/newsfirstlive-kannada/media/post_attachments/wp-content/uploads/2024/08/goat-plague.jpg)
ಅಥೆನ್ಸ್: ಕೋವಿಡ್ ಎಂಬ ಮಹಾಮಾರಿ ಹೆಚ್ಚು ಕಡಿಮೆ ಎರಡು ವರ್ಷ ಇಡೀ ವಿಶ್ವವನ್ನೇ ತಲ್ಲಣಿಸಿ, ದೈನಂದಿನ ಚಟುವಟಿಕೆಗಳನ್ನೇ ವಿಶ್ವಾದ್ಯಂತ ಬಂದ್ ಮಾಡಿಸಿ ಭೀಕರ ಮೌನವೊಂದನ್ನು ಜಾಗತಿಕವಾಗಿ ಹುಟ್ಟು ಹಾಕಿತ್ತು. ಮನುಷ್ಯರಿಂದ ಮನುಷ್ಯರಿಗೆ ಹರಡುವ ಈ ರೋಗವು ಮೂಲತಃ ಹುಟ್ಟಿದ್ದು ಚೀನಾದಲ್ಲಿ, ಅದರಲ್ಲೂ ಬಾವುಲಿಗಳಲ್ಲಿದ್ದ ಈ ಕೋವಿಡ್ ವೈರಸ್ ಮನುಷ್ಯನಿಗೆ ತಗುಲಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ಈಗ ಅಂತಹುದೇ ಒಂದು ರೋಗ ಸದ್ಯ ಗ್ರೀಸ್ ದೇಶವನ್ನು ಕಾಡುತ್ತಿದೆ. ಮುಂದೆ ಇದು ಯುರೋಪ್ ದೇಶಗಳಿಗೂ ವ್ಯಾಪಿಸುವ ಸಾಧ್ಯತೆಯಿದ್ದು, ಗ್ರೀಸ್ ಇದನ್ನು ತಡೆಯಲು ಬೇಕಾದ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ. ಗ್ರೀಸ್ನ್ನು ಕಾಡುತ್ತಿರುವ ಆ ಹೊಸ ರೋಗವೇ ಪ್ಲೇಗ್. ಆದ್ರೆ ಇದು ಶತಮಾನಗಳ ಹಿಂದೆ ಇಲಿಗಳಿಂದ ಹರಡುತ್ತಿದ್ದ ಪ್ಲೇಗ್ ಅಲ್ಲ, ಕುರಿಗಳಿಂದ ಹರಡುತ್ತಿರುವ ಪ್ಲೇಗ್.
ಇದನ್ನೂ ಓದಿ:ಈ ಇಸವಿಯಲ್ಲಿ ಹುಟ್ಟಿದವರಿಗೆ ಹೆಚ್ಚು ಕ್ಯಾನ್ಸರ್ ಅಟ್ಯಾಕ್.. ಸಂಶೋಧನೆಯಲ್ಲಿ ಸ್ಫೋಟಕ ವಿಷ್ಯ ಬಹಿರಂಗ
ಗ್ರೀಸ್ನಾದ್ಯಂತ ಸಾವಿರಾರು ಕುರಿಗಾಹಿಗಳು ಈ ಕುರಿ ಪ್ಲೇಗ್ನಿಂದ ಬಸವಳಿದು ಹೋಗಿದ್ದಾರೆ. ಈ ಹೊಸ ಕಾಯಿಲೆಯಿಂದಾಗಿ ಗ್ರೀಸ್ ಚಿಂತೆಗೆ ಬಿದ್ದಿದೆ. ಇದು ಕೂಡ ಕೋವಿಡ್ ರೀತಿಯಲ್ಲಿಯೇ ಅತಿವೇಗವಾಗಿ ಪಸರಿಸುತ್ತಿದೆ. ಆದ್ರೆ ಈ ಒಂದು ವೈರಸ್ನಿಂದಾಗಿ ಮನುಷ್ಯರಿಗೆ ಅಷ್ಟೊಂದು ಸಮಸ್ಯೆಯಿಲ್ಲ. ಆದ್ರೆ ಈ ಸೋಂಕು ತಾಗಿದವರಲ್ಲಿ 80 ರಿಂದ 90 ರಷ್ಟು ಜನರು ಅಸುನೀಗಿದ್ದಾರೆ.
ಅದು ಅಲ್ಲದೇ ಕುರಿ ಹಾಗೂ ಮೇಕೆಗಳ ಮಾರಣಹೋಮವಾಗುತ್ತಿದೆ ಹೀಗಾಗಿಯೇ ಗ್ರೀಸ್ ಸರ್ಕಾರ ಕುರಿಗಳ ಓಡಾಟವನ್ನು ದೇಶಾದ್ಯಂತ ಬ್ಯಾನ್ ಮಾಡಿದೆ. ಹುಲ್ಲುಗಾವಲು ಪ್ರದೇಶಗಳಲ್ಲಿ ಕುರಿಗಳನ್ನು ಮೇಯಿಸುವುದು, ಕಟುಕರಿಂದ ಕುರಿ ಮಾಂಸ ಮಾರಾಟ ಸೇರಿದಂತೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕುರಿಗಳ ಸಾಗಣೆ, ಮಾರಾಟ ಹಾಗೂ ಖರೀದಿಯಂತಹ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಿದೆ.
ಇದನ್ನೂ ಓದಿ:ಡೆಂಗ್ಯೂ ಬಂದ ಮಗುವಿಗೆ ಮತ್ತೆ ಡೆಂಗ್ಯೂ ಬರಬಹುದು! ಆ್ಯಂಟಿಬಯೋಟಿಕ್ಸ್ ಕೊಡೋದು ಉತ್ತಮವೇ?
ಈ ಒಂದು ಭೀಕರ ವೈರಸ್ ಸದ್ಯ ಬೇರೆಡೆ ಪಸರಿಸದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಗ್ರೀಸ್ ಮುಂದಿದೆ. ಈ ಬಗೆಯ ಒಂದು ವೈರಸ್ 1942 ಪಶ್ಚಿಮ ಆಫ್ರಿಕಾದಲ್ಲಿ ಮೊದಲು ಕಂಡು ಬಂದಿತ್ತು. ನಂತರ ಆಫ್ರಿಕಾದ ಬಹುತೇಕ ಎಲ್ಲಾ ದೇಶಗಳೂ ಸೇರಿದಂತೆ ಮಧ್ಯಪ್ರಾಚ್ಯ, ಯುರೋಪ್ ಹಾಗೂ ಏಷಿಯಾ ಖಂಡಕ್ಕೂ ಪಸರಿಸಿತ್ತು.
ಸದ್ಯ ಗ್ರೀಸ್ನಲ್ಲಿ ಜುಲೈ 11 ರಂದು ಮೊದಲ ಕುರಿ ಪ್ಲೇಗ್ ಪ್ರಕರಣ ಕಂಡು ಬಂದಿದೆ. ಗ್ರೀಸ್ನ ಥೆಸ್ಲೀಯ್ ಮೊದಲ ಪ್ರಕರಣ ಕಂಡು ಬಂದ ಮೇಲೆ ಲಾರಿಸ್ಸಾ ಕೋರಿನ್ತ್ ಪ್ರದೇಶಗಳಿಗೂ ಈ ವೈರಸ್ ಹಬ್ಬಿಕೊಂಡು ಹೊಸ ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕುರಿಗಳ ಓಡಾಟ ಸೇರಿದಂತೆ ಹಲವು ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಮೂಲಕ ಈ ಮಹಾಮಾರಿ ಬೇರೆ ಪ್ರದೇಶಗಳಿಗೆ ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ