/newsfirstlive-kannada/media/post_attachments/wp-content/uploads/2024/11/MUKHESH-AMBANI-DIET.jpg)
ರಿಲಯನ್ಸ್ ಗ್ರೂಪ್ನ ಚೇರ್ಮನ್ ಮುಖೇಶ್ ಅಂಬಾನಿ ತಮ್ಮ ಶಿಸ್ತಿನ ಜೀವನ ಶೈಲಿಯಿಂದಲೇ ಗುರುತಿಸಿಕೊಂಡವರು. ಆರೋಗ್ಯದ ಬಗ್ಗೆ ತುಂಬಾ ಗಮನಕೊಟ್ಟು ಅವರು ತಮ್ಮ ಆಹಾರ ಹಾಗೂ ಜೀವನ ಶೈಲಿಯನ್ನು ನಡೆಸುತ್ತಾರಂತೆ. ಭಾರತದ ಹೈ ಪ್ರೊಫೈಲ್ ಬದುಕನ್ನು ಬದುಕುತ್ತಿರುವ, ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿಯವ ಆಹಾರ ಕ್ರಮವನ್ನು ಹೆಚ್ಚಾಗಿ ಗಮನಿಸುವುದು ಅವರ ಧರ್ಮಪತ್ನಿ ನೀತಾ ಅಂಬಾನಿಯವರು. ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮುಖೇಶ್ ಅಂಬಾನಿಯವರ ಆಹಾರ ಶೈಲಿ ಹೇಗಿದೆ ಎಂಬುದನ್ನು ರಿವೀಲ್ ಮಾಡಿದ್ದರು. ಕಡಿಮೆ ಕ್ಯಾಲರೀಸ್ ಇರುವ ಹಾಗೂ ಹೆಚ್ಚು ನ್ಯೂಟ್ರಿಷನ್ ಇರುವ ಆಹಾರವನ್ನೇ ಮುಖೇಶ್ ಅಂಬಾನಿ ಸೇವಿಸುತ್ತಾರಂತೆ.
ಇನ್ನೂ ಮುಖೇಶ್ ಅಂಬಾನಿಯೂ ಕೂಡ ಅತಿಯಾದ ಹೊಟ್ಟೆಗೆ ಭಾರ ಎನಿಸುವ ಊಟವನ್ನು ಅಷ್ಟಾಗಿ ಇಷ್ಟಪಡುವುದಿಲ್ಲವಂತೆ.ಅವರು ಹೆಚ್ಚು ಹೆಚ್ಚು ಸೇವಿಸುವುದು ಸಸ್ಯಾಹಾರವನ್ನೇ ಎಂದು ನೀತಾ ಅಂಬಾನಿ ಹೇಳಿದ್ದಾರೆ. ಆಹಾರ ಕ್ರಮದಾಚೆ ಜೀವನ ಶೈಲಿ ವಿಚಾರಕ್ಕೆ ಬಂದಾಗ ಮುಖೇಶ್ ಅಂಬಾನಿ ಪಿಸಿಕಲ್ ಫಿಟ್ನೆಸ್ಗಾಗಿ ನಿತ್ಯ ಲಘು ವ್ಯಾಯಾಮ ಮಾಡುತ್ತಾರೆ ಎಂದು ನೀತಾ ಅಂಬಾನಿ ಹೇಳಿದ್ದಾರೆ.
ಇದನ್ನೂ ಓದಿ:10 ನಿಮಿಷದಲ್ಲಿ ₹45 ಸಾವಿರ ದಿನಸಿ ಪದಾರ್ಥ ಮಾರಾಟ.. ₹49 ಸಾವಿರ ಕೋಟಿ ಆದಾಯ! ಯಶಸ್ವಿ ಉದ್ಯಮಿಯ ಯಶೋಗಾಥೆ
ಮುಖೇಶ್ ಅಂಬಾನಿ ಅವರ ದಿನ ಶುರುವಾಗುವುದೇ ಬೆಳಗ್ಗೆ 5.30 ರಿಂದ ಶುರುವಾಗುತ್ತದೆ. ಧ್ಯಾನ ಹಾಗೂ ಒಂದಿಷ್ಟು ಯೋಗ ಮಾಡುವ ಮುಖೇಶ್ ಅಂಬಾನಿ. ಯೋಗದ ನಂತರ ಧ್ಯಾನ ಮಾಡುವ ಮುಖೇಶ್ ಅಂಬಾನಿ ಬಳಿಕ ಶಾರ್ಟ್ ವಾಕ್ಗೆ ಹೋಗುತ್ತಾರೆ ಇದೇ ವೇಳೆ ಸೂರ್ಯ ನಮಸ್ಕಾರವನ್ನು ಮಾಡುತ್ತಾರೆ. ಬೆಳಗಿನ ಮಿತ ಉಪಹಾರದಲ್ಲಿ ದಕ್ಷಿಣ ಭಾರತ ಶೈಲಿಯ ಇಡ್ಲಿ ಸಂಬಾರ್ ಹಾಗೂ ಒಂದಿಷ್ಟು ಫ್ರೆಶ್ ಜ್ಯೂಸ್ ಸೇವಿಸುತ್ತಾರೆ. ಇಡ್ಲಿ ಹೆಚ್ಚು ನ್ಯೂಟ್ರಿಷನ್ ಹೊಂದಿರುವ ಸರಳವಾಗಿ ಜೀರ್ಣವಾಗುವ ಆಹಾರವಾದ್ದರಿಂದ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
ಇದನ್ನೂ ಓದಿ:ದಂತ, ಕೇಶ, ಚರ್ಮಕಾಂತಿಗಾಗಿ ಶಾಲಿನಿ ಪಸ್ಸಿ ಮಾಡುವುದೇನು? 49ರ ಹರೆಯದ ಟಿವಿ ಸ್ಟಾರ್ ಡಯಟ್ ಹೇಗಿದೆ?
ಆಲ್ಕೋಹಾಲ್ ಹಾಗೂ ಜಂಕ್ ಫುಡ್ಗಳಿಂದ ಮುಖೇಶ್ ಅಂಬಾನಿ ತುಂಬಾ ಅಂತರವನ್ನು ಕಾಯ್ದುಕೊಂಡಿದ್ದಾರೆ. ವಾರದಲ್ಲಿ ಒಂದು ದಿನ ಮಾತ್ರ ಮನೆಯಾಚೆ ಊಟ ಮಾಡುವ ಅಂಬಾನಿ. ಹೆಚ್ಚಾಗಿ ಇವರು ಸರಳವಾದ ಹಾಗೂ ಮನೆಯಲ್ಲಿ ತಯಾರಿಸಿದ ಅಡುಗೆಯನ್ನೇ ಊಟ ಮಾಡುತ್ತಾರೆ ಎಂದು ನೀತಾ ಅಂಬಾನಿ ಹೇಳಿದ್ದಾರೆ.
ಈಗಾಗಲೇ ಹೇಳಿದಂತೆ ಮುಖೇಶ್ ಅಂಬಾನಿ ಪಕ್ಕಾ ಸಸ್ಯಾಹಾರಿ. ನೀತಾ ಅಂಬಾನಿಯವರು ಹೇಳುವ ಪ್ರಕಾರ ಊಟದಲ್ಲಿ ಹೆಚ್ಚಾಗಿ ದಾಲ್ ರೈಸ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರಂತೆ. ಜೊತೆಗೆ ಒಂದಿಷ್ಟು ತರಕಾರಿ ಹಾಗೂ ಸೂಪ್ ತೆಗೆದುಕೊಳ್ಳುವ ಅಂಬಾನಿ, ಅತಿಯಾದ ಖಾರದ ಆಹಾರದಿಂದ ದೂರವಿರುತ್ತಾರೆ. ಅವರಿಗೆ ಅತ್ಯಂತ ಪ್ರಿಯಕರವಾದ ಸ್ನಾಕ್ಸ್ ಅಂದ್ರೆ ಅದು ಗುಜರಾತಿಯ ಪಂಕಿ. ಬೆಣ್ಣೆ ಹಾಗೂ ಅಕ್ಕಿ ಹಿಟ್ಟಿನಿಂದ ಮಾಡಿರುವ ಈ ಸ್ನಾಕ್ಸ್ ಅಂದ್ರೆ ಮುಖೇಶ್ ಅಂಬಾನಿಗೆ ಬಲುಪ್ರಿಯ ಎಂದು ನೀತಾ ಹೇಳುತ್ತಾರೆ. ಪಕ್ಕಾ ಸಸ್ಯಾಹಾರಿ ಹಾಗೂ ಆಲ್ಕೋಹಾಲ್ ಮತ್ತು ಜಂಕ್ಫುಡ್ನಿಂದ ತುಂಬಾನೇ ಅಂತರ ಕಾಯ್ದುಕೊಂಡು ಹೆಚ್ಚು ಜೀವಸತ್ವಗಳು ಹಾಗೂ ಪೋಷಕಾಂಶಗಳು ಇರುವ ಆಹಾರವನ್ನು ಮುಖೇಶ್ ಅಂಬಾನಿ ಸೇವಿಸುತ್ತಾರೆ ಎಂದು ನೀತಾ ಅಂಬಾನಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ