newsfirstkannada.com

31 ವರ್ಷಗಳ ಬಳಿಕ ಜ್ಞಾನವಾಪಿಯಲ್ಲಿ ಪೂಜೆ; ಇಲ್ಲಿ ಪೂಜೆ ಸಲ್ಲಿಸ್ತಿದ್ದ ಕುಟುಂಬ ಯಾವುದು ಗೊತ್ತಾ..?

Share :

Published February 1, 2024 at 6:34am

    ಅಯೋಧ್ಯೆ ರಾಮನಂತೆ ಕಾಶಿ ವಿಶ್ವನಾಥನಿಗೂ ಜಯ

    ವ್ಯಾಸ್​​ಜೀ ಕಾ ತಹಖಾನಾದಲ್ಲಿ ಪೂಜೆ, ಏನದು?

    ಕಾಶಿ ವಿಶ್ವನಾಥ ಟ್ರಸ್ಟ್​​​ಗೆ ವಹಿಸಿದ ಪೂಜೆಯ ಉಸ್ತುವಾರಿ

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬೆನ್ನಲ್ಲೇ ವಾರಾಣಸಿಯ ಜ್ಞಾನವಾಪಿ ವಿವಾದದಲ್ಲಿ ಹಿಂದೂಗಳಿಗೆ ದೊಡ್ಡ ಜಯ ಸಿಕ್ಕಾಂತಾಗಿದೆ. ವಾರಾಣಾಸಿ ಜಿಲ್ಲಾ ನ್ಯಾಯಲಯ ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದೆ.

ಗ್ಯಾನವಾಪಿ ವಿವಾದದಲ್ಲಿ ಹಿಂದೂಗಳಿಗೆ ಗುಡ್​​ನ್ಯೂಸ್​​​!

ಅಯೋದ್ಯೆ ರಾಮನಂತೆ ಕಾಶಿ ವಿಶ್ವನಾಥನಿಗೂ ಜಯ ಸಿಕ್ಕಂತಾಗಿದೆ. ಇತ್ತೀಚಿಗೆ ಬಹಿರಂಗಗೊಂಡ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಿಂದ ವರದಿಯಲ್ಲಿ ಗ್ಯಾನವಾಪಿ ಮಸೀದಿಯಲ್ಲ ಮಂದಿರ ಎಂಬುದಕ್ಕೆ ಹಲವು ಪುರಾವೆಗಳು ಸಿಕ್ಕಿದ್ದವು. ಈಗ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಾರಾಣಸಿ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದ್ದು, ಗ್ಯಾನವಾಪಿ ಮಸೀದಿಯಲ್ಲಿ ಹಿಂದೂಗಳು ಪೂಜೆ ನಡೆಸಲು ಅನುಮತಿ ನೀಡಿದೆ.

31 ವರ್ಷದ ಬಳಿಕ ಗ್ಯಾನವಾಪಿಯಲ್ಲಿ ಪೂಜೆ!

ವಿವಾದಿತ ಮಸೀದಿ ಬೇಸ್​​​ಮೆಂಟ್​​ನಲ್ಲಿರುವ ‘ವ್ಯಾಸ್​​​​ ಕಾ ತಹಖಾನಾ’ದಲ್ಲಿ (Vyasji Ka Tehkhana) ನ್ಯಾಯಾಲಯ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. 1993ರಲ್ಲಿ ಇದೇ ಮಸೀದಿಯಲ್ಲಿರುವ ವ್ಯಾಸ್​​ ಕಾ ತಹಖಾನದಲ್ಲಿ ಸೋಮನಾಥ್​​​ ವ್ಯಾಸ್​​​ ಕುಟುಂಬ ಪೂಜೆ ಸಲ್ಲಿಸುತ್ತಿತ್ತು. ಆದರೆ ಗ್ಯಾನವ್ಯಾಪಿ ವಿವಾದ ಕೋರ್ಟ್​ ಮೆಟ್ಟಲೇರಿದ ಬಳಿಕ ನೆಲಮಾಳಿಗೆಯನ್ನು ಸೀಲ್​ ಮಾಡಲಾಗಿತ್ತು. 31 ವರ್ಷಗಳ ಬಳಿಕ ಕೋರ್ಟ್​ ಮತ್ತೆ ಪೂಜೆ ನಡೆಸಲು ಕೋರ್ಟ್​ ಅವಕಾಶ ಕಲ್ಪಿಸಿದ್ದು, ಮುಂದಿನ ಏಳು ದಿನಗಳಲ್ಲಿ ಜಿಲ್ಲಾಡಳಿತ ಪೂಜೆ ಸಲ್ಲಿಸಲು ಸಕಲ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಿದೆ.

ಏನಿದು ವ್ಯಾಸ್​​​​ ಕಾ ತಹಖಾನಾ..?

ಜ್ಞಾನವಾಪಿಯಲ್ಲಿ ಒಟ್ಟು ನಾಲ್ಕು ತಹಖಾನಾ ಇವೆ. ಒಂದು ವ್ಯಾಸ್​​ಜೀ ಕುಟುಂಬಸ್ಥರ ಹಿಡಿತದಲ್ಲಿತ್ತು. ಅಲ್ಲಿಯೇ ವಾಸಿಸುತ್ತಿದ್ದ ಈ ಕುಟುಂಬ, 1993 ಕಡೆಯದಾಗಿ ಜ್ಞಾನವಾಪಿಯಲ್ಲಿ ಪ್ರಾರ್ಥನೆ ಸಲ್ಲಿಸಿದೆ. ಆ ಬಳಿಕ ಶೈಲೇಂದ್ರ ಕುಮಾರ್ ವ್ಯಾಸ್​ ಅವರು ಅಂಜುಮನ್ ಇಂತೇಜಾಮಿಯಾ ಮಸೀದಿ (Anjuman Intezamia Masajid Committee) ಕಮಿಟಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ. ಇವರು ವ್ಯಾಜಿ ಕುಟುಂಬದ ಸದಸ್ಯರಾಗಿದ್ದಾರೆ.

ಕಾಶಿ ವಿಶ್ವನಾಥ ಟ್ರಸ್ಟ್​​​ಗೆ ಪೂಜೆಯ ಉಸ್ತುವಾರಿ

ಇತ್ತೀಚಿಗೆ ಬಹಿರಂಗ ASI ವರದಿ ಸಮೀಕ್ಷೆಯ ಪ್ರಕಾರ ಗ್ಯಾನವಾಪಿ ಮಸೀದಿಯಲ್ಲಿ ಭೂ ವರಾಹ, ವಿಷ್ಣು, ಗಣಪತಿ, ಶಿವಲಿಂಗಗಳು ಪತ್ತೆಯಾಗಿವೆ ಎಂದು ಹೇಳಿತ್ತು, ಈಗ ಮತ್ತೆ ಪೂಜೆ ಅವಕಾಶ ಕಲ್ಪಿಸಲಾಗಿದ್ದು, ವಿವಾದಿತ ಮಸೀದಿಯಲ್ಲಿರುವ ದೇವರ ವಿಗ್ರಹಗಳ ಪೂಜೆಯ ಉಸ್ತುವಾರಿಯನ್ನು ಕಾಶೀ ವಿಶ್ವನಾಥ ಟ್ರಸ್ಟ್​​​​​ ವಹಿಸಕೊಳ್ಳಬೇಕು ಮತ್ತು ಮಸೀದಿಯಲ್ಲಿ ಸಾರ್ವಜನಿಕರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ ಕೇವಲ ಅರ್ಚಕರು ಮಾತ್ರ ತೆರಳಿ ಪೂಜೆ ಸಲ್ಲಿಸಬೇಕು ಎಂದು ಕೋರ್ಟ್​ ಹೇಳಿದೆ.

‘ಶಿವಲಿಂಗಕ್ಕೆ ಎಲ್ಲರೂ ಪೂಜೆ ಮಾಡುವ ಹಕ್ಕಿದೆ’

ಕೋರ್ಟ್ ತೀರ್ಪಿಗೆ ಹರ್ಷ ವ್ಯಕ್ತಪಡಿಸಿರುವ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್, ಮಾತನಾಡಿ, ಹಿಂದೂಗಳಿಗೆ ‘ವ್ಯಾಸ್​​ ಕಾ ತಹಖಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ರತಿಯೊಬ್ಬರಿಗೂ ಇಲ್ಲಿ ಪೂಜೆ ಸಲ್ಲಿಸಲು ಹಕ್ಕು ಸಿಕ್ಕಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ವಿವಾದಿತ ಗ್ಯಾನವಾಪಿ ಮಸೀದಿಯ ಪ್ರಕರಣದಲ್ಲಿ ಹಂತ ಹಂತವಾಗಿ ಹಿಂದೂಗಳಿಗೆ ಗೆಲುವಾಗಿದ್ದು, ಹಿಂದೂಗಳ ಹರ್ಷ ಇಮ್ಮಡಿಗೊಳಿಸದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

31 ವರ್ಷಗಳ ಬಳಿಕ ಜ್ಞಾನವಾಪಿಯಲ್ಲಿ ಪೂಜೆ; ಇಲ್ಲಿ ಪೂಜೆ ಸಲ್ಲಿಸ್ತಿದ್ದ ಕುಟುಂಬ ಯಾವುದು ಗೊತ್ತಾ..?

https://newsfirstlive.com/wp-content/uploads/2023/07/gyanvapi-case.jpg

Load More