ದರ್ಶನ್​ ಸರ್ ಕೇಸ್​ಗೂ, ರೀಲ್ಸ್‌ಗೂ ಸಂಬಂಧ ಏನು? ಕೊನೆಗೂ ಮಚ್ಚು ಬಿಸಾಕಿದ ಸತ್ಯ ಬಿಚ್ಚಿಟ್ಟ ರಜತ್‌!

author-image
Veena Gangani
Updated On
ದರ್ಶನ್​ ಸರ್ ಕೇಸ್​ಗೂ, ರೀಲ್ಸ್‌ಗೂ ಸಂಬಂಧ ಏನು? ಕೊನೆಗೂ ಮಚ್ಚು ಬಿಸಾಕಿದ ಸತ್ಯ ಬಿಚ್ಚಿಟ್ಟ ರಜತ್‌!
Advertisment
  • ಪೊಲೀಸರ ಮುಂದೆ ಅಸಲಿ ಮಚ್ಚಿನ ಬಗ್ಗೆ ಸತ್ಯ ಬಿಚ್ಚಿಟ್ಟದ್ದು ಹೇಗೆ?
  • ಮಚ್ಚು ಹಿಡಿದು ರೀಲ್ಸ್​ ಮಾಡಿ ತಗ್ಲಾಕೊಂಡು ವಿನಯ್, ರಜತ್​ ಕಿಶನ್
  • ಈ ರೀಲ್ಸ್​ ಕೇಸ್​ ಬೇರೆ ಆಯಾಮವನ್ನೇ ಪಡೆದುಕೊಳ್ತಿದೆ ಎಂದ ರಜತ್

ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಒಂದೇ ಒಂದು ರೀಲ್ಸ್​ನಿಂದ ಕುಚುಕು ಸ್ನೇಹಿತರ ಮಧ್ಯೆ ಬಿರುಕು ಮೂಡುವಂತೆ ಮಾಡಿದೆ. ಕನ್ನಡದ ಬಿಗ್​ಬಾಸ್​​ ಮಾಜಿ ಸ್ಪರ್ಧಿಗಳಾದ ವಿನಯ್​ ಗೌಡ ಹಾಗೂ ರಜತ್​ ಕಿಶನ್​ ಸೋಷಿಯಲ್​ ಮೀಡಿಯಾದಲ್ಲಿ ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿದ್ದರು. ಈ ಸಂಬಂಧ ವಿನಯ್ ಗೌಡ ಹಾಗೂ ರಜತ್​ ಕಿಶನ್​ನನ್ನು ಮಾರ್ಚ್ 25ರಂದು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಮೂರನೇ ಮಹಡಿ ಹೊತ್ತಿ ಉರಿಯುತ್ತಿತ್ತು.. ಇಬ್ಬರು ಮಕ್ಕಳನ್ನ ರಕ್ಷಿಸಿ ತಾಯಿ ಗ್ರೇಟ್​ ಎಸ್ಕೇಪ್​..! Video

publive-image

ಪೊಲೀಸರು ಇಬ್ಬರನ್ನು ವಶಕ್ಕೆ ಪಡೆಯುತ್ತಿದ್ದಂತೆ ರಜತ್​ ಪತ್ನಿ ಅಕ್ಷತಾ ಫೈಬರ್ ಮಚ್ಚನ್ನು ಪೊಲೀಸರಿಗೆ ತಂದು ಕೊಟ್ಟಿದ್ದರು. ಆದ್ರೆ ರೀಲ್ಸ್​ನಲ್ಲಿ ಬಳಸಿದ ಅಸಲಿ ಮಚ್ಚಿಗೂ ಹಾಗೂ ಪೊಲೀಸರಿಗೆ ನೀಡಿದ್ದ ಫೈಬರ್ ಮಚ್ಚಿಗೂ ತುಂಬಾನೇ ವ್ಯತ್ಯಾಸ ಇದ್ದಿದ್ದರಿಂದ ಆರೋಪಿಗಳನ್ನು ಬಂಧನವಾಗಿತ್ತು. ವಿಚಾರಣೆ ವೇಳೆ ರಜತ್ ಕಿಶನ್​​ ಅಸಲಿ ಸತ್ಯ ಬಾಯ್ಬಿಟ್ಟಿದ್ದರು. ಚಿತ್ರದುರ್ಗದ ರೇಣುಕಾಸ್ವಾಮಿ ಮೃತದೇಹ ಬಿಸಾಡಿದ್ದ ಜಾಗದಲ್ಲೇ ರಜತ್ ಮಚ್ಚು ಬಿಸಾಡಿರೋದಾಗಿ ಒಪ್ಪಿಕೊಂಡಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದಾಗ ರೀಲ್ಸ್​ನಲ್ಲಿ ಬಳಸಿದ್ದ ಮಚ್ಚನ್ನೂ ಸುಮ್ಮನಹಳ್ಳಿ ರಾಜಕಾಲುವೆಗೆ ಬಿಸಾಡಿದ್ದಾಗಿ ತಿಳಿಸಿದ್ದರು.

publive-image

ಹೀಗಾಗಿ ವಿನಯ್ ರಜತ್​ರನ್ನು ಸುಮ್ಮನಹಳ್ಳಿ ರಾಜಕಾಲುವೆ ಬಳಿ ಕರೆದುಕೊಂಡು ಹೋಗಿ ಮಹಜರ್ ನಡೆಸಿದ್ದಾರೆ. ಆದ್ರೆ, ಪೊಲೀಸರ ಮಹಜರ್ ವೇಳೆಯೂ ರೀಲ್ಸ್​ನಲ್ಲಿ ಬಳಸಿದ್ದ ಮಚ್ಚು ಪತ್ತೆಯಾಗಿರಲಿಲ್ಲ.

publive-image

ಇದೀಗ ಖುದ್ದು ರಜತ್​ ಕಿಶನ್​ ಅವರೇ ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ್ದಾರೆ. ನಮಗೆ ರೀಲ್ಸ್​ನಿಂದ ಕೇಸ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಬಳಿಸಿದ್ವಿ. ನಾವು ಬಳಸಿದ್ದು ಫೈಬರ್ ಮಚ್ಚು. ಬಟ್ ನನ್ನ ಕಾರಿನಲ್ಲಿ ಫೈಬರ್ ಮಚ್ಚಿತ್ತು. ಕಾರಿನಲ್ಲಿರೋ ಮಚ್ಚನ್ನ ಕೊಡಬಾರದು ಅನ್ನೋ ಕಾರಣಕ್ಕೆ ಸೆಟ್​ನಲ್ಲಿದ್ದ ಮಚ್ಚು ಕೊಟ್ಟಿದ್ದು ನಿಜ. ನಾವು ಬಳಸಿದ್ದ ಮಚ್ಚನ್ನ ನಾನೇ ಎಸೆದಿದ್ದೆ. ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಎಸೆದಿದ್ದೆ. ವಿನಯ್ ಕೈಯಲ್ಲಿ ನಾನೇನು ಕೊಲೆ, ದರೋಡೆ ಮಾಡ್ಸಿಲ್ಲ. ವಿನಯ್ ನನ್ನ ಬಗ್ಗೆ ಮಾತನಾಡಿದ್ದು ಇಷ್ಟ ಆಗಿಲ್ಲ. ಸದ್ಯ ಇಬ್ಬರ ಮಧ್ಯೆ ಸಂಬಂಧ ಸರಿ ಇಲ್ಲ, ವೈಮನಸ್ಸು ಇದೆ ಎಂದಿದ್ದಾರೆ.

publive-image

ಶೋನಲ್ಲಿ ನನಗೆ ದರ್ಶನ್​ ಅವರ ಕ್ಯಾರೆಕ್ಟರ್ ಕೊಟ್ಟಿದ್ದರು. ಇಬ್ಬರು ಚೆನ್ನಾಗಿ ಕಾಣ್ತಾ ಇದ್ವಿ ಅಂತ ರೀಲ್ಸ್​ ಮಾಡಿದ್ವಿ. ಆದ್ರೆ, ಇಷ್ಟೊಂದು ದೊಡ್ಡ ಸಮಸ್ಯೆ ಆಗುತ್ತೆ ಅಂತ ಗೊತ್ತಾಗಲಿಲ್ಲ. ಆದ್ರೆ ಇದನ್ನು ಮಾತ್ರ ನನ್ನ ಮೇಲೆ ಮಾತ್ರ ತಿರುಗಿಸುವುದು ಸರಿಯಲ್ಲ ಎಂದಿದ್ದಾರೆ. ಹೀಗೆ ಮಾತನ್ನು ಮುಂದುವರೆಸಿದ ಅವರು, ಆ ಮಚ್ಚು ನನ್ನ ಗಾಡಿಯಲ್ಲೇ ಇತ್ತು. ಕಾರಲ್ಲಿ ಇರೋದು ಬೇಡ ಅಂತ ನಾನು ಅದನ್ನು ಎಸೆದೆ. ಆದ್ರೆ, ಇದು ಬೇರೆ ಆಯಾಮವನ್ನೇ ತೆಗೆದುಕೊಂಡಿದೆ. ಈಗ ದರ್ಶನ್​ ಸರ್ ಅವರ ಕೇಸ್​ಗೂ,​ ರೇಣುಕಾಸ್ವಾಮಿ ಸಾವಿಗೆ ಲಿಂಕ್​ ಮಾಡ್ತಾ ಇದ್ದಾರೆ ಇದು ಸರಿಯಲ್ಲ. ಮಚ್ಚು ಬಿಸಾಕಿದ್ದು ನನಗೆ ಗೊತ್ತಿತ್ತು. ಆದ್ರೆ ಅವರಿಗೆ ಇದರ ಬಗ್ಗೆ ಗೊತ್ತಿರಲಿಲ್ಲ. ಅದೇ ತರದ ಮಚ್ಚನ್ನು ತಂದು ಕೊಟ್ಟರು. ಮತ್ತೆ ಮುಂಜಾನೆ ನೋಡಿದ್ರೆ ಅದು ಮಿಸ್​ ಮ್ಯಾಚ್​ ಆಗಿದೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment