26 ಅಮಾಯಕ ಹೆಣ್ಮಕ್ಕಳ ಸಿಂಧೂರ ಅಳಿಸಿದ ಪ್ರತೀಕಾರವೇ ‘ಆಪರೇಷನ್ ಸಿಂಧೂರ..’

author-image
Ganesh
Updated On
ಕನ್ನಡದಲ್ಲಿ ಸಿನಿಮಾ ಆಗುತ್ತಾ ಆಪರೇಷನ್ ಸಿಂಧೂರ? ಒಂದೊಳ್ಳೆ ರೋಚಕ ಕಥೆ ಎಂದ ನಿರ್ದೇಶಕ
Advertisment
  • ಪಾಕ್ ವಿರುದ್ಧ ‘ಆಪರೇಷನ್ ಸಿಂಧೂರ’! ಏನಿದು..?
  • ನನ್ನನ್ನೂ ಸಾಯಿಸಿ ಎಂದಾಗ ಮೋದಿಗೆ ಹೇಳು ಎಂದಿದ್ದ ಉಗ್ರ
  • ಸಿಂಧೂರದ ಕಣ್ಣೀರಿಗೆ ಪ್ರತೀಕಾರ ತೀರಿಸಿಕೊಂಡ ನಮ್ಮ ಸೇನೆ

ನಿನ್ನ ಧರ್ಮ ಯಾವುದು ಎಂದು ಕೇಳಿ ಹಣೆಗೆ ಗುಂಡಿಟ್ಟು 26 ಅಮಾಯಕರ ಸಿಂಧೂರ ಅಳಿಸಿದ್ದ ಪಹಲ್ಗಾಮ್ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಭಾರತೀಯ ಸೇನೆ ಮತ್ತು ವಾಯುಪಡೆ ನಡೆಸಿದ ಮಿಡ್​​ನೈಟ್​ ‘ಆಪರೇಷನ್ ಸಿಂಧೂರ್​’ಗೆ ಪಾಕಿಸ್ತಾನ ನಿದ್ರೆಯಿಂದ ಬೆಚ್ಚಿಬಿದ್ದಿದೆ!

ಏನಿದು ಆಪರೇಷನ್ ಸಿಂಧೂರ್..?
ಏಪ್ರಿಲ್ 22, 2025. ಬಹುಶಃ ಭಾರತೀಯರ ಪಾಲಿಗೆ ಕರಾಳ ದಿನ. ಭೂ-ಲೋಕದ ಸ್ವರ್ಗ ಪಹಲ್ಗಾಮ್​ನ ಬೈಸರನ್​​ (Baisaran Valley)ನಲ್ಲಿ ಅಮಾಯಕ ಹಿಂದೂಗಳ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಪೈಶಾಚಿಕ ದಾಳಿ ನಡೆಸಿದ ದಿನ ಅದು. ಈ ದಾಳಿ ಎಷ್ಟು ಕ್ರೂರ ಮತ್ತು ಘೋರವಾಗಿತ್ತು ಅಂದರೆ, ಪ್ರವಾಸಿಗರನ್ನು ಕೊಲ್ಲುವ ಮುನ್ನ ರಾಕ್ಷಸರು, ಧರ್ಮ ಯಾವುದು ಎಂದು ಕೇಳಿದ್ದರು. ಅನುಮಾನ ಬಂದವರ ಪ್ಯಾಂಟ್ ಬಿಚ್ಚಿಸಿ ನಂತರ ಹಣೆಗೆ ಗುಂಡಿಟ್ಟು ರಾಕ್ಷಸೀ ಕೃತ್ಯ ನಡೆಸಿದ್ದರು. ಉಗ್ರರ ಘೋರ ಕೃತ್ಯಕ್ಕೆ ಪತ್ನಿ ಹಾಗೂ ಮಕ್ಕಳ ಎದುರಲ್ಲೇ 26 ಮಂದಿ ಉಸಿರು ಚೆಲ್ಲಿದ್ದರು. ಉಗ್ರರ ಹೇಯ ಕೃತ್ಯದಿಂದ 26 ಹೆಣ್ಮಕ್ಕಳು ತಮ್ಮ ಸಿಂಧೂರವನ್ನು ಕಳೆದುಕೊಂಡು ಕಣ್ಣೀರಾಗಿ ಪತಿಯ ಶವದ ಮುಂದೆ ಕೂತಿದ್ದರು.

ಇದನ್ನೂ ಓದಿ: ವಾಯುಪಡೆಯಿಂದ ಮತ್ತೊಂದು ಅಟ್ಯಾಕ್.. ಪಾಕ್​​ಗೆ ಚೀನಾ ನೀಡಿದ್ದ ಯುದ್ಧ ವಿಮಾನ JF-17 ಉಡೀಸ್..! VIDEO

publive-image

ಈ ಪಾಪದ ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಪ್ರತೀಕಾರಕ್ಕಾಗಿ ಆಕ್ರೋಶದ ಜ್ವಾಲೆ ಕುದಿಯುತ್ತಿತ್ತು. ಅಮಾಯಕರ ಬಲಿ ಪಡೆದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂಬ ಆಗ್ರಹ ದೇಶದಲ್ಲಿ ಜೋರಾಗಿತ್ತು. ಅಂತೆಯೇ ಭಾರತ ಸರ್ಕಾರ ಉಗ್ರರ ವಿರುದ್ಧ ಪ್ರತೀಕಾರದ ದಾಳಿ ಮಾಡೋದಾಗಿ ಶಪಥ ಮಾಡಿತ್ತು. ಉಗ್ರ ಪೋಷಕ ಪಾಕಿಸ್ತಾನದ ವಿರುದ್ಧವೂ ಸೇಡು ತೀರಿಸಿಕೊಳ್ಳುವ ಭರವಸೆ ನೀಡಿತ್ತು. ಅದರಂತೆ ಇಂದು ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ಮಾಡಿದೆ. ಸಿಂಧೂರ ಅಳಿಸಿದ ಉಗ್ರರು ಮತ್ತು ಪಾಕ್ ವಿರುದ್ಧ ಕೈಗೊಂಡ ಅತೀ ದೊಡ್ಡ ಮಿಲಿಟರಿ ಕಾರ್ಯಾಚರಣೆಯೇ ಈ ‘ಆಪರೇಷನ್ ಸಿಂಧೂರ್’ ಆಗಿದೆ.

ಇದನ್ನೂ ಓದಿ: ಸೇನೆ-ವಾಯುಪಡೆಯಿಂದ ಜಂಟಿ ಆಪರೇಷನ್ ಸಿಂಧೂರ್.. 70ಕ್ಕೂ ಹೆಚ್ಚು ಭಯೋತ್ಪಾದಕರು ಉಡೀಸ್..!

ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ‘ಆಪರೇಷನ್ ಸಿಂಧೂರ್​’ ಆರಂಭಿಸಿವೆ. ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಇಲಾಖೆ, ಭಯೋತ್ಪಾದಕ ಅಡಗುತಾಣಗಳನ್ನು ಗರಿಯಾಗಿಸಿಕೊಂಡು 9 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಪಾಕಿಸ್ತಾನದ ಮಿಲಿಟರಿ ಪಡೆಯನ್ನು ಗರಿಯಾಗಿಸಿಲ್ಲ. ಜೊತೆಗೆ ಸಾರ್ವಜನಿಕ ಸ್ಥಳಗಳ ಮೇಲೆಯೂ ದಾಳಿ ಮಾಡಿಲ್ಲ. ನಮ್ಮ ಟಾರ್ಗೆಟ್​ ಭಯೋತ್ಪಾದಕರ ವಿರುದ್ಧ. ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ನಾವು ಈ ಹೆಜ್ಜೆಯನ್ನಿಟ್ಟಿದ್ದೇವೆ ಎಂದು ತಿಳಿಸಿದೆ. ನನ್ನ ಬದುಕಿನ ಭರವಸೆ ಗಂಡನನ್ನೇ ಸಾಯಿಸಿದೆ, ಅವರ ಜೊತೆಯಲ್ಲೇ ನಮ್ಮನ್ನೂ ಸಾಯಿಸಿ ಅಂತಾ ಕಣ್ಣೀರು ಇಡುತ್ತ ಹೆಣ್ಣು ಮಗಳೊಬ್ಬಳು ಉಗ್ರನ ಬಳಿ ಕೇಳಿದಾಗ ‘ಹೋಗಿ ಮೋದಿಗೆ ಹೇಳು ಎಂದಿದ್ದ. ಅದಕ್ಕೆ ಈಗ ಭಾರತೀಯ ಸೇನೆ ಉತ್ತರ ನೀಡಿದೆ.

ಇದನ್ನೂ ಓದಿ: ಹಫೀಜ್ ಅಡಗುತಾಣ ಉಡಾಯಿಸಿದ ರಫೇಲ್.. ಪಾಕ್ ಮೇಲೆ ಭಾರತ ಪ್ರಯೋಗಿಸಿದ ಅಸ್ತ್ರಗಳು ಯಾವ್ಯಾವುದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment