Advertisment

ಯಾರಿಗೆ ಎಜುಕೇಷನ್​ ಲೋನ್​ ಸಿಗುತ್ತೆ..? ವಿದ್ಯಾರ್ಥಿಗಳು ಓದಲೇಬೇಕಾದ ಸ್ಟೋರಿ..!

author-image
Ganesh
Updated On
ಯಾರಿಗೆ ಎಜುಕೇಷನ್​ ಲೋನ್​ ಸಿಗುತ್ತೆ..? ವಿದ್ಯಾರ್ಥಿಗಳು ಓದಲೇಬೇಕಾದ ಸ್ಟೋರಿ..!
Advertisment
  • ಫಾರೀನ್​​ಗೆ ಹೋಗಿ ಓದೋದು ದೊಡ್ಡ ಕೆಲಸವಲ್ಲ
  • ಬರೋಬ್ಬರಿ 1 ಕೋಟಿವರೆಗೂ ಎಜುಕೇಷನ್​ ಲೋನ್
  • ಸಾಲ ಮರುಪಾವತಿ ಶುರುವಾಗೋದು ಕೆಲಸ ಸಿಕ್ಕ ನಂತರ

ಫಾರೀನ್​​ಗೆ ಹೋಗಿ ಓದೋದು ದೊಡ್ಡ ಕೆಲಸವಲ್ಲ. ಆದರೆ ನೀವು ಅದಕ್ಕಾಗಿ ಹಣ ಹೊಂದಿಸೋದು ಭಾರೀ ದೊಡ್ಡ ಕೆಲಸ. ನೀವು ಫಾರೀನ್​ ಎಜುಕೇಷನ್​​ ಲೋನ್​ ಪಡೆಯೋದ ಮುನ್ನ ಒಂದಷ್ಟು ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಓದಿಗೆ ಬೇಕಿರೋ ಹಣ ಎಷ್ಟು? ಅದಕ್ಕಾಗಿ ನೀವು ಎಷ್ಟು ಬಡ್ಡಿ ಕಟ್ಟಬೇಕು? ಅನ್ನೋ ಲೆಕ್ಕ ಇರಬೇಕು. ಇಂಟರೆಸ್ಟ್​ ರೇಟ್​​, ರೀಪೇಮೆಂಟ್​​​ ಟೈಮ್​​, ಗ್ರೇಸ್​ ಪಿರಿಯಡ್​ ಎಲ್ಲದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಅಗತ್ಯ.

Advertisment

ಎಜುಕೇಶನ್ ಲೋನ್ ಎಂದರೇನು?

ಹೆಚ್ಚಿನ ವ್ಯಾಸಂಗಕ್ಕೆ ಎಂದು ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಸಾಲದ ರೂಪದಲ್ಲಿ ನೀಡುವ ಹಣ ಸಹಾಯವನ್ನು Education loan ಎನ್ನಲಾಗುತ್ತದೆ. ಸಾಮಾನ್ಯವಾಗಿ ಇದು ಭಾರತದ ಎಲ್ಲಾ ಪ್ರಮುಖ ಬ್ಯಾಂಕುಗಳಲ್ಲಿ ಈ ರೀತಿಯ ಸೇವೆ ಲಭ್ಯವಿದೆ. ಈ ರೀತಿಯ ಸಾಲದ ಮೇಲಿನ ಬಡ್ಡಿ 8.1 ಪ್ರತಿಶತದಿಂದ ಶುರುವಾಗಿ 16 ಪ್ರತಿಶತದ ವೆರೆಗೂ ಹೋಗುತ್ತದೆ.

ವಿದ್ಯಾಭ್ಯಾಸ ಮುಗಿದ ನಂತರ ಆರು ತಿಂಗಳಿನಿಂದ, ಹನ್ನೆರೆಡು ತಿಂಗಳವರೆಗೆ ಕೆಲಸ ಹುಡುಕಿಕೊಳ್ಳಲು ಕೂಡ ಸಮಯ ನೀಡಲಾಗುತ್ತದೆ. ಸಾಲ ಮರು ವಾಪಸಾತಿ ಶುರುವಾಗುವುದು ಕೆಲಸ ಸಿಕ್ಕ ನಂತರ ಅಥವಾ ಕೋರ್ಸ್ ಮುಗಿದ 6/12 ತಿಂಗಳ ನಂತರ. ಅಂದರೆ ಓದು ಮುಗಿದ ನಂತರ ಕೇವಲ ಎರಡು ತಿಂಗಳಲ್ಲಿ ಕೆಲಸ ಸಿಕ್ಕರೆ ಸಾಲ ಮರುಪಾವತಿ ಕೆಲಸ ಸಿಕ್ಕ ತಿಂಗಳಿಂದ ಶುರುವಾಗುತ್ತದೆ. ಕೆಲಸ ಸಿಗದೇ ಹೋದರೂ ಕೂಡ ಗರಿಷ್ಟ 12 ತಿಂಗಳ ಕಾಲಾವಕಾಶವಿರುತ್ತದೆ. ಇದು ಮುಗಿದ ನಂತರ ಸಾಲ ವಾಪಸಾತಿ ಪ್ರಕ್ರಿಯೆ ಶುರುವಾಗುತ್ತದೆ.

ಯಾರಿಗೆ ಎಜುಕೇಷನ್​ ಲೋನ್​ ಸಿಗುತ್ತೆ?

ಪಿಯುಸಿ ನಂತರ ಪದವಿ ಶಿಕ್ಷಣ ಪಡೆಬೇಕು, ಪದವಿ ನಂತರ ಮಾಸ್ಟರ್ಸ್ ಪದವಿ ಪಡೆಯಬೇಕು ಅನ್ನೋರಿಗೆ ಎಜುಕೇಷನ್​​ ಲೋನ್​ ನೀಡಲಾಗುತ್ತದೆ. ವೃತ್ತಿ ನಿಪುಣತೆ ಹೆಚ್ಚಿಸಿಕೊಳ್ಳಲು ಯಾವುದಾದ್ರೂ ಸರ್ಟಿಫಿಕೇಷನ್ ಕೋರ್ಸ್ ಮಾಡೋದಾದ್ರೂ ಲೋನ್​ ಸಿಗುತ್ತೆ. ಪೋಸ್ಟ್ ಗ್ರ್ಯಾಜುಯೆಟ್ ಡಿಪ್ಲೋಮ, ವೊಕೇಷನಲ್ ಟ್ರೈನಿಂಗ್ ಕೋರ್ಸ್ಗಳು, ಡಾಕ್ಟೋರಲ್ ಪ್ರೋಗ್ರಾಮ್ಸ್, ನರ್ಸರಿ ಇಂದ ಉನ್ನತ ವ್ಯಾಸಂಗದ ವರೆಗೆ ಎಲ್ಲಾ ರೀತಿಯ ಶೈಕ್ಷಣಿಕ ಸಾಲವನ್ನು ಪೋಷಕರು ಮಕ್ಕಳ ಪರವಾಗಿ ಕೂಡ ಪಡೆಯಬಹುದು.

Advertisment

ಇದನ್ನೂ ಓದಿ: NTPC ಅಲ್ಲಿ ಹಲವು ಉದ್ಯೋಗ ಅವಕಾಶಗಳು.. ಇಂದಿನಿಂದಲೇ ಅರ್ಜಿ ಆರಂಭ

publive-image

ಬರೋಬ್ಬರಿ 1 ಕೋಟಿವರೆಗೂ ಎಜುಕೇಷನ್​ ಲೋನ್​ ಸಿಗುತ್ತೆ. ಜೊತೆಗೆ ಸಾಲವನ್ನು ಮರು ಪಾವತಿ ಮಾಡಲು ನೀಡುವ ಅವಧಿ ಕೂಡ 15 ರಿಂದ 20 ವರ್ಷದ ವರೆಗೂ ನೀಡಲಾಗುತ್ತದೆ. ಹೀಗೆ ಪಡೆದ ಸಾಲದ ಮೊತ್ತವನ್ನು ಕೆಳಗಿನ ಖರ್ಚುಗಳಿಗೆ ಬಳಸಿಕೊಳ್ಳಬಹುದು. ಬೇರೆ ರೀತಿಯ ಖರ್ಚಿಗೆ ಅನುಮತಿ ಇರುವುದಿಲ್ಲ.

ಟ್ಯೂಷನ್ ಫೀಸ್, ಹಾಸ್ಟೆಲ್ ಫೀಸ್, ಊಟ , ತಿಂಡಿ, ಉಳಿದುಕೊಳ್ಳಲು ನೀಡುವ ಸೌಲಭ್ಯ ಎಲ್ಲವೂ ಸೇರಿಕೊಳ್ಳುತ್ತದೆ. ವಿದ್ಯಾರ್ಥಿ ವಿದೇಶದಲ್ಲಿ ಇದ್ದಾಗ ಅಲ್ಲಿಗೆ ಹೋಗಿ ಬರಲು ಬೇಕಾಗುವ ವಿಮಾನದ ಖರ್ಚು, ಭಾರತದ ಇತರ ಭಾಗದಲ್ಲಿದ್ದರೆ ಪ್ರಯಾಣದ ಖರ್ಚು, ಆರೋಗ್ಯ ಮತ್ತು ಜೀವ ವಿಮೆ ಖರ್ಚು, ವಿದ್ಯಾಭ್ಯಾಸಕ್ಕೆ ಬೇಕಾಗುವ ಪೆನ್ನು , ಪುಸ್ತಕ ಮತ್ತಿತರೇ ಪರಿಕರಗಳನ್ನು ಕೊಳ್ಳಲು ಬೇಕಾಗುವ ಹಣ, ಲ್ಯಾಬೊರೇಟರಿ, ಲೈಬ್ರರಿ ಖರ್ಚುಗಳು, ಕೋರ್ಸ್ ಮುಗಿಸಲು ಅವಶ್ಯಕವಾಗುವ ಲ್ಯಾಪ್ ಟ್ಯಾಪ್ , ಕಂಪ್ಯೂಟರ್, ಮೊಬೈಲ್ ಇನ್ನಿತರೇ ಪರಿಕರಗಳು, ಶಾಲೆ ಅಥವಾ ಕಾಲೇಜಿನಲ್ಲಿ ಕೇಳುವ ಯಾವುದೇ ರೀತಿಯ ವಾಪಸ್ಸು ನೀಡುವ ಸೆಕ್ಯುರಿಟಿ ಡೆಪಾಸಿಟ್ ಮೊತ್ತ, ಪ್ರವೇಶ ಪಡೆದ ಕೋರ್ಸ್ ಮುಗಿಸಲು ಬೇಕಾಗುವ ಇನ್ನ್ಯಾವುದೇ ರೀತಿಯ ಪರಿಕರ ಅಥವಾ ಖರ್ಚು ಕೂಡ ಈ ಹಣದಲ್ಲಿ ಮಾಡಬಹುದು.

ಇದನ್ನೂ ಓದಿ: ISRO 300ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಕೊನೆ ದಿನಾಂಕ ಯಾವುದು?

Advertisment

publive-image

ಸಾಲದ ಮೇಲೆ ಕಟ್ಟುವ ಬಡ್ಡಿಯನ್ನು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವಾಗ ಸೆಕ್ಷನ್ 80E ಅಡಿಯಲ್ಲಿ 8 ವರ್ಷಗಳ ಕಾಲ ವಿನಾಯತಿ ಕೂಡ ಪಡೆಯಬಹುದು. ಆದರೆ ಈ ಸೌಲಭ್ಯ ಉನ್ನತ ವ್ಯಾಸಂಗಕ್ಕೆ ಎಂದು ಸಾಲ ಮಾಡಿದವರಿಗೆ ಮಾತ್ರ ಸಿಗುತ್ತದೆ. ಕೆಲವೊಂದು ಬ್ಯಾಂಕುಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಶೇಷ ರಿಯಾಯತಿ ಕೂಡ ಲಭ್ಯವಿದೆ. ಆದರೆ ಬಡ್ಡಿ ದರದಲ್ಲಿ ಒಂದಂಶ ಕಡಿಮೆ ಮಾಡುವುದು ಇತ್ಯಾದಿ.

ಸಾಲಕ್ಕೆ ಏನೆಲ್ಲಾ ಡಾಕ್ಯುಮೆಂಟ್ಸ್ ಬೇಕು..?

ಶಾಲೆ /ಕಾಲೇಜಿನಲ್ಲಿ ಪ್ರವೇಶಾತಿ ನೀಡಿರುವ ಪತ್ರ, ಕಳೆದ ಶೈಕ್ಷಣಿಕ ವರ್ಷದ ಮಾರ್ಕ್ಸ್ ಕಾರ್ಡ್, ವಯಸ್ಸು , ಅಡ್ರೆಸ್ ಮತ್ತು ಗುರುತನ್ನು ಸಾಬೀತು ಪಡಿಸುವ ಪತ್ರಗಳು, ಸಿಗ್ನೇಚರ್ ಪ್ರೂಫ್, ಕೆಲಸ ಮಾಡಿ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೊರಟಿದ್ದರೆ -ಸ್ಯಾಲರಿ ಸ್ಲಿಪ್, ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್​ಮೆಂಟ್, ಇನ್ಕಮ್ ಟ್ಯಾಕ್ಸ್ ರಿಟರ್ನ್, ಲೋನ್ ಅಪ್ಲಿಕೇಶನ್ ಫಾರಂ, ಫೋಟೋ, ವೀಸಾ ಮಂಜೂರಾತಿ ಶೀಟ್ ನೀಡಬೇಕಾಗುತ್ತದೆ.

ಇದನ್ನೂ ಓದಿ: NEET-PG 2025 ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್‌.. ಸುಪ್ರೀಂಕೋರ್ಟ್‌ನಿಂದ ಮಹತ್ವದ ಆದೇಶ

Advertisment

ಎಜುಕೇಷನ್​ ಲೋನ್​​​ ಬಗ್ಗೆ ಸಹಜವಾಗೇ ಒಂದಷ್ಟು ಪ್ರಶ್ನೆ ಮನಸ್ಸಿನಲ್ಲಿ ಎದ್ದಿರುತ್ತದೆ. ಈ ಸಾಲ ಸುಲಭವಾಗಿ ಸಿಗುತ್ತದೆಯೇ? ಈ ಸಾಲವನ್ನು ಮಾಡಬಹುದೆ? ಎಜುಕೇಶನ್ ಲೋನ್ ಒಂದು ವರದಾನ. ನಿಜಕ್ಕೂ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಹಂಬಲವಿರುವ ಬಡ ವಿದ್ಯಾರ್ಥಿಗಳಿಗೆ ಇದು ಆಶಾಕಿರಣ. ಈ ರೀತಿಯ ಸಾಲವನ್ನು ಭಾರತದಲ್ಲಿ ಓದಲು ಅಥವಾ ವಿದೇಶದಲ್ಲಿ ಓದಲು ಕೂಡ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಈ ಸಾಲವನ್ನು ಹೆಚ್ಚಿನ ಕಿರಿಕಿರಿ ಇಲ್ಲದೆ ನೀಡಲಾಗುತ್ತದೆ. ಸಾಲವನ್ನು ವಿದ್ಯಾರ್ಥಿ ಪಡೆಯಬಹುದು. ಕೆಲವೊಮ್ಮೆ ವಿದ್ಯಾರ್ಥಿಯ ಪರವಾಗಿ ಪೋಷಕರು ಪಡೆಯಬಹುದು. ಅಥವಾ ವಿದ್ಯಾರ್ಥಿಗೆ ಬೇರೆ ಯಾರಾದರೂ ಗ್ಯಾರಂಟಿ ಕೂಡ ಹಾಕಬಹುದು. ಕೆಲವು ಬಾರಿ ಹಣದ ಮೊತ್ತ ಬಹಳವಿದ್ದಾಗ ಪೋಷಕರ ಬಳಿ ಕೋಲಾಟರಲ್ ಆಗಿ ಯಾವುದಾದರೂ ಆಸ್ತಿ ಕೇಳುವ ಸಾಧ್ಯತೆಯಿದೆ.

ಬಹುಪಾಲು ವಿದ್ಯಾರ್ಥಿಯ ಅಕ್ಯಾಡೆಮಿಕ್ಸ್ ಮತ್ತು ಮುಂದಿನ ವಿದ್ಯಾಭ್ಯಾಸಕ್ಕೆ ದಾಖಲಾದ ಪ್ರವೇಶ ಪತ್ರದ ಜೊತೆಗೆ ಪೋಷಕರ ಗ್ಯಾರಂಟಿ ಸಾಕಾಗುತ್ತದೆ. ಮುಕ್ಕಾಲು ಪಾಲು ಬ್ಯಾಂಕುಗಳು ವಿದ್ಯಾರ್ಥಿಗಳಿಗೆ , ಶಿಕ್ಷಣಕ್ಕೆ ನೀಡುವ ಸಾಲವಾಗಿರುವ ಕಾರಣ ಹೆಚ್ಚು ಕಿರಿಕಿರಿ ಇರುವುದಿಲ್ಲ. ಅವಶ್ಯಕತೆ ಇದ್ದು , ಉನ್ನತ ವಿದ್ಯಾಭ್ಯಾಸ ಮಾಡುವ ಹಂಬಲ ಇರುವವರು ಖಂಡಿತ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಭವಿಷ್ಯದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸಾಲದ ಮರುಪಾವತಿ ಕೂಡ ಶಿಸ್ತಾಗಿ ಮಾಡಬೇಕು.

ಇದನ್ನೂ ಓದಿ: ಮೊಮ್ಮಗನಿಗೆ ವಿಶ್ ಮಾಡಿದ ರಜನಿಕಾಂತ್​.. ಡಿವೋರ್ಸ್​ ಪಡೆದರೂ ಮಗನಿಗಾಗಿ ಒಂದಾದ ಧನುಷ್​, ಐಶ್ವರ್ಯ!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment