂಚನೆ ಮಾಡುತ್ತಿರುವ ಸೈಬರ್ ಕ್ರೂರಿಗಳು
- TRAI (Telecom Regulatory Authority of India) ಪೋನ್ ಸ್ಕ್ಯಾಮ್ ಹೆಸರಲ್ಲಿ ಜನರ ಖಾತೆಗೆ ಕನ್ನ. ಕಾನೂನು ಬಾಹಿರವಾಗಿ ನಿಮ್ಮ ಫೋನ್ ನಂಬರ್ ಬಳಸಿದ್ದೀರಿ ಎಂದು ವಂಚನೆ.
- ಕಸ್ಟಮ್ ಅಧಿಕಾರಿಗಳ ಬಳಿ ನಿಮ್ಮ ಹೆಸರಲ್ಲಿರುವ ಪಾರ್ಸಲ್ ಸೀಜ್ (ಪಾರ್ಸಲ್ನಲ್ಲಿ ಗಾಂಜಾ, ಡ್ರಗ್ಸ್ ಸಾಗಾಟ ಎಂದು ಬೆದರಿಕೆ)
- ತೆರಿಗೆ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ ಬ್ಯಾಂಕ್ ಡಿಟೈಲ್ಸ್ ನೀಡುವಂತೆ ವಂಚನೆ
- ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚಿಸಿ ಹಣ ಪೀಕುತ್ತಾರೆ ಖದೀಮರು
- ಕುಟುಂಬಸ್ಥರು ಅರೆಸ್ಟ್ ಅಗಿದ್ದಾರೆ ಎಂದು ಬೆದರಿಸಿ ವಂಚನೆ
- ಟ್ರೇಡಿಂಗ್ ಆಪ್ನಲ್ಲಿ ಹಣ ಹೂಡಿಕೆ ಮಾಡುವಂತೆ ನಂಬಿಸಿ ವಂಚನೆ
- ಸುಲಭ ಟಾಸ್ಕ್ ಹಾಗೇ ಅನ್ಲೈನ್ ಉದ್ಯೋಗದ ಆಸೆ ತೋರಿಸಿ ವಂಚನೆ
- ನಿಮ್ಮ ಹೆಸರಿಗೆ ಲಾಟರಿಯಲ್ಲಿ ಹಣ ಬಂದಿದೆ ಎಂದು ನಂಬಿಸಿ ಮೋಸ
- ನಿಮ್ಮ ಖಾತೆಗೆ ತಪ್ಪಾಗಿ ಹಣ ಬಂದಿದೆ ಎಂದು ನಂಬಿಸಿ ವಂಚನೆ
- ಕೆವೈಸಿ ಎಕ್ಸೈಪರ್ ಅಗಿದೆ ಎಂದು ಬ್ಯಾಂಕ್ ಅಧಿಕಾರಿಗಳ ರೀತಿ ಮಾತನಾಡಿ ವಂಚನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ