/newsfirstlive-kannada/media/post_attachments/wp-content/uploads/2024/01/HIGHCOURT-AADHAAR.jpg)
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಬೆನ್ನು ನೋವಿನಿಂದ ನರಳಾಡುತ್ತಿದ್ದ ದರ್ಶನ್​ಗೆ ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಬೆನ್ನು ನೋವಿಗೆ ಸರಿಯಾದ ಸೂಕ್ತ ಚಿಕಿತ್ಸೆ ನೀಡುವಂತೆ ಕಾಲಾವಕಾಶವನ್ನು ನೀಡಿದೆ. ಆದರೆ ಈ ಮಧ್ಯಂತರ ಜಾಮೀನು ಎಂದರೇನು? ಭಾರತದಲ್ಲಿರುವ ಜಾಮೀನಿನ ವಿಧಗಳು ಯಾವ್ಯಾವುವು? ತಿಳಿಯೋಣ.
ಭಾರತದಲ್ಲಿ ಮೂರು ವಿಧದ ಜಾಮೀನು ಇವೆ. ಅದರಲ್ಲಿ ನಿಯಮಿತ, ಮಧ್ಯಂತರ, ನಿರೀಕ್ಷಣಾ ಜಾಮೀನನ್ನು ನೀಡಲಾಗುತ್ತದೆ. ಸದ್ಯ ದರ್ಶನ್​ಗೆ ಮೆಡಿಕಲ್​ ಜಾಮೀನು ನೀಡಲಾಗಿದೆ. ನಿರ್ದಿಷ್ಟ ಕಾಲಾವಧಿಯನ್ನು ಕೊಡಲಾಗಿದೆ.
ಮಧ್ಯಂತರ ಜಾಮೀನು ಎಂದರೆ ಏನು?
ಮಧ್ಯಂತರ ಜಾಮೀನು ಎಂದರೆ ತಾತ್ಕಾಲಿಕ ಜಾಮೀನು. ಕೋರ್ಟ್​ ಆರೋಪಿಯ ಪರವಾದ ವಾದವನ್ನು ಮತ್ತು ಸರಿಯಾದ ರಿಪೋರ್ಟ್​ ಪರಿಶೀಲಿಸಿ ತಾತ್ಕಾಲಿಕ ಜಾಮೀನು ನೀಡುತ್ತದೆ. ಅದರಂತೆಯೇ ದರ್ಶನ್​ಗೆ ತಾತ್ಕಾಲಿಕ ಅಥವಾ ಮಧ್ಯಂತರ ಜಾಮೀನು ನೀಡಿದೆ. ಚಿಕಿತ್ಸೆ ವಿಚಾರವಾಗಿ ಮತ್ತು ಆರೋಗ್ಯ ವಿಚಾರವಾಗಿ ಕೋರ್ಟ್​ ಕಾಲಾವಕಾಶದ ಜಾಮೀನು ಮಂಜೂರು ಮಾಡಿದೆ.
ಅಂದರೆ ಆರೋಪಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನಂತಹ ನ್ಯಾಯಾಲಯದ ಮುಂದೆ ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಾನೆ. ಆಗ ಕೋರ್ಟ್ ನಿರ್ಧಾರ ತೆಗೆದುಕೊಳ್ಳಲು ಕೆಳ ನ್ಯಾಯಾಲಯಗಳ ದಾಖಲೆ ಅಥವಾ ತನಿಖಾ ಸಂಸ್ಥೆಗಳ ಚಾರ್ಜ್ ಶೀಟ್, ಕೇಸ್ ಡೈರಿಗಳ ಮಾಹಿತಿ ಬೇಕಾಗುತ್ತವೆ. ಈ ದಾಖಲೆಗಳನ್ನು ಪಡೆಯುವ ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಆರೋಪಿ ಅಥವಾ ಅಪರಾಧಿ ಜೈಲಿನಲ್ಲಿಯೇ ಇರಬೇಕಾಗುತ್ತದೆ. ನಂತರ ಕೋರ್ಟ್​ ಜಾಮೀನು ಅರ್ಜಿಯನ್ನು ನಿರ್ಧರಿಸುತ್ತದೆ.
ಕೆಳ ನ್ಯಾಯಾಲಯ ಅಥವಾ ತನಿಖಾ ಸಂಸ್ಥೆಯಿಂದ ಉನ್ನತ ನ್ಯಾಯಾಲಯವು ಅಗತ್ಯ ದಾಖಲೆಗಳನ್ನು ಪಡೆಯುವವರೆಗೆ ಜೈಲಿನಿಂದ ತಪ್ಪಿಸಿಕೊಳ್ಳಲು ಆರೋಪಿ ಅಥವಾ ಅಪರಾಧಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾನೆ. ಅದುವೇ ಮಧ್ಯಂತರ ಜಾಮೀನು. ಇದು ಒಂದು ಅವಧಿವರೆಗೆ ತಾತ್ಕಾಲಿಕ ಜಾಮೀನು ಆಗಿದ್ದು, ಜಾಮೀನು ಅರ್ಜಿಯ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಉನ್ನತ ನ್ಯಾಯಾಲಯವು ಅಗತ್ಯವಾದ ದಾಖಲೆಗಳನ್ನು ಕೇಳುತ್ತದೆ. ನಂತರ ಶಾಶ್ವತ ಜಾಮೀನು ನೀಡಬಹುದು, ಮಧ್ಯಂತರ ಜಾಮೀನು ನೀಡಬಹುದು ಅಥವಾ ಜಾಮೀನು ಅರ್ಜಿಯನ್ನೇ ತಿರಸ್ಕರಿಸಬಹುದು.
ನಿರೀಕ್ಷಣಾ ಜಾಮೀನು ಎಂದರೇನು?
ಜಾಮೀನು ರಹಿತ ಆರೋಪದ ವಿಚಾರವಾಗಿ ಮತ್ತು ಬಂಧನಕ್ಕೆ ಒಳಗಾಗುತ್ತಾನೆ ಎಂಬ ಅನುಮಾನಕ್ಕೂ ಮುನ್ನವೇ ವ್ಯಕ್ತಿ ನಿರೀಕ್ಷಣ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೆಕ್ಷನ್​ 438 ಸಿಆರ್​ಪಿಸಿ ಅಡಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸೆಷನ್ಸ್​ ನ್ಯಾಯಾಲಯ ಅಥವಾ ಉಚ್ಛ ನ್ಯಾಯಾಲಯದಲ್ಲಿ ನಿರೀಕ್ಷಿತ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆ.
​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ