ಸಾವಯವ ಉತ್ಪನ್ನ ಹೆಸರಲ್ಲಿ ಮೋಸ..ಮೋಸ.. Organic ಎನ್ನುವ ಪ್ರಾಡಕ್ಟ್‌ಗಳು ಅಸಲಿನಾ, ನಕಲಿನಾ?

author-image
Bheemappa
Updated On
ಸಾವಯವ ಉತ್ಪನ್ನ ಹೆಸರಲ್ಲಿ ಮೋಸ..ಮೋಸ.. Organic ಎನ್ನುವ ಪ್ರಾಡಕ್ಟ್‌ಗಳು ಅಸಲಿನಾ, ನಕಲಿನಾ?
Advertisment
  • ಆರ್ಗಾನಿಕ್ ಪದಾರ್ಥ ಮಾರಾಟ ಮಾಡಲು ಇರೋ ನಿಯಮ?
  • ಸಾವಯವ ಕ್ರಮಗಳನ್ನ ಅನುಸರಿಸಿ ಬೆಳೆ ಬೆಳೆಯುತ್ತಿದ್ದಾರಾ..?
  • ಆರ್ಗಾನಿಕ್ ಎಂದೂ ಖರೀದಿ ಮಾಡೋ ಮುನ್ನಾ ಪ್ರಶ್ನೆ ಮಾಡಿ

ಮನುಷ್ಯನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ದೇಹ ಸೇರೋ ಆಹಾರ ಗುಣಮಟ್ಟದಿಂದ ಕೂಡಿರಬೇಕು. ಈ ಕಾಲದಲಂತೂ ಜನ ಸಿಕ್ಕಾಪಟ್ಟೆ ಹೆಲ್ತ್​ ಕಾನ್ಷಿಯಷ್ ಆಗಿ ಒಳ್ಳೆ ಆಹಾರವನ್ನೆ ಸೇವಿಸೋಣ ಅಂತ ಸಾವಯವ ಪದಾರ್ಥಗಳ ಕಡೆ ಮುಖ ಮಾಡ್ತಿದ್ದಾರೆ. ಆದ್ರೆ ನಿಮ್ಮ ಹೊಟ್ಟೆ ಸೇರ್ತಿರೋ ಸಾವಯವ ಆಹಾರ ನಿಜಕ್ಕೂ ಆರ್ಗ್ಯಾನಿಕ್​ ಆಗಿದ್ಯಾ? ಈ ಪ್ರಶ್ನೆಗೆ ತುಂಬಾ ಜನ ಉತ್ತರ ಹುಡುಕೋ ಪ್ರಯತ್ನ ಮಾಡಿರಲ್ಲ. ಜನರ ಅವಶ್ಯಕತೆಯನ್ನೆ ಬಂಡವಾಳ ಮಾಡ್ಕೊಂಡು ಇವತ್ತು ಮಾರ್ಕೆಟ್​ನಲ್ಲಿ ನೂರಾರು ಸಾವಯವ ಬ್ರ್ಯಾಂಡ್​ಗಳು ದರ್ಬಾರ್ ನಡೆಸ್ತಿವೆ. ಆದ್ರೆ ನಿಜಕ್ಕೂ ಸಾವಯವ ಹೆಸರಲ್ಲಿ ಬರ್ತಿರೋ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಾ? ಅಷ್ಟಕ್ಕೂ ಈ ಸಾವಯವ ಪದಾರ್ಥಗಳು ಅಂದ್ರೇ ಏನು? ಸಾವಯವ ದಂಧೆಯ ಕರಾಳ ಮುಖವನ್ನೆ ನ್ಯೂಸ್​ ಫಸ್ಟ್​ ಬಿಚ್ಚಿಡ್ತೀದೆ.

ಈ ಜನುಮವೇ ದೊರಕಿದ ರುಚಿ ಸವಿಯಲು.. ಈ ಜಗವಿದೆ ನವರಸಗಳ ಉಣಬಡಿಸಲು.. ರುಚಿ ರುಚಿಯಾದ ಆಹಾರ ಪದಾರ್ಥಗಳನ್ನ ನೋಡ್ದಾಗೆಲ್ಲ ನಿಮಗೆ ಈ ಹಾಡು ನೆನಪಾಗುತ್ತೆ. ಆಹಾ, ಅಂತ ನೀವು ಈ ಹಾಡನ್ನೆ ಗುನುಗಿ ಸೊಗಾಸದ ಬಾಯಿ ಚಪ್ಪರಿಸಿ ಈ ಆಹಾರ ಸೇವಿಸಿಯೂ ಇರ್ತಿರಾ. ಆದ್ರೀಗ ಕಾಲ ಬದಲಾಗಿ, ನಮ್ಮ ನಿಮ್ಮ ಹೊಟ್ಟೆ ಸೇರ್ತಿರೋ ಪದಾರ್ಥಗಳು ಕಲಬೆರಕೆಯಾಗ್ತಿದೆ ಅನ್ನೋದು ನಿಮಗೆಲ್ಲ ಗೊತ್ತಿರುವ ಸತ್ಯವೇ. ಹೀಗಾಗಿ ಜನ ಈಗ ಈ ಬೆರಕೆ ಆಹಾರದ ಸಹವಾಸವೇ ಬೇಡ ಅಂತ ಆರ್ಗ್ಯಾನಿಕ್ ಫುಡ್​ಗಳ ಕಡೆ ಮುಖ ಮಾಡ್ತಿದ್ದಾರೆ. ಫಿಟ್​ ಆಗಿರ್ಬೇಕು, ಆರೋಗ್ಯವಾಗಿರ್ಬೇಕು, ದೇಹಕ್ಕೆ ಒಳ್ಳೆ ಪದಾರ್ಥವೇ ಸೇರಲಿ ಅನ್ನೋ ಕಾರಣಕ್ಕೆ ಸಾವಯವ ಪದಾರ್ಥಗಳ ಬಳಕೆ ಮಾಡೋರು ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಈ ಪ್ರಾಡಕ್ಟ್ ಮಾರರೋ ನಾವು ಪಕ್ಕಾ ಆರ್ಗ್ಯಾನಿಕ್ ಅಂತಲೇ ಮಾರಾಟ ಮಾಡ್ತಾರೆ. ಆದ್ರೆ ಅದನ್ನ ಕೊಂಡುಕೊಳ್ಳುವ ನೀವು ಯಾವಾತಾದ್ರೂ ಅದು ನಿಜಕ್ಕೂ ಸಾವಯವ ಪದಾರ್ಥನಾ ಅನ್ನೋದನ್ನ ಪರಾಮರ್ಶಿಸಿ ನೋಡಿದ್ದೀರಾ? ಹಾಗಾದ್ರೆ ಚಿಂತೆ ಬೇಡಾ. ಇವತ್ತು ನಾವು ಈ ಆರ್ಗ್ಯಾನಿಕ್ ಹೆಸರಲ್ಲಿ ನಡೀತಾ ಇರೋ ಕರಾಳ ದಂಧೆಯ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ.

publive-image

ಇವತ್ತು ಹಾದಿ ಬೀದಿಗೊಂದು ಆರ್ಗ್ಯಾನಿಕ್ ಪದಾರ್ಥಗಳ ಶಾಪ್​ ನೋಡಿರ್ತಿರಾ.. ತರಕಾರಿಯಿಂದ ಹಿಡಿದು ಹಾಲು, ಬೆಳೆ, ಹೀಗೆ ಪ್ರತಿಯೊಂದು ಪ್ರಾಡಕ್ಟ್​​ಗಳು ಆರ್ಗಾನಿಕ್ ಅಂತಲೇ ಮಾರ್ಕೆಟ್​ನಲ್ಲಿ ಸೇಲ್ ಮಾಡ್ತಿದ್ದಾರೆ. ಆದ್ರೆ ಈ ಪದಾರ್ಥಗಳೆಲ್ಲ ಸಾವಯವ ಪ್ರಾಡಕ್ಟ್​ ಅಲ್ಲವೇ ಅಲ್ಲ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.

ಆರ್ಗಾನಿಕ್​​ (ಸಾವಯವ) ಉತ್ಪನ್ನಗಳ ಅಸಲಿ ಮುಖ..!

  • ಸಾವಯವ ಉತ್ಪನ್ನಗಳ ಹೆಸ್ರಲ್ಲಿ ಗ್ರಾಹಕರಿಗೆ ಮಹಾ ಮೋಸ!
  • ಆರೋಗ್ಯದ ದೃಷ್ಠಿಯಿಂದ ಸಾವಯವ ಉತ್ಪನ್ನಗಳ ಕಡೆ ಮೊರೆ
  • ಮೂರರಿಂದ 6 ಪಟ್ಟು ಹೆಚ್ಚಿನ ಬೆಲೆಗೆ ಉತ್ಪನ್ನಗಳ ಮಾರಾಟ!
  • ಸಾವಯವ ಎಂದ್ರೆ ಕೇಳಿದಷ್ಟು ಹಣ ಕೊಡ್ತಿರೋ ಗ್ರಾಹಕರು
  • ಮಾರಾಟ ಆಗುತ್ತಿರುವ ಪ್ರಾಡಕ್ಟ್​ ನಿಜಕ್ಕೂ ಆರ್ಗ್ಯಾನಿಕ್?
  • ನ್ಯೂಸ್​ಫಸ್ಟ್​ ಬಯಲು ಮಾಡಲಿದೆ ಸಾವಯವ ಉತ್ಪನ್ನಗಳ ಸತ್ಯಾಸತ್ಯತೆ

ಇವತ್ತು ಸಾವಯವ ಉತ್ಪನ್ನಗಳ ಹೆಸರಲ್ಲಿ ಗ್ರಾಹಕರಿಗೆ ಮಹಾ ಮೋಸ ನಡೀತಾ ಇದೆ. ಕಾರಣ ಏನಂದ್ರೆ ಈ ಜನರೇಷನ್​ ಜನ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡ್ತೀದ್ದಾರೆ. ಇದೇ ಕಾರಣಕ್ಕೆ ಸಾವಯವ ಉತ್ಪನ್ನಗಳಿಗೆ ಮೊರೆ ಹೋಗಿದ್ದಾರೆ. ಇದನ್ನೆ ಲಾಭ ಮಾಡ್ಕೊಂಡು ಮೂರರಿಂದ ಆರು ಪಟ್ಟು ಹೆಚ್ಚಿನ ಬೆಲೆಗೆ ಈ ಸಾವಯವ ಪದಾರ್ಥಗಳನ್ನ ಮಾರಾಟ ಮಾಡಲಾಗ್ತಿದೆ. ಸಾವಯವ ಅನ್ನೋ ಕಾರಣಕ್ಕೆ ಜನ ಕೂಡ ಕೇಳಿದಷ್ಟು ಹಣ ಕೊಟ್ಟು ಖರೀದಿ ಮಾಡ್ತಿದ್ದಾರೆ. ಆದ್ರೆ, ಮಾರ್ಕೆಟ್​ನಲ್ಲಿ ಸಾವಯವ ಹೆಸರಲ್ಲಿ ಮಾರಾಟವಾಗ್ತಿರೋ ಪದಾರ್ಥ ನಿಜಕ್ಕೂ ಆರ್ಗ್ಯಾನಿಕ್? ಅನ್ನೋದೆ ಪ್ರಶ್ನೆ.

ನಾವು ಮೊದಲೇ ಹೇಳಿದಂತೆ ಇವತ್ತು ಮಾರ್ಕೆಟ್​ನಲ್ಲಿ ನಾಯಿಕೊಡೆಗಳಂತ ಸಾವಯವ ಪ್ರಾಡಕ್ಟ್​ಗಳು ಲಗ್ಗೆ ಇಟ್ಟಿವೆ. ಆದ್ರೆ ಈ ಪ್ರಾಡಕ್ಟ್​​ಗಳು ನಿಜಕ್ಕೂ ಆರ್ಗ್ಯಾನಿಕ್? ಒಂದು ಪದಾರ್ಥಕ್ಕೆ ಆರ್ಗ್ಯಾನಿಕ್​ ಅಂತ ಕರಿಬೇಕಾದ್ರೆ ಏನೆಲ್ಲ ಮಾನದಂಡಗಳಿರಬೇಕು? ಅಥವಾ ಒಂದು ಆರ್ಗ್ಯಾನಿಕ್ ಬೆಳೆಯನ್ನ ಕೂಡ ಬೆಳೀಬೇಕು ಅಂದ್ರೆ ಏನೆಲ್ಲ ಕ್ರಮಗಳನ್ನ ಅನುಸರಿಸಬೇಕು. ಆರ್ಗ್ಯಾನಿಕ್ ಪದಾರ್ಥ ಮಾರಾಟ ಮಾಡ್ಬೇಕಾದ್ರೆ ಇರೋ ನಿಯಮಗಳು ಏನು?. ಇದಕ್ಕೂ ಮೊದಲು ಇವತ್ತು ಸಾವಯ ಹೆಸರಲ್ಲಿ ಸೇಲ್ ಆಗ್ತಿರೋ ಪದಾರ್ಥಗಳು ಯಾವ್ಯಾವು?.

ಹಾಲಿನ ಪದಾರ್ಥಗಳು

ಮೊಸರು, ಚೀಸ್, ಕೋವ, ಯೋಗರ್ಟ್​, ಬೆಣ್ಣೆ , ತುಪ್ಪ,
ಪನೀರ್, ಐಸ್ ಕ್ರೀಮ, ಹಾಲಿನ ಪುಡಿ, ಪೇಡಾ, ಬರ್ಫಿ, ಲಡ್ಡು
ಮತ್ತು ಸಿಹಿ ತಿಂಡಿಗಳು.

ಬೆಳಗ್ಗೆ ಎದ್ದ ತಕ್ಷಣ ನಮ್ಮ ಜನಕ್ಕೆ ಒಂದು ಕಾಫಿನೂ ಟೀ ಬೇಕೇ ಬೇಕು. ಅದ್ಕೆ ಹಾಲು ಇಲ್ದೇ ಇದ್ರೆ ನಡೆಯುತ್ತಾ? ಆದ್ರೆ ಈ ಹಾಲು ಕೂಡ ಸಾವಯವ ಅಲ್ಲ ಅನ್ನೋದು ತಜ್ಞರ ಅಭಿಪ್ರಾಯ. ಹಾಲಿನಿಂದ ಸಿಗೋ ಮೊಸರು, ಚೀಸ್, ಕೋವ, ಯೋಗರ್ಟ್​, ಬೆಣ್ಣೆ, ತುಪ್ಪ, ಪನೀರ್, ಐಸ್ ಕ್ರೀಮ, ಹಾಲಿನ ಪುಡಿ, ಪೇಡಾ, ಬರ್ಫಿ, ಲಡ್ಡು , ಮತ್ತು ಸಿಹಿ ತಿಂಡಿಗಳು. ಇವೆಲ್ಲವನ್ನ ಸಾವಯವ ಪದಾರ್ಥ ಅಂತಲೇ ಹೇಳಿ ಸೇಲ್ ಮಾಡ್ತಿದ್ದಾರೆ.

publive-image

ತರಕಾರಿಗಳು

ಎಲೆ ತರಕಾರಿಗಳು, ಪಾಲಕ್, ಬಸಳೆ, ಮತ್ತು ಇತರೆ ಸೊಪ್ಪುಗಳು.
ಟೊಮೆಟೊ, ಬೆಂಡೆಕಾಯಿ, ಮತ್ತು ಕುಂಬಳಕಾಯಿ.
ಬೇರು ತರಕಾರಿಗಳು, ಆಲೂಗಡ್ಡೆ, ಕ್ಯಾರೆಟ್, ಮತ್ತು ಮೂಲಂಗಿ.
ಕಾಂಡ ತರಕಾರಿಗಳು, ಸೆಲರಿ, ಈರುಳ್ಳಿ, ಮತ್ತು ಬೆಳ್ಳುಳ್ಳಿ.
ಹೂಕೋಸು, ಮತ್ತು ಬ್ರೊಕೋಲಿ

ಇನ್ನು ತರಕಾರಿ ವಿಚಾರಕ್ಕೆ ಬಂದ್ರೆ ಸಾವಯವ ಗೊಬ್ಬರ ಬಳಸಿ ತರಕಾರಿ ಬೆಳೆದ್ದಿದ್ದೇವೆ ಅಂತ ಮಾರ್ಕೆಟ್​ನಲ್ಲಿ ಮಾರಾಟ ಮಾಡ್ತಿದ್ದಾರೆ. ಈ ಪೈಕಿ ಎಲೆ ತರಕಾರಿಗಳು, ಪಾಲಕ್, ಬಸಳೆ, ಮತ್ತು ಇತರೆ ಸೊಪ್ಪುಗಳು,ಟೊಮೆಟೊ, ಬೆಂಡೆಕಾಯಿ, ಮತ್ತು ಕುಂಬಳಕಾಯಿ,ಬೇರು ತರಕಾರಿಗಳು, ಆಲೂಗಡ್ಡೆ, ಕ್ಯಾರೆಟ್, ಮತ್ತು ಮೂಲಂಗಿ, ಬೇರು ತರಕಾರಿಗಳು, ಆಲೂಗಡ್ಡೆ, ಕ್ಯಾರೆಟ್, ಮತ್ತು ಮೂಲಂಗಿ, ಕಾಂಡ ತರಕಾರಿಗಳು, ಸೆಲರಿ, ಈರುಳ್ಳಿ, ಮತ್ತು ಬೆಳ್ಳುಳ್ಳಿ, ಹೂಕೋಸು, ಮತ್ತು ಬ್ರೊಕೋಲಿ ಈ ಪದಾರ್ಥಗಳನ್ನ ಸಹ ಮಾರ್ಕೆಟ್​ನಲ್ಲಿ ಬೇರೆ ಬೇರೆ ಬ್ರ್ಯಾಂಡ್​ಗಳು ಸಾವಯವ ಅಂತ ಮಾರಾಟ ಮಾಡ್ತಿವೆ.

ಹಣ್ಣುಗಳು

ಮಾವಿನಹಣ್ಣು, ಸೇಬು, ದ್ರಾಕ್ಷಿ, ಕಿತ್ತಳೆ, ದಾಳಿಂಬೆ, ಪಪ್ಪಾಯಿ
ನಿಂಬೆ, ನೇರಳೆ

ಈಗಂತೂ ಜನ ಬೆಳಗ್ಗೆ ಬ್ರೇಕ್​ಫಾಸ್ಟ್​ ಅಂತ ಹಣ್ಣುಗಳನ್ನೆ ಸೇವಿಸ್ತಿದ್ದಾರೆ.. ಕಾರಣ ಹೆಲ್ತಿ ಆರೋಗ್ಯದ ಕಾರಣಕ್ಕೆ... ಆದ್ರೆ ಈ ಹಣ್ಣುಗಳು ಕೂಡ ಸಾವಯವಲ್ಲ ಎನ್ನಲಾಗ್ತಿದೆ. ಮಾವಿನಹಣ್ಣು, ಸೇಬು, ದ್ರಾಕ್ಷಿ, ಕಿತ್ತಳೆ, ದಾಳಿಂಬೆ, ಪಪ್ಪಾಯಿ, ನಿಂಬೆ, ನೇರಳೆ, ಹಣ್ಣುಗಳನ್ನ ಸಾವಯವ ಕ್ರಮ ಅನುಸರಿಸಿಯೇ ಬೆಳೆದಿದ್ದಾರೆ ಅಂತೇಳಿ ಅದಕ್ಕೊಂದು ಬ್ರ್ಯಾಂಡ್​ ನೇಮ್ ಕೊಟ್ಟು ಸೇಲ್ ಮಾಡಲಾಗ್ತಿದೆ.

ಕೇವಲ ಹಾಲು, ಹಣ್ಣು, ತರಕಾರಿ ಮಾತ್ರವಲ್ಲ, ಧಾನ್ಯಗಳು, ಮಾಂಸ ಪದಾರ್ಥಗಳೂ ಸಾಹ ಮಾರ್ಕೆಟ್​ನಲ್ಲಿ ದರ್ಬಾರ್ ಮಾಡ್ತಿವೆ. ಆದ್ರೆ ಜನಕ್ಕೆ ಮಾತ್ರ ನಿಜಕ್ಕೂ ಆರ್ಗ್ಯಾನಿಕ್​? ಸಾವಯವ ಕ್ರಮಗಳನ್ನ ಅನುಸರಿಸಿಯೇ ಈ ಪದಾರ್ಥಗಳನ್ನ ಸೇಲ್ ಮಾಡ್ತಿದ್ರಾ? ಅನ್ನೋ ಅರಿವಿಲ್ಲ. ಬ್ರ್ಯಾಂಡ್​​ನವರು ಹೇಳೋದನ್ನ ನಂಬ್ಕೊಂಡು ಗ್ರಾಹಕರು ಮೋಸ ಹೋಗ್ತಿದ್ದಾರೆ.

ಇವತ್ತು ಮಾರ್ಕೆಟ್​ನಲ್ಲಿರೋ ಬಹುತೇಕ ಬ್ರ್ಯಾಂಡ್​​ಗಳು ತಮ್ಮ ಉತ್ಪನ್ನವನ್ನ ಸಾವಯವ ಉತ್ಪನ್ನ ಅಂತ ಹೇಳಿಕೊಳ್ತಿವೆ. ಆದ್ರೆ ಯಾವುದೇ ಒಂದು ಪದಾರ್ಥ ಸಾವಯವ ಅಂತ ಪ್ರೂವ್ ಆಗ್ಬೇಕಾದ್ರೆ ಅದ್ಕೆ ಹತ್ತಾರು ಮಾನದಂಡಗಳಿವೆ. ಇಡೀ ದೇಶದಲ್ಲೇ ಕೇವಲ ಒಂದೇ ರಾಜ್ಯ 100 ರಷ್ಟು ಸಾವಯವ ರಾಜ್ಯ ಅಂತ ಕರೆಸಿಕೊಂಡಿದೆ. ಅದು ಸಿಕ್ಕಿಂ ರಾಜ್ಯ.. ಈ ರಾಜ್ಯದಲ್ಲಿ ಮಾತ್ರ 100 ಪರ್ಸೆಂಟ್​ ಸಾವಯವ ಪದಾರ್ಥಗಳನ್ನ ಸಿಗ್ತಾವೆ ಅಂತ ವರದಿ ಹೇಳುತ್ತೆ. ಹೀಗಾಗಿ ದೇಶದ ಬಹುತೇಕ ರಾಜ್ಯದಲ್ಲಿ ಸಾವಯವ ಹೆಸರಲ್ಲಿ ಜನರಿಗೆ ನಕಲಿ ಪದಾರ್ಥಗಳನ್ನೆ ಮಾರಾಟ ಮಾಡಲಾಗ್ತಿದೆ.

ಸಾವಯವ ಸೀಕ್ರೆಟ್

ಒಂದು ಬ್ರ್ಯಾಂಡ್ ಅಥವಾ ಉತ್ಪನ್ನವು ಸಾವಯವ ಎಂದು ಹೇಳಿಕೊಂಡಾಗ, ಆ ಉತ್ಪನ್ನವು APEDA (Agricultural and Processed Food Products Export Development Authority) ಅಥವಾ FSSAI (Food Safety and Standards Authority of India ) ನಿಂದ ಅನೊಮೋದನೆ ಪಡೆದಿರಬೇಕು. APEDA/ FSSAI ನಿಗದಿಪಡಿಸಿದ ಮಾರ್ಗಸೂಚಿಗಳ ಅಡಿಯಲ್ಲಿ ನಿಗದಿಪಡಿಸಿದ ನಿರ್ದಿಷ್ಟ ಸಾವಯವ ಕೃಷಿ ಮಾನದಂಡ ಬಳಸಿರಬೇಕು. ಅಂತಹ ಉತ್ಪನ್ನಗಳು ರಸಗೊಬ್ಬರಗಳು, ಕೀಟನಾಶಕಗಳು, ಸಿಂಥೆಟಿಕ್​ ಹಾರ್ಮೋನ್ಸ್​ ಅಥವಾ ಇತರ ರಾಸಾಯನಿಕಗಳಿಂದ ಮುಕ್ತವಾಗಿರಬೇಕು. ಕೃಷಿಭೂಮಿಯನ್ನು ಸಾವಯವ ಕೃಷಿಭೂಮಿ ಎಂದು ಕರೆದಾಗ, ಅವನು ಸಾವಯವ ಕೃಷಿ ನಿಯಮಗಳನ್ನು ಅಭ್ಯಾಸ ಮಾಡಬೇಕು. ಆದರೆ ಬಹುತೇಕ ಮಂದಿ ಸಾವಯವ ಅಂತಾ ಹೇಳಿಕೊಳ್ಳುತ್ತಾ ತನ್ನ ಕೃಷಿ ಭೂಮಿಗೆ ಕೀಟನಾಶಕಗಳು ಮತ್ತು ಇತರೆ ರಸಗೊಬ್ಬರಗಳನ್ನು ಬಳಸುತ್ತಲೇ ಇರುತ್ತಾರೆ. ಆದ್ದರಿಂದ, ನಿಜವಾದ ಅರ್ಥದಲ್ಲಿ ಅದನ್ನು ಸಾವಯವ ಎಂದು ಕರೆಯಲ್ಲ. ಹೀಗಿದ್ರೂ ಆ ನಿರ್ದಿಷ್ಟ ಕೃಷಿಭೂಮಿಯಿಂದ ಬೆಳೆಯುವ ಬೆಳೆಗಳು ಸಾವಯವ ಉತ್ಪನ್ನಗಳಾಗಿ ಅರ್ಹತೆ ಪಡೆದುಕೊಳ್ತಿರೋದು ದುರಂತ.

APEDA ಕೊಟ್ಟ ಮಾನದಂಡ ಬಳಸಿದಾಗ ಮಾತ್ರವೇ ಆ ಪದಾರ್ಥವನ್ನ ಆರ್ಗ್ಯಾನಿಕ್ ಅಂತ ಕರೆಯಲಾಗುತ್ತೆ. ಆದ್ರೆ ಇವತ್ತು ಮಾರ್ಕೆಟ್​ನಲ್ಲಿ ಸಿಗೋ ಸಾವಯವ ಆಹಾರ ಪದಾರ್ಥಗಳು ಈ ಮಾನದಂಡ ಬಳಸದೇ ಆರ್ಗ್ಯಾನಿಕ್ ಪದಾರ್ಥಗಳಾಗಿ ಅರ್ಹತೆ ಪಡೆದು ಮಾರ್ಕೆಟ್​ನಲ್ಲಿ ಸೇಲ್ ಆಗ್ತಿವೆ. ಇನ್​ಫ್ಯಾಕ್ಟ್ ಜನ ಕೂಡ ಈ ಬಗ್ಗೆ ಅರಿವಿಲ್ಲದೇ ಅಂಗಡಿಯವರು ಹೇಳೋದನ್ನೆ ನಂಬಿ ಈ ಪದಾರ್ಥಗಳನ್ನ ಖರೀದಿ ಮಾಡಿ ಮೋಸ ಹೋಗ್ತಿದ್ದಾರೆ.

ಶೇ 70 ರಿಂದ 80 ರಷ್ಟು ಫೇಕ್ ಪ್ರಾಡಕ್ಟ್​​ಗಳೇ ಇವತ್ತು ಮಾರ್ಕೆಟ್​ನಲ್ಲಿ ರಾರಾಜಿಸ್ತಿವೆ ಅನ್ನೋದು ತಜ್ಞರ ಅಭಿಪ್ರಾಯ. ಹೀಗಾಗಿ ಸಾವಯ ಹೆಸರಲ್ಲಿ ನಿಮ್ಮ ದೇಹ ಸೇರ್ತಿರೋ ಆಹಾರ ಪದಾರ್ಥ ನಿಜಕ್ಕೂ ಆರ್ಗ್ಯಾನಿಕ್ ಆಗಿರಲ್ಲ ಅಂತಿದ್ದಾರೆ. ಹೀಗಾಗಿ ಆರ್ಗ್ಯಾನಿಕ್​ ಅಂತ ಹೇಳೋ ಪದಾರ್ಥಗಳನ್ನ ಖರೀದಿಸುವ ಮುನ್ನ ಸ್ವಲ್ಪ ಹುಷಾರ್ ಆಗಿರೋದು ಒಳ್ಳೆಯದು.

publive-image

ಈ ಮೋಸ ತಡೆಯೋದು ಹೇಗೆ?

ಮಾರ್ಕೆಟ್​ನಲ್ಲಿ ಮಾರಾಟವಾಗ್ತಿರೋ ಸಾವಯವ ಪದಾರ್ಥಗಳಲ್ಲಿ ಶೇ.90 ರಷ್ಟು ಪದಾರ್ಥಗಳೆಲ್ಲ ನಕಲಿಯೇ ಆಗಿದೆ. ಆದ್ರೆ ಈ ಪದಾರ್ಥಗಳೆಲ್ಲ ಸಾವಯವ ಅಂತಲೇ ಪರೀಕ್ಷೆ ಮಾಡೋದೇಗೆ.. ಗ್ರಾಹಕರೇ ಖುದ್ದಾಗಿ ಹೋಗಿ ಚೆಕ್ ಮಾಡೋದಕಂತು ಆಗಲ್ಲ. ಹಾಗಾದ್ರೆ ಈ ಮೋಸವನ್ನ ತಡೆಯೋದು ಹೇಗೆ?. ಆರೋಗ್ಯ ಚೆನ್ನಾಗಿರಲಿ ಅಂತ ಖರೀದಿ ಮಾಡೋ ಪದಾರ್ಥ ಸಾವಯವನಾ?, ಅಲ್ವಾ ಅನ್ನೋದು ಪತ್ತೆ ಹಚ್ಚೋದೇಗೆ?.

ಜನ ಆರೋಗ್ಯದ ದೃಷ್ಟಿಯಿಂದ ಸಾವಯವ ಪದಾರ್ಥಗಳನ್ನೆ ಸೇವಿಸ್ಬೇಕು ಅಂತ ಮುಂದಾಗಿದ್ದಾರೆ ನಿಜ.. ಹಾಗಂತ ಈ ಸಾವಯವ ಪದಾರ್ಥಗಳ ಬೆಳೆಯೋದಾಗ್ಲಿ ಅಥವಾ ಉತ್ಪಾದಿಸೋದಾಗ್ಲಿ ಈಗ ಶುರು ಮಾಡಿದ್ದಲ್ಲ. ಹಳೆ ಕಾಲದಿಂದಲೂ ಈ ಪದ್ಧತಿಯನ್ನ ಅನುಸರಿಸಿಕೊಂಡು ಬಂದಿದ್ದಾರೆ. ಆದ್ರೆ ಯಾವಾಗ ದೇಹ ಸೇರ್ತಿರೋ ಪದಾರ್ಥಗಳೆಲ್ಲ ಕಲಬೆರಕೆಯಾಗ್ತಿದೆ ಅನ್ನೋದು ಅರಿವಾಗ್ತಾ ಹೋಯ್ತು. ಜನ ಆಗ ರಾಸಾಯನಿಕ ಮುಕ್ತ ಆಹಾರವನ್ನ ಸೇವಿಸ್ಬೇಕು ಅನ್ನೋ ಕಾರಣಕ್ಕೆ ಆರ್ಗ್ಯಾನಿಕ್ ಕಡೆ ಮುಖ ಮಾಡಿದ್ದಾರೆ. ಅಷ್ಟಕ್ಕೂ ಈ ಆರ್ಗ್ಯಾನಿಕ್​ ಅಂದ್ರೆ ಏನು?.

ಸಾವಯವ ಎಂದರೇನು..?

ಕೀಟನಾಶಕಗಳು ಮತ್ತು ಸಂಶ್ಲೇಷಿತ ರಸಗೊಬ್ಬರಗಳನ್ನು ಬಳಸದೆ, ಮಣ್ಣಿನ ಆರೋಗ್ಯ ಮತ್ತು ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ರೀತಿಯಲ್ಲಿ ಬೆಳೆಗಳನ್ನು ಬೆಳೆಸುವುದು. ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ಬೆಳೆಗಳನ್ನು ಬೆಳೆಯುವುದು.

ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಯಾವುದೇ ರಾಸಾಯನಿಕವನ್ನ ಬಳಸದೇ ಬೆಳೆಗಳನ್ನ ಬೆಳೆಯುವುದನ್ನ ಸಾವಯವ ಪದ್ದತಿ ಅಂತ ಕರೆಯಲಾಗುತ್ತೆ. ಸಾವಯವ ಕೃಷಿಯಲ್ಲಿ, ಕೀಟನಾಶಕಗಳು ಮತ್ತು ಸಂಶ್ಲೇಷಿತ ರಸಗೊಬ್ಬರಗಳನ್ನು ಬಳಸುವುದಿಲ್ಲ. ಬದಲಾಗಿ, ಕಾಂಪೋಸ್ಟ್, ಹಸಿರು ಗೊಬ್ಬರ ಮತ್ತು ಇತರ ಸಾವಯವ ವಸ್ತುಗಳನ್ನು ಬಳಸ್ಬೇಕು. ಈ ಸಾವಯವ ಕೃಷಿಯಲ್ಲಿ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ರೋಗಗಳನ್ನು ತಡೆಗಟ್ಟಲು ಸಾವಯವ ವಸ್ತುಗಳನ್ನು ಮಾತ್ರ ಬಳಸಲಾಗುತ್ತದೆ. ಸಾವಯವ ಕೃಷಿಗೆ ಪೂರಕವಾಗಿ ಮೊದಲು ಭೂಮಿಯನ್ನು ಹದ ಮಾಡಬೇಕು. ಭೂಮಿಯಲ್ಲಿ ಯಾವುದೇ ರೀತಿಯ ಕೆಮಿಕಲ್ಸ್​ ಇರಬಾರದು. ಮಣ್ಣಿನ ಪರೀಕ್ಷೆ ನಂತರ ಭೂಮಿಯಲ್ಲಿ ಬೆಳೆ ಬೆಳೆಯಬೇಕು. ಬೆಳೆ ಬೆಳೆಯುವಾಗ ಗಾಳಿಯಿಂದ ಹಾಗೂ ನೀರಿನಿಂದ ರಾಸಾಯನಿಕಗಳು ಈ ಭೂಮಿಗೆ ತಾಕಬಾರದು. ಅಷ್ಟಕ್ಕೂ ಈ ಸಾವಯವ ಕೃಷಿಯ ವಿಧಾನಗಳು ಏನೇನು?.

ಇದನ್ನೂ ಓದಿ: ಭಾರತ-ಬ್ರಿಟನ್​ ಒಪ್ಪಂದ; ರೈತರು, ಮೀನುಗಾರರಿಗೆ ಗುಡ್​ನ್ಯೂಸ್​.. ಸ್ಕಾಚ್ ವಿಸ್ಕಿ, ದುಬಾರಿ ಕಾರುಗಳ ಬೆಲೆ ಕಡಿಮೆ..!

publive-image

ಸಾವಯವ ಕೃಷಿ ವಿಧಾನಗಳೇನು..?

ಕಾಂಪೋಸ್ಟ್ ಬಳಕೆ: ಸಸ್ಯ ಮತ್ತು ಪ್ರಾಣಿಗಳ ತ್ಯಾಜ್ಯವನ್ನು ಬಳಸಿ ಕಾಂಪೋಸ್ಟ್ ತಯಾರಿಸಲಾಗುತ್ತದೆ. ಇದು ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಾಯ ಮಾಡುತ್ತದೆ.
ಹಸಿರು ಗೊಬ್ಬರ ಬಳಕೆ: ಕೆಲವು ಬೆಳೆಗಳನ್ನು ಮಣ್ಣಿನಲ್ಲಿ ಬೆಳೆಸಿ, ನಂತರ ಅವುಗಳನ್ನು ಮಣ್ಣಿನಲ್ಲಿ ಹೂಳಲಾಗುತ್ತದೆ. ಇದು ಮಣ್ಣಿಗೆ ಪೋಷಕಾಂಶ ಒದಗಿಸುತ್ತದೆ.
ಜೈವಿಕ ಕೀಟ ನಿಯಂತ್ರಣ: ಕೀಟಗಳನ್ನು ನಿಯಂತ್ರಿಸಲು ಜೈವಿಕ ಕೀಟನಾಶಕಗಳನ್ನು ಬಳಸಲಾಗುತ್ತದೆ. ಇವುಗಳು ನೈಸರ್ಗಿಕವಾಗಿ ಲಭ್ಯವಿರುವ ವಸ್ತುಗಳಿಂದ ತಯಾರಿಸಲಾಗುತ್ತದೆ.
ಮಣ್ಣಿನ ರಕ್ಷಣೆಗೆ ಬೆಳೆ ಸರದಿ: ವಿವಿಧ ಬೆಳೆಗಳನ್ನು ಒಂದರ ನಂತರ ಒಂದರಂತೆ ಬೆಳೆಯುವುದರಿಂದ ಮಣ್ಣಿನ ಆರೋಗ್ಯ ಸುಧಾರಿಸುತ್ತದೆ.
ಜಮೀನಿನ ಸಮಗ್ರ ನಿರ್ವಹಣೆ: ಸಾವಯವ ಕೃಷಿಯಲ್ಲಿ, ಕೃಷಿ ಚಟುವಟಿಕೆಗಳನ್ನು ಪರಿಸರ ವ್ಯವಸ್ಥೆಯೊಂದಿಗೆ ಸಂಯೋಜಿಸಿ ನಿರ್ವಹಿಸಲಾಗುತ್ತದೆ.

ಈ ಎಲ್ಲ ವಿಧಾನಗಳನ್ನ ಬಳಸಿ ಕೃಷಿ ಮಾಡೋ ಮೂಲಕ ಬೆಳೆಗಳನ್ನ ಬೆಳೀಬೇಕು.. ಅಂದಾಗ್ಲೇ ಆ ಪದಾರ್ಥಕ್ಕೆ ಸಾವಯವ ಪದಾರ್ಥ ಅಂತ ಕರೀಬಹುದು. ಆದ್ರೆ ಈಗ ಮಾರ್ಕೆಟ್​ನಲ್ಲಿ ಬಂದಿರೋ ಪ್ರಾಡಕ್ಟ್​ಗಳು ಈ ಪದ್ದತಿಗಳನ್ನ ಬಳಸದೇ, ಸುಖಾ ಸುಮ್ಮನೇ ತಮ್ಮ ಬ್ರ್ಯಾಂಡ್​ಗಳನ್ನ ಆರ್ಗ್ಯಾನಿಕ್ ಬ್ಡ್ರಾಂಡ್ ಅಂತೇಳಿ ಜನರ ಆರೋಗ್ಯಕ್ಕೆ ಕುತ್ತು ತರೋ ಕೆಲಸ ಮಾಡ್ತಿವೆ. ಕೇವಲ ಬೆಳೆ ಮಾತ್ರವಲ್ಲ ಹಾಲಲ್ಲೂ ಆರ್ಗ್ಯಾನಿಕ್​​ ಪದಾರ್ಥಗಳು ಬಂದಿವೆ. ಆದ್ರೆ ಈ ಸಾವಯವ ಹಾಲು ಮತ್ತು ಹಾಲಿನ ಪದಾರ್ಥ ಉತ್ಪಾದಿಸೋಕು ನಿಯಮಗಳಿವೆ.

ಹಾಗಾದ್ರೆ ಈ ತರಹದ ವಂಚನೆಯನ್ನ ತಡೆಗಟ್ಟೋದು ಹೇಗೆ? ನಾವಂತೂ ಖುದ್ದಾಗಿ ತೋಟಕ್ಕೆ ಅಥವಾ ಫ್ಯಾಕ್ಟರಿಗಳಿಗೆ ಹೋಗಿ ಸಾವಯವನಾ? ಇಲ್ವಾ ಅಂತ ಪರೀಕ್ಷೆ ಮಾಡೋದಕ್ಕೆ ಆಗೋದಿಲ್ಲ. ಸಾವಯವ ಹೆಸರಲ್ಲಿ ಜನರ ಮೋಸ ಹೋಗ್ಬಾರದು ಅನ್ನೋ ಕಾರಣಕ್ಕೆ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ವನ್ನು ಸ್ಥಾಪನೆ ಮಾಡಲಾಗಿತ್ತು. ಈ ಪ್ರಾಧಿಕಾರದ ಕೆಲಸವೇ ಆಹಾರದ ಗುಣಮಟ್ಟವನ್ನ ಕಾಪಾಡೋದಾಗಿದೆ.

FSSAI ಕೆಲಸ ಏನು ?

  • ಆಹಾರ ಉತ್ಪನ್ನಗಳಲ್ಲಿ ಉತ್ತಮ ಗುಣಮಟ್ಟ ಕಾಪಾಡುವುದು
  • ತಯಾರಕರ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುವುದು
  • ಆಹಾರ ಉತ್ಪನ್ನಗಳ ಆಮದು, ಮಾರಾಟ, ವಿತರಣೆ ಮತ್ತು
  • ತಯಾರಿಕೆಗೆ ಸಂಬಂಧಿಸಿದಂತೆ ಗುಣಮಟ್ಟ ಕಾಪಾಡುವುದು
  • ಉತ್ಪನ್ನಗಳು ತಯಾರಾಗುವ, ಸಂಗ್ರಹಿಸುವ ಸ್ಥಳದ ಪರಿಶೀಲನೆ
  • ಕಲಬೆರೆಕೆ ಹಾಗೂ ಗುಣಮಟ್ಟವಿಲ್ಲದ ಆಹಾರ ಉತ್ಪಾದಕರ ವಿರುದ್ಧ ಕ್ರಮ!

publive-image

ಜನರ ಆರೋಗ್ಯ ಸುರಕ್ಷತೆಗೆ ಅಂತಲೇ ಈ ಪ್ರಾಧಿಕಾರವಿದ್ದು, ಆಹಾರ ಉತ್ಪನ್ನಗಳಲ್ಲಿ ಉತ್ತಮ ಗುಣಮಟ್ಟ ಕಾಪಾಡುವುದು ಇದರ ಕೆಲಸವಾಗಿದೆ. ಪ್ರಾಧಿಕಾರದ ಮೂಲಕ ತಯಾರಕರ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿ, ಆಹಾರ ಉತ್ಪನ್ನಗಳ ಆಮದು , ಮಾರಾಟ, ವಿತರಣೆ ಮತ್ತು ತಯಾರಿಕೆಗೆ ಸಂಬಂಧಿಸಿದಂತೆ ಗುಣಮಟ್ಟ ಕಾಪಾಡಲಾಗುತ್ತೆ. ಉತ್ಪನ್ನಗಳು ತಯಾರಾಗುವ, ಸಂಗ್ರಹಿಸುವ ಸ್ಥಳದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸೋದು.. ಒಂದ್ವೆಳೆ ಕಲಬೆರೆಕೆ ಹಾಗೂ ಗುಣಮಟ್ಟವಿಲ್ಲದ ಆಹಾರ ಉತ್ಪಾಸಿಸೋದು ಕಂಡು ಬಂದ್ರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದು ಪ್ರಾಧಿಕಾರದ ಕೆಲಸವಾಗಿದೆ.

ಲೈಸೆನ್ಸ್‌ ರದ್ದು ಮಾಡಬಹುದು

ಒಂದು ವೇಳೆ ಪ್ರಾಧಿಕಾರದ ಈ ನಿಯಮ ಉಲ್ಲಂಘಿಸಿದ್ರೆ, ನಿಯೋಜಿತ ಅಧಿಕಾರಿಯು ಆತನಿಗೆ ಆಹಾರೋತ್ಪನ್ನಗಳ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಸೂಚಿಸಿ ನೋಟಿಸ್‌ ಜಾರಿ ಮಾಡುವ ಅಧಿಕಾರ ಕೂಡ ಹೊಂದಿದ್ದಾರೆ. ತಯಾರಕರು ಅಥವಾ ಉತ್ಪಾದಕರು ನೋಟಿಸ್‌ಗೂ ಕ್ಯಾರೆ ಅನ್ನದಿದ್ದರೆ ಆತನ ಪರವಾನಗಿಯನ್ನು ಅಮಾನತ್ತಿನಲ್ಲಿಯೂ ಇಡಬಹುದು.. ಆಗಲೂ ತಯಾರಕ ನಿಯಮ ಪಾಲನೆ ಮಾಡದಿದ್ದರೆ ಲೈಸೆನ್ಸ್‌ ರದ್ದು ಮಾಡಲು ನೋಟಿಸ್‌ ನೀಡಬಹುದು ಇಲ್ಲವೇ ಲೈಸೆನ್ಸ್‌ ರದ್ದು ಮಾಡಬಹುದು. FSSAI ನಿಂದ ಲೈಸೆನ್ಸ್​ ಮತ್ತು ಲೇಬಲ್ ಪಡೆದು ಗ್ರಾಹಕರಿಗೆ ವಂಚಿಸಿದ್ರೆ ದಂಡ ಮತ್ತು ಶಿಕ್ಷೆ ಕೂಡ ಇದ್ದು, 5 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 10 ಲಕ್ಷ ದಂಡ ವಿಧಿಸಲು FSSAI ನಡಿ ಅವಕಾಶವಿದೆ.

ಜನರ ಅವಶ್ಯಕತೆಯನ್ನ ಬಂಡವಾಳ ಮಾಡ್ಕೊಂಡು ಮೋಸ ಮಾಡ್ತಿರೋದಂತು ಸತ್ಯ. ಆದ್ರೆ ನೀವು ಸೇವಿಸೋ ಪದಾರ್ಥ ಸಾವಯನಾ ಇಲ್ವಾ ಅಂತ ತಿಳ್ಕೊಳೋಕೆ ತಜ್ಞರು ಹೇಳಿದ ಟೆಕ್ನಿಕ್ ಬಳಸಿ. ಅಥವಾ ನಿಮಗೆ ಅದು ಆರ್ಗ್ಯಾನಿಕ್ ಅಲ್ಲ ಅನಿಸಿದ್ರೆ ಪ್ರಶ್ನೆ ಮಾಡಿ, ಆಗ ಸತ್ಯ ಆಚೆ ಬರುತ್ತೆ. ಆರೋಗ್ಯ ಕಾಪಾಡ್ಕೊಳಬೇಕು ಅಂತ ಸೇವಿಸುವ ಆಹಾರವೇ ನಿಮಗೆ ಮುಳ್ಳಾಗದಿರಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment