ಬಜೆಟ್​​ 2025; ಸಿಗರೇಟ್, ಮದ್ಯದ ಬೆಲೆ ಜಾಸ್ತಿಯಾಗುತ್ತಾ? ಏನಿದು ಸಿನ್ ಟ್ಯಾಕ್ಸ್?

author-image
Gopal Kulkarni
Updated On
ಬಜೆಟ್​​ 2025; ಸಿಗರೇಟ್, ಮದ್ಯದ ಬೆಲೆ ಜಾಸ್ತಿಯಾಗುತ್ತಾ? ಏನಿದು ಸಿನ್ ಟ್ಯಾಕ್ಸ್?
Advertisment
  • ಇಂದು ಮಂಡನೆಯಾಗಲಿರುವ ಬಜೆಟ್​ನಲ್ಲಿ ಸಿನ್​ ಟ್ಯಾಕ್ಸ್​ನಲ್ಲಿ ಏರಿಕೆಯಾಗುತ್ತಾ?
  • ಏನಿದು ಸಿನ್ ಟ್ಯಾಕ್ಸ್, ಈ ಉತ್ಪನ್​​ಗಳ ತೆರಿಗೆಯನ್ನು ಹೆಚ್ಚಿಸಲು ಒತ್ತಡಗಳೇಕೆ?
  • ವಿಶ್ವ ಆರೋಗ್ಯ ಸಂಸ್ಥೆ ಈ ಉತ್ಪನ್ನಗಳ ತೆರಿಗೆ ಶೇಕಡಾ ಎಷ್ಟಿರಬೇಕು ಎಂದಿದೆ?

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ನಿರಂತರ 8ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರು ಮಧ್ಯಮ ವರ್ಗದ ಜನರಿಗೆ ಏನಾದರೂ ರಿಲೀಫ್ ಸಿಗಬಹುದು ಎಂದು ನಿರೀಕ್ಷೆಯಿದೆ. ಈಗಾಗಲೇ ಹಲವು ವಿಚಾರಗಳಲ್ಲಿ ಬೆಲೆ ಏರಿಕೆ ದೊಡ್ಡ ಚರ್ಚೆಯ ವಿಷಯವಾಗುತ್ತಿದೆ. ಆದ್ರೆ ಕೇಂದ್ರ ಸರ್ಕಾರ ಈ ಬಾರಿ ಸಿನ್ ಟ್ಯಾಕ್ಸ್​ನಲ್ಲಿ ಏರಿಕೆ ಮಾಡಿ ಜನರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಜ್ಜೆಯಿಡಲಿದೆಯಾ ಎಂಬ ನಿರೀಕ್ಷೆ ಇದೆ.

2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಗುರುತಿಸಿಕೊಳ್ಳುವ ಗುರಿಯನ್ನಿಟ್ಟುಕೊಂಡಿದೆ. ಆರೋಗ್ಯವಂತ ಜನಸಂಖ್ಯೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ರಾಷ್ಟ್ರ ಹೆಜ್ಜೆಯಿಡಬೇಕಿದೆ. ಇದೇ ಗುರಿಯೊಂದಿಗೆ 2025-56ರ ಸಾಲಿನ ಬಜೆಟ್ ಮಂಡನೆಯಾಗಲಿದೆಯಾ? ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮೇಲೆ ಏನೆಲ್ಲಾ ನಿರೀಕ್ಷೆಗಳಿಗೆ ಹಾಗೂ ಅವರ ಯೋಜನೆಗಳು ಏನಿವೆ ಎಂಬ ಕುತೂಹಲವೊಂದು ಮೊಳಕೆಯೊಡೆದಿದೆ.

ಏನಿದು ಸಿನ್ ಟ್ಯಾಕ್ಸ್ ?

ಸಿನ್ ಟ್ಯಾಕ್ಸ್ ಅಂಧ್​ರೆ ತಂಬಾಕು, ಮದ್ಯ ಹಾಗೂ ಶುಗರಿ ಡ್ರಿಂಕ್​ಗಳ ಮೇಲೆ ವಿಧಿಸುವ ಟ್ಯಾಕ್ಸ ಆಗಿದೆ. ಅದು ಅಲ್ಲದೇ ಜೂಜಾಟಗಳ ಮೇಲೆಯೂ ಕೂಡ ಹೇರುವ ಟ್ಯಾಕ್ಸ್ ಆಗಿದೆ. ಇವುಗಳ ಮೇಲೆ ಅತಿಹೆಚ್ಚು ತೆರೆಗಿ ವಿಧಿಸಿದಲ್ಲಿ ಜನರ ಆರೋಗ್ಯ ರಕ್ಷಣೆ ಮಾಡಬಹುದು ಅವುಗಳ ಬೆಲೆ ಏರಿಕೆಯಿಂದ ಅವುಗಳ ಬಳಕೆಯನ್ನು ಜನರು ಕಡಿಮೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಈ ಉತ್ಪನ್ನಗಳ ಮೇಲೆ ತೆರಿಗೆಯನ್ನು ಹೆಚ್ಚು ಮಾಡಲಾಗುತ್ತದೆ.

ಇದನ್ನೂ ಓದಿ:ಸೋನಿಯಾ ವಿರುದ್ಧ ರಾಷ್ಟ್ರಪತಿಗೆ ಅವಮಾನ ಮಾಡಿದ ಆರೋಪ.. ಟೀಕಿಸುವ ಭರದಲ್ಲಿ ಹೇಳಿದ್ದೇನು?

ಈ ಒಂದು ಉತ್ಪನ್ನಗಳ ಮೇಲೆ ವಸೂಲಾಗುವ ತೆರಿಗೆಗಳು ಕಲ್ಯಾಣ ಯೋಜನೆಗೆ ಮೀಸಲಿಡಲಾಗುತ್ತದೆ, ಆರೊಗ್ಯ ಸೇವೆಗೆ ಹಾಗೂ ಅಡಿಕ್ಷನ್ ಟ್ರಿಟ್ಮೆಂಟ್ ಪ್ರೋಗ್ರಾಮ್​​ಗಳಿಗಾಗಿ ಈ ತೆರಿಗೆ ಹಣವನ್ನು ಬಳಸಲಾಗುತ್ತದೆ. ಅನೇಕ ರಾಷ್ಟ್ರಗಳು ಈ ಸಿನ್ ಟ್ಯಾಕ್ಸ್​​ನ್ನು ರೆವೆನ್ಯೂ ಹೆಚ್ಚಿಸಲು ಹಾಗೂ ಜನರನ್ನು ಆರೋಗ್ಯವಂತರನ್ನಾಗಿ ಇಡಲೆಂದೇ ಹೇರುತ್ತವೆ.

ಕೇಂದ್ರ ಬಜೆಟ್​ ಈ ಬಾರಿ ಸಿನ್ ಟ್ಯಾಕ್ಸ್ ಹೆಚ್ಚಿಸುತ್ತದೆಯಾ? 
ಈ ಬಾರಿ ಕೇಂದ್ರ ಸರ್ಕಾರ ಸಿನ್ ಟ್ಯಾಕ್ಸ್​ನ್ನು ಹೆಚ್ಚಿಸುವ ವಿಚಾರದಲ್ಲಿದೆ ಎಂದು ತಿಳಿದು ಬಂದಿದೆ. 2023ರಲ್ಲಿ ಕೇಂದ್ರ ಸರ್ಕಾರ ತಂಬಾಕಿನ ಮೇಲೆ ಎನ್​ಸಿಸಿಡಿ ರೇಟ್​ನ್ನು ಶೇಕಡಾ 16 ರಷ್ಟು ಹೆಚ್ಚಿಸಿತ್ತು. ಆದರೆ ತೆರಿಗೆ ಏರಿಕೆ ವಿಚಾರದಲ್ಲಿ ಯಾವುದೇ ಬದಲಾವಣೆಯನ್ನು 2024ರ ಬಜೆಟ್​ನಲ್ಲಿ ಮಾಡಲಿಲ್ಲ

ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಪ್ರಕಾರ ತಂಬಾಕು ಉತ್ಪನ್ನಗಳ ಮೇಲೆ ಸುಮಾರು ಕನಿಷ್ಠ ಶೇಡಕಾ 75 ರಷ್ಟು ತೆರಿಗೆಯನ್ನು ಹೆಚ್ಚಿಸಿ ಎಂದು ಹೇಳಲಾಗುತ್ತಿದೆ. ಈ ವಿಷಯದಲ್ಲಿ ಭಾರತದಲ್ಲಿ ತುಂಬಾ ಕಡಿಮೆ ತೆರಿಗೆಯನ್ನು ತಂಬಾಕು ಉತ್ಪನ್ನಗಳ ಮೇಲೆ ಹೇರಲಾಗಿದೆ. ಸಿಗರೇಟ್​ಗಳ ಮೇಲೆ ಶೇಕಡಾ 52.7ನಷ್ಟು ತೆರಿಗೆಯಿದ್ದರೆ ಬೀಡಿಗಳ ಮೇಲೆ ಶೇಕಡಾ 22ರಷ್ಟು ತೆರಿಗೆ ಇದೆ. ಇನ್ನು ಅಗೆಯುವ ಜಗಿಯುವ ತಂಬಾಕಿನ ಮೇಲೆ ಸುಮಾರು ಶೇಕಡಾ 63.8 ರಷ್ಟಿದೆ.

ಇದನ್ನೂ ಓದಿ:ಬಿಜೆಪಿ 2024 ಲೋಕಸಭಾ ಚುನಾವಣೆಗಾಗಿ ಮಾಡಿದ ಖರ್ಚು ಎಷ್ಟು ಸಾವಿರ ಕೋಟಿ; ಇಲ್ಲಿದೆ ರಿಪೋರ್ಟ್!

2022ರಲ್ಲಿ ಸುಮಾರು 41 ದೇಶಗಳು, ಜಾಗತಿಕವಾಗಿ ಶೇಕಡಾ 20ರಷ್ಟು ಜನಸಂಖ್ಯೆಯನ್ನು ಹೊಂದಿದ ದೇಶಗಳು ತಮ್ಮ ದೇಶದ ತಂಬಾಕು ಉತ್ಪನ್ನಗಳ ಮೇಲೆ ಶೇಕಡಾ 75 ರಷ್ಟು ತೆರಿಗೆಯನ್ನು ಹೆಚ್ಚಿಸಿದ್ದವು. ಫಿನ್​ಲ್ಯಾಂಡ್​, ಫ್ರಾನ್ಸ್,ಯುಕೆ ನ್ಯೂಜಿಲೆಂಡ್ ಹಾಗೂ ಗ್ರೀಸ್​ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇಕಡಾ 75ಕ್ಕೆ ಏರಿಸಿದ್ದವು. ಭಾರತದಲ್ಲಿಯೂ ಕೂಡ ಅನೇಕ ತಜ್ಞರು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚು ಮಾಡಿ ಎಂದು ಸಲಹೆ ನೀಡುತ್ತಲೇ ಬಂದಿದ್ದಾರೆ.

ತಂಬಾಕು ಸಂಬಂಧಿತ ಆರೋಗ್ಯ ಸಮಸ್ಯೆಗಳು ಭಾರತದ ಆರೋಗ್ಯ ವ್ಯವಸ್ಥೆಯ ಮೇಲೆ ನೀಗಿಸಲಾರದಂತಹದ ದೊಡ್ಡ ಹೊರೆಯಾಗಿ ಕಾಡುತ್ತಿದೆ. ತೆರಿಗೆ ಹೆಚ್ಚು ಮಾಡುವುದರಿಂದ ತಂಬಾಕು ಸೇವನೆ ಮಾಡುವವರ ಸಂಖ್ಯೆಯೂ ಕೂಡ ಕಡಿಮೆಯಾಗಲಿದೆ ಇದರಿಂದ ಆರೋಗ್ಯವಂತ ಜನಸಂಖ್ಯೆ ಹೆಚ್ಚಿರುವ ದೇಶ ಸೃಷ್ಟಿಯಾಗಲಿದೆ ಎಂದು ನ್ಯಾಷನಲ್ ಕ್ಯಾನ್ಸರ್ ಇನ್​ಸ್ಟಿಟ್ಯೂಟ್​​​ ಏಮ್ಸ್​ನ ಮುಖ್ಯಸ್ಥ ಡಾ ಅಲೋಕ್ ಠಾಕೂರ್ ಹೇಳಿದ್ದಾರೆ. ಅದು ಮಾತ್ರವಲ್ಲ ಒಂದು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚು ಆಗಿದ್ದೇ ಆದರೆ ಜನರೇನು ಪರ್ಯಾಯ ಅಥವಾ ಕಡಿಮೆ ಬೆಲೆಯ ಉತ್ಪನ್ನಗಳ ಮೊರೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment