/newsfirstlive-kannada/media/post_attachments/wp-content/uploads/2025/07/Aadhar_Card.jpg)
ನವದೆಹಲಿ: ದಿ ಅನ್ಕ್ಯೂ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಇಲಾಖೆಯು ಭಾರತದ ನಿವಾಸಿಗಳಿಗೆ ಗುರುತಿನ ಹಾಗೂ ವಿಳಾಸದ ಪುರಾವೆಗಾಗಿ ಆಧಾರ್ ಕಾರ್ಡ್ಗಳನ್ನ ನೀಡುತ್ತದೆ. ಭಾರತದದಲ್ಲಿ ಈಗಾಗಲೇ ಶೇಕಡಾ 90ಕ್ಕಿಂತಲೂ ಅಧಿಕ ಜನರಿಗೆ ಆಧಾರ್ ಕಾರ್ಡ್ ವಿತರಣೆ ಆಗಿದೆ. ಈ ಆಧಾರ್ ಕಾರ್ಡ್ ವಯಸ್ಕರಿಗೆ ಮಾತ್ರವಲ್ಲ, ಮಕ್ಕಳಿಗೂ ಅತ್ಯಂತ ಮುಖ್ಯವಾದ ದಾಖಲೆ ಆಗಿದೆ. ಯಾವ ವಯಸ್ಸಿನಲ್ಲಿ ಮಕ್ಕಳ ಬಯೋಮೆಟ್ರಿಕ್ ಅನ್ನು ಸ್ವೀಕರಿಸಲಾಗುತ್ತದೆ?.
ಆಧಾರ್ ಕಾರ್ಡ್ ನೋಂದಾಣಿ ಮಾಡುವಾಗ 5 ವರ್ಷದ ಒಳಗಿನ ಮಕ್ಕಳ ಬಯೋಮೆಟ್ರಿಕ್ ಮಾಹಿತಿಯನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಮಕ್ಕಳ ಬೆರಳಚ್ಚುಗಳು (fingerprints) ಮತ್ತು ಐರಿಸ್ ಸ್ಕ್ಯಾನ್ (iris scans)ಗಳು ಸ್ಪಷ್ಟವಾಗಿ ಇರುವುದಿಲ್ಲ. ಆದ್ದರಿಂದ ಆಧಾರ್ ಕಾರ್ಡ್ ಮಾಡುವಾಗ ಮಗುವಿನ ಫೋಟೋ ಹಾಗೂ ಸಾಮಾನ್ಯ ಮಾಹಿತಿ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಆದರೆ ಮಗುವಿನ ನಿರ್ದಿಷ್ಟ ವಯಸ್ಸಿನ ನಂತರ, ಆಧಾರ್ ಕಾರ್ಡ್‌ನಲ್ಲಿ ಬಯೋಮೆಟ್ರಿಕ್ಸ್ ನವೀಕರಿಸಲೇಬೇಕು.
ಯುಐಡಿಎಐ ಇಲಾಖೆಯ ಪ್ರಕಾರ ಮಕ್ಕಳು ನಿರ್ದಿಷ್ಟ ವಯಸ್ಸಿಗೆ ಬಂದಾಗ ಬಯೋಮೆಟ್ರಿಕ್ ಮಾಹಿತಿ ನವೀಕರಣ ಮಾಡಬೇಕು. 5 ವರ್ಷ ಆಗಿದ್ದಾಗ ಮೊದಲ ಬಾರಿಗೆ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಬೇಕು. 5 ವರ್ಷದಿಂದ 7 ವರ್ಷದ ಒಳಗೆ ಒಮ್ಮೆ ಅಪ್ಡೇಟ್ ಮಾಡಿಸಬೇಕು. ಇದಾದ ಮೇಲೆ ಮತ್ತೆ 15ನೇ ವರ್ಷದಲ್ಲಿ ಬಯೋಮೆಟ್ರಿಕ್ ಅಪ್ಡೇಟ್ ಮಾಡಲೇಬೇಕು. ಇದು ನಿಮ್ಮ ಮಗುವಿನ ಜೀವನಕ್ಕೆ ಅನುಕೂಲವಾಗುತ್ತದೆ.
ಇದನ್ನೂ ಓದಿ: ಒಂದು ಮಹಾಗನಿ ಮರಕ್ಕೆ 1 ಲಕ್ಷ ರೂಪಾಯಿ.. ಹೊಲದಲ್ಲಿ ಈ ಸಸಿ ನೀವೂ ಬೆಳೆಯಬಹುದು..!
ಒಂದು ವೇಳೆ ಮಗುವಿನ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಲ್ಲ ಎಂದರೆ ಆಧಾರ್ ಕಾರ್ಡ್ ನಿಷ್ಕ್ರಿಯ ಮಾಡಲಾಗುತ್ತೆ. ಇದರಿಂದ ಶಾಲೆ, ಕಾಲೇಜು, ಬ್ಯಾಂಕ್ ಸೇರಿದಂತೆ ಇತರೆ ಪ್ರಮುಖವಾಗಿ ಬೇಕಾದ್ದಲ್ಲೇ ಮಾನ್ಯ ಆಗುವುದಿಲ್ಲ. ಹೀಗಾಗಿ ಆಧಾರ್ ಸೇವಾ ಕೇಂದ್ರಕ್ಕೆ ತೆರಳಿ ನಿಮ್ಮ ಮಕ್ಕಳಿಗೆ 15 ವರ್ಷಗಳು ತುಂಬಿದ್ರೆ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ