ಮೌನಿ ಅಮವಾಸ್ಯೆಗೆ ಯಾಕೆ ಇಷ್ಟೊಂದು ಮಹತ್ವ? ಈ ದಿನ ಸಿಗುವ ಫಲಾಫಲಗಳು ಏನೇನು?

author-image
Ganesh
Updated On
ಮೌನಿ ಅಮವಾಸ್ಯೆಗೆ ಯಾಕೆ ಇಷ್ಟೊಂದು ಮಹತ್ವ? ಈ ದಿನ ಸಿಗುವ ಫಲಾಫಲಗಳು ಏನೇನು?
Advertisment
  • ಮಹಾಕುಂಭಮೇಳದಲ್ಲಿ ಶಾಹಿಸ್ನಾನದಿಂದ ಮೋಕ್ಷ ಪ್ರಾಪ್ತಿ
  • ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನಕ್ಕಿಳಿದ ಅಸಂಖ್ಯ ಭಕ್ತಗಣ
  • ಮೌನಿ ಅಮವಾಸ್ಯೆ ದಿನ ಏನು ಮಾಡಬೇಕು? ಮಾಡಬಾರದು?

ಇಂದು ಮಹಾಸುದಿನ.. ಮಹಾಕುಂಭಮೇಳದಲ್ಲಿ ಶಾಹಿಸ್ನಾನದಿಂದ ಮೋಕ್ಷಪ್ರಾಪ್ತಿ ಆಗುತ್ತದೆ ಅನ್ನೋದು ಮೂಲ ನಂಬಿಕೆ. ಇಂದು ಮೌನಿ ಅಮಾವಾಸ್ಯೆ ಇದ್ದು, ತ್ರಿವೇಣಿಸಂಗಮದಲ್ಲಿ ಅಮೃತಸ್ನಾನ ಮಾಡಲು ಅಸಂಖ್ಯ ಭಕ್ತಗಣ ಕಾತರದಿಂದ ಕಾಯ್ತಿದೆ. ತ್ರಿವೇಣಿ ಸಂಗಮದಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇವತ್ತು ಕೋಟಿ ಕೋಟಿ ಭಕ್ತರು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡುವ ನಿರೀಕ್ಷೆ ಇದೆ. ಈ ಮಧ್ಯೆ ಭಾರೀ ದೊಡ್ಡ ಪ್ರಮಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಾಂತರ ಭಕ್ತರು ಮಹಾಕುಂಭಕ್ಕೆ ಆಗಮಿಸಿದ್ದಾರೆ. ಅಷ್ಟಕ್ಕೂ ಈ ಮೌನಿ ಅಮವಾಸ್ಯೆ ಅಂದರೆ ಏನು ಅನ್ನೋ ವಿವರ ಇಲ್ಲಿದೆ. ಮೌನಿ ಅಮವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವುದು ಅತ್ಯಂತ ಶ್ರೇಷ್ಠಕರ ಎಂದು ವೇದಿಕ ಪಂಚಾಂಗ ಹಾಗೂ ಹಿಂದೂ ಪಂಚಾಂಗಗಳು ಹೇಳುತ್ತವೆ. ಈ ಅಮವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವುದರಿಂದ ಮಾಡಿರುವ ಪಾಪಗಳೆಲ್ಲಾ ತೊಳೆದು ಹೋಗುತ್ತವೆ ಎಂದು ಹೇಳಲಾಗುತ್ತದೆ. ಇದನ್ನು ಮಾಘಿ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ.

ಇದನ್ನೂ ಓದಿ: ಇಂದು ಮೌನಿ ಅಮಾವಾಸ್ಯೆ; ಮಹಾ ಕುಂಭಮೇಳದಲ್ಲಿ ಅಮೃತಸ್ನಾನಕ್ಕಾಗಿ ಕೋಟ್ಯಂತರ ಭಕ್ತರು: ಭದ್ರತೆ ಹೇಗಿರುತ್ತೆ?

publive-image

ಸಿದ್ಧಿ ಯೋಗದಂದೇ ಮೌನಿ ಅಮವಾಸ್ಯೆಯನ್ನು ಆಚರಿಸಲಾಗುವುದು. ಈ ದಿನ ಗಂಗೆಯಲ್ಲಿ ಮಿಂದೆದ್ದು ದಾನ ಧರ್ಮಗಳನ್ನು ಮಾಡುವುದರಿಂದ ಬದುಕಿನಲ್ಲಿ ಶುಭ ದಿನಗಳು ಆರಂಭವಾಗುತ್ತವೆ ಎಂದು ಹೇಳಲಾಗುತ್ತದೆ. ಮೌನಿ ಅಮವಾಸ್ಯೆಯಂದು ಪಿತೃಗಳ ಆತ್ಮಶಾಂತಿಗಾಗಿ ಮತ್ತು ಮೋಕ್ಷಕ್ಕಾಗಿ ಶ್ರಾದ್ಧ, ತರ್ಪಣ ಮತ್ತು ಪಿಂಡದಾನವನ್ನು ಕೂಡ ಮಾಡಬಹುದು. ಈ ರೀತಿ ಮಾಡುವುದರಿಂದ ಪಿತೃದೋಷಗಳು ಪರಿಹಾರವಾಗುತ್ತವೆ ಮತ್ತು ಕುಟುಂಬದ ಸದಸ್ಯರಿಗೆ ಪಿತೃಗಳ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆಯೂ ಇದೆ. ಈ ಅಮವಾಸ್ಯೆಯಂದು ಮಾಡುವ ಕೆಲವು ಕಾರ್ಯಗಳು ಫಲದಾಯಕ ಆಗಿರುತ್ತವೆ ಇನ್ನೂ ಕೆಲವು ಆಚರಿಸಲಾರದಂತಹ ಕಾರ್ಯಗಳು ಆಗಿರುತ್ತವೆ.

ಮೌನಿ ಅಮವಾಸ್ಯೆ ದಿನ ಏನು ಮಾಡಬೇಕು?

  • ಮುಂಜಾನೆ ಬೇಗನೆ ಎದ್ದು ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಬೇಕು
  • ಪವಿತ್ರ ಗಂಗಾ ನದಿಯಲ್ಲಿ ಸಾಧ್ಯವಾಗದಿದ್ರೆ ಮನೆಯಲ್ಲೇ ಗಂಗಾಜಲದಿಂದ ಸ್ನಾನ
  •  ಸ್ನಾನದ ಬಳಿಕ ಸೂರ್ಯದೇವನಿಗೆ ಅರ್ಘ್ಯ ನೀಡಬೇಕು, ಆರಾಧನೆ ಮಾಡಬೇಕು
  •  ಪೂರ್ವಜರ ಆತ್ಮಶಾಂತಿಗಾಗಿ ಶ್ರಾದ್ಧ, ತರ್ಪಣ ಹಾಗೂ ಪಿಂಡಪ್ರದಾನ ಕಾರ್ಯ
  •  ಮೌನಿ ಅಮವಾಸ್ಯೆ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು
  •  ಶ್ರೀ ವಿಷ್ಣು, ಲಕ್ಷ್ಮೀ ಮಾತೆ, ತುಳಸಿ ಗಿಡ ಹಾಗೂ ಗಂಗೆಯನ್ನು ಪೂಜಸಿಬೇಕು
  • ಮೌನವೃತ ಇಲ್ಲವೇ, ಉಪವಾಸ ಮಾಡುವುದರಿಂದ ಪುಣ್ಯ ಲಭಿಸುತ್ತದೆ

publive-image

ಏನೆಲ್ಲಾ ಮಾಡಬಾರದು?

  • ಮೌನಿ ಅಮವಾಸ್ಯೆಯ ದಿನ ಉಗುರು, ಗಡ್ಡ ಹಾಗೂ ಕೂದಲನ್ನು ಕತ್ತರಿಸಬಾರದು
  • ಮದ್ವೆ, ಮುಂಜಿವೆ, ನಿಶ್ಚಿತಾರ್ಥ, ಗೃಹಪ್ರವೇಶ ಮಂಗಳಕರ ಕಾರ್ಯ ಮಾಡಬಾರದು
  • ಮಾಂಸ, ಮದ್ಯ ಸೇರಿದಂತೆ ತಾಮಸಿಕ ಆಹಾರವನ್ನು ಸೇವನೆ ಮಾಡಬಾರದು
  • ಈ ದಿನ ಯಾರೊಂದಿಗೂ ವಾದ, ಪ್ರತಿವಾದ ಹಾಗೂ ವಿವಾದ ಮಾಡಿಕೊಳ್ಳಬಾರದು
  • ಮನೆಯ ಹಿರಿಯರಿಗೆ ಅಪಮಾನ ಹಾಗೂ ಅಪಚಾರ ಆಗದಂತೆ ನೋಡಿಕೊಳ್ಳಬೇಕು
  • ಮೌನಿ ಅಮವಾಸ್ಯೆಯ ದಿನ ತುಳಸಿ ಗಿಡಕ್ಕೆ ನೀರು ಹಾಕುವುದು ನಿಷೇಧ

ಈ ವರ್ಷ ಎಷ್ಟು ಇದೆ..?

ಮೌನಿ ಅಮವಾಸ್ಯೆಯು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೂಲವಾಗಿದೆ. ಮೌನಿ ಅಮವಾಸ್ಯೆ ದಿನದಂದು ಆಕಾಶ ಶಕ್ತಿಗಳು ಸಾಮರಸ್ಯದಿಂದ ಇರುತ್ತವೆ. ಶಾಂತಿ, ನೆಮ್ಮದಿ, ಸಂಪತ್ತು, ಆರೋಗ್ಯಗಾಗಿ ಪ್ರಾರ್ಥಿಸಲು ಇದು ಸರಿಯಾದ ಸಮಯವಾಗಿದೆ.

ಇದನ್ನೂ ಓದಿ: Mauni Amavasya: ಮೌನಿ ಅಮವಾಸ್ಯೆ ದಿನ ಸ್ನಾನ ಮಾಡಿ, ಯಾವ ದೇವರನ್ನು ಪೂಜಿಸಿದರೆ ಏನು ಫಲ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment