newsfirstkannada.com

ಬ್ರ್ಯಾಂಡೆಡ್‌ ಟೀ ಶರ್ಟ್‌, ಶೂ, ಡ್ರೈಫ್ರೂಟ್ಸ್‌.. ವಿಲ್ಸನ್‌ ಗಾರ್ಡನ್ ನಾಗನ ಲಕ್ಸುರಿ ಲೈಫ್ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!

Share :

Published August 27, 2024 at 8:46pm

Update August 27, 2024 at 8:48pm

    ಎಣ್ಣೆ, ಸಿಗರೇಟ್‌ ಮುಟ್ಟಲ್ಲವಂತೆ ವಿಲ್ಸನ್​ ಗಾರ್ಡನ್​ ರೌಡಿ ನಾಗ!

    ಪರಪ್ಪನ ಜೈಲಲ್ಲೇ ಸ್ಟೈಲಾಗಿ ನಾಗನ ಹುಡುಗರ ಫೋಟೋ ಶೂಟ್

    ವಿಸಿಟರ್​ಗಳು ಬಂದಾಗ ನಾಗನನ್ನ ಮೀಟ್ ಮಾಡುತ್ತಿದ್ದ ದರ್ಶನ್​

ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ದರ್ಶನ್‌ ದಿಲ್ದಾರ್‌ ಆಗಿದ್ದನ್ನು ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಆದ್ರೆ, ದರ್ಶನ್‌ ಜೊತೆ ಇದ್ದ ನಟೋರಿಯಸ್‌ ನಾಗನ ಲೈಫ್‌ ಸ್ಟೈಲ್‌ ಕೇಳಿದ್ರೆ ಖಂಡಿತ ಹೌಹಾರಿ ಬಿಡ್ತೀರಿ. ಯಾಕಂದ್ರೆ, ಯಾವುದೇ ಬ್ಯುಸಿನೆಸ್‌ಮ್ಯಾನ್‌, ಸ್ಟಾರ್‌ ಹೀರೋಗಳಿಗೂ ಕಮ್ಮಿ ಇಲ್ಲದ ಲಕ್ಸುರಿ ಲೈಫ್‌ ಆತನದ್ದು. ಅದು ಜೈಲಲ್ಲಿ ಇದ್ದುಕೊಂಡೆ ಮಾಡ್ತಿದ್ದಾನೆ. ಹಾಗಾದ್ರೆ, ಆತ ಹಾಕ್ತಿರೋ ಟೀಶರ್ಟ್‌, ಬ್ರಾಂಡೆಡ್‌ ಶೂ.. ಎಷ್ಟು ಕಾಸ್ಟ್‌ಲೀ? ಎಣ್ಣೆ ಮುಟ್ಟದ, ಧಮ್‌ ಹೊಡೆಯದ ನಾಗನಿಗೆ ಇರೋ ಶೋಕಿಯಾದ್ರು ಏನು?

ಇದನ್ನೂ ಓದಿ: ಜೈಲೊಳಗೆ ಬಿಂದಾಸ್ ದರ್ಶನ.. ದುಡ್ಡಿದ್ರೆ ಏನ್ ಬೇಕಾದ್ರೂ ಸಿಗುತ್ತಾ? ಕಷ್ಟಪಟ್ಟು ಅರೆಸ್ಟ್ ಮಾಡಿದ ಪೊಲೀಸ್‌ ಕಥೆ ಏನು?

ಸಣ್ಣಪುಟ್ಟ ಕ್ರೈಂ ಮಾಡ್ತಾ ಅಂಡರ್​​ವರ್ಲ್ಡ್​ಗೆ ಎಂಟ್ರಿ

ಒಂದು ಸಣ್ಣ ಮುಳ್ಳಿನ ಗಿಡವನ್ನ ಸಣ್ಣದಾಗಿರುವಾಗ್ಲೇ ಕಿತ್ತಾಕಿಬಿಡಬೇಕು. ಇಲ್ದಿದ್ರೆ ಅದು ದೊಡ್ಡ ಮರವಾಗಿ ಬಿದ್ಮೇಲೆ ಕ್ಲೀನ್​ ಮಾಡೋರ ಕಾಲಿಗೇ ಚುಚ್ಚಿದ್ರೂ ಅನುಮಾನವಿಲ್ಲ. ಭೂಗತ ಲೋಕಕ್ಕೆ ಎಂಟ್ರಿ ಕೋಡೋನು ಮೊದಲು ಸಣ್ಣ ಸಣ್ಣ ಕ್ರೈಂಗಳಿಂದ ಶುರುಮಾಡ್ತಾನೆ. ಮುಂದೆ ದೊಡ್ಡ ಕ್ರಿಮಿನಲ್​ ಆಗಿ ಬೆಳೆದು ಸಮಾಜದಲ್ಲಿ ಶೋಕಿಗೆ ಅಂತಲೇ ಲಕ್ಷ ಲಕ್ಷ ಉಡಾಯಿಸಿ ಪವರ್​​ಫುಲ್​ ವ್ಯಕ್ತಿಯಾಗ್ತಾನೆ. ರಿಯಲ್​ ಲೈಫಲ್ಲೂ ಮೊದಲು ಸಣ್ಣಪುಟ್ಟ ಕ್ರೈಂ ಮಾಡ್ತಾ ಅಂಡರ್​​ವರ್ಲ್ಡ್​ಗೆ ಎಂಟ್ರಿ ಕೊಟ್ಟ ಕುಖ್ಯಾತ ಕ್ರಿಮಿನಲ್ ಒಬ್ಬ ಇವತ್ತು ಪರಪ್ಪನ ಅಗ್ರಹಾರ ಜೈಲನ್ನೇ ತನ್ನ ವೈಭೋಗಕ್ಕಾಗಿ ಫೈವ್​ಸ್ಟಾರ್ ಹೋಟೆಲ್​ ಮಾಡ್ಕೊಂಡಿದ್ದಾನೆ.

ದರ್ಶನ್​ ಜೊತೆಗಿದ್ದ ಸ್ಫೋಟಗೊಂಡ್ಮೇಲೆ ಈ ವಿಲ್ಸನ್​ ಗಾರ್ಡನ್​ ನಾಗ ಯಾರು? ಹಾಗೂ ಅವನ ಕ್ರೈಂ ಹಿಸ್ಟರಿ ಎಂಥಾದ್ದು ಅನ್ನೋದನ್ನ ಈಗಾಗಲೇ ಗೊತ್ತಾಗಿದೆ. ಇವನ್ಯಾಕ್​ ಜೈಲು ಸೇರಿದ, ದರ್ಶನ್​ಗೂ​ ಇವ್ನಿಗೂ ಹೇಗ್​ ಪರಿಚಯ?. ಆದ್ರೆ, ನಿಮಗೆ ಅದಕ್ಕಿಂತಲೂ ಮುಖ್ಯವಾಗಿ ನಾಗನ ಬಗ್ಗೆ ಮತ್ತೊಂದಷ್ಟು ಇಂಟರೆಸ್ಟಿಂಗ್​ ವಿಚಾರಗಳನ್ನ ಹೇಳಲೇಬೇಕು. ಇವ್ನು ಜೈಲಲ್ಲಿದ್ರೂ, ಮನೇಲೋ ಅಥವಾ ಮಾಲಲ್ಲೋ ಇರೋ ರೀತಿ ಬಗ್ಗೆ ಕೇಳಿದ್ರೆ ಅಕ್ಷರಶಃ ಹುಬ್ಬೇರಿಸ್ತೀರಾ. ಈ ವಿಲ್ಸನ್​ ಗಾರ್ಡನ್​ ನಾಗ, ಬರೀ ರೌಡಿಶೀಟರ್​ ಅಷ್ಟೇ ಅಲ್ಲ. ಬೆಂಗಳೂರು ಅಂಡರ್​​ವರ್ಲ್ಡ್​ನ ಮೋಸ್ಟ್​ ಸ್ಟೈಲಿಶ್​ ಌಂಡ್​ ದಿಲ್ದಾರ್ ರೌಡಿ ಅಂತಲೇ ಕುಖ್ಯಾತಿ. ಆ ಕುಖ್ಯಾತಿಗೆ ಪ್ರೂಫ್​ ರೀತಿ ಸಿಕ್ಕಿದ್ದು ನಾಗ ಇಲ್ಲಿ ದರ್ಶನ್​ ಜೊತೆಗೆ ಕುಳಿತಿರುವಾಗ ಧರಿಸಿರೋ ದುಬಾರಿ ಟೀಶರ್ಟ್ ಸತ್ಯ ಗೊತ್ತಾದ್ಮೇಲೆ.

ಟೀ ಶರ್ಟ್​ ರೇಟ್​ ₹20 ಸಾವಿರ? ಜೈಲಲ್ಲಿ ದರ್ಶನ್​ ಆಪ್ತ ದಿಲ್ದಾರ್​!

ದರ್ಶನ್​ ಟೀ ಕುಡಿತಾ, ಧಮ್ ಹೊಡೀತಾ ಆರಾಮಾಗಿದ್ರೆ ಈ ನಾಗ ಅಲ್ಲೇ ಪಕ್ಕದಲ್ಲೇ ಕೂತ್ಕೊಂಡು ಸ್ಮೈಲ್​​ ಮಾಡ್ತಿದ್ದಾರೆ. ಅಂದಹಾಗೇ, ಈ ಫೋಟೋ ನೋಡ್ತಾ ಇದ್ದಂತೆ ಹಲವರ ಕಣ್ಣು ನಾಗ ಧರಿಸಿದ್ದ ಟೀ ಶರ್ಟ್​ ಮೇಲೆ ಹೋಗಿತ್ತು. ಇಲ್ಲಿ ರೌಡಿಶೀಟರ್ ನಾಗ ಹಾಕಿರೋದು ಸಾಮಾನ್ಯವಾದ ಪುಡಿರೌಡಿಗಳು ಧರಿಸೋ ಟೀಶರ್ಟ್​ ಅಲ್ಲ. ಬದಲಾಗಿ, ಜಗತ್ತಿನ ಒಂದು ಖ್ಯಾತ ಬ್ರ್ಯಾಂಡ್​ನ ಟೀಶರ್ಟ್​. ಪ್ಯಾರಿಸ್ ಮೂಲದ ಲಕ್ಸುರಿ ಬ್ರ್ಯಾಂಡ್ ಆಗಿರೋ ಬಾಲ್ಮೈನ್​ ಕಂಪನಿಯ ಟೀಶರ್ಟ್​ನ ಇಲ್ಲಿ ನಾಗ ಧರಿಸಿದ್ದಾನೆ. ಅಂದಹಾಗೇ, ಲಕ್ಷ ಲಕ್ಷ ದುಡಿಯೋರು, ಉದ್ಯಮಿಗಳು, ದೊಡ್ಡ ದೊಡ್ಡ ಸೆಲೆಬ್ರಿಟಿಗಳಷ್ಟೇ ಧರಿಸೋ ಈ ಟೀಶರ್ಟ್​​ನ ಬೆಲೆ ಏನಿಲ್ಲ ಅಂದ್ರೂ ಮಿನಿಮಮ್ 15ರಿಂದ 20 ಸಾವಿರ ರೂಪಯಿ ಇರುತ್ತೆ. ಇನ್ನೂ ಜಾಸ್ತಿನೇ ಇರಬಹುದು. ಕೊಲೆ ಕೇಸಲ್ಲಿ ಫಿಟ್​ ಆಗಿರೋ ನಾಗನ ಬ್ರ್ಯಾಂಡೆಡ್​ ಶೋಕಿ ಈ ಟೀಶರ್ಟ್​​ನಿಂದ ಆಚೆ ಬಂದಿದೆ. ನಲವತ್ತು, ಐವತ್ತು ಸಾವಿರದವರೆಗೂ ಟೀಶರ್ಟ್​ ಕೊಂಡುಕೊಳ್ತಾನೆ ಅಂದ್ರೆ ನಾಗ ಅದೆಷ್ಟು ಸಂಪಾದನೆ ಮಾಡ್ಬಹುದು ಅನ್ನೋ ಪ್ರಶ್ನೆ ಮೂಡಿದೆ.

ವಿಲ್ಸನ್​ ಗಾರ್ಡನ್​ ನಾಗ ಧರಿಸಿದ್ದ ಈ ಲಕ್ಸುರಿ ಬ್ರ್ಯಾಂಡ್​ ಟೀ ಶರ್ಟ್ ಒಂದು ಎಕ್ಸಾಂಪಲ್‌ ಅಷ್ಟೇ. ಬಟ್, ಇಂತಹದ್ದೇ ಸಾಕಷ್ಟು ಬ್ರ್ಯಾಂಡಡ್​ ಐಟಮ್ಸ್​ ಮೊನ್ನೆವರೆಗೂ ಜೈಲಲ್ಲಿ ನಾಗನಿದ್ದ ಬ್ಯಾರಕ್​​ನಲ್ಲಿತ್ತು ಎನ್ನುವ ಮಾಹಿತಿ ಇದೆ. ಬರೀ ಬಟ್ಟೆ ಅಷ್ಟೇ ಅಲ್ಲ ನಾಗನಿದ್ದ ಜಾಗದಲ್ಲಿ ದುಬಾರಿ ಬೆಲೆಯ ಬ್ರ್ಯಾಂಡೆಡ್‌ ಶೂಗಳೂ ಪತ್ತೆಯಾಗಿದ್ದವಂತೆ. ಹಾಗಾದ್ರೆ, ನಾಗನಿಗೆ ಫಾರಿನ್​ ಕಂಪನಿಗಳ ಟೀಶರ್ಟ್ಸ್, ಶೂಸ್, ಚಪ್ಪಲಿಗಳನ್ನೆಲ್ಲಾ ಯಾರ್ ಕಳಿಸ್ತಾರೆ ಅಂತಾ ಕೇಳಿದ್ರೆ, ಅದಕ್ಕುತ್ತರ ಬೇರಾರೂ ಅಲ್ಲ, ಜೈಲಿನ ಹೊರಗಿರೋ ನಾಗನ ಕಡೆ ಹುಡುಗರು.

ಇದನ್ನೂ ಓದಿ: ದರ್ಶನ್ ಬಳ್ಳಾರಿ ಜೈಲಿಗೆ.. ಪವಿತ್ರಾ ಎಲ್ಲಿಗೆ? ಕೊಲೆ ಆರೋಪಿಗಳು ಯಾವ್ಯಾವ ಜೈಲಿಗೆ ಶಿಫ್ಟ್? ಇಲ್ಲಿದೆ ಕಂಪ್ಲೀಟ್ ಮಾಹಿತಿ!

ಜೈಲು ಕೋಣೆಯಲ್ಲಿ ಡ್ರೈಫ್ರೂಟ್ಸ್​, ಜಿಮ್, ಬಿರಿಯಾನಿ?!

ದರ್ಶನ್‌ ಜೊತೆಗಿರೋ ಈ ಫೋಟೋದಲ್ಲಿ ನಾಗ ಇದ್ದಾನೆ. ಸಖತ್ ಕಟ್ಟುಮಸ್ತಾದ ದೇಹವನ್ನೇ ಮೇಂಟೇನ್​ ಮಾಡಿದ್ದಾನೆ. ಇನ್ನು, ಜೈಲಲ್ಲಿರೋ ನಾಗ ಇಷ್ಟೊಂದು ಫಿಟ್​ ಆಗಿರೋದಕ್ಕೆ ಹೇಗೆ ಸಾಧ್ಯ ಅನ್ನೋ ಪ್ರಶ್ನೆಗಳು ಮೂಡುತ್ವೆ ಅಲ್ಲ. ಅದಕ್ಕೆ ಉತ್ತರವೂ ಸಿಕ್ಕಿದೆ. ಜೈಲಲ್ಲಿ ನಾಗನ ಟೀಮ್​ಗೆ ಸೇರಿದ 30 ಮಂದಿಯಷ್ಟು ಹುಡುಗರಿದ್ದಾರಂತೆ. ಅವರ ಸೆಕ್ಯೂರಿಟಿಯಲ್ಲೇ ನಾಗ ಪ್ರತಿನಿತ್ಯ ತನ್ನ ಬ್ಯಾರಕ್​ನಲ್ಲೇ ಜಿಮ್‌ ಮಾಡ್ತಾನಂತೆ. ಇನ್ನು, ಇಲ್ಲೂ ಒಂದು ಇಂಟರೆಸ್ಟಿಂಗ್​ ವಿಷ್ಯ ಅಂದ್ರೆ, ಪೋಕ್ಸೋ ಕೇಸಲ್ಲಿ ಜೈಲು ಸೇರಿರೋ ಕೈದಿಯೊಬ್ಬ ನಾಗನಿಗೆ ಜಿಮ್​ ಟ್ರೇನರ್ ಆಗಿದ್ದಾನಂತೆ. ನಾಗ ಅಷ್ಟೇ ಅಲ್ಲ, ಅವ್ನ ಹುಡುಗರೂ ಕೂಡ ಜಿಮ್‌ ಮಾಡ್ತಾರೆ ಅನ್ನೋ ವಿಷ್ಯವೂ ಗೊತ್ತಾಗಿದೆ. ಇದಿಷ್ಟೇ ಅಲ್ಲ, ಮೊನ್ನೆ ಮೊನ್ನೆಯಷ್ಟೇ ಸಿಸಿಬಿ ಅಧಿಕಾರಿಗಳು ಜೈಲನ್ನ ರೇಡ್​​ ಮಾಡ್ದಾಗ ನಾಗ ಇದ್ದ ಬ್ಯಾರಕ್​ ನೋಡಿ ದಂಗಾಗಿ ಹೋಗಿದ್ರಂತೆ. ಯಾಕಂದ್ರೆ, ನಾಗನ ಬ್ಯಾರಕ್​ನಲ್ಲಿ ಕೆಜಿಗಟ್ಟಲೆ ಡ್ರೈಫ್ರೂಟ್ಸ್​ ಪತ್ತೆ ಹಚ್ಚಿದ್ರಂತೆ.

ನಾಗ ಜೈಲಲ್ಲೇ ಇದ್ರೂ ಅವ್ನಿಗೆ ಲಕ್ಷ ಲಕ್ಷ ಹಣ ಬರುತ್ತೆ. ತನ್ನ ಹುಡುಗರಿಗೆ ಹೇಳಿ ಹೊರಗಡೆಯಿಂದ ದುಡ್ಡು ಕಾಸು ಡೀಲ್​ ಮಾಡಿಸ್ತಾನೆ ಅನ್ನೋದು ಕೂಡ ಕೆಲವು ಪೊಲೀಸರೇ ಹೇಳುವ ಮಾತು. ಹಾಗೇ ಸಿಗೋ ಹಣವನ್ನ ನಾಗ ತನ್ನೊಬ್ಬನಿಗಾಗಿ ಮಾತ್ರ ಖರ್ಚು ಮಾಡೋದಿಲ್ವಂತೆ. ಒಂದ್ವೇಳೆ ಒಮ್ಮೆಗೆ ನಾಗ ಬಟ್ಟೆ ಆರ್ಡರ್ ಮಾಡಿದ ಅಂದ್ರೆ ಜೈಲಲ್ಲಿ ತನ್ನ ಜೊತೆಗೆ ಅಂದರ್ ಆಗಿರೋ ಹುಡುಗರಿಗೂ ಸೇರಿ ಆರ್ಡರ್ ಮಾಡ್ತಾನೆ ಎನ್ನುವ ಮಾಹಿತಿ ಇದೆ. ಆ ಮಾಹಿತಿಗೆ ಪುಷ್ಟಿ ನೀಡುವಂತಹ ಮತ್ತೊಂದು ಫೋಟೋ ಸ್ಫೋಟವಾಗಿದೆ.

ಚಡ್ಡಿ, ಕ್ರಾಕ್ಸ್​, ಸ್ಲಿಪ್ಪರ್.. ಟ್ರಿಪ್​ಗೆ ಹೋಗುವಂತೆ ಪೋಸ್​!

ನಾಗನ ಜೊತೆಗಿನ ರೌಡಿಶೀಟರ್​​ಗಳು ಬಾಸ್ಕಟ್​ಬಾಲ್​ ಟೀಶರ್ಟ್ಸ್, ಶಾರ್ಟ್ಸ್, ಕ್ರಾಕ್ಸ್​ ಎಲ್ಲವನ್ನ ಹಾಕೊಂಡು ಹೈಟೆಕ್​ ಆಗಿ ಪೋಸ್​ ಕೊಡ್ತಿರೋ ಇವರಿಗೆಲ್ಲ ನಾಗಾನೇ ಸ್ಪಾನ್ಸರ್ ಅನ್ನೋ ಮಾಹಿತಿಯೂ ಇದೆ. ನಾಗ ಆರ್ಡರ್ ಮಾಡಿದ್ರೆ ಒಟ್ಟಿಗೆ ತನ್ನ ಹುಡುಗರಿಗೂ ಸೇರಿಸಿ 30 ಜೊತೆ ಬಟ್ಟೆ ಚಪ್ಪಲಿಗಳನ್ನ ಆರ್ಡರ್ ಮಾಡ್ತಾನಂತೆ. ಇವ್ರ ಖರ್ಚು ವೆಚ್ಚಗಳನ್ನೆಲ್ಲಾ ಅವನೇ ನೋಡಿಕೊಳ್ತಾನಂತೆ. ಅಂದಹಾಗೇ, ಇವ್ರಲ್ಲಾ. ಕಳೆದ ವರ್ಷ ರೌಡಿಶೀಟರ್ ಸಿದ್ದಾಪುರ ಮಹೇಶನನ ನಾಗನಿಗೋಸ್ಕರ ಮುಗಿಸಿ ಜೈಲು ಸೇರಿರುವವರು.

3ನೇ ಬ್ಯಾರಕ್​ನಿಂದ ಸೆಕ್ಯೂರಿಟಿ 1ಕ್ಕೆ ಹೋಗುತ್ತಿದ್ದ ದರ್ಶನ್​!

ಇನ್ನು, ಜೈಲಲ್ಲಿ ಇಷ್ಟೊಂದು ದಿಲ್ದಾರ್​​ ಆಗಿರೋ ಆಗ ನಾಗನಿಗೂ ದರ್ಶನ್​ಗೂ ತುಂಬಾ ವರ್ಷಗಳಿಂದ ಪರಿಚಯ. ಆ ಪರಿಚಯ ಫ್ರೆಂಡ್​​ಶಿಪ್​ ಆಗಿ ದರ್ಶನ್​ ಜೈಲಿಗೆ ಹೋದ್ಮೇಲೂ ಅದು ಕಂಟಿನ್ಯೂ ಆಗಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ, ನಾಗನನ್ನ ಮೀಟ್​ ಮಾಡೋದಕ್ಕೆ ದರ್ಶನೇ ಖುದ್ದಾಗಿ ಅವನ ಬ್ಯಾರಕ್​ಗೆ ಹೋಗ್ತಿದ್ನಂತೆ. ಜೈಲಿನ ಸೆಕ್ಯೂರಿಟಿ ಒಂದ್ರಲ್ಲಿ ನಾಗ ಇದ್ದು ವಿಸಿಟರ್​ಗಳು ತನ್ನ ಭೇಟಿಗೆ ಬಂದಾಗ ದರ್ಶನ್​ ಅವ್ರನ್ನ ಮೀಟ್​ ಮಾಡೋದಕ್ಕೆ 3ನೇ ಬ್ಯಾರಕ್​ನಿಂದ ಬರ್ತಿದ್ನಂತೆ. ಅದೇ ಟೈಮಲ್ಲಿ ನಾಗನ ಬ್ಯಾರಕ್​ಗೆ ಅಧಿಕಾರಿಗಳ ಕಣ್ತಪ್ಪಿಸಿ ಹೋಗ್ತಿದ್ನಂತೆ. ಆಗ ಅಲ್ಲಿರೋ ಪೊಲೀಸ್​ ಆಫೀಸರ್ಸ್​ ನೀವ್​ ಹೀಗೆ ಭೇಟಿ ಮಾಡಬಾರದು ಅಂತಾ ಬುದ್ಧಿ ಹೇಳಿದ್ರೂ ನಾಗ ಒಂದರೆಡು ನಿಮಿಷ ತಡೀರಿ ಸರ್ ಅಂತಿದ್ನಂತೆ.

ಇದನ್ನೂ ಓದಿ: ಪರಪ್ಪನ ಜೈಲಿನಿಂದ ಸಸ್ಪೆಂಡ್ ಆದ ಅಧಿಕಾರಿಗಳು ಯಾರು ಯಾರು.. ಗೃಹ ಸಚಿವರು ಹೇಳಿದ ಹೆಸರುಗಳು? 

ಕೈದಿಗಳು ಅಂದ್ರೆ ಯಾವುದೋ ಒಂದು ಸೆಲ್‌ನಲ್ಲಿ ಸರಿಯಾಗಿ ನೀರು ಬೆಳಕನ್ನೇ ನೋಡದೇ ಬಿದ್ದಿರ್ತಾರೆ. ಅಲ್ಲಿ ಕೊಡೋ, ಬಟ್ಟೆ, ತಟ್ಟೆಯನ್ನೇ ಬಳಸ್ತಾರೆ ಅಂತಾ ಅಂದುಕೊಂಡಿದ್ವಿ. ಆದ್ರೆ, ಇಲ್ಲಿ ದರ್ಶನ್, ನಾಗ ಹಾಗೂ ಅವನ ಟೀಮ್​ನವ್ರು ಮಾಡ್ತಿರೋ ಮೋಜು ಮಸ್ತಿಯನ್ನ ನೋಡ್ತಿದ್ರೆ ದುಡ್ಡು ಕೊಟ್ರೆ ಜೈಲು ಕೂಡ ಮಾಲ್​ ರೀತಿ ಬದಲಾಗಿ ಬಿಡುತ್ತಾ ಅನ್ನೋ ಪ್ರಶ್ನೆ ಮೂಡದೇ ಇರೋದಿಲ್ಲ. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ನಾಗ ಪ್ರತಿ ತಿಂಗಳು ಜೈಲಿನ ಮೇಂಟೇನೇನ್ಸ್​ಗೇ ಅಂತಲೇ ಲಕ್ಷ ಲಕ್ಷ ಖರ್ಚು ಮಾಡ್ತಾನಂತೆ. ಅಂದಹಾಗೇ, ಜೈಲಲ್ಲಿದ್ರೂ ನಾಗ ಇಷ್ಟೊಂದ್‌ ಹವಾ ಮೇಂಟೇನ್​ ಮಾಡ್ತಿರೋದಷ್ಟೇ ಅಲ್ಲ, ಬೆಂಗಳೂರಿನ ನಂಬರ್ ಒನ್ ಡಾನ್ ಅನಿಸಿಕೊಳ್ಳೋದಕ್ಕೆ ಮತ್ತೊಬ್ಬ ಡಾನ್ ಜೊತೆಗೆ ಪೈಪೋಟಿಗೆ ಬಿದ್ದಿದ್ದಾನಂತೆ. ​

ರೌಡಿಶೀಟರ್‌ ನಾಗನ ಕ್ರೈಮ್‌ ಸ್ಟೋರಿ ಕೇಳ್ತಿದ್ರೆ ಯಾರಿಗೆ ಆದ್ರೂ ಶಾಕ್‌ ಆಗುತ್ತೆ. ಜೈಲಲ್ಲಿದ್ರೂ ಬ್ರಾಂಡೆಡ್‌ ಟೀ ಶರ್ಟ್‌, ದುಬಾರಿ ಶೂ ಧರಿಸ್ತಾನೆ ಅಂದ್ರೆ ಆತನ ಅವಾ ಅಲ್ಲಿಯೂ ಜೋರಾಗಿಯೇ ಇತ್ತು. ಅಷ್ಟಕ್ಕೂ ಬೆಂಗಳೂರು ಕಬ್ಜಾಗೆ ನಾಗ ಮತ್ತೊಬ್ಬ ಭೂಗತ ಲೋಕದ ಡಾನ್‌ ನಡುವೆ ಫೈಟ್‌ ನಡೆಯುತ್ತಿದೆಯಾ? ಯಾರು ಆ ಡಾನ್‌?.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ರ್ಯಾಂಡೆಡ್‌ ಟೀ ಶರ್ಟ್‌, ಶೂ, ಡ್ರೈಫ್ರೂಟ್ಸ್‌.. ವಿಲ್ಸನ್‌ ಗಾರ್ಡನ್ ನಾಗನ ಲಕ್ಸುರಿ ಲೈಫ್ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/08/NAGA_DARSHAN.jpg

Load More