Advertisment

FASTag! ಟೋಲಲ್ಲಿ ದುಪ್ಪಟ್ಟು ದಂಡ.. ಫಾಸ್ಟ್​​ಟ್ಯಾಗ್​ನ 5 ಹೊಸ ನಿಯಮಗಳು ಏನೇನು..?

author-image
Ganesh
Updated On
FASTag! ಟೋಲಲ್ಲಿ ದುಪ್ಪಟ್ಟು ದಂಡ.. ಫಾಸ್ಟ್​​ಟ್ಯಾಗ್​ನ 5 ಹೊಸ ನಿಯಮಗಳು ಏನೇನು..?
Advertisment
  • ಇಂದಿನಿಂದ ಬದಲಾಗಲಿದೆ ಫಾಸ್ಟ್​ಟ್ಯಾಗ್​ ನಿಯಮ
  • ಪ್ರಯಾಣಿಕರಿಗೆ ಹೊಸ ನಿಯಮ ಹೇಳೋದು ಏನು?
  • ದುಪ್ಪಟ್ಟು ದಂಡದಿಂದ ಪಾರಾಗಲು ನೀವು ಏನು ಮಾಡಬೇಕು?

ಇಂದಿನಿಂದ ನ್ಯಾಷನಲ್ ಪೇಮೆಂಟ್​ ಕಾರ್ಪೋರೇಷನ್ ಆಫ್ ಇಂಡಿಯಾ ಫಾಸ್ಟ್​ಟ್ಯಾಗ್​ ಬ್ಯಾಲೆನ್ಸ್ ವಿಚಾರದಲ್ಲಿ ಹಲವು ನಿಯಮಗಳನ್ನು ಬದಲಾಯಿಸಿದೆ. ಫಾಸ್ಟ್​​ಟ್ಯಾಗ್ ಟ್ರಾಂಜಕ್ಷನ್​​ನಲ್ಲಿ ಯಾವುದೇ ರೀತಿಯ ಮೋಸದ ಚಟುವಟಿಕೆಗಳು ಆಗದಂತೆ ತಡೆಯಲು ಬಲಾವಣೆಗಳನ್ನು ಮಾಡಲಾಗಿದೆ.

Advertisment

ಇನ್ಮುಂದೆ ನಿಮ್ಮ ಫಾಸ್ಟ್​ಟ್ಯಾಗ್ ಖಾತೆಯಲ್ಲಿ ಹಣ ಇಲ್ಲದೇ ಹೋದಲ್ಲಿ, ಫಾಸ್ಟ್​ಟ್ಯಾಗ್ ಖಾತೆ ಕಪ್ಪು ಪಟ್ಟಿಗೆ ಸೇರಿದ್ದರೆ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ದುಪ್ಪಟ್ಟು ಹಣ ಪಾವತಿ ಮಾಡಬೇಕಾಗುತ್ತದೆ. ಅದಕ್ಕಾಗಿ ಇಂದಿನಿಂದ ಹೊಸ ನಿಯಮ ಜಾರಿಗೆ ಬಂದಿದೆ.

ಏನ್ ಹೇಳ್ತಿವೆ ಹೊಸ ರೂಲ್ಸ್..?

  1.  ಫಾಸ್ಟ್​ಟ್ಯಾಗ್​ನಲ್ಲಿ ಹಣ ಇರಬೇಕು, ಇಲ್ಲದಿದ್ದರೆ ಟೋಲ್ ಪ್ರವೇಶಕ್ಕೆ ಒಂದು ಗಂಟೆ ಮೊದಲು ಹಣ ಜಮೆ ಮಾಡಿರಬೇಕು. ಟೋಲ್ ಹತ್ತಿರ ಬಂದ್ಮೇಲೆ ರಿಚಾರ್ಜ್ ಮಾಡಿಸೋಣ ಅಂದ್ರೆ ಇನ್ಮೇಲೆ ಆಗಲ್ಲ.
  2.  ಟೋಲ್ ದಾಟುವ 60 ನಿಮಿಷ ಮೊದಲು ಹಾಗೂ ದಾಟಿದ 10 ನಿಮಿಷಗಳ ಕಾಲ ಫಾಸ್ಟ್​ಟ್ಯಾಗ್ ಆಕ್ಟೀವ್ ಇರಬೇಕು. ಒಂದು ವೇಳೆ ಈ ನಿಯಮ ಪಾಲನೆ ಮಾಡದಿದ್ದರೆ, ಟೋಲ್ ಸಿಸ್ಟಮ್​​ನಲ್ಲಿ ಎರರ್ ಕೋಡ್ 176 ಎಂದು ತೋರಿಸಲಾಗುತ್ತದೆ. ಈ ವೇಳೆ ಪ್ರಯಾಣಿಕರು ದುಪ್ಪಟ್ಟು ಹಣ ಪಾವತಿ ಮಾಡಬೇಕಾಗುತ್ತದೆ
  3.  ಕೆವೈಸಿ ಮಾಡಿರದ ಕಪ್ಟುಪಟ್ಟಿಗೆ ಸೇರಿಸಲಾಗುತ್ತದೆ. ಅಂತಹ ಟ್ಯಾಗ್​ನೊಂದಿಗೆ ಬರುವ ವಾಹನಕ್ಕೆ ದುಪ್ಪಟ್ಟು ಸಂಕು ವಿಧಿಸಲಾಗುತ್ತದೆ.
  4.  ಒಂದು ವೇಳೆ ವಾಹನ ಟೋಲ್ ಗೇಟ್ ದಾಟಿದ 15 ನಿಮಿಷಗಳ ನಂತರ ಫಾಸ್ಟ್​ಟ್ಯಾಗ್ ಖಾತೆಯಿಂದ ಹಣ ಕಡಿತವಾದರೆ ಅದಕ್ಕೆ ವಾಹನ ಸವಾರರು ಹೆಚ್ಚಿನ ಶುಲ್ಕವನ್ನು ವಿಧಿಸಬೇಕಾಗುತ್ತದೆ.
  5.  ಟೋಲ್​ಗೇಟ್​ನಲ್ಲಿ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್ ಆಪರೇಟರ್ ಅನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ. ತಪ್ಪು ಶುಲ್ಕ ಮತ್ತು ಹೆಚ್ಚುವರಿ ಹಣ ಕಡಿತಕ್ಕೆ ಸಂಬಂಧಿಸಿ ಬಳಕೆದಾರರು 15 ದಿನಗಳ ಬಳಿಕವಷ್ಟೇ ದೂರು ಸಲ್ಲಿಸಬಹುದು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಆಘಾತ.. ಶಾಂತವಾಗಿರಿ ಆತಂಕ ಬೇಡ ಎಂದು ಪ್ರಧಾನಿ ಮೋದಿ

Advertisment

publive-image

ಮಿಸ್​ ಮಾಡಬೇಡಿ..!

  • ಫಾಸ್ಟ್​​ಟ್ಯಾಗ್​ನ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ಚೆಕ್​ ಮಾಡಿಕೊಳ್ಳುತ್ತಿರಿ
  •  ಬ್ಲ್ಯಾಕ್​ಲಿಸ್ಟ್​​ಗೆ ಸೇರುವ ಮುನ್ನವೇ ಅಗತ್ಯವಾದ ಬ್ಯಾಲೆನ್ಸ್ ಇರಲಿ.
  •  ಆಗಾಗ ಕೆವೈಸಿ ಅಪ್​ಡೇಟ್​ ಮಾಡುವುದನ್ನು ಮರೆಯಬೇಡಿ
  •  ಅಪ್​ಡೇಟ್ ಮಾಡೋದ್ರಿಂದ ಫಾಸ್ಟ್​ಟ್ಯಾಗ್​​ ಬ್ಲ್ಯಾಕ್​ಲಿಸ್ಟ್​ಗೆ ಸೇರಲ್ಲ
  •  ದೀರ್ಘಪ್ರಯಾಣದ ವೇಳೆ ಫಾಸ್ಟ್​ಟ್ಯಾಗ್​ ಹಣದ ಬಗ್ಗೆ ಜಾಗೃತೆ ಇರಲಿ

ಇದನ್ನೂ ಓದಿ: ಹೊಸ ಅವತಾರದಲ್ಲಿ ರಾಮಾಚಾರಿ ಮಡದಿ; ಚಾರು ಖದರ್​ಗೆ ವೀಕ್ಷಕರು ಕ್ಲೀನ್​ ಬೋಲ್ಡ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment