/newsfirstlive-kannada/media/post_attachments/wp-content/uploads/2025/01/DREAMS-OF-THE-DESERT-1.jpg)
ಸೌದಿ ಅರೇಬಿಯಾ ಪ್ರವಾಸೋದ್ಯಮಕ್ಕೆ ಅತಿಹೆಚ್ಚು ಒತ್ತು ನೀಡಲು ಮುಂದಾಗಿದೆ. ಅದರಲ್ಲೂ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ದೂರದೃಷ್ಟಿಯಿಂದಾಗಿ ಹೊಸ ಹೊಸ ಯೋಜನೆಗಳು ಈ ದೇಶದಲ್ಲಿ ಸೃಷ್ಟಿಯಾಗುತ್ತಿವೆ. ಹೀಗಾಗಿಯೇ ಮಧ್ಯಪ್ರಾಚ್ಯದಲ್ಲಿಯೇ ಅತ್ಯಂತ ಐಷಾರಾಮಿ ಐದು ಟ್ರೈನ್ಗಳನ್ನ ಪರಿಚಯಿಸಿ ಅದಕ್ಕೆ ಡ್ರೀಮ್ ಆಫ್ ದಿ ಡೆಸರ್ಟ್ ಅಂದ್ರೆ ಮರಳುಗಾಡಿನ ಕನಸು ಎಂಬ ಹೆಸರನ್ನು ನೀಡಲಾಗಿದೆ. ಸೌದಿ ಅರೇಬಿಯಾ ರೈಲ್ವೇಸ್ ಹಾಗೂ ಇಟಾಲಿಯನ್ ಹಾಸ್ಪಿಟಾಲಿಟಿ ಕಂಪನಿಗಳು ಜಂಟಿಯಾಗಿ ಈ ಒಂದು ಡ್ರೀಮ್ ಆಫ್ ಡೆಸರ್ಟ್ ಟ್ರೈನ್ನಗಳನ್ನು ನಿರ್ಮಾಣ ಮಾಡುತ್ತಿವೆ. ಇದು ಸೌದಿ ಅರೇಬಿಯಾದ ಶ್ರೀಮಂತಿಕೆ ಹಾಗೂ ಪಾರಂಪರಿಕದ ಗುರುತಾಗಿ ನಿಲ್ಲಲಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:American Airlines; ವಿಮಾನ-ಹೆಲಿಕಾಪ್ಟರ್ ಆಕಾಶದಲ್ಲೇ ಡಿಕ್ಕಿ.. ನದಿಯಲ್ಲಿ 19 ಪ್ರಯಾಣಿಕರ ದೇಹ ಪತ್ತೆ
ಸೌದಿ ಪ್ರೆಸ್ ಅಜೆನ್ಸಿ ಪ್ರಕಾರ ಈ ಒಂದು ಯೋಜನೆಯಲ್ಲಿ ಅರ್ಸನೆಲಾ ಕೂಡ ಪಾಲುದಾರಿಯಾಗಿದ್ದು ಈ ಯೋಜನೆಗಾಗಿ ಸುಮಾರು 461 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಸೌದಿ ಅರೇಬಿಯಾ 2030ರ ವರೆಗೆ ಈ ಒಂದು ಕನಸನ್ನು ಸಾಕಾರಗೊಳಿಸಲಿದ್ದು ಐಷಾರಾಮಿ ಪ್ರವಾಸೋಧ್ಯಮ ಹಾಗೂ ದೇಶದ ಆರ್ಥಿಕತೆಯನ್ನು ಇನ್ನಷ್ಟು ಮೇಲೆತ್ತಲು ಈ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿತ್ತದೆಯಂತೆ .
ಡ್ರೀಮ್ ಆಫ್ ಡೆಸರ್ಟ್ನ ಟ್ರೈನ್ಗಳು ಐಷಾರಾಮಿ ಪ್ರಯಾಣದ ಸುಖವನ್ನು ಹಾಗೂ ಅನುಭವವನ್ನು ನೀಡುತ್ತವೆ. ಇಡೀ ಟ್ರೈನ್ಗಳನ್ನೇ ಫೈವ್ ಸ್ಟಾರ್ ಹೋಟೆಲ್ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಟಾಪ್ ಕ್ಲಾಸ್ ಕಂಫರ್ಟ್ ಪ್ರಯಾಣಿಕರಿಗೆ ಒದಗಿಸುವ ಉದ್ದೇಶ ಇದಾಗಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ