newsfirstkannada.com

×

Bhoomi Hunnime: ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಸಂಭ್ರಮ; ಈ ಹಬ್ಬದ ವೈಶಿಷ್ಟ್ಯಗಳೇನು..?

Share :

Published October 17, 2024 at 12:04pm

Update October 17, 2024 at 12:06pm

    ಗರ್ಭಿಣಿಯಂತೆ ಮೈತುಂಬಿಕೊಂಡಿರುತ್ತಾಳೆ ಭೂಮಿ ತಾಯಿ

    ಈ ಹಬ್ಬದ ಹಿನ್ನೆಲೆ ಏನು? ಯಾಕಾಗಿ ರೈತರು ಆಚರಿಸ್ತಾರೆ?

    ಸೀಗೆ, ಭೂಮಿ ಹುಣ್ಣಿಮೆಗೂ ವ್ಯತ್ಯಾಸ ಇದೆಯಾ?

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಹಬ್ಬದ ಸಡಗರ ಮನೆ ಮಾಡಿದೆ. ರೈತಾಪಿ ವರ್ಗ ಭೂಮಿ ಹುಣ್ಣಿಮೆ ಹಬ್ಬವನ್ನು ಇಂದು ಸಂಭ್ರಮದಿಂದ ಆಚರಣೆ ಮಾಡ್ತಿದ್ದಾರೆ. ಭೂತಾಯಿ ಈ ಸಮಯದಲ್ಲಿ ಗರ್ಭಿಣಿಯಂತೆ ಬೆಳೆಗಳಿಂದ ಮೈತುಂಬಿಕೊಂಡಿರುತ್ತಾಳೆ ಎಂಬ ಪ್ರತೀತಿ ಇದೆ. ಹಾಗಾಗಿ ಭೂಮಿ ತಾಯಿಯನ್ನು ಗರ್ಭಿಣಿಯ ಸ್ಥಾನದಲ್ಲಿಟ್ಟು ಸೀಮಂತದ ಸಂಭ್ರಮದಂತೆ ರೈತರು ಪೂಜೆ ಸಲ್ಲಿಸುತ್ತಾರೆ.

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ರೈತರು ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ. ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ತಯಾರಿಸಿ ಭೂಮಿ ತಾಯಿಗೆ ಅರ್ಪಣೆ ಮಾಡ್ತಾರೆ. ಭೂಮಣ್ಣಿ ಬುಟ್ಟಿ ತಯಾರಿಸಿ ಚಿತ್ತಾರ ಬರೆದು ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಣೆ ಮಾಡುತ್ತಾರೆ. ಮನೆಯಲ್ಲಿ ತಯಾರಿಸಿದ ಭೋಜನಗಳನ್ನು ಹೊಲಕ್ಕೆ ಸಮರ್ಪಿಸಿ, ನಂತರ ಹೊಲದಲ್ಲೇ ರೈತ ಕುಟುಂಬ ಸಾಮೂಹಿಕ ಊಟ ಮಾಡುತ್ತದೆ. ಮಳೆಯ ನಡುವೆಯೂ ಹಬ್ಬದ ಸಂಭ್ರಮ ಜೋರಾಗಿದೆ.

ಇದನ್ನೂ ಓದಿ: ಹಬ್ಬಕ್ಕೆ ಸ್ಪೆಷಲ್​ ಆಫರ್; OPPO ಮೊಬೈಲ್​ ಖರೀದಿಸಿ ಬರೋಬ್ಬರಿ 10 ಲಕ್ಷ ರೂಪಾಯಿ ಗೆಲ್ಲಿ..!

ಹಿನ್ನೆಲೆ ಏನು..?
ಮಹಾನವಮಿ ಮತ್ತು ವಿಜಯದಶಮಿ ಕಳೆದು ಐದನೇ ದಿನ ಬರುವ ಹುಣ್ಣಿಮೆಯೇ ಭೂಮಿ ಹುಣ್ಣಿಮೆ. ಮಲೆನಾಡಿನ ರೈತಾಪಿ ವರ್ಗ ಇದನ್ನು ಭೂಮಿ ಹುಣ್ಣಿಮೆ ಎಂದು ಆರಾಧಿಸಿದರೆ, ಬಯಲು ಸೀಮೆಯ ರೈತರು ಸೀಗೆ ಹುಣ್ಣಿಮೆ ಎಂದು ಸಂಭ್ರಮಿಸುತ್ತಾರೆ. ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಸಗಡರದಿಂದ ಈ ಹಬ್ಬ ನಡೆಯುತ್ತಿದೆ. ಜಿಲ್ಲೆಗಳಲ್ಲಿರುವ ಆಯಾ ಸಮುದಾಯದ ಸಂಪ್ರದಾಯದಂತೆ ಕಟ್ಟು ನಿಟ್ಟಾಗಿ ಆಚರಣೆ ಮಾಡಲಾಗುತ್ತದೆ.

ಹೊಡೆಗೆ ಬಂದ ಸಸಿಗಳೆಂದರೆ ಗರ್ಭವತಿಯಾದ ಹೆಣ್ಣೆಂದು ಕಲ್ಪಿಸಿಕೊಂಡು ಆಕೆಗೆ ಬಯಕೆ ತೀರಿಸುವುದೇ ಈ ಹಬ್ಬದ ವಿಶಿಷ್ಟತೆ. ಸಸಿ ಎಡೆ, ಇಲಿ ಎಡೆ, ಗೂಳಿ ಎಡೆ ಎಂದು ಬಾಳೆ ಎಲೆಯಲ್ಲಿ ಇಟ್ಟ ಎಡೆಗಳನ್ನು ಪೂಜೆ ಮಾಡುತ್ತಾರೆ. ಪೂಜೆಗೆ ಮೊದಲು ಎರಡು ಸಸಿಗಳಿಗೆ ತೋರಣ ಕಟ್ಟಿ ಮನೆಯ ಯಜಮಾನಿ ತನ್ನ ತಾಳಿಸರವನ್ನು ಕಟ್ಟಿ, ಹೂ ಮುಡಿಸಿ, ಪೂಜೆ ಮಾಡುತ್ತಾಳೆ. ನಂತರ ಗೂಳಿ ಎಡೆಯನ್ನು ಹೊಲದಿಂದ ದೂರ ಹೋಗಿ ಇಟ್ಟು ಬರುತ್ತಾರೆ. ಇಲ್ಲಿ ಗೂಳಿ ಎಡೆ ಅಂದರೆ ದೆವ್ವದ ಕಾಗೆ. ಆ ಕಾಗೆ ಬಂದು ಎಡೆ ತಿನ್ನೋವರೆಗೂ ರೈತರು ಹೊಲದಿಂದ ಮನೆಗೆ ಬರಲ್ಲ. ಮನೆ ಮಂದಿ ಯಾರೂ ಕೂಡ ಊಟ ಮಾಡಲ್ಲ.

ಇದನ್ನೂ ಓದಿ: ತುತ್ತು ಅನ್ನಕ್ಕೂ ಪರದಾಡ್ತಿದ್ದ ರಿಷಭ್ ಪಂತ್.. ಇಂದು ಕೋಟಿ, ಕೋಟಿಗೆ ಬೆಲೆಬಾಳುವ ರೀತಿ ಬೆಳೆದಿದ್ದೇಗೆ?

ಆ ದಿನ ಭೂಮಾತೆಗೆ ಪೂಜೆ ಮಾಡಿ ಒಳ್ಳೆಯ ಫಸಲನ್ನು ನೀಡು ಎಂದು ಬೇಡಿಕೊಳ್ಳಲಾಗುತ್ತದೆ. ಇಷ್ಟು ವರ್ಷಗಳ ಕಾಲ ಅನ್ನವನ್ನು ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಲಾಗುತ್ತದೆ. ಪೂಜೆ ನಂತರ ಕುಟುಂಬದವರೆಲ್ಲರೂ ಒಟ್ಟಿಗೆ ಸೇರಿ ತಮ್ಮ ಜಾಗದಲ್ಲಿ ಕುಳಿತು ಊಟ ಮಾಡ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bhoomi Hunnime: ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಸಂಭ್ರಮ; ಈ ಹಬ್ಬದ ವೈಶಿಷ್ಟ್ಯಗಳೇನು..?

https://newsfirstlive.com/wp-content/uploads/2024/10/BHOOMI-HUNNIME-3.jpg

Load More