newsfirstkannada.com

ತುಂಬಾ ಸಣ್ಣ ಆಗೋಗಿದ್ದೀನಿ, ಮನೆಯೂಟ ಕೊಡಿ ಪ್ಲೀಸ್‌.. ಕೋರ್ಟ್​ಗೆ ದರ್ಶನ್‌ ಕೊಟ್ಟ ಕಾರಣಗಳೇನು?

Share :

Published July 21, 2024 at 6:09am

    ಮನೆ ಊಟಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ ನಟ ದರ್ಶನ್​

    ನಟ ದರ್ಶನ್​ ಸಲ್ಲಿಸಿದ ಅರ್ಜಿಗೆ ಆಕ್ಷೇಪಣೆಯನ್ನು ಪರಿಗಣಿಸುತ್ತಾರಾ?

    ಜೈಲು ಊಟದಿಂದ ದೇಹದ ತೂಕ ಸಾಕಷ್ಟು ಕಡಿಮೆಯಾಗಿದೆ- ದರ್ಶನ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್​ಗೆ ಜೈಲೂಟ ಸೇರುತ್ತಿಲ್ಲ. ಹೀಗಾಗಿ ಜೈಲೂಟ ಬೇಡ, ಮನೆ ಊಟ ಬೇಕು ಎಂದು ದರ್ಶನ್​ ಬೇಡಿಕೊಳ್ತಿದ್ದಾರೆ. ಈ ಬಗ್ಗೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ನಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಹೈಕೋರ್ಟ್​ ನಿರ್ದೇಶನದಂತೆ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ನಟ ದರ್ಶನ್​ ಪರ ವಕೀಲರು ಅರ್ಜಿ ಸಲ್ಲಿಸಿದ್ದು. ದರ್ಶನ್​ಗೆ ಮನೆ ಊಟಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​​ ಸ್ಪರ್ಧಿ ಅರ್ಮಾನ್ ಮಲಿಕ್​ಗೆ ಡಿವೋರ್ಸ್​ ನೀಡಲು ಮುಂದಾದ ಪತ್ನಿ; ಕಾರಣವೇನು?

ನಟ ದರ್ಶನ್​​ ಅರ್ಜಿಯಲ್ಲೇನಿದೆ?

ದೇಹದ ತೂಕ ಇಳಿಯುತ್ತಿದೆ ನನಗೆ ಮನೆ ಊಟ ಬೇಕು. ಈ ಬಗ್ಗೆ ನಾನು ಓರಲ್ ರಿಕ್ವೆಸ್ಟ್ ಮಾಡಿದ್ದಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಅರ್ಜಿ ಸಲ್ಲಿಸಿ ಕೇಳಬೇಕು ಅಂತಾ ನನಗೆ ಕಾನೂನು ಅರಿವು ಇರಲಿಲ್ಲ. ಬಳಿಕ ನಾನು ಮನೆ ಊಟಕ್ಕಾಗಿ ಹೈಕೋರ್ಟ್​​​ಗೆ ರಿಟ್ ಅರ್ಜಿ ಸಲ್ಲಿಸಿದ್ದೆ. ಮನೆ ಊಟ, ಹಾಸಿಗೆ ಹಾಗೂ ಬಟ್ಟೆ ಕೊಡಲು ನಿರ್ದೇಶನಕ್ಕೆ ಕೋರಿದ್ದೆ. ಆದರೆ ಹೈಕೋರ್ಟ್ ನಿಮ್ಮ ಬಳಿ ಹೋಗಲು ಸೂಚನೆ ನೀಡಿ ಕಳುಹಿಸಿದೆ. ಕರ್ನಾಟಕ ಪ್ರಿಸನ್ಸ್ ಆ್ಯಕ್ಟ್ 1963 ಚಾಪ್ಟರ್ 6 ಅಡಿ ಮನವಿ ಮಾಡಿದ್ದೇನೆ. ಜೈಲು ಊಟದಿಂದ ನನ್ನ ದೇಹದ ತೂಕ ಸಾಕಷ್ಟು ಕಡಿಮೆಯಾಗಿದೆ. ಜೈಲಿನ ಆಹಾರ ನನ್ನ ದೇಹ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ. ಅಲ್ಲದೇ ಈ ಹಿಂದೆ ನಾನು ತುಂಬಾ ಡಯಟ್ ಆಹಾರ ಪಡೆಯುತ್ತಿದೆ. ಜೈಲಿನ ಊಟದಿಂದ ನನ್ನ ಹೊಟ್ಟೆ ಕೆಡುವ ಸಮಸ್ಯೆ ಎದುರಾಗಿದೆ.

ಕಳೆದ ಕೆಲ ದಿನಗಳಿಂದ ಡೈಯೇರಿಯಾ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಆದ್ದರಿಂದ ನಾನು ಜೈಲಿನಲ್ಲಿ ಕೊಡುವ ಆಹಾರ ತಿನ್ನಲು ಆಗುತ್ತಲೇ ಇಲ್ಲ. ನಾನು ಬಲ ಹಿಪ್ ಜಾಯಿಂಟ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸೊಂಟದ ಬೆನ್ನುಮೂಳೆ ಮಾಡರೇಟ್ ಸ್ಪಾಂಡಿಲೋಸಿಸ್ ಸಮಸ್ಯೆ ಇದೆ. ಅಲ್ಲದೆ ಕೆಲ ತಿಂಗಳ ಹಿಂದೆ ನನ್ನ ಎಡಗೈಗೆ ಮೇಜರ್ ಸರ್ಜರಿ ಆಗಿತ್ತು. ಅದಕ್ಕೆ ತುರ್ತಾಗಿ ನನಗೆ ಮನೆಯಲ್ಲಿ ಮಾಡಿದ ಊಟ ಬೇಕಾಗಿದೆ ಹೀಗಾಗಿ ಜೈಲು ಅಧಿಕಾರಿಗಳಿಗೆ ಕೆಲ ನಿರ್ದೇಶನ ನೀಡಲು ಮನವಿ ಮಾಡ್ತೀನಿ. ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ನಟ ದರ್ಶನ್​ ಅರ್ಜಿ ವಿಚಾರಣೆಯನ್ನು ನಡೆಸಿದ್ರು. ಈ ವೇಳೆ ದರ್ಶನ್ ಪುಡ್ ಪಾಯಿಸನ್ ವರದಿ ನೀಡಲು ಮನವಿ ಮಾಡಲಾಯ್ತು ಇದಕ್ಕೆ ಇದಕ್ಕೆ ಸರ್ಕಾರದ ಪರ ವಕೀಲರು ಆಕ್ಷೇಪ ಸಲ್ಲಿಸಿದ್ರು. ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್, ಸರ್ಕಾರದ ಪರ ವಕೀಲರಿಗೆ ಸೋಮವಾರವೇ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದ್ರು.

ಮ್ಯಾಜಿಸ್ಟ್ರೇಟ್​ ಕೋರ್ಟ್​ ಸೂಚನೆ

ನಮಗೆ ಹೈಕೋರ್ಟ್​ನಿಂದ ನಿರ್ದೇಶನ ನೀಡಲಾಗಿದೆ. ಈ ಅರ್ಜಿಯನ್ನು 27ರೊಳಗೆ ಮುಕ್ತಾಯ ಮಾಡ್ಬೇಕು. ನಿಮಗೆ ಮಂಗಳವಾರದವರೆಗೆ ಅವಕಾಶ ಸಾಧ್ಯವಿಲ್ಲ. ಹೀಗಾಗಿ ನೀವು ಸೋಮವಾರವೇ ಆಕ್ಷೇಪಣೆ ಸಲ್ಲಿಕೆ ಮಾಡಿ. ಹೀಗಂಥ ಸರ್ಕಾರದ ಪರ ವಕೀಲರಿಗೆ ನ್ಯಾಯಾಧೀಶರು ಸೂಚನೆ ನೀಡಿ ಸೋಮವಾರಕ್ಕೆ ದರ್ಶನ್​ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ.

ದರ್ಶನ್​​ ಜೈಲೂಟ ಹೊಂದಾಣಿಕೆ ಆಗದೆ ಫುಡ್ ಫಾಯಿಸನಿಂಗ್ ಎಂದು ಅರ್ಜಿ ಸಲ್ಲಿಸಿದ್ದಾರೆ. ಆದರೆ ಜೈಲಾಧಿಕಾರಿಗಳು ಜೈಲಿನ ಗುಣಮಟ್ಟದ ಊಟದ ರಿಪೋರ್ಟ್ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ಜೈಲೂಟ ಯಾವುದೇ ಕಾರಣಕ್ಕೂ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ರಿಪೋರ್ಟ್ ನೀಡಿದ್ದಾರೆ. ಒಟ್ಟಾರೆ. ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದ್ದು, ಸರ್ಕಾರದ ಆಕ್ಷೇಪಣೆಯನ್ನು ಪರಿಗಣಿಸುತ್ತಾರಾ, ಇಲ್ಲ ದರ್ಶನ್​ಗೆ ಮನೆ ಊಟಕ್ಕೆ ಅನುಮತಿ ನೀಡುತ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಂಬಾ ಸಣ್ಣ ಆಗೋಗಿದ್ದೀನಿ, ಮನೆಯೂಟ ಕೊಡಿ ಪ್ಲೀಸ್‌.. ಕೋರ್ಟ್​ಗೆ ದರ್ಶನ್‌ ಕೊಟ್ಟ ಕಾರಣಗಳೇನು?

https://newsfirstlive.com/wp-content/uploads/2024/06/darshan57-2.jpg

Load More