/newsfirstlive-kannada/media/post_attachments/wp-content/uploads/2025/03/SUNITA-7.jpg)
ಅಮೆರಿಕಾದ ಗಗನಯಾತ್ರಿಗಳಾದ ಸುನೀತಾ ವಿಲಯಮ್ಸ್ ಹಾಗೂ ಬಚ್ ವಿಲ್ಮೋರ್ 2024, ಜೂನ್ 5 ರಂದೇ ಬಾಹ್ಯಾಕಾಶಕ್ಕೆ ಗಗನಯಾನ ಮಾಡಿದ್ದರು, ಜೂನ್ 6ಕ್ಕೆ ಬಾಹ್ಯಾಕಾಶವನ್ನು ತಲುಪಿತ್ತು ಅಮೆರಿಕಾದ ಸ್ಟಾರ್ಲೈನರ್ ಸಿಎಸ್ಟಿ-100 ಗಗನನೌಕೆ.ನಾಸಾದವರು ಅಂದುಕೊಂಡಂತೆ ಎಲ್ಲವೂ ಆಗಿದ್ದರೆ 2024 ಜೂನ್ 14 ರಂದೆ ಸುನೀತಾ ಹಾಗೂ ವಿಲಿಯಮ್ಸ್ ಭೂಮಿಗೆ ವಾಪಸ್ ಆಗಬೇಕಿತ್ತು. ಹಲವು ತಾಂತ್ರಿಕ ತೊಂದರೆಗಳು ಹಾಗೂ ಹೀಲಿಯಂ ಲೀಕ್ ಆಗಿದ್ದರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಬಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಉಳಿಯುವಂತಾಯಿತು. 8 ದಿನಗಳಿಗಾಗಿ ಸೀಮಿತವಾಗಿದ್ದ ಈ ಗಗನಯಾನ 9 ತಿಂಗಳುಗಳ ಕಾಲ ಸರಿಯುವಂತೆ ಮಾಡಿತ್ತು.
ಏನಿದು ಹೀಲಿಯಂ ಲೀಕ್ ಸಮಸ್ಯೆ?
ಗಗನಯಾನ ಮಾಡುವಾಗ ಸರ್ವಿಸ್ ಮಾಡ್ಯೂಲ್, ಕ್ಯೂ ಮಾಡ್ಯೂಲ್ನಲ್ಲಿ ಕುಳಿತುಕೊಂಡು ಹೊರಡುತ್ತಾರೆ ಗಗನಯಾನಿಗಳು.ಆದ್ರೆ ಭೂಮಿಗೆ ವಾಪಸ್ ಆಗುವಾಗ ಸ್ಪೇಸ್ ಶಟಲ್ನಲ್ಲಿ ಕುಳಿತುಕೊಂಡು ಬರಬೇಕಾಗುತ್ತದೆ. ಇದು ನಾಸಾ ಮಾಡಿಕೊಂಡಿದ್ದ ಪ್ಲ್ಯಾನ್, ಬಟ್ ಹೀಲಿಯಂ ಲೀಕ್ ಆಗಿ ಡಿಡೆಕ್ಷನ್ ಆಗಿದ್ರಿಂದ ಸುನೀತಾ ಮತ್ತು ಬಚ್ ವಾಪಸ್ ಆಗಲು ಸಮಸ್ಯೆಯಾಯ್ತು. 408 ಕಿಲೋ ಮೀಟರ್ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗುರುತ್ವಾಕರ್ಷಣೆಯ ಬಲ ಸೊನ್ನೆಯಿರುತ್ತದೆ.
ಹೀಗಾಗಿಯೇ ಇಲ್ಲಿ ಹೀಲಿಯಂ ಸಹಾಯದಿಂದ ಹೈಡ್ರೋಜನ್ ಮತ್ತು ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ. ನೌಕೆಯಲ್ಲಿರುವ ಇಂಧನ ಹೊರ ಬರಬೇಕಾದ್ರೆ ಪ್ರೆಶರ್ ರೈಸ್ ಮಾಡಬೇಕು. ಪ್ರೆಶರ್ ರೈಸ್ ಮಾಡೋಕೆ ಹೀಲಿಯಂ ಉಪಯೋಗ ಮಾಡಲಾಗುತ್ತದೆ.ಹೀಲಿಯಂ ಮೂಲಕ ಪ್ರೆಶರ್ರೈಸ್ ಆದಮೇಲೆ ಹೈಡ್ರೋಜನ್, ಆಕ್ಸಿಜನ್ ಹೊರಬರುತ್ತದೆ.
ಆದ್ರೆ ಹೀಲಿಯಂ ಲೀಕ್ ಆದ ಕಾರಣದಿಂದಾಗಿ ಹೈಡ್ರೋಜನ್ ಹಾಗೂ ಆಕ್ಸಿಜನ್ನ ಸಮಸ್ಯೆಯಾಗಿತ್ತು. ಸಾಮಾನ್ಯವಾಗಿ ಹೀಲಿಯಂ ಲೀಕ್ ಆಗೋದು ದೊಡ್ಡ ಸಮಸ್ಯೆಯಾಗಲ್ಲ. ಆದ್ರೆ ಸುನೀತಾ ವಿಲಿಯಮ್ಸ್ ಇದ್ದ ಗಗನನೌಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೀಲಿಯಂ ಲೀಕ್ ಆದ ಕಾರಣದಿಂದ ಸಮಸ್ಯೆ ಉಂಟಾಗಿತ್ತು. ಇದೇ ಕಾರಣಕ್ಕೆ ಅಂದುಕೊಂಡ ಸಮಯದಲ್ಲಿ ವಾಪಸ್ ಆಗದೇ ಸುನೀತಾ ಹಾಗೂ ವಿಲ್ಮೋರ್ ಐಎಸ್ಎಸ್ನಲ್ಲಿಯೇ ಉಳಿಯಬೇಕಾಯ್ತು.
ಇದನ್ನೂ ಓದಿ:Sunita williams ಎಷ್ಟು ಗಂಟೆಗೆ ಭೂಮಿಗೆ ಬಂದಿಳಿಯುತ್ತಾರೆ? ನೇರ ಪ್ರಸಾರ ವೀಕ್ಷಣೆ ಹೇಗೆ..?
ಸದ್ಯ ಈಗ ಅವರ ಬಾಹ್ಯಾಕಾಶದ ವನವಾಸ ಮುಕ್ತಾಯದ ಹಂತಕ್ಕೆ ಬಂದಿದೆ. ಅಮೆರಿಕಾದ ಕಾಲಮಾನದ ಪ್ರಕಾರ ಇಂದು ಹಾಗೂ ಭಾರತದ ಕಾಲಮಾನದ ಪ್ರಕಾರ ನಾಳೆ ಸುನೀತಾ ಹಾಗೂ ವಿಲ್ಮೋರ್ ಭೂಮಿಗೆ ವಾಪಸ್ ಬರಲಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ