/newsfirstlive-kannada/media/post_attachments/wp-content/uploads/2024/04/DINNER.jpg)
ಉತ್ತಮ ಆರೋಗ್ಯಕ್ಕೆ ಊಟದ ಸಮಯ ಬಹಳ ಮುಖ್ಯ. ಅನೇಕರು ರಾತ್ರಿ ತಡವಾಗಿ ಊಟ ಮಾಡುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ರಾತ್ರಿ ಊಟವನ್ನು ಬೇಗ ಮುಗಿಸುವುದರಿಂದ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಸಣ್ಣ ಅಭ್ಯಾಸವಾದರೂ, ಅದರಿಂದಾಗುವ ಪ್ರಯೋಜನಗಳು ಹಲವು.
ಸಂಜೆಯ ನಂತರ ದೇಹದಲ್ಲಿನ ಚಯಾಪಚಯ (Metabolism) ಕ್ರಿಯೆಯ ಪ್ರಮಾಣ ಕಡಿಮೆ ಇರುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಅದು ದೇಹದಲ್ಲಿ ಕೊಬ್ಬಾಗಿ ಬದಲಾಗುವ ಅಪಾಯವಿದೆ. ಇದರಿಂದ ತೂಕ ಹೆಚ್ಚಾಗುವುದು, ಅಜೀರ್ಣ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ನಾವು ರಾತ್ರಿಯ ಊಟವನ್ನು ಬೇಗ ಮಾಡಿದ್ರೆ, ಉತ್ತಮ ಆರೋಗ್ಯ ಕಾಡಪಾಡಿಕೊಳ್ಳಬಹುದು.
ಇದನ್ನೂ ಓದಿ: ಮಾವಿನ ಹಣ್ಣು ತಿಂದಾಗ ಅಪ್ಪಿ-ತಪ್ಪಿಯೂ ಈ ತಪ್ಪು ಮಾಡಲೇಬೇಡಿ..! ತುಂಬಾನೇ ಡೇಂಜರ್!
ರಾತ್ರಿ ವಿಶ್ರಾಂತಿ ಬಯಸುತ್ತದೆ..
ರಾತ್ರಿ ವೇಳೆ ನಮ್ಮ ದೇಹವು ವಿಶ್ರಾಂತಿ ಬಯಸುತ್ತದೆ. ನಾವು ತಡವಾಗಿ ಊಟ ಮಾಡಿದಾಗ ದೇಹವು ವಿಶ್ರಾಂತಿಯ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಾಗುವುದಿಲ್ಲ. ಆದರೆ ಮೊದಲೇ ಊಟ ಮಾಡುವುದರಿಂದ ದೇಹವು ಆರಾಮವಾಗಿ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುತ್ತದೆ. ಮಾತ್ರವಲ್ಲ, ನಿದ್ರೆಯು ಕೂಡ ತುಂಬಾ ಚೆನ್ನಾಗಿ ಆಗುತ್ತದೆ. ಒಳ್ಳೆಯ ನಿದ್ರೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಆರೋಗ್ಯ ಸುಧಾರಿಸುತ್ತದೆ.
ದೇಹದಲ್ಲಿರುವ ಲೆಪ್ಟಿನ್ ಮತ್ತು ಗ್ರೆಲಿನ್ ಹಾರ್ಮೋನುಗಳು (leptin and obesity) ಆಹಾರ ಸೇವಿಸಿದ ನಂತರ ಹಸಿವು ಮತ್ತು ಹೊಟ್ಟೆ ತುಂಬುವಿಕೆಯ ಭಾವನೆ ನಿಯಂತ್ರಿಸುತ್ತವೆ. ತಡವಾಗಿ ಊಟ ಮಾಡುವುದರಿಂದ ಈ ಹಾರ್ಮೋನುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನಿದ್ರೆಗೆ ಅಗತ್ಯವಾದ ಮೆಲಟೋನಿನ್ (melatonin) ಎಂಬ ಹಾರ್ಮೋನ್ ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸುತ್ತದೆ. ಇದರಿಂದ ರಾತ್ರಿ ನಿದ್ರೆ ಬರದೆ ಪರದಾಡಬೇಕಾಗುತ್ತದೆ.
/newsfirstlive-kannada/media/post_attachments/wp-content/uploads/2024/10/SLEEP.jpg)
ಅಲ್ಲದೇ ರಾತ್ರಿ ವೇಳೆ ಹೆಚ್ಚಾಗಿ ಕಾರ್ಬೋಹೈಡ್ರೇಟ್ ಇರುವ ಪದಾರ್ಥ ಸೇವಿಸೋದ್ರಿಂದ ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಟೈಪ್ 2 ಮಧುಮೇಹ ಬರುವ ಅಪಾಯ ಹೆಚ್ಚಿಸುತ್ತದೆ. ಹಾಗಿದ್ದೂ ನೀವು ನಿಮ್ಮ ಊಟ ಬೇಗನೆ ಮುಗಿಸಿದರೆ ಇಂಥ ಸಮಸ್ಯೆ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.
ಎಷ್ಟು ಗಂಟೆಗೆ ಊಟ ಮಾಡಬೇಕು..?
ಸಂಜೆ 7 ಗಂಟೆಯ ಮೊದಲು ಊಟ ಮುಗಿಸುವುದು ಉತ್ತಮ ಅಭ್ಯಾಸ. ಇದರಿಂದ ಬೆಳಗ್ಗೆ ಬೇಗನೆ ಎದ್ದು ಆರೋಗ್ಯಕರ ಉಪಹಾರ ಸೇವಿಸಲು ಸಹಾಯ ಆಗುತ್ತದೆ. ಈ ರೀತಿಯ ಅಭ್ಯಾಸ ದೇಹದ ಸದೃಢಕ್ಕೆ ಮತ್ತು ದಿನಚರಿಯ ಅಗತ್ಯ ನಿಯಮಗಳ ಅನುಸರಿಸಲು ಸಹಾಯ ಮಾಡ್ತದೆ.
ಇದನ್ನೂ ಓದಿ: ಮೊಸರು ತಿಂದ ತಕ್ಷಣ ಯಾಕೆ ನೀರು ಕುಡಿಯಬಾರದು..? ರಾತ್ರಿ ವೇಳೆ ಇದನ್ನು ತಿನ್ನೋದ್ರಿಂದ ಆಗುವ ಸಮಸ್ಯೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us