Advertisment

ನಿಮ್ಮ ಕೂದಲು ಉದುರುತ್ತಿದೆಯೇ.. ತಲೆ ಬೋಳಾಗಲು ಕಾರಣ ಏನು ಬಲ್ಲೀರಾ..!

author-image
Ganesh
Updated On
ನಿಮ್ಮ ಕೂದಲು ಉದುರುತ್ತಿದೆಯೇ.. ತಲೆ ಬೋಳಾಗಲು ಕಾರಣ ಏನು ಬಲ್ಲೀರಾ..!
Advertisment
  • ಕೂದಲು ಉದುರುವಿಕೆಗೆ ಇದೆ ಆರೋಗ್ಯ ಸಮಸ್ಯೆ
  • ಹೆಚ್ಚು ತಲೆ ಕೆಡಿಸಿಕೊಂಡ್ರೆ ಆಗಲ್ಲ, ಕಾರಣ ತಿಳಿದುಕೊಳ್ಳಿ
  • ಶಾಂಪೂ, ಔಷಧಿ ಬಳಸಿದ್ರೆ ಕೂದಲು ಏನಾಗುತ್ತದೆ..?

ತಲೆ ಕೂದಲು ಉದುರುವಿಕೆ.. ಈ ಸಮಸ್ಯೆ ಬಹುತೇಕ ಮಂದಿಯನ್ನ ಬಿಟ್ಟೂ ಬೀಡದೆ ಕಾಡುತ್ತೆ. ನನ್ನ ಕೂದಲು ಯಾಕೆ ಉದುರಿತ್ತಿದೆ? ಅದಕ್ಕೆ ಪರಿಹಾರ ಏನು ಅಂತಾ ಅನೇಕರು ತಲೆ ಕಡೆಸಿಕೊಳ್ತಾರೆ.

Advertisment

ಅದಕ್ಕೆ ಕಾರಣ ಕಾಸ್ಮೆಟಿಕ್ ಸಮಸ್ಯೆ ಒಂದೇ ಆಗಿರಲ್ಲ. ನಿಮ್ಮ ಆರೋಗ್ಯ ಸಮಸ್ಯೆ ಕೂಡ ಕಾರಣವಾಗಿರುತ್ತೆ ಅನ್ನೋದು ತಜ್ಞರ ವಾದ. ಪೌಷ್ಟಿಕಾಂಶದ ಕೊರತೆ, ಹಾರ್ಮೋನ್ ಸಮಸ್ಯೆಗಳು, ಮಾನಸಿಕ ತೊಂದರೆಗಳು, ನಿದ್ರೆಯ ಕೊರತೆ, ವಂಶಪಾರಂಪರ್ಯ ಸಮಸ್ಯೆಗಳು ಮತ್ತು ಇತರೆ ರೋಗಗಳಿಂದಲೂ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

ಹಾರ್ಮೊನ್​​ನಲ್ಲಿ ವ್ಯತ್ಯಾಸ

ನೈಸರ್ಗಿಕವಾಗಿ ಕೂದಲು ಉದುರುವುದು ಸಹಜ. ಅನೇಕ ಬಾರಿ ಕಾರಣಗಳಿಲ್ಲದೇ ಕೂದಲು ಉದುರಲು ಶುರುವಾದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಆದಾಗ ಕೂಡ ಕೂದಲು ಉದುರುತ್ತದೆ. ಮಹಿಳೆಯರಲ್ಲಿ, ಹಾರ್ಮೋನ್‌ಗಳ ಹೆಚ್ಚಳದಿಂದಾಗಿ ಕೂದಲು ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಗರ್ಭಧಾರಣೆ ನಂತರ ಕೂದಲು ಬೀಳುತ್ತದೆ.

ಇದನ್ನೂ ಓದಿ: ನೆಚ್ಚಿನ ಶ್ವಾನ ಟೊರೊವನ್ನು ಕಳೆದುಕೊಂಡ ದುಃಖದಲ್ಲಿ ಸಲ್ಮಾನ್ ಖಾನ್​; ನೀನು ಎಂದಿಗೂ ನಮ್ಮೊಂದಿಗಿರುವೆ ಎಂದ ಲುಲಿಯಾ ವೆಂಚೂರ್

Advertisment

publive-image

ಕಬ್ಬಿಣಾಂಶ ಕಮ್ಮಿ

ದೇಹದಲ್ಲಿ ಕಬ್ಬಿಣ ಅಂಶದ ಕೊರತೆಯಿಂದ ಮಹಿಳೆಯರಲ್ಲಿ ಕೂದಲು ಉದುರುತ್ತದೆ. ತಲೆ ಮೇಲಿನ ಕೂದಲು ಉದುರುವಿಕೆಯನ್ನು ಅಲೋಪೆಸಿಯಾ ಟೋಟಲಿಸ್ (Alopecia totalis) ಎಂದು ಕರೆಯಲಾಗುತ್ತದೆ. ದೇಹದ ಎಲ್ಲಾ ಕೂದಲು ಉದುರುವಿಕೆಯನ್ನು ಅಲೋಪೆಸಿಯಾ ಯೂನಿವರ್ಸಲಿಸ್ (Alopecia Universalis) ಎಂದು ಕರೆಯಲಾಗುತ್ತದೆ.

ಕೆಲವೊಮ್ಮೆ ಕಾರಣವಿಲ್ಲದೆ ತಲೆಯ ಒಂದು ಭಾಗದಲ್ಲಿ ಉದುರುತ್ತದೆ. ನಿರಂತರವಾಗಿ ಉದುರಿದ ನಂತರ ಆ ಭಾಗ ಬೋಳಾಗಿ ಕಾಣುತ್ತದೆ. ಕ್ರಮೇಣವಾಗಿ ಇದು ತಲೆಯ ಇತರ ಭಾಗಗಳಲ್ಲೂ ಸಂಭವಿಸುತ್ತದೆ. ಇದನ್ನು ಅಲೋಪೆಸಿಯಾ ಏರಿಯಾಟಾ (Alopecia areata) ಎಂದು ಕರೆಯಲಾಗುತ್ತದೆ. ಇದು ಗಡ್ಡ, ಮೀಸೆ ಮತ್ತು ಹುಬ್ಬುಗಳಲ್ಲಿಯೂ ಸಂಭವಿಸಬಹುದು.

ಇದನ್ನೂ ಓದಿ: ದಿನಕ್ಕೆ ಎರಡೇ ಎರಡು ಖರ್ಜೂರ.. ಚಳಿಗಾಲದಲ್ಲಿ ಈ ಹಣ್ಣು ತಿನ್ನೋದ್ರಿಂದ ಏನಾಗುತ್ತದೆ ಗೊತ್ತಾ..?

publive-image

ದೀರ್ಘಕಾಲದ ಜ್ವರಗಳಾದ ಟೈಫಾಯಿಡ್, ಪ್ರೋಟೀನ್, ಕಬ್ಬಿಣದ ಕೊರತೆ ಮತ್ತು ವಿಟಮಿನ್ ಎ ಅತಿಯಾದ ಬಳಕೆಯಿಂದಲೂ ಕೂದಲು ಉದುರುತ್ತದೆ. ಕೂದಲು ಉದುರುವ ಸಮಸ್ಯೆ ದೀರ್ಘಕಾಲದ ಕಾಯಿಲೆ. ಕ್ಯಾನ್ಸರ್​ ಸಂದರ್ಭದಲ್ಲೂ ಕೂದಲು ಉದುರುತ್ತದೆ. ಜೊತೆಗೆ ವಿವಿಧ ರೀತಿಯ ಔಷಧಿಗಳೂ ಕೂಡ ಕೂದಲು ಉದುರುವಿಕೆ ಮೇಲೆ ಪರಿಣಾಮ ಬೀರುತ್ತವೆ.

Advertisment

ಕೂದಲನ್ನು ಬಿಗಿಯಾಗಿ ಕಟ್ಟುವುದು ಮತ್ತು ಹೆಚ್ಚು ಶಾಂಪೂ ಬಳಸುವುದರಿಂದಲೂ ಕೂದಲು ಉದುರುತ್ತದೆ. ಗಟ್ಟಿಯಾದ ಬಾಚಣಿಗೆ ಕೂದಲು ದುರುವಿಕೆಗೆ ಕಾರಣವಾಗುತ್ತದೆ. ಬಾಚಣಿಗೆಯ ಹಲ್ಲುಗಳು ಮೃದುವಾಗಿರಬೇಕು. ಟೆಸ್ಟೋಸ್ಟೆರಾನ್ ಹಾರ್ಮೋನ್ (Testosterone Hormone) ನಿಂದಾಗಿ ಋತುಚಕ್ರಕ್ಕೆ ಒಳಗಾದ ಮಹಿಳೆಯರಲ್ಲಿ ಕೂದಲು ಉದುರುತ್ತದೆ.

ಇದನ್ನೂ ಓದಿ:ರಾತ್ರಿ ನಿದ್ರೆ ಬರ್ತಿಲ್ವಾ? ನೀವು ಚೆನ್ನಾಗಿ ನಿದ್ದೆ ಮಾಡಲು ಏನು ಮಾಡಬೇಕು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment