ವಕ್ಫ್ ಹಳೆ ಕಾನೂನು ಮತ್ತು ಹೊಸ ತಿದ್ದುಪಡಿಯಲ್ಲೆನಿದೆ? ವಿಪಕ್ಷ, ಮುಸ್ಲಿಂ ಸಂಘಟನೆಗಳು ವಿರೋಧ ಯಾಕೆ?

author-image
Gopal Kulkarni
Updated On
ಮಧ್ಯರಾತ್ರಿ 1 ಗಂಟೆ ಬಳಿಕ ವಕ್ಫ್​​ ತಿದ್ದುಪಡಿ ಮಸೂದೆ ಪಾಸ್; ಹೆಸರು ಕೂಡ ಬದಲಾವಣೆ..!
Advertisment
  • ಇಂದು ಲೋಕಸಭೆಯಲ್ಲಿ ವಕ್ಫ್​ ಕಾನೂನು ತಿದ್ದುಪಡಿ ಮಸೂದೆಗೆ ಅಂಗೀಕಾರ
  • ಕಾನೂನು ತಿದ್ದುಪಡಿಗೆ ಮುಂದಾಗಿದ್ದೇಕೆ ಮೋದಿ ಸರ್ಕಾರ? ಇದ್ದ ಸಮಸ್ಯೆಗಳೇನು?
  • ಹಳೆ ಕಾನೂನು ಮತ್ತು ಹೊಸ ಕಾನೂನುಗಳಲ್ಲಿರುವುದು ಏನು? ವಿರೋಧ ಯಾಕೆ?

ಇಂದು ಲೋಕಸಭೆಯಲ್ಲಿ ವಕ್ಫ್​ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರಗೊಳ್ಳಲಿದೆ. ಈಗಾಗಲೇ ಲೋಕಸಭೆಯಲ್ಲಿ ಬಿಲ್ ಪಾಸ್ ಆಗಲು ಬೇಕಾದಷ್ಟು ಬಹುಮತ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿದ್ದು, ಇಲ್ಲಿ ಬಿಲ್ ಬಾಸ್ ಆಗುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ನಾಳೆ ರಾಜ್ಯಸಭೆಯಲ್ಲಿ ಇದೇ ಮಸೂದೆಯನ್ನು ಅಂಗೀಕಾರಕ್ಕೆ ಇಡಲಾಗುತ್ತಿದ್ದು ಅಲ್ಲಿ ಬಿಜೆಪಿ ಹೇಗೆ ಈ ಮಸೂದೆ ಅಂಗೀಕಾರಕ್ಕೆ ಬೇಕಾದ ಬಹುಮತ ಹೇಗೆ ಪಡೆಯುತ್ತದೆ ಎಂಬ ಕುತೂಹಲವೊಂದು ಇದೆ.

ಇದನ್ನೂ ಓದಿ:ಇಂದು ಲೋಕಸಭೆಯಲ್ಲಿ ವಕ್ಫ್​ ಬಿಲ್ ಮಂಡನೆ.. ಮಸೂದೆ ಅಂಗೀಕಾರಕ್ಕೆ ಸಂಖ್ಯಾಬಲ ಇದೆಯಾNDA ಬಳಿ?

publive-image

ಹಾಗಿದ್ರೆ ಏನಿದು ವಕ್ಫ್​ ಕಾನೂನು ತಿದ್ದುಪಡಿ? ಹಳೆ ಕಾನೂನು ಮತ್ತು ಹೊಸ ತಿದ್ದುಪಡಿಯಲ್ಲಿ ಏನಿದೆ? ವಿಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳು ಈ ಮಸೂದೆಯನ್ನು ವಿರೋಧಿಸುತ್ತಿರುವುದೇಕೆ ಎಂಬುದನ್ನು ನೋಡುವುದಾದ್ರೆ

1. ವಕ್ಫ್ ಆಸ್ತಿಗಳ ಸರ್ವೆ ಮತ್ತು ನಿಯಂತ್ರಣ

  • ಹಿಂದಿನ ಕಾನೂನು (1995): ವಕ್ಫ್ ಆಸ್ತಿಗಳ ಸರ್ವೆಯನ್ನು ರಾಜ್ಯ ಸರ್ಕಾರವು ನೇಮಿಸಿದ ಸರ್ವೆ ಆಯುಕ್ತರು ನಡೆಸುತ್ತಿದ್ದರು. ಈ ಹಿಂದೆ ಈ ಪ್ರಕ್ರಿಯೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಕಡಿಮೆ ಇತ್ತು
  • ಹೊಸ ತಿದ್ದುಪಡಿ (2024): ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಲಾಗಿದೆ. ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ರಾಜ್ಯದ ಕಂದಾಯ ಕಾನೂನುಗಳಿಗೆ ಅನುಗುಣವಾಗಿ ಸರ್ವೆ ನಡೆಯಲಿದೆ. ಇದರಿಂದ ಸರ್ಕಾರಕ್ಕೆ ವಕ್ಫ್ ಆಸ್ತಿಗಳ ಮೇಲೆ ಹೆಚ್ಚಿನ ನಿಯಂತ್ರಣ ಸಿಗಲಿದ

2. ವಕ್ಫ್ ಘೋಷಣೆಗೆ ಷರತ್ತುಗಳು

  • ಹಿಂದಿನ ಕಾನೂನು: ವಕ್ಫ್ ಘೋಷಿಸಲು ಯಾವುದೇ ನಿರ್ದಿಷ್ಟ ಅವಧಿಯ ಷರತ್ತು ಇರಲಿಲ್ಲ. ಯಾರಾದರೂ ಮುಸ್ಲಿಂ ವ್ಯಕ್ತಿ ತಮ್ಮ ಆಸ್ತಿಯನ್ನು ವಕ್ಫ್ ಆಗಿ ಘೋಷಿಸಬಹುದಿತ್ತು
  • ಹೊಸ ತಿದ್ದುಪಡಿ: ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷಗಳ ಕಾಲ ಪಾಲಿಸಿದ ವ್ಯಕ್ತಿಯೊಬ್ಬರಿಗೆ ಮಾತ್ರ ವಕ್ಫ್ ಘೋಷಿಸುವ ಅಧಿಕಾರವನ್ನು ನೀಡಲಾಗಿದೆ. ಇದರಿಂದ ದುರುಪಯೋಗವನ್ನು ತಡೆಗಟ್ಟುವ ಉದ್ದೇಶವಿದೆ.

3. ಮಹಿಳೆಯರಿಗೆ ಆಸ್ತಿ ಹಕ್ಕು

  • ಹಿಂದಿನ ಕಾನೂನು: ಮಹಿಳೆಯರಿಗೆ ವಕ್ಫ್ ಆಸ್ತಿಯಲ್ಲಿ ಹಕ್ಕುಗಳನ್ನು ಸ್ಪಷ್ಟವಾಗಿ ಖಾತ್ರಿಪಡಿಸುವ ಯಾವುದೇ ನಿರ್ದಿಷ್ಟ ಉಲ್ಲೇಖ ಇರಲಿಲ್ಲ
  • ಹೊಸ ತಿದ್ದುಪಡಿ: ಮಹಿಳೆಯರಿಗೆ ವಕ್ಫ್ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ನಿಬಂಧನೆ ಸೇರಿಸಲಾಗಿದೆ, ಇದು ಲಿಂಗ ಸಮಾನತೆಯತ್ತ ಒಂದು ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ:ಕೇಂದ್ರ ಸರ್ಕಾರಕ್ಕೆ ಇವತ್ತು ದೊಡ್ಡ ಸವಾಲು.. ವಕ್ಫ್​ ತಿದ್ದುಪಡಿ ಮಸೂದೆ ಮಂಡನೆಗೆ ಕ್ಷಣಗಣನೆ..!

publive-image

4. ವಕ್ಫ್ ಮಂಡಳಿಯ ರಚನೆ

  • ಹಿಂದಿನ ಕಾನೂನು: ಕೇಂದ್ರ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರು ಅಥವಾ ಮುಸ್ಲಿಮೇತರ ಸದಸ್ಯರನ್ನು ಸೇರಿಸುವ ಕಡ್ಡಾಯ ನಿಯಮ ಇರಲಿಲ್ಲ
  • ಹೊಸ ತಿದ್ದುಪಡಿ: ಕೇಂದ್ರ ವಕ್ಫ್ ಮಂಡಳಿಯಲ್ಲಿ ಕನಿಷ್ಠ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮುಸ್ಲಿಮೇತರ ಸದಸ್ಯರನ್ನು ನೇಮಿಸುವುದು ಕಡ್ಡಾಯವಾಗಿದೆ
  • ಇದೇ ರೀತಿ ರಾಜ್ಯ ವಕ್ಫ್ ಮಂಡಳಿಗಳಲ್ಲಿಯೂ ಈ ಬದಲಾವಣೆಯನ್ನು ತರಲಾಗಿದೆ

5. ಲೆಕ್ಕಪರಿಶೋಧನೆ (ಆಡಿಟ್)

  • ಹಿಂದಿನ ಕಾನೂನು: ವಕ್ಫ್ ಮಂಡಳಿಗಳ ಖಾತೆಗಳ ಲೆಕ್ಕಪರಿಶೋಧನೆಯನ್ನು ಮಂಡಳಿಯೇ ನೇಮಿಸಿದ ಲೆಕ್ಕಪರಿಶೋಧಕರು ಮಾಡುತ್ತಿದ್ದರು. ರಾಜ್ಯ ಸರ್ಕಾರಕ್ಕೂ ಆಡಿಟ್ ಮಾಡುವ ಅವಕಾಶ ಇತ್ತು
  • ಹೊಸ ತಿದ್ದುಪಡಿ: ರಾಜ್ಯ ಸರ್ಕಾರವು ರಚಿಸುವ ಲೆಕ್ಕಪರಿಶೋಧಕರ ಸಮಿತಿಯೇ ಆಡಿಟ್ ನಡೆಸಬೇಕು ಎಂದು ತಿದ್ದುಪಡಿ ತರಲಾಗಿದೆ, ಇದರಿಂದ ಸರ್ಕಾರದ ಮೇಲ್ವಿಚಾರಣೆ ಹೆಚ್ಚಾಗಲಿದೆ.

6. ಆಸ್ತಿಯ ನೋಂದಣಿ ಮತ್ತು ಪಾರದರ್ಶಕತೆ

  • ಹಿಂದಿನ ಕಾನೂನು: ವಕ್ಫ್ ಆಸ್ತಿಗಳ ನೋಂದಣಿ ಮತ್ತು ವಿವರಗಳ ಸಲ್ಲಿಕೆಗೆ ಕಡ್ಡಾಯ ಸಮಯಮಿತಿ ಇರಲಿಲ್ಲ
  • ಹೊಸ ತಿದ್ದುಪಡಿ: ಎಲ್ಲ ವಕ್ಫ್ ಆಸ್ತಿಗಳನ್ನು ಕಾಯಿದೆಯಡಿ ನೋಂದಾಯಿಸುವುದು ಕಡ್ಡಾಯವಾಗಿದ್ದು, ಆರು ತಿಂಗಳೊಳಗೆ ವಿವರಗಳನ್ನು ಸಲ್ಲಿಸಬೇಕು
  • ಪ್ರತಿ ಐದು ವರ್ಷಗಳಿಗೊಮ್ಮೆ ಸರ್ವೆ ನಡೆಸುವ ನಿಯಮವೂ ಜಾರಿಗೆ ಬರಲಿದೆ.

7. ದುರ್ಬಳಕೆ ತಡೆ ಮತ್ತು ವ್ಯಾಜ್ಯ ಪರಿಶೀಲನೆ

  • ಹಿಂದಿನ ಕಾನೂನು: ಆಸ್ತಿ ದುರ್ಬಳಕೆಯನ್ನು ತಡೆಗಟ್ಟುವ ಸ್ಪಷ್ಟ ನಿಯಮಗಳು ಇರಲಿಲ್ಲ
  • ಹೊಸ ತಿದ್ದುಪಡಿ: ವಕ್ಫ್ ಆಸ್ತಿಗಳ ದುರ್ಬಳಕೆ ತಡೆಗಟ್ಟಲು ಮತ್ತು ಅವುಗಳ ಮೇಲಿನ ವ್ಯಾಜ್ಯಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಮತ್ತು ಇದರಿಂದ ಅನಧಿಕೃತ ದಾಖಲಾತಿಗಳನ್ನು ತೆಗೆದುಹಾಕುವ ಸಾಧ್ಯತೆ ಇದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment