/newsfirstlive-kannada/media/post_attachments/wp-content/uploads/2024/08/Siddaramaiah-2-1.jpg)
ಮುಡಾ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಸಲ್ಲಿಸಿದ್ದ ವರದಿಯ ಅನುಸಾರವಾಗಿ ಗವರ್ನರ್​ ಪ್ಯಾಸಿಕ್ಯೂಷನ್​ಗೆ ಪರ್ಮಿಷನ್ ನೀಡಿದ್ದಾರೆ. ಸದ್ಯ ಗೌವರ್ನರ್​ ಕೊಟ್ಟಿರುವ ಅನುಮತಿಯಲ್ಲಿರುವ ಅಂಶಗಳು ಏನೆಂದು ನೋಡವುದಾದರೆ..
- ಪಿಸಿ ಆ್ಯಕ್ಟ್ ಸೆಕ್ಷನ್​ 17ಎ ಮತ್ತು ಬಿಎನ್ಎಸ್ಎಸ್ 218 ಅನುಮತಿ
- ಮೂರು ದೂರಗಳನ್ನು ಆಧರಿಸಿದ ಗೌವರ್ನರ್​ ಅನುಮತಿ
- ಸಿದ್ದರಾಮಯ್ಯ ವಿರುದ್ಧ ಇನ್ವೆಸ್ಟಿಗೇಷನ್ ಸ್ಯಾಕ್ಷನ್ ನೀಡಲಾಗಿದೆ
- ಭ್ರಷ್ಟಚಾರ ತಡೆ ಕಾಯ್ದೆ 17ಎ, 19 & ಬಿಎನ್ಎಸ್​ಎಸ್ 218ಗೆ ಅನುಮತಿ
- ಭಷ್ಟಚಾರ ತಡೆ ಕಾಯ್ದೆ 7,9,12 & 15 ರಡಿ ಆರೋಪಕ್ಕೆ ಅನುಮತಿ
- ಸೆ. 59,61,62,201,227,228,229,314,316(5),318(2)318(3) ಅಂಶಗಳಿವೆ
- ಜೊತೆಗೆ 319,322,324,324(1)324(2) 324(2) 335,336,338 & 340 BNS ಅಂಶಗಳು ಅನುಮತಿಯಲ್ಲಿವೆ
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಹೆಸರು ಕೇಳಿಬಂದಿತ್ತು. ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಈ ಕುರಿತಾಗಿ ಗವರ್ನರ್​ಗೆ ದೂರು ಸಲ್ಲಿಸಿದ್ದರು. ಆದರೀಗ ಈ ದೂರಿನ ಅನ್ವಯ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಗವರ್ನರ್ ಅನುಮತಿ ನೀಡಿದ್ದಾರೆ.
ಇದನ್ನೂ ಓದಿ: ಸಿಎಂಗೆ ಕಾನೂನು ಸಂಕಷ್ಟ.. ದೆಹಲಿಯಿಂದ ಕರ್ನಾಟಕಕ್ಕೆ ಮಲ್ಲಿಕಾರ್ಜುನ ಖರ್ಗೆ ದಿಢೀರ್ ಭೇಟಿ: ಮುಂದೇನು?
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೊನೆಗೂ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ. ಸದ್ಯ ಸಿದ್ದರಾಮಯ್ಯನವರು ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ರಾತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಜೊತೆ ಸುಧೀರ್ಘ ಸಮಾಲೋಚನೆ ನಡೆಸಿದ್ದರು. ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಚರ್ಚಿಸಿದ್ದರು. ಮುಂದಿನ ಕಾನೂನು ಹೋರಾಟದ ಕುರಿತು ಪೊನ್ನಣ್ಣ ಜೊತೆ ಮಾತನಾಡಿದ್ದರು. ಇದೀಗ ಕಾನೂನು ಹೋರಾಟಕ್ಕೆ ಅವರು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ