T20 World Cup ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸಿಕ್ಕಿದ್ದು ಎಷ್ಟು ಕೋಟಿ ರೂಪಾಯಿ..!

author-image
Ganesh
Updated On
T20 World Cup ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸಿಕ್ಕಿದ್ದು ಎಷ್ಟು ಕೋಟಿ ರೂಪಾಯಿ..!
Advertisment
  • ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ ತಂಡ
  • ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ
  • ಬುಮ್ರಾಗೆ ಪ್ಲೇಯರ್​ ಆಫ್ ದಿ ಟೂರ್ನಮೆಂಟ್​ ಪ್ರಶಸ್ತಿ

ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ ತಂಡಕ್ಕೆ ಭರ್ಜರಿ 20 ಕೋಟಿ 42 ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದೆ. ರನ್ನರ್ ಅಪ್ ಆದ ದಕ್ಷಿಣ ಆಫ್ರಿಕಾಗೆ 10 ಕೋಟಿ 68 ಲಕ್ಷ ರೂಪಾಯಿ ಹಣ ಸಿಕ್ಕಿದೆ.

ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇಡೀ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾಗೆ ಪ್ಲೇಯರ್​ ಆಫ್ ದಿ ಟೂರ್ನಮೆಂಟ್​ ಪ್ರಶಸ್ತಿ ಲಭಿಸಿದೆ.

ಇದನ್ನೂ ಓದಿ:17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್​ ಕಿರೀಟ.. ಪ್ರಧಾನಿ ನರೇಂದ್ರ ಮೋದಿ ಫುಲ್ ಖುಷ್.. ಏನಂದ್ರು..

ಟಿ20 ವಿಶ್ವಕಪ್ ಘೋಷಣೆ ಮಾಡಿದಾಗ ಐಸಿಸಿ ಒಟ್ಟು 11.25 ಮಿಲಿಯನ್ ಅಮೆರಿಕನ್ ಡಾಲರ್ ಘೋಷಣೆ ಮಾಡಿತ್ತು. ಭಾರತೀಯ ಕರೆನ್ಸಿಯಲ್ಲಿ ಅದರ ಮೌಲ್ಯ ಸುಮಾರು ರೂ 93.5 ಕೋಟಿಗೆ ಸಮನಾಗಿದೆ. 2022ರಲ್ಲಿ ನಡೆದ ವಿಶ್ವಕಪ್‌ಗೆ ಹೋಲಿಸಿದರೆ ಬಹುಮಾನದ ಮೊತ್ತ ದುಪ್ಪಟ್ಟಾಗಿದೆ. ಏಕೆಂದರೆ ಎರಡು ವರ್ಷಗಳ ಹಿಂದೆ ವಿಶ್ವಕಪ್​​ನ ಬಹುಮಾನದ ಒಟ್ಟು ಮತ್ತು 46.6 ಕೋಟಿ ರೂಪಾಯಿ ಆಗಿತ್ತು. ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡಕ್ಕೆ 13.3 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮೊದಲು ದಿಢೀರ್ ಸಭೆ ಕರೆದ ಐಸಿಸಿ.. ಏನಾಯ್ತು..?

ಸೆಮಿ ಫೈನಲ್​​​ನಲ್ಲಿ ಸೋತ ತಂಡಗಳಿಗೆ ತಲಾ 6.5 ಕೋಟಿ ರೂಪಾಯಿ ಸಿಕ್ಕಿದೆ. ಸೆಮಿಫೈನಲ್ ತಂಡಗಳಲ್ಲದೇ ಸೂಪರ್-8 ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗದ 4 ತಂಡಗಳಿಗೂ ಸಾಕಷ್ಟು ಹಣವನ್ನು ನಿಗದಿಪಡಿಸಲಾಗಿದೆ. ಸೂಪರ್-8ರಲ್ಲಿ ಆಡಿದ ಪ್ರತಿ ತಂಡಕ್ಕೆ ಅಂದಾಜು 3.19 ಕೋಟಿ ರೂ. ಬಹುಮಾನ ಸಿಗಲಿದೆ. ಗ್ರೂಪ್ ಹಂತದಲ್ಲೇ ಹೊರಬಿದ್ದ ತಂಡಗಳಿಗೂ ಐಸಿಸಿ ಬೇಸರ ಮಾಡುವುದಿಲ್ಲ. ಒಟ್ಟು 12 ತಂಡಗಳಿಗೂ ಪ್ರಯೋಜನ ಇದೆ.

ಇದನ್ನೂ ಓದಿ:ಸೌತ್ ಆಫ್ರಿಕಾಗೆ ಕೊನೆಯ 5 ಓವರ್​​ಗೆ 29 ರನ್ ಬೇಕಿತ್ತು ಅಷ್ಟೇ.. ಆಮೇಲೆ ನಡೆದ ಮ್ಯಾಜಿಕ್ ಹೇಗಿತ್ತು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment