Advertisment

ಏನಿದು ಸದ್ದು ಮಾಡುತ್ತಿರುವ ಮಿತವಾದ ಮದ್ಯಪಾನದ ಟ್ರೆಂಡ್? ಭಾರತಕ್ಕೆ ಈ ಪದ್ಧತಿ ಒಗ್ಗುತ್ತಾ?

author-image
Gopal Kulkarni
Updated On
ಏನಿದು ಸದ್ದು ಮಾಡುತ್ತಿರುವ ಮಿತವಾದ ಮದ್ಯಪಾನದ ಟ್ರೆಂಡ್? ಭಾರತಕ್ಕೆ ಈ ಪದ್ಧತಿ ಒಗ್ಗುತ್ತಾ?
Advertisment
  • Moderate Drinking ಎನ್ನುವ ಹೊಸ ಟ್ರೆಂಡ್ ಭಾರತಕ್ಕೆ ಒಗ್ಗುತ್ತದೆಯಾ ?
  • ಹಿತಮಿತವಾದ ಮದ್ಯಪಾನ ಮಾಡುವುದರಿಂದ ತೊಂದರೆಗಳು ಆಗಲ್ವಾ?
  • ಈ ಬಗ್ಗೆ ವೈದ್ಯರು ಏನಂತಾರೆ? ವಾರಕ್ಕೆ ಎಷ್ಟು ಡ್ರಿಂಕ್ ನಮಗೆ ಒಳ್ಳೆಯದು?

ಇನ್ನೇನು ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕೆಲವೇ ತಿಂಗಳುಗಳು ಬಾಕಿ ಇವೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅನೇಕ ರೆಸಲ್ಯೂಶನ್​​ಗಳನ್ನ ಯುವಕ ಯುವತಿಯರು ತೆಗೆದುಕೊಳ್ಳುತ್ತಾರೆ. ಅದರಲ್ಲೂ ಪ್ರಮುಖವಾಗಿ ಇಂದಿನಿಂದ ನಾನು ಮದ್ಯಪಾನವನ್ನು ಮುಟ್ಟುವುದಿಲ್ಲ ಎಂದು. ಆದ್ರೆ ಒಂದಿಷ್ಟು ದಿನಗಳಲ್ಲಿ ಬ್ಯಾಚಲರ್ ಪಾರ್ಟಿ, ಸೋದರ ಸಂಬಂಧಿ ಮದುವೆ, ಆಫೀಸ್ ಪಾರ್ಟಿ, ಇಂತಹ ಕ್ಷಣಗಳಲ್ಲಿ ಎಲ್ಲಾ ಶಪಥಗಳನ್ನು ಮರೆತು ನನಗೂ ಒಂದು ನೈಂಟಿ ಹಾಕು ಗುರು ಅಂತ ಕೈ ಗ್ಲಾಸಿನತ್ತ ನಿರ್ಲಜ್ಯದಿಂದ ಹೋಗಿರುತ್ತದೆ. ಅಸಲಿಗೆ ಈ ವಿಷಯ ಇಲ್ಲಿ ಪ್ರಸ್ತಾಪಿಸಲು ಒಂದು ಕಾರಣವಿದೆ. ಸದ್ಯ ಮಿತವಾದ ಮದ್ಯಪಾನ ಎಂಬ ಒಂದು ವಿಷಯ ಟ್ರೆಂಡಿಂಗ್​ನಲ್ಲಿದೆ. ಹಿತಮಿತವಾದ ಕುಡಿತದಿಂದ ಅಪಾಯವಿಲ್ಲ ಎಂಬ ಒಂದು ಮಾತು ಈಗ ದೊಡ್ಡ ಸದ್ದು ಮಾಡುತ್ತಿದೆ. ಇದು ಭಾರತಕ್ಕೆ ಎಷ್ಟು ಒಗ್ಗಿಕೊಳ್ಳುತ್ತದೆ. ಇದು ಇಲ್ಲಿ ಸಾಧ್ಯವಾ ಅನ್ನುವ ಚರ್ಚೆಗಳು ಕೂಡ ನಡೆಯುತ್ತಿವೆ.

Advertisment

ಇದನ್ನೂ ಓದಿ:ತಂದೆಯಿಂದ ಸಾಲ ಮಾಡಿ ವ್ಯಾಪಾರ ಶುರು ಮಾಡಿದ ಸೋದರಿಯರು! ಇಂದು ಇವರ ಗಳಿಕೆ ಎಷ್ಟು ಸಾವಿರ ಕೋಟಿ?

publive-image

ಅಸಲಿಗೆ ಆಲ್ಕೋಹಾಲ್ ಅನ್ನುವುದೇ ಒಂದು ಅಪಾಯಕಾರಿ ದ್ರವ್ಯ. ಈ ಹಳದಿ ದ್ರವ್ಯ ಮನುಷ್ಯನ ದೇಹವನ್ನು ಸೇರುವುದೇ ಒಂದು ಹಂತದಲ್ಲಿ ಸಮಸ್ಯೆ. ಅನೇಕ ಅಧ್ಯಯನಗಳು, ಸಂಶೋಧನೆಗಳು ಹಿತಮಿತ ಮದ್ಯಪಾನದ ಬಗ್ಗೆ ಹೇಳುತ್ತವೆ ಆದರೂ ಕೂಡ ಅದರಲ್ಲಿ ಅನೇಕ ನ್ಯೂನತೆಗಳು ಇರೋದಂತೂ ಸುಳ್ಳಲ್ಲ.

ಮಿತಿಯಲ್ಲಿ ಮದ್ಯಪಾನ ಮಾಡುವುದು ನಮ್ಮ ದೇಹಕ್ಕೆ ಎಷ್ಟು ಪ್ರಮಾಣ ಮದ್ಯಪಾನ ತೆಗೆದುಕೊಂಡರೇ ಒಳ್ಳೆಯದು ಎನ್ನುವ ದೃಷ್ಟಿಯಲ್ಲಿಯೇ ಸಾಗುತ್ತದೆ. ಮಿತವಾದ ಮದ್ಯಪಾನದಿಂದ ಆರೋಗ್ಯದ ಸಮಸ್ಯೆಗಳು ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಈ ಬಗ್ಗೆ ತಜ್ಞರನ್ನು ಕೇಳಿದರೆ ಹಲವು ರೀತಿಯ ಸಲಹೆಗಳನ್ನು ನೀಡಿದ್ದು ಕೂಡ ಕಾಣಸಿಗುತ್ತದೆ. ವಾರಕ್ಕೆ ಇಷ್ಟು ಪ್ರಮಾಣ ಕುಡಿದರೆ ಏನೂ ಆಗುವುದಿಲ್ಲ ಎಂಬ ಸಲಹೆಗಳನ್ನು ನೀಡುತ್ತಾರೆ. ಇನ್ನು ಆಸ್ಟ್ರೇಲಿಯಾದಲ್ಲಿ ವಾರಕ್ಕೆ ಹತ್ತು ಡ್ರಿಂಕ್​ಗಳು ಅಪಾಯವಲ್ಲ ಎಂದು ಹೇಳುತ್ತಾರೆ. ಅಮೆರಿಕಾದಲ್ಲಿ ದಿನಕ್ಕೆ ಒಂದು ಡ್ರಿಂಕ್​ ಗುಡ್ ಫಾರ್ ಹೆಲ್ತ್ ಅನ್ನುವಂತಹ ಸೂಚನೆಗಳು ಇವೆ. ಕೆನಡಾದಲ್ಲಿ ವಾರಕ್ಕೆ ಎರಡಕ್ಕಿಂತ ಹೆಚ್ಚು ಡ್ರಿಂಕ್ ಒಳ್ಳೆಯದಲ್ಲ ಎಂಬುದು ಇದೆ. ಆದ್ರೆ ಕೆಲವು ತಜ್ಞರು ಹೇಳುವ ಪ್ರಕಾರ ಒಂದೇ ಒಂದು ಗ್ಲಾಸ್ ಡ್ರಿಂಕ್ ಕೂಡ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದಲ್ಲ ಅದು ಹಲವು ರೀತಿಯ ಅಪಾಯಗಳನ್ನು ತಂದೊಡ್ಡುತ್ತದೆ ಎನ್ನುತ್ತಾರೆ.

Advertisment

ಇದನ್ನೂ ಓದಿ:ಪ್ರೇಮ ಚುಂಬನ ನಿಮ್ಮ ಬಾಯಿಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಲಿದೆಯಾ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?

ಇನ್ನು ಭಾರತದ ವಿಷಯಕ್ಕೆ ಬಂದು ನೋಡಿದಾಗ ಈ ಹಿತಮಿತ ಮದ್ಯಪಾನ ಇಲ್ಲಿ ಅಷ್ಟೊಂದು ಒಗ್ಗುವುದಿಲ್ಲ ಎಂದೇ ವೈದ್ಯರು ಹೇಳುತ್ತಾರೆ. ಸಿಕೆ ಬಿರ್ಲಾ ಆಸ್ಪತ್ರೆಯ ವೈದ್ಯರಾದ ಡಾ. ವಿಕಾಸ್ ಜಿಂದಾಲ್ ಹೇಳುವ ಪ್ರಕಾರ, ಭಾರತ ವಿಶ್ವದ ಸಕ್ಕರೆ ರೋಗದ ರಾಜಧಾನಿಯಾಗಿ ಈಗಾಗಲೇ ಗುರುತಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ನಿಂತಿದ್ದು ಮದ್ಯಪಾನ ಎಂದು ಬಿಡಿಸಿ ಹೇಳಬೇಕಿಲ್ಲ. ಅದು ಮಾತ್ರವಲ್ಲ ಭಾರತದಲ್ಲಿ ಅತಿಹೆಚ್ಚು ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ರೀತಿಯಿರುವಾಗ ಹಿತಮಿತವಾದ ಮದ್ಯಪಾನವೂ ಕೂಡ ಈ ರೀತಿಯ ಕಾಯಿಲೆಗಳನ್ನು ಬೆಳೆಸುತ್ತವೆ ಮತ್ತು ಆ ರೀತಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮತ್ತಷ್ಟು ಮಾರಕವಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ. ಹೀಗಾಗಿ ಮಿತಿಯಲ್ಲಿರುವ ಮದ್ಯಪಾನದಿಂದ ಅಪಾಯಗಳೇ ಹೆಚ್ಚು. ಅದರಿಂದಾಗಿ ಮದ್ಯಪಾನದಿಂದ ದೂರ ಇರುವುದೇ ಸಾವಿರ ಪಾಲು ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment